Bipin Rawat: ಹೆಲಿಕಾಪ್ಟರ್​ ಅಪಘಾತಕ್ಕೆ ಅಸಲಿ ಕಾರಣ ಇದು: ವಿಡಿಯೋ ಸಮೇತ ಸಾಕ್ಷಿ ಇಲ್ಲಿದೆ!

ಹೆಲಿಕಾಪ್ಟರ್​ ದಟ್ಟ ಮಂಜಿನೊಳಗೆ ಹೋಗುವ ದೃಶ್ಯ ಸ್ಥಳೀಯರ ಮೊಬೈಲ್​ ದೃಶ್ಯದಲ್ಲಿ ಸೆರೆಯಾಗಿದೆ. ಮಂಜಿನೊಳಗೆ ಸಾಗಿದ ಹೆಲಿಕಾಪ್ಟರ್ ಇಂಜಿನ್ ಸದ್ದು ಇದ್ದಕ್ಕಿದ್ದಂತೆ ನಿಂತಿದ್ದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಮಂಜಿನೊಳಗೆ ನುಗ್ಗಿದ ಹೆಲಿಕಾಪ್ಟರ್​​​

ಮಂಜಿನೊಳಗೆ ನುಗ್ಗಿದ ಹೆಲಿಕಾಪ್ಟರ್​​​

  • Share this:

ನಿನ್ನೆ ಡಿಫೆನ್ಸ್ ಸ್ಟಾಫ್​ ಚೀಫ್​ (ಸಿಡಿಎಸ್​) ಬಿಪಿನ್​ ರಾವತ್(Bipin Rawat)​ ಮತ್ತು ಅವರ ಪತ್ನಿ ಸೇರಿ ಇನ್ನಿತರ ಸೇನಾ ಅಧಿಕಾರಿಗಳು ಪ್ರಯಾಣ ಮಾಡುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಮಧ್ಯಾಹ್ನ 12.20ರ ಹೊತ್ತಿಗೆ ತಮಿಳುನಾಡಿ(Tamilnadu)ನ ಕೂನೂರು ಬಳಿ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್​ನಲ್ಲಿದ್ದ 14 ಮಂದಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ದೇಶ ರಕ್ಷಣಾ ಮುಖ್ಯಸ್ಥ ಬಿಪಿನ್​ ರಾವತ್ ಸೇರಿದಂತೆ 12 ಮಂದಿಯನ್ನು ಕಳೆದುಕೊಂಡಿದೆ. ನಿನ್ನೆ ಮಧ್ಯಾಹ್ನ 12.20ರ ಹೊತ್ತಿಗೆ ತಮಿಳುನಾಡಿನ ಕೂನೂರು(Coonoor) ಬಳಿ ಅಪಘಾತಕ್ಕೀಡಾಗಿದೆ. ಸಾಮಾನ್ಯವಾಗಿ ಹೀಗೆ ಪ್ರಮುಖ ನಾಯಕರು ಪ್ರಯಾಣ ಮಾಡುವ ಮೊದಲು ಪರಿಶೀಲನೆ ಮಾಡಲಾಗುತ್ತದೆ. ಅದರಲ್ಲೂ ವಿವಿಐಪಿಗಳೇ ಬಳಸುವ ಎಂಐ 17ವಿ5 ಹೆಲಿಕಾಪ್ಟರ್​(Helicopter) ಅತ್ಯುತ್ತಮ ಗುಣಮಟ್ಟದ ಕಾಪ್ಟರ್​. ಅಪಘಾತವಾದ ಉದಾಹರಣೆ ತೀರ ಕಡಿಮೆ. ಹಾಗಿದ್ದರೂ ಈ ಚಾಪರ್(Chopper)​ ಅಪಘಾತಾಗಲು ಅಸಲಿ ಕಾರಣವೇನು ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೆಲಿಕಾಪ್ಟರ್ ಟರ್ನ್(Turn) ಪಡೆದು ಹಲಸಿನ ಮರಕ್ಕೆ ಡಿಕ್ಕಿ ಹೊಡೆದು ಕಾಪ್ಟರ್ ಪತನವಾಗಿದೆ. ಎಂದು ಹೇಳಿದ್ದರು. ನಿಜಕ್ಕೂ ನಿನ್ನೆ ಮಧ್ಯಾಹ್ನ ಹೆಲಿಕಾಪ್ಟರ್​ ಅಪ್ಪಳಿಸುವ ಮುನ್ನ ನಡೆದಿದ್ದು ಏನು? ಇಲ್ಲಿದೆ ನೋಡಿ..

ಅಪಘಾತಕ್ಕೆ  ದಟ್ಟ ಮಂಜು ಕಾರಣ?

ಹೆಲಿಕಾಪ್ಟರ್​ ಪತನಕ್ಕೆ ಊಟಿ ಬಳಿ ಆವರಿಸಿದ್ದ ದಟ್ಟವಾದ ಮಂಜು ಕಾರಣವೇ ಎಂಬುದೊಂದು ಪ್ರಶ್ನೆ ಎದ್ದಿದೆ.ಇದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ. ಯಾಕೆಂದರೆ ನಿನ್ನೆ ಊಟಿಯ ಬಳಿಕ ದಟ್ಟವಾದ ಮಂಜಿನ ವಾತಾವರಣ ಇತ್ತು. ಆದರೆ ಸಾಮಾನ್ಯ ಹೆಲಿಕಾಪ್ಟರ್​ ಆಗಲೀ, ವಿವಿಐಪಿ ಹೆಲಿಕಾಪ್ಟರ್​​ಗಳೇ ಆಗಲಿ, ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದ್ದಾಗ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡುವುದಿಲ್ಲ. ಅದರಲ್ಲೂ ಸಿಡಿಎಸ್​ನಂತಹ ಉನ್ನತ ಹುದ್ದೆಯಲ್ಲಿರುವವರ ಹೆಲಿಕಾಪ್ಟರ್​ ಹಾರಾಟಕ್ಕಂತು ಅನುಮತಿ ಸಿಗುವುದೇ ಇಲ್ಲ. ವೆಲ್ಲಿಂಗ್ಟನ್ ಬಳಿಯೂ ದಟ್ಟ ಮಂಜು ಆವರಿಸಿದ್ದರೇ, ಹೆಲಿಕಾಪ್ಟರ್ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಲೇ ಇರಲಿಲ್ಲ.

ಇದನ್ನು ಓದಿ : ಬಿಪಿನ್ ರಾವತ್ ಮತ್ತು ಇತರರಿಗೆ ಮೊದಲು ತಮಿಳುನಾಡಿನಲ್ಲಿ ಗೌರವ ನಮನ

ಮಂಜಿನೊಳಗೆ ಹೆಲಿಕಾಪ್ಟರ್​ ಹೋಗುವ ದೃಶ್ಯ ಸೆರೆ!

ಹೆಲಿಕಾಪ್ಟರ್ ಗಾಳಿಯಲ್ಲಿ ಹೆಚ್ಚು ಹೊತ್ತು ಹಾರಾಟ ನಡೆಸಿಲ್ಲ. ಸೂಲೂರಿನಿಂದ ವೆಲ್ಲಿಂಗ್​ಟನ್​ಗೆ 80 ಕಿ.ಮೀ. ದೂರ ಇದೆ. ಸೂಲೂರಿನಿಂದ ಅರ್ಧ ಗಂಟೆಯಲ್ಲಿ ತಲುಪಬಹುದು. 20 ರಿಂದ 25 ನಿಮಿಷ ಮಾತ್ರ ಹೆಲಿಕಾಪ್ಟರ್ ಹಾರಾಡಿದೆ. ಕಡಿಮೆ ಅವಧಿಯಲ್ಲೇ ಹೆಲಿಕಾಪ್ಟರ್ ಕ್ರ್ಯಾಶ್ ಆಗಿದೆ. ಇನ್ನೂ ಹೆಲಿಕಾಪ್ಟರ್​ ದಟ್ಟ ಮಂಜಿನೊಳಗೆ ಹೋಗುವ ದೃಶ್ಯ ಸ್ಥಳೀಯರ ಮೊಬೈಲ್​ ದೃಶ್ಯದಲ್ಲಿ ಸೆರೆಯಾಗಿದೆ. ಹೆಲಿಕಾಪ್ಟರ್​ ತುಂಬಾ ಎತ್ತರದಲ್ಲೂ ಹಾರಾಟ ನಡೆಸಿಲ್ಲ. ಕಡಿಮೆ ಎತ್ತರದಲ್ಲೇ ಹಾರಾಟ ನಡೆಸಿದೆ ಎಂಬುಂದು ಈ ವಿಡಿಯೋದಿಂದ ಸ್ಪಷ್ಟವಾಗುತ್ತಿದೆ. ಮಂಜಿನೊಳಗೆ ಸಾಗಿದ ಹೆಲಿಕಾಪ್ಟರ್ ಇಂಜಿನ್ ಸದ್ದು ಇದ್ದಕ್ಕಿದ್ದಂತೆ ನಿಂತಿದ್ದನ್ನು ಸ್ಪಷ್ಟವಾಗಿ ಗುರುತಿಸಬಹುದು. ಪೈಲಟ್​ನ ವಾಯ್ಸ್ ರೆಕಾರ್ಡ್, ಡಾಟಾ ರೆಕಾರ್ಡ್ ಆಗಿರುತ್ತೆ. ವಾಯುಪಡೆ ರೆಕಾರ್ಡರ್ಸ್​ನನ್ನ ಪತ್ತೆ ಹಚ್ಚಿದ್ರೆ ಅಸಲಿ ಕಾರಣ ಪತ್ತೆಯಾಗಬಹುದು. 

ಇದನ್ನು ಓದಿ : Gen Bipin Rawat ಬಗ್ಗೆ ಮಡಿಕೇರಿಯ ಲೆಫ್ಟಿನೆಂಟ್ ಜನರಲ್ ಪ್ರಸಾದ್​ ಭಾವುಕ ಮಾತುಗಳು..!

ತಮಿಳುನಾಡಿನಲ್ಲಿ ಮೊದಲ ಗೌರವ ನಮನ

ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ಮೃತಪಟ್ಟ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಪಾರ್ಥಿವ ಶರೀರಗಳನ್ನು ಕೂನೂರಿನಲ್ಲಿರುವ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ತಮಿಳುನಾಡು ಸರ್ಕಾರದಿಂದ ಇಂದು ಗೌರವ ಸಲ್ಲಿಕೆಯಾಗಲಿದೆ. ಬೆಳಗ್ಗೆ 11.30ಕ್ಕೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೌರವ ಸಲ್ಲಿಸಲಿದ್ದಾರೆ. ಗೌರವ ಸಲ್ಲಿಕೆ‌ ನಂತರ 13 ಪಾರ್ಥಿವ ಶರೀರಗಳನ್ನು ಸೇನಾ ಆಸ್ಪತ್ರೆಯಿಂದ ಕೊಯಮತ್ತೂರು ಏರ್‌ಪೋರ್ಟ್‌ಗೆ, ಅಲ್ಲಿಂದ ದೆಹಲಿಗೆ ರವಾನಿಸಲಾಗುವುದು ಎಂದು ಮಾಹಿತಿ ತೊರೆತಿದೆ.
Published by:Vasudeva M
First published: