ಗೂಗಲ್ ಸಂಸ್ಥೆಯಿಂದ 2 ಬಾರಿ ತಿರಸ್ಕರಿಸಲ್ಪಟ್ಟ ಭಾರತೀಯ ಈಗ ಸಾವಿರಾರು ಕೋಟಿ ಒಡೆಯ!


Updated:August 11, 2018, 9:37 AM IST
ಗೂಗಲ್ ಸಂಸ್ಥೆಯಿಂದ 2 ಬಾರಿ ತಿರಸ್ಕರಿಸಲ್ಪಟ್ಟ ಭಾರತೀಯ ಈಗ ಸಾವಿರಾರು ಕೋಟಿ ಒಡೆಯ!
ಫ್ಲಿಪ್​ಕಾರ್ಟ್ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್

Updated: August 11, 2018, 9:37 AM IST
- ನ್ಯೂಸ್18 ಕನ್ನಡ

ಬೆಂಗಳೂರು (ಆ. 11): ಸುಮಾರು 12 ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಗೂಗಲ್ ಸೇರಿದಂತೆ ಹಲವು ತಂತ್ರಜ್ಞಾನ ಸಂಸ್ಥೆಗಳಲ್ಲಿ ಅರ್ಜಿ ಹಾಕುತ್ತಿದ್ದ ವ್ಯಕ್ತಿ ಈಗ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಸಾವಿರಾರು ಕೋಟಿಗಳ ಒಡೆಯರಾಗಿದ್ದಾರೆ.

ಅಂದ ಹಾಗೆ, ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದವರು ಫ್ಲಿಪ್ ಕಾರ್ಟ್ನ ಸಂಸ್ಥಾಪಕ ಬಿನ್ನಿ ಬನ್ಸಾಲ್.

ಹೌದು, ಸ್ನೇಹಿತ ಸಚಿನ್ ಬನ್ಸಾಲ್ ಜೊತೆ ಸೇರಿ ಆರಂಭಿಸಿದ ಫ್ಲಿಪ್ ಕಾರ್ಟ್ ಇಂದು ಭಾರತದ ಪ್ರಮುಖ ಇ ವಾಣಿಜ್ಯ ವಹಿವಾಟು ಉದ್ಯಮದಲ್ಲಿ ಒಂದಾಗಿದೆ. ಈ ಸಂಸ್ಥೆ ಆರಂಭದ ಹಿನ್ನೆಲೆಯನ್ನು ಸ್ವತಃ ಬಿನ್ನಿ ಬನ್ಸಾಲ್ ಅವರು ಹೇಳಿದ್ದಾರೆ.

“ದಿಲ್ಲಿಯ ಐಐಟಿಯಲ್ಲಿ ಶಿಕ್ಷಣ ಪೂರೈಸಿದ ನಂತರ ಸರ್ನೋಫ್ ಕಾರ್ಪ್ ಎಂಬ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದೆ. 2005-06ರಲ್ಲಿ ಗೂಗಲ್ ಸಂಸ್ಥೆಯಲ್ಲಿ ತಂತ್ರಜ್ಞಾನ ಹುದ್ದೆಗೆ ಎರಡು ಸಲ ಅರ್ಜಿ ಹಾಕಿದೆ. ಆದರೆ, ಸಂಸ್ಥೆ ನನ್ನ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಆಮೆಜಾನ್ನಲ್ಲಿ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಸ್ನೇಹಿತ ಸಚಿನ್ ಬನ್ಸಾಲ್ ಜೊತೆ ಸೇರಿ ಫ್ಲಿಪ್ ಕಾರ್ಟ್ ಆರಂಭಿಸುವ ಕುರಿತು ಯೋಚಿಸಿದೆ. ಆಗ ನನಗೆ 24 ವಯಸ್ಸು, ರಿಸ್ಕ್ ತೆಗೆದುಕೊಳ್ಳಬಹುದಾದ ವಯೋಮಾನ. ನಿಯಮಿತ ಆದಾಯವಿಲ್ಲದೆ 18ರಿಂದ 24 ತಿಂಗಳು ಇರಲು ಸಾಧ್ಯವಾಗುವಂತೆ ನಾಲ್ಕರಿಂದ ಐದು ಲಕ್ಷ ರೂ. ಉಳಿತಾಯ ಮಾಡಿದೆ. ನಂತರ ಸಾಹಸ ಯಾತ್ರೆ ಆರಂಭವಾಯಿತು. ನಾವು ಊಹಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಫ್ಲಿಪ್ ಕಾರ್ಟ್ ಯಶಸ್ವಿಯಾಯಿತು. ಒಂದು ವೇಳೆ ನಾವು ಈ ಸಾಹಸದಲ್ಲಿ ವಿಫಲರಾಗಿದ್ದರೆ ಮತ್ತೆ ಯಾವುದಾದರೊಂದು ತಂತ್ರಜ್ಞಾನ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುತ್ತಿದ್ದೆವು,” ಎಂದು ಬಿನ್ನಿ ಬನ್ಸಾಲ್ ಸ್ಯಾಪ್ ಲ್ಯಾಬ್ಸ್ ಇಂಡಿಯಾ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಭಿಕರೊಂದಿಗೆ ಈ ವಿಷಯ ಹಂಚಿಕೊಂಡರು.

ಮನೆ ಮನೆಗಳಿಗೆ ತೆರಳುವ ಬಿನ್ನಿ:
ಫ್ಲಿಪ್ ಕಾರ್ಟ್ ಉತ್ಪನ್ನಗಳನ್ನು ನೀಡಲು ಬಿನ್ನಿ ಈಗಲೂ ಮನೆ ಮನೆ ಬಾಗಿಲಿಗೆ ಹೋಗುತ್ತಾರಂತೆ. ಗ್ರಾಹಕರ ಮನದಿಂಗಿತ ಅರಿತುಕೊಳ್ಳುವುದು ಇದರ ಉದ್ದೇಶ. “ನಾನು ಹೀಗೆ ಕೆಲ ಮನೆಗಳಿಗೆ ಭೇಟಿ ನೀಡಿದಾಗ ಕೆಲವರು ಗುರುತಿಸಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಒಮ್ಮೆಯಂತೂ ಗ್ರಾಹಕರೊಬ್ಬರು ಮನೆಯೊಳಗೆ ಕರೆದು ಭರ್ಜರಿ ಆತಿಥ್ಯ ನೀಡಿದ್ದರು. ಗ್ರಾಹಕ ಸೇವೆ ನೀಡುವ ನಾವು ಇವುಗಳನ್ನು ಪ್ರೀತಿಯಿಂದಲೇ ಒಪ್ಪಿಕೊಳ್ಳಬೇಕಾಗುತ್ತದೆ,” ಎಂದು ಬಿನ್ನಿ ಹೇಳಿದರು.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...