ಜನವರಿಯಲ್ಲಿ ಶಬರಿಮಲೆ ಪ್ರವೇಶಿಸಿದ್ದ ಬಿಂದುಗೆ ಖಾರದ ಪುಡಿ ಎರಚಿದ ಅಯ್ಯಪ್ಪ ಭಕ್ತರು; ಆಸ್ಪತ್ರೆಗೆ ದಾಖಲು

ಬಿಂದು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೆನ್ನಲ್ಲೇ ಅಯ್ಯಪ್ಪನ ಭಕ್ತರು ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಬಿಂದು ಕಣ್ಣಿಗೆ ಕೆಲವರು ಖಾರದಪುಡಿ ಎರಚಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Rajesh Duggumane | news18-kannada
Updated:November 26, 2019, 11:14 AM IST
ಜನವರಿಯಲ್ಲಿ ಶಬರಿಮಲೆ ಪ್ರವೇಶಿಸಿದ್ದ ಬಿಂದುಗೆ ಖಾರದ ಪುಡಿ ಎರಚಿದ ಅಯ್ಯಪ್ಪ ಭಕ್ತರು; ಆಸ್ಪತ್ರೆಗೆ ದಾಖಲು
ಬಿಂದು ಮೇಲೆ ದಾಳಿ ನಡೆಸಿದ ಅಯ್ಯಪ್ಪ ಭಕ್ತರು
  • Share this:
ತಿರುವನಂತಪುರ (ನ.26): ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು ಮುಂದಾದ ಬಿಂದು ಅಮ್ಮಿಣಿ  ಮೇಲೆ ಸೋಮವಾರ ಅಯ್ಯಪ್ಪನ ಭಕ್ತರು ಖಾರದಪುಡಿ ಎರಚಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಂದು ದೇವಾಲಯ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದರು.

ಮಹಿಳಾ ಹಕ್ಕುಗಳ ರಕ್ಷಣಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಜೊತೆ ಬಿಂದು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೆನ್ನಲ್ಲೇ ಅಯ್ಯಪ್ಪನ ಭಕ್ತರು ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಬಿಂದು ಕಣ್ಣಿಗೆ ಕೆಲವರು ಖಾರದಪುಡಿ ಎರಚಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಐದು ಮಹಿಳೆಯರ ಜೊತೆ ಬಿಂದು ಹಾಗೂ ತೃಪ್ತಿ ಇಂದು ಕೊಚ್ಚಿ ಪೊಲೀಸ್​ ಆಯುಕ್ತರ ಕಚೇರಿಗೆ ತೆರಳಿ ಭದ್ರತೆ ನೀಡುವಂತೆ ಕೋರಿದ್ದಾರೆ. ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಭದ್ರತೆ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದರು.

ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸಿದ ತೃಪ್ತಿ ದೇಸಾಯಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲೇ ತಡೆದ ಪ್ರತಿಭಟನಾಕಾರರು

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಆದೇಶ ನೀಡಿತ್ತು. ಇದಾದ ನಂತರ ಕೇರಳ ಮೂಲದ ಬಿಂದು ಮತ್ತು ಸಿಪಿಐ ಕಾರ್ಯಕರ್ತೆ ಕನಕದುರ್ಗ ದೇಗುಲ ಪ್ರವೇಶಿಸಿದ್ದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಭಾರೀ ವೈರಲ್ ಆಗಿ ಕೇರಳಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಇಡೀ ರಾಜ್ಯವೇ ಹೊತ್ತಿ ಉರಿದಿತ್ತು.
First published: November 26, 2019, 9:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading