ಇನ್ಮುಂದೆ ಮಲ್ಯ, ನೀರವ್​ ಮೋದಿಯಂತಹ ಅಪರಾಧಿಗಳು ಪರಾರಿಯಾಗಲು ಸಾಧ್ಯವಿಲ್ಲ: ಹೊಸ ಕಾನೂನಿಗೆ ರಾಷ್ಟ್ರಪತಿ ಅಂಕಿತ


Updated:August 5, 2018, 3:30 PM IST
ಇನ್ಮುಂದೆ ಮಲ್ಯ, ನೀರವ್​ ಮೋದಿಯಂತಹ ಅಪರಾಧಿಗಳು ಪರಾರಿಯಾಗಲು ಸಾಧ್ಯವಿಲ್ಲ: ಹೊಸ ಕಾನೂನಿಗೆ ರಾಷ್ಟ್ರಪತಿ ಅಂಕಿತ

Updated: August 5, 2018, 3:30 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.05): ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ದೇಶಭ್ರಷ್ಟ ಆರ್ಥಿಕ ಅಪರಾಧಿ ಮಸೂದೆ ಜಾರಿಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ. ಬ್ಯಾಂಕ್​ಗಳಿಗೆ ನಷ್ಟ ಮಾಡುವುದರೊಂದಿಗೆ, ಕಪ್ಪುಹಣ ಸಂಘ್ರಹಿಸಿರುವ ಆರೋಪಿಗಳು ವಿದೇಶಕ್ಕೆ ಪರಾರಿಯಾಗದಂತೆ ತಡೆಯುವಲ್ಲಿ ಈ ಮಸೂದೆಯು ಬಹುದೊಡ್ಡ ಪಾತ್ರ ನಿಭಾಯಿಸಲಿದೆ.

100 ಕೋಟಿ ರೂಪಾಯಿ ಇಲ್ಲವೇ ಅದಕ್ಕೂ ಹೆಚ್ಚು ಮೌಲ್ಯದ ಕೆಲ ಆಯ್ದ ಆರ್ಥಿಕ ಅಪರಾಧಗಳಲ್ಲಿ ಶಾಮೀಲಾಗಿದ್ದು,, ಆತನನ್ನು ಬಂಧಿಸಲು ವಾತರಂಟ್​ ಜಾರಿಗೊಳಿಸಿದಾಗ, ಕಾನೂನಿನಿಂದ ತಪ್ಪಿಸಿಕೊಳ್ಲಲು ಆತ ವಿದೇಶಕ್ಕೆ ಪರಾರಿಯಾಗಿದ್ದರೆ ಅಂತಹ ವ್ಯಕ್ತಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎನ್ನಲಾಗುತ್ತದೆ.

ಒಂದು ಅಧಿಕೃತ ಆದೇಶದನ್ವಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಮಸೂದೆಗೆ 2018ರಲ್ಲಿ ರಾಷ್ಟ್ರಪತಿಯಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದೆ ಎನ್ನಲಾಗಿದೆ. ಈ ಹೊಸ ಕಾನೂನಿನಿಂದ ವಿಜಯ್​ ಮಲ್ಯ ಹಾಗೂ ನೀರವ್​ ಮೋದಿಯಂತಹ ದೊಡ್ಡ ಆರ್ಥಿಕ ಅಪರಾಧಗಳಲ್ಲಿ ಶಾಮಿಲಾದ ವ್ಯಕ್ತಿಗಳು ದೇಶದಿಂದ ಪರಾರಿಯಾಗದಂತೆ ಹಾಗೂ ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ತಡೆಯಬಹುದಾಗಿದೆ. ಈಗಾಗಲೇ ಮಲ್ಯ ಹಾಗೂ ನೀರವ್​ ಮೋದಿಗಾಗಿ ಹುಡುಕಾಟ ನಡೆಯುತ್ತಿದ್ದು, ಅವರನ್ನು ದೇಶಕ್ಕೆ ಮರಳಿ ಕರೆತರಲು ಪ್ರಯತ್ನಿಸಲಾಗುತ್ತಿದೆ. ಇಬ್ಬರೂ ವಿದೇಶಕ್ಕೆ ಪರಾರಿಯಾಗಿದ್ದು, ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.

ಈ ನೂತನ ಕಾನೂನಿನ ಅನ್ವಯ ವಿಶೇಷ ನ್ಯಾಯಾಲಯವು ಓರ್ವ ವ್ಯಕ್ತಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲು ಹಾಗೂ ಅವರ ಬೇನಾಮಿ ಆಸ್ತಿ ಮತ್ತು ಇತರ ಸಂಪತ್ತನ್ನು ಜಪ್ತಿಗೊಳಿಸುವ ಹಕ್ಕು ಹೊಂದಿರುತ್ತದೆ. ಈ ಕಾನೂನು 'ಜಪ್ತಿಗೊಳಿಸುವ ಆದೇಶದ ದಿನದಿಂದ ಜಪ್ತಿ ಮಾಡಲಾದ ಎಲ್ಲಾ ಸಂಪತ್ತಿನ ಅಧಿಕಾರವು ಕೇಂದ್ರ ಸರ್ಕಾರದ ಬಳಿ' ಇರುತ್ತದೆ ಎಂದು ಹೇಳುತ್ತದೆ.

2018ರ ಜುಲೈ 25 ರಂದು ರಾಜ್ಯಸಭೆಯಲ್ಲಿ ಮಂಡಿಸಲಾದ ದೇಶಭ್ರಷ್ಟ ಆರ್ಥಿಕ ಅಪರಾಧಿ ಮಸೂದೆಗೆ ಜುಲೈ 19 ರಂದು ಲೋಕಸಭೆಯು ಅನುಮೋದನೆ ನೀಡಿತ್ತು. ಮಸೂದೆಯ ಕುರಿತಾಗಿ ಮಾತನಾಡಿದ್ದ ಪೀಯುಷ್​ ಗೋಯಲ್​ ದೊಡ್ಡ ಅಪರಾಧಿಗಳನ್ನು ಹಿಡಿಯುವ ಸಲುವಾಗಿ ಇದನ್ನು ರಚಿಸಲಾಗಿದೆ ಎಂದಿದ್ದರು.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...