ವೋಟರ್​ ಐಡಿ ಜೊತೆ ಆಧಾರ್​ ಲಿಂಕ್​; ಲೋಕಸಭೆಯಲ್ಲಿ ಮಸೂದೆ ಪಾಸ್​

ಮತದಾರರ ಗುರುತಿನ ಚೀಟಿಯೊಂದಿಗೆ (Voter ID) ಆಧಾರ್ (Aadhar) ಅನ್ನು ಲಿಂಕ್ ಮಾಡುವುದರಿಂದ ದೇಶದಲ್ಲಿ ದೊಡ್ಡ ಸಂಖ್ಯೆಯ ನಕಲಿ ಮತದಾರರ ಸಮಸ್ಯೆಯನ್ನು ಪರಿಹರಿಸ ಬಹುದಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಡಿ. 20):  ಮತದಾರರ ಗುರುತಿನ ಚೀಟಿಯನ್ನು (Voter ID Card) ಆಧಾರ್​ನೊಂದಿಗೆ (Aadhar Card) ಲಿಂಕ್ ಮಾಡುವ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಅನ್ನು ಮಂಡಿಸಿದರು. ಈ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

  ಮಸೂದೆಗೆ ವಿಪಕ್ಷಗಳು ವಿರೋಧ

  ಇನ್ನು ಮತದಾರರ ಪಟ್ಟಿಗೆ ಆಧಾರ್ ಅನ್ನು ಜೋಡಿಸಿದರೆ ಅದು ನಾಗರಿಕರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಜೊತೆಗೆ ಇದು ಮತದಾರರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಮಸೂದೆಯನ್ನು ಕಾಂಗ್ರೆಸ್, ಎಐಎಂಐಎಂ, ಬಿಎಸ್‌ಪಿ ಮತ್ತು ಇತರ ವಿರೋಧ ಪಕ್ಷಗಳು ವಿರೋಧಿಸಿದ್ದವು. ಅಲ್ಲದೇ, ಈ ಮಸೂದೆಯನ್ನು ಆಡಳಿತ ಪಕ್ಷ ಹಿಂಪಡೆಯುವಂತೆ ಒತ್ತಾಯಿಸಿದವು.

  ಆದರೆ, ವಿಪಕ್ಷಗಳ ಬೇಡಿಕೆಯನ್ನು ನಿರಾಕರಿಸಿದ ಸಚಿವ ರಿಜಿಜು, , ಮಸೂದೆಯ ಭಾಗವಾಗಿರುವ ವಿವಿಧ ಪ್ರಸ್ತಾವನೆಗಳನ್ನು ಈಗಾಗಲೇ ಕಾನೂನು ಮತ್ತು ಸಿಬ್ಬಂದಿಗಳ ಸ್ಥಾಯಿ ಸಮಿತಿಯು ಸೂಚಿಸಿದ್ದು, ಹಲವು ಶಿಫಾರಸು ಮಾಡಿದೆ. ಈ ಮಸೂದೆಯು ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ ಎಂದು ಸಮರ್ಥನೆ ಮಾಡಿದರು
  ಆದರೆ, ವಿಪಕ್ಷಗಳು ಮಾತ್ರ ಇದಕ್ಕೆ ನಿರಾಕರಿಸಿ, ಸದನದಲ್ಲಿ ಪ್ರತಿಭಟನೆ ನಡೆಸಿದವು. ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾದ ಹಿನ್ನಲೆ ಸ್ಪೀಕರ್ ಅವರು ಸದನವನ್ನು ನಾಳೆಗೆ ಮುಂದೂಡಿದರು.

  ಅಕ್ರಮ ಮತದಾರರ ಚೀಟಿಗೆ ಕಡಿವಾಣ
  ಕೇಂದ್ರ ಸಚಿವ ಸಂಪುಟ ಈ ಹಿಂದೆಯೇ ಚುನಾವಣಾ ಸುಧಾರಣೆಗಳ ಮಸೂದೆಗೆ ಅನುಮೋದನೆ ನೀಡಿತ್ತು. ಈ ಮಸೂದೆ ಮತದಾರರ ಚೀಟಿಯನ್ನು ಆಧಾರ್​ನೊಂದಿಗೆ ಮಾಡುವ ಅಂಶವನ್ನು ಒಳಗೊಂಡಿತು.  ಮತದಾರರ ಪಟ್ಟಿಯಲ್ಲಿನ ನಮೂದುಗಳ ದೃಢೀಕರಣದ ಉದ್ದೇಶಕ್ಕಾಗಿ ಮತದಾರರ ಪಟ್ಟಿಯಲ್ಲಿ ಈಗಾಗಲೇ ಸೇರ್ಪಡೆಗೊಂಡಿರುವ ವ್ಯಕ್ತಿಗಳಿಂದ ಆಧಾರ್ ಸಂಖ್ಯೆಯನ್ನು ಕೇಳಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಅವಕಾಶ ನೀಡುತ್ತದೆ. ಅಲ್ಲದೇ, ಒಂದಕ್ಕಿಂತ ಹೆಚ್ಚು ಬಾರಿ ಮತದಾರರ ಪಟ್ಟಿಯಲ್ಲಿ ಅದೇ ವ್ಯಕ್ತಿಯ ಹೆಸರನ್ನು ನೋಂದಾಯಿಸಲು ಇರುವ ಅವಕಾಶವನ್ನು ಇದು ನಿರಾಕರಿಸುತ್ತದೆ.

  ಇದನ್ನು ಓದಿ: ತಾಯಿಯ ಗರ್ಭ, ಸಮಾಧಿ ಎರಡೇ ಹೆಣ್ಮಕ್ಕಳಿಗೆ ಸುರಕ್ಷಿತ ತಾಣ; ಚೆನ್ನೈ ಅಪ್ರಾಪ್ತೆ ಸಾವಿಗೂ ಮುನ್ನ ಬರೆದ ಪತ್ರ

  ಆಧಾರ್​ ಲಿಂಕ್​ ಕಡ್ಡಾಯವಲ್ಲ

  ಮಸೂದೆಯು, ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಯಾವುದೇ ಅರ್ಜಿಯನ್ನು ನಿರಾಕರಿಸಲಾಗುವುದಿಲ್ಲ. ಆಧಾರ್ ಸಂಖ್ಯೆಯನ್ನು ಒದಗಿಸಲು ಅಥವಾ ತಿಳಿಸಲು ವ್ಯಕ್ತಿಯ ನಿರಾಕರಿಸಿದಾಗ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದುಗಳನ್ನು ಅಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಸೂಚಿಸಬಹುದಾದಂತಹ ಸಾಕಷ್ಟು ಕಾರಣ ಅಥವಾ ಇತರ ಪರ್ಯಾಯ ದಾಖಲೆಗಳನ್ನು ಒದಗಿಸಲು ಇದು ಅನುಮತಿಸುವುದು.

  ಇದನ್ನು ಓದಿ: 2021 ಕೋವಿಡ್​ ಮಾತ್ರವಲ್ಲ, ಜಗತ್ತನ್ನು ಕಾಡಿದ ಹವಾಮಾನ ವೈಪರೀತ್ಯಗಳಿವು

  ನಕಲಿ ಮತದಾರರ ಸಮಸ್ಯೆಗೆ ಪರಿಹಾರ

  2012ರಲ್ಲಿ ಈ ಪರಿಕಲ್ಪನೆ ಪರಿಚಯಿಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ (CEC) ಎಚ್‌ಎಸ್ ಬ್ರಹ್ಮಾ ಪ್ರಕಾರ, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದರಿಂದ ದೇಶದಲ್ಲಿ ದೊಡ್ಡ ಸಂಖ್ಯೆಯ ನಕಲಿ ಮತದಾರರ ಸಮಸ್ಯೆಯನ್ನು ಪರಿಹರಿಸ ಬಹುದಾಗಿದೆ. ಚುನಾವಣಾ ಡೇಟಾಬೇಸ್ ಅನ್ನು ಶುದ್ಧೀಕರಿಸುತ್ತದೆ ಎನ್ನುತ್ತಾರೆ

  ಮತದಾರರ ಅನುಮತಿಸಿದರೆ ಮಾತ್ರ ಲಿಂಕ್​
  ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ, 2021 ಅನ್ನು ಕಳೆದ ವಾರ ಕ್ಯಾಬಿನೆಟ್ ಅನುಮೋದಿಸಿದ ನಂತರ ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಒಂದೇ ವ್ಯಕ್ತಿಯ ವಿವಿಧ ಸ್ಥಳಗಳಲ್ಲಿ ಹಲವಾರು ದಾಖಲಾತಿಗಳ ತೊಂದರೆ ತಪ್ಪಿಸಲು. ಆಧಾರ್ ಕಾರ್ಡ್​ನೊಂದಿಗೆ ಮತದಾರರ ಚೀಟಿಯನ್ನು ಲಿಂಕ್ ಮಾಡಲು ಅನುಮತಿಸಲು ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ತಿದ್ದುಪಡಿಯನ್ನು ಇದು ಪ್ರಸ್ತಾಪಿಸಲಾಗಿದೆ. ಮತದಾರರ ಗುರುತಿನ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಸ್ವಯಂಪ್ರೇರಿತವಾಗಿದೆ. ಆಧಾರ್ ಕಾರ್ಡ್ ಇಲ್ಲದವರನ್ನು ಮತದಾರರ ಪಟ್ಟಿಗೆ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ ಎಂದು ಈ ಮಸೂದೆ ಸ್ಪಷ್ಟಪಡಿಸಿದೆ.
  Published by:Seema R
  First published: