5 ವರ್ಷದ ಹಿಂದೆಯೇ ಕೊರೋನಾ ಬಗ್ಗೆ ಎಚ್ಚರಿಸಿದ್ದ ಬಿಲ್ ಗೇಟ್ಸ್: ಮತ್ತೆರಡು ಗಂಡಾಂತರದ ಎಚ್ಚರಿಕೆ..!

ಮನುಷ್ಯರು ಇನ್ನೂ ಎಚ್ಚರಗೊಳ್ಳದ ಮುಂದೆ ಎದುರಾಗುವ ಗಂಡಾಂತರಗಳ ಬಗ್ಗೆ ಬೆಳಕು ಚೆಲ್ಲಿ ಎಂದು ಬಿಲ್ ಗೇಟ್ಸ್ರನ್ನು ಕೇಳಿದ್ರು. ಇದಕ್ಕುತ್ತರಿಸಿದ ಬಿಲ್ ಗೇಟ್ಸ್, ಎರಡು ಗಂಡಾಂತರಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಬಿಲ್ ಗೇಟ್ಸ್​.

ಬಿಲ್ ಗೇಟ್ಸ್​.

 • Share this:
  ಕೊರೋನಾ ವೈರಸ್ ಶಬ್ದ ಕಿವಿಗೆ ಬಿದ್ದ ತಕ್ಷಣವೇ ಏನೋ ಒಂದು ಗೊಂದಲಕ್ಕೆ ಸಿಲುಕಿದಂತೆ ಆಗುತ್ತದೆ. ಹೌದು, ಕೊರೋನಾ ವೈರಸ್ ಎಂಬ ಮಹಾಮಾರಿ ಇಡೀ ಮನುಕುಲವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. 2020ರಲ್ಲಿ ಕಾಣಿಸಿಕೊಂಡು ಕೊರೋನಾ ಸೋಂಕು ವೈರಸ್ಗೆ ಬಲಿಯಾದವರ ಸಂಖ್ಯೆ ಲಕ್ಷಗಟ್ಟಲೇ ಇದೆ. ಈ ಮಹಾಮಾರಿ ಕಾಣಿಸಿಕೊಳ್ಳುವ ಮುಂಚೆಯೇ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು 2015ರಲ್ಲೇ ಮುನ್ಸೂಚನೆ ಕೊಟ್ಟಿದ್ದರು. ಇದೀಗ ಇನ್ನೆರಡು ವಿಪತ್ತುಗಳು ಕಾಡಲಿವೆ ಎಂದು ಎಚ್ಚರಿಸಿದ್ದಾರೆ.

  2015ರ ಟೆಡ್ ಭಾಷಣದಲ್ಲಿ ಅವರು ಮಾತನಾಡಿದ ವೇಳೆ ಬಿಲ್ ಗೇಟ್ಸ್ ಅವರು ಕೊರೋನಾ ವೈರಸ್ ಬಗ್ಗೆ ಎಚ್ಚರಿಕೆ ನೀಡಿದ್ದರು. ಮುಂದೊಂದು ದಿನ ಹರಡುವ ಸೋಂಕಿನಿಂದ ಪ್ರತಿ ಮನೆಗೂ ಸಂಕಷ್ಟ ಎದುರಾಗಲಿದೆ ಎಂದು ಅವರ ಭಾಷಣದಲ್ಲಿ ಹೇಳಿದ್ದರು.

  ಸೋಂಕು ಎದುರಿಸಲು ಜಗತ್ತು ಸಿದ್ಧವಾಗಬೇಕು ಎಂದು ಸಾರಿದ್ದ ಗೇಟ್ಸ್!
  2015ರ ಟೆಡ್ ಭಾಷಣದಲ್ಲಿ ‘ The next outbreak’? We’re not ready’ ಶಿರ್ಷಿಕೆ ಅಡಿಯಲ್ಲಿ ಅವರು ಮಾತನಾಡಿದಾಗಿ ಕೊರೋನಾ ವೈರಸ್ ನಂತಹ ಸಂಭಾವ್ಯ ಸೋಂಕುಗಳ ಬಗ್ಗೆ ಬಿಲ್ ಗೆಟ್ಸ್ ಅವರು ಪ್ರಸ್ತಾಪ ಮಾಡಿದ್ದರು. ಇಂತಹ ಸೋಂಕುಗಳನ್ನು ಮೆಟ್ಟಿ ನಿಲ್ಲಲು ಜಗತ್ತು ಸಿದ್ಧವಾಗಬೇಕೆಂದು ಬಿಲ್ ಗೇಟ್ಸ್ ಅವರು ಸಾರಿದ್ದರು.

  ಅಷ್ಟೇ ಅಲ್ಲದೇ ಮುಂದಿನ ವರ್ಷಗಳಲ್ಲಿ 10 ಮಿಲಿಯನ್ಗಿಂತ ಹೆಚ್ಚು ಜನರು ಸತ್ತರೇ ಅದು ಯುದ್ಧಕ್ಕಿಂತ ಸಾಂಕ್ರಾಮಿಕ ಸೋಂಕು ಆಗಿರಬಹುದು ಎಂದು ಗೇಟ್ಸ್ ಅವರು ಭವಿಷ್ಯ ನುಡಿದಿದ್ದರು. ಕ್ಷಿಪಣಿಗಳಿಗಿಂತ ಸೂಕ್ಷ್ಮಜೀವಿಗಳು ಅಪಾಯಕಾರಿ ಎಂದಿದ್ದರು.
  ಬಿಲ್ ಗೇಟ್ಸ್ ನೀಡಿದ ಸಂದರ್ಶನದ ಕೊರೋನಾ ಸೋಂಕಿನ ಬಗ್ಗೆ 5 ವರ್ಷದ ಹಿಂದೆಯೇ ಎಚ್ಚರಿಸಿದರೂ ಅವರ ಮಾತನ್ನು ಎಚ್ಚರಿಕೆಯಾಗಿ ತೆಗೆದುಕೊಂಡವರ ಸಂಖ್ಯೆ ವಿರಳ ಎಂಬುದೇ ವಿಪರ್ಯಾಸ.

  ಉಸಿರಾಟದ ಕಾಯಿಲೆಗಳು ಅಪಾಯಕಾರಿ!

  ಇತ್ತೀಚೆಗೆ ಜನಪ್ರಿಯ ಯೂಟ್ಯೂಬ್ ಚಾನೆಲ್ ‘ವೆರಿಟಾಸಿಯಂ’ ಅನ್ನು ನಡೆಸುತ್ತಿರುವ ಡೆರೆಕ್ ಮುಲ್ಲರ್ ಅವರು ಬಿಲ್ ಗೇಟ್ಸ್ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ನಿಮಗೆ ಹೇಗೆ 6 ವರ್ಷಗಳ ಮೊದಲು ಸೋಂಕಿನ ಬಗ್ಗೆ ಮಾಹಿತಿ ತಿಳಿಯಿತು ಎಂದು ಪ್ರಶ್ನಿಸುತ್ತಾರೆ. ಆಗ ಉತ್ತರಿಸಿದ ಗೇಟ್ಸ್ ಅವರು, ಉಸಿರಾಟದ ಕಾಯಿಲೆಗಳನ್ನು ತರುವ ಸೋಂಕುಗಳು ಕಾಲಕಾಲಕ್ಕೆ ಬರುತ್ತವೆ. ಉಸಿರಾಟದ ಕಾಯಿಲೆಗಳು ತುಂಬಾ ಅಪಾಯಕಾರಿ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರು ವಿಮಾನದಲ್ಲಿ, ಬಸ್ನಲ್ಲಿ ಪ್ರಯಾಣಿಸಿದರೆ ನಿಮ್ಮಲ್ಲಿರುವ ಸೋಂಕು ಮತ್ತೊಬ್ಬರಿಗೆ ಹರಡುತ್ತದೆ. ಇದು ಹೆಚ್ಚು ಜನರಿಗೆ ಹರಡುವ ಸಾಧ್ಯತೆ ಇರುತ್ತದೆ ಎಂದು ಬಿಲ್ ಗೇಟ್ಸ್ ಅವರು ಹೇಳುತ್ತಾರೆ.

  ಇನ್ನು, ಮನುಷ್ಯರು ಇನ್ನೂ ಎಚ್ಚರಗೊಳ್ಳದ ಮುಂದೆ ಎದುರಾಗುವ ಗಂಡಾಂತರಗಳ ಬಗ್ಗೆ ಬೆಳಕು ಚೆಲ್ಲಿ ಎಂದು ಬಿಲ್ ಗೇಟ್ಸ್ರನ್ನು ಕೇಳಿದ್ರು. ಇದಕ್ಕುತ್ತರಿಸಿದ ಬಿಲ್ ಗೇಟ್ಸ್, ಎರಡು ಗಂಡಾಂತರಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

  ಇದನ್ನೂ ಓದಿ: Chakka Jam: ರೈತರು ನಡೆಸಿದ ಹೆದ್ದಾರಿ ತಡೆ ಹೋರಾಟ ಯಶಸ್ವಿ; ಮುಂದೆಯೂ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧಾರ

  1) ಹವಾಮಾನ ಬದಲಾವಣೆ. ಈ ಸಾಂಕ್ರಾಮಿಕ ಸೋಂಕುಗಳಿಂದ ಪ್ರತಿ ವರ್ಷ ಜನರು ಸಾಯುತ್ತಾರೆ. ಇದರ ಬಗ್ಗೆ ಎಚ್ಚರಿಕೆ ವಹಿಸುವವರ ಸಂಖ್ಯೆ ಕಡಿಮೆಯಿದೆ. ಬಿಕ್ಕಟ್ಟು ದೊಡ್ಡದು ಆಗುವ ಮೊದಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳುತ್ತಾರೆ.

  2) ಜೈವಿಕ ಭಯೋತ್ಪಾದನೆ: ಹಾನಿಯನ್ನುಂಟುಮಾಡಲು ಬಯಸುವ ಯಾರಾದರೂ ವೈರಸ್ ಅನ್ನು ಎಂಜಿನಿಯರ್ ಮಾಡಬಹುದು ಮತ್ತು ಇdದರಿಂದ ಆಗುವ ನಷ್ಟ ಏನೆಂದರೆ, ಇದರಂತೆ ಚಲಿಸುವ ಅವಕಾಶವು ಪ್ರಸ್ತುತದಂತಹ ಸ್ವಾಭಾವಿಕವಾಗಿ ಉಂಟಾಗುವ ಸಾಂಕ್ರಾಮಿಕ ರೋಗಗಳಿಗಿಂತ ಹೆಚ್ಚಾಗಿದೆ ಎಂದಿದ್ದಾರೆ.

  ಅಲ್ಲದೇ ಬಿಲ್ಗೇಟ್ಸ್ ಅವರು ಕೊರೋನಾ ಲಸಿಕೆ, ಕೊರೋನಾ ಸೋಂಕಿನ ಬಗ್ಗೆ ಸುಳ್ಳು ಸುದ್ದಿ, ಆನ್ಲೈನ್ನಲ್ಲಿ ಹರಿದಾಡಿದ ತಪ್ಪು ಮಾಹಿತಿ ಬಗ್ಗೆ ಮಾತನಾಡಿದ್ದಾರೆ.
  Published by:MAshok Kumar
  First published: