• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Bill Gates: ಬೆಂಗಳೂರಿಗೆ ಬಂದಿದ್ರಂತೆ ಬಿಲ್​​ ಗೇಟ್ಸ್​- ಸಿಲಿಕಾನ್​ ಸಿಟಿ ಬಗ್ಗೆ ಏನ್​ ಹೇಳಿದ್ದಾರೆ ಗೊತ್ತಾ?

Bill Gates: ಬೆಂಗಳೂರಿಗೆ ಬಂದಿದ್ರಂತೆ ಬಿಲ್​​ ಗೇಟ್ಸ್​- ಸಿಲಿಕಾನ್​ ಸಿಟಿ ಬಗ್ಗೆ ಏನ್​ ಹೇಳಿದ್ದಾರೆ ಗೊತ್ತಾ?

ಭಾರತ ಪ್ರವಾಸವು ತನಗೆ ನಿಜವಾಗಿಯೂ ಸ್ಫೂರ್ತಿ ನೀಡಿದೆ ಮತ್ತು ವಿಶ್ವದ ಭವಿಷ್ಯದ ಬಗ್ಗೆ ಆಶಾವಾದಿಯಾಗುವಂತೆ ಮಾಡಿದೆ ಎಂದು ಬಿಲ್ ಗೇಟ್ಸ್ ಹೇಳಿದರು.

ಭಾರತ ಪ್ರವಾಸವು ತನಗೆ ನಿಜವಾಗಿಯೂ ಸ್ಫೂರ್ತಿ ನೀಡಿದೆ ಮತ್ತು ವಿಶ್ವದ ಭವಿಷ್ಯದ ಬಗ್ಗೆ ಆಶಾವಾದಿಯಾಗುವಂತೆ ಮಾಡಿದೆ ಎಂದು ಬಿಲ್ ಗೇಟ್ಸ್ ಹೇಳಿದರು.

ಭಾರತ ಪ್ರವಾಸವು ತನಗೆ ನಿಜವಾಗಿಯೂ ಸ್ಫೂರ್ತಿ ನೀಡಿದೆ ಮತ್ತು ವಿಶ್ವದ ಭವಿಷ್ಯದ ಬಗ್ಗೆ ಆಶಾವಾದಿಯಾಗುವಂತೆ ಮಾಡಿದೆ ಎಂದು ಬಿಲ್ ಗೇಟ್ಸ್ ಹೇಳಿದರು.

  • Trending Desk
  • 2-MIN READ
  • Last Updated :
  • Bangalore [Bangalore], India
  • Share this:

‘ನಮ್ಮ ಬೆಂಗಳೂರು’ ಅಂದ್ರೆ ಕೇಳಬೇಕೆ? ಯಾವುದರಲ್ಲಿ ಕಡಿಮೆ ಇದೆ ಹೇಳಿ ನಮ್ಮ ಬೆಂಗಳೂರು, ಚಿಕ್ಕಪುಟ್ಟ ಉದ್ದಿಮೆಗಳಿಂದ ಹಿಡಿದು ಜಗತ್ ಪ್ರಸಿದ್ದವಾದ ದೊಡ್ಡ ದೊಡ್ಡ ಐಟಿ ಕಂಪನಿಗಳವರೆಗೂ(IT Company) ಎಲ್ಲವೂ ಇದೆ ಈ ಮಹಾನಗರಿಯಲ್ಲಿ. ಪ್ರತಿದಿನ ಸಾವಿರಾರು ಜನರು ತಮ್ಮ ಜೀವನೋಪಾಯವನ್ನು ಅರಿಸಿಕೊಂಡು ಬೆಂಗಳೂರು ನಗರಕ್ಕೆ ಬರುತ್ತಾರೆ. ಇಲ್ಲಿನ ತಂಪಾದ ವಾತಾವರಣ, ಕನ್ನಡಿಗರ ಪ್ರೀತಿ ಮತ್ತು ಮಹಿಳೆಯರ ಸುರಕ್ಷತೆಯ ವಿಷಯಕ್ಕೆ ಬಂದರೆ ಬೆಂಗಳೂರು ನಗರ(Bengaluru City) ಬೇರೆ ನಗರಗಳಿಗಿಂತಲೂ ಬೆಸ್ಟ್ ಅಂತ ಹೇಳಬಹುದು.


ಭಾರತಕ್ಕೆ ಬಂದಾಗ ಬೆಂಗಳೂರಿಗೆ ಭೇಟಿ ನೀಡಿದ್ರು ಬಿಲ್ ಗೇಟ್ಸ್


ಯಾರೇ ಈ ಬೆಂಗಳೂರಿಗೆ ಬಂದು ಒಂದು ಭೇಟಿ ಕೊಟ್ಟರೂ ಅವರಿಗೆ ಈ ನಗರ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ ಅಂತ ಹೇಳಬಹುದು. ಇದೆಲ್ಲಾ ಈಗೇಕೆ ನಾವು ಹೇಳುತ್ತಿದ್ದೇವೆ ಅಂತ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು ಅಲ್ಲವೇ? ಇತ್ತೀಚೆಗೆ ಮೈಕ್ರೋಸಾಫ್ಟ್ ಕಂಪನಿಯ ಸಹ ಸಂಸ್ಥಾಪಕ ಮತ್ತು ಬಿಲಿಯನೇರ್ ಆದ ಬಿಲ್ ಗೇಟ್ಸ್ ಅವರು ಭಾರತಕ್ಕೆ ಭೇಟಿ ನೀಡಿದ ವೇಳೆ ಬೆಂಗಳೂರಿಗೆ ಭೇಟಿ ನೀಡಿದ್ರಂತೆ.


 ಬೆಂಗಳೂರಿಗೆ ಬಂದ ಬಿಲ್ ಗೇಟ್ಸ್ ಅವರು ನಗರ ಸಮುದಾಯಕ್ಕೆ ಭೇಟಿ ನೀಡಿ ಬ್ಯಾಂಕಿಂಗ್ ಕ್ಷೇತ್ರದ ಡಿಜಿಟಲೀಕರಣವನ್ನು ನೋಡಿ ಅದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಭೇಟಿಯಾಗಿ ಶಿಕ್ಷಣ, ಆರೋಗ್ಯ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದರು.


ತಮ್ಮ ಭಾರತದ ಪ್ರವಾಸದ ಬಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಏನ್ ಹೇಳಿದ್ರು ಬಿಲ್


ಇತ್ತೀಚಿನ ಭಾರತ ಪ್ರವಾಸದ ಬಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ, ಬಿಲ್ ಗೇಟ್ಸ್ ಅವರು "ನಾನು ಬೆಂಗಳೂರಿನಲ್ಲಿ, ಬಡ ಜನರ ಸಮುದಾಯಗಳನ್ನು ತಲುಪುವಲ್ಲಿ ಈ ಡಿಜಿಟಲ್ ಬ್ಯಾಂಕಿಂಗ್ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ತಿಳಿಯಲು ಹಲಸೂರಿನ ನಗರ ಸಮುದಾಯಕ್ಕೆ ಭೇಟಿ ನೀಡಿದ್ದೆ. ಅಂಚೆ ನೌಕರರು ಈಗ @IPPBOnline ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ನೇರವಾಗಿ ತಮ್ಮ ಮನೆ ಬಾಗಿಲಿಗೆ ಹೇಗೆ ತಂದು ಕೊಳ್ಳುತ್ತಿದ್ದಾರೆ ಎಂಬುದನ್ನು ನೋಡುವುದು ತುಂಬಾನೇ ಆಸಕ್ತಿದಾಯಕವಾಗಿತ್ತು” ಎಂದು ಬರೆದಿದ್ದಾರೆ.


ಇದನ್ನೂ ಓದಿ: Nirav Modi: ಬ್ರಿಟನ್‌ ಕೋರ್ಟ್‌ಗೆ ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದ ನೀರವ್ ಮೋದಿ


ಇದಷ್ಟೇ ಅಲ್ಲದೆ ಬಿಲ್ ಗೇಟ್ಸ್ ಅವರು ಬೆಂಗಳೂರು ಮೂಲದ ಯೂಟ್ಯೂಬರ್ ಶ್ರದ್ಧಾ ಅವರನ್ನು ಮುಂಬೈನಲ್ಲಿ ಭೇಟಿಯಾದರು. "ಅಯ್ಯೋ ಶ್ರದ್ದಾ, ತುಂಬಾ ತಮಾಷೆಯ ಹಾಸ್ಯನಟಿ, ನಗರ ಆರೋಗ್ಯ ಕೇಂದ್ರದ ಪ್ರವಾಸಕ್ಕಾಗಿ ನನ್ನೊಂದಿಗೆ ಬಂದಿದ್ದರು. ಕ್ಷಯರೋಗವನ್ನು ಕಡಿಮೆ ಮಾಡುವ ಭಾರತದ ಗುರಿಯ ಬಗ್ಗೆ ಮತ್ತು ಹೊಸ ವಿಧಾನಗಳನ್ನು ಪ್ರಯತ್ನಿಸುವಲ್ಲಿ ಮುಂಬೈ ಹೇಗೆ ಮುಂಚೂಣಿಯಲ್ಲಿದೆ ಎಂಬುದರ ಬಗ್ಗೆ ಶ್ರದ್ಧಾ ಮತ್ತು ನಾನು ತುಂಬಾನೇ ವಿಸ್ತೃತವಾದ ಮಾತುಕತೆಯನ್ನು ನಡೆಸಿದೆವು” ಎಂದು ಹೇಳಿದರು.



ಬಿಲ್ ಗೇಟ್ಸ್‌ಗೆ ಸ್ಪೂರ್ತಿ ನೀಡಿದ ಭಾರತ ಪ್ರವಾಸ


ಭಾರತ ಪ್ರವಾಸವು ತನಗೆ ನಿಜವಾಗಿಯೂ ಸ್ಫೂರ್ತಿ ನೀಡಿದೆ ಮತ್ತು ವಿಶ್ವದ ಭವಿಷ್ಯದ ಬಗ್ಗೆ ಆಶಾವಾದಿಯಾಗುವಂತೆ ಮಾಡಿದೆ ಎಂದು ಬಿಲ್ ಗೇಟ್ಸ್ ಹೇಳಿದರು. "ನೀವು ನೋಡಿರುವಂತೆ ನಾನು ಆ ವಾರ ತುಂಬಾ ಬ್ಯುಸಿಯಾಗಿದ್ದೆ. ಆದರೆ ನನ್ನ ಪ್ರಯಾಣಗಳು ಭವಿಷ್ಯದ ಬಗ್ಗೆ ನನಗೆ ನಿಜವಾಗಿಯೂ ಸ್ಫೂರ್ತಿ ಮತ್ತು ಆಶಾವಾದವನ್ನು ನೀಡಿತು. ಜಗತ್ತು ಈಗ ಎದುರಿಸುತ್ತಿರುವ ಸಮಸ್ಯೆಗಳು ಎಷ್ಟು ದೊಡ್ಡದಾಗಿದೆಯೋ, ಅವುಗಳನ್ನು ಪರಿಹರಿಸುವ ನಮ್ಮ ಸಾಮರ್ಥ್ಯ ಅದಕ್ಕಿಂತಲೂ ದೊಡ್ಡದಾಗಿದೆ ಎಂದು ನನ್ನ ಭಾರತ ಭೇಟಿ ನನಗೆ ನೆನಪಿಸಿತು" ಎಂದು ಅವರು ಹೇಳಿದರು.


ಇದನ್ನೂ ಓದಿ: Misbehave: ಹೋಳಿ ಆಚರಣೆ ಹೆಸರಲ್ಲಿ ಜಪಾನ್ ಯುವತಿಗೆ ಪುಂಡರ ಕಿರುಕುಳ; ವಿಡಿಯೋ ವೈರಲ್‌


ಬಿಲ್ ಗೇಟ್ಸ್ ಅವರು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವಿಪ್ರೋ ಅಧ್ಯಕ್ಷ ರಶೀದ್ ಪ್ರೇಮ್ ಜಿ, ಜೆರೋಧಾ ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್, ಕೆಲವು ಕೇಂದ್ರ ಸಚಿವರು ಮತ್ತು ಪ್ರಮುಖ ಯೂಟ್ಯೂಬರ್ ಗಳನ್ನು ತಮ್ಮ ಒಂದು ವಾರದ ಭಾರತ ಪ್ರವಾಸದಲ್ಲಿ ಭೇಟಿಯಾದರು. 

Published by:Latha CG
First published: