Bill Gates: ಮಾಜಿ ಹೆಂಡತಿಯನ್ನು ಮತ್ತೆ ಮದುವೆಯಾಗಲು ಸಿದ್ಧ: ಬಿಲ್ ಗೇಟ್ಸ್ ಹೀಗೆ ಹೇಳಿದ್ದೇಕೆ?

ನೀವು ಮೆಲಿಂಡಾ ಫ್ರೆಂಚ್ ಗೇಟ್ಸ್ ಅನ್ನು ಮತ್ತೆ ಮದುವೆಯಾಗಲು ಸಿದ್ಧವಿದ್ದೀರಾ ಎಂದು ಅವರನ್ನು ಪ್ರಶ್ನಿಸಿದಾಗ, “ ಹೌದು. ನಾನು ಮೆಲಿಂಡಾಳನ್ನು ಮತ್ತೆ ಮದುವೆಯಾಗುವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.

ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್

ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್

  • Share this:
    ವಿವಾಹ ವಿಚ್ಚೇದನದ (Divorce) ಬಳಿಕ ಮರು ಮದುವೆ (Marriage) ಆಗುತ್ತಾರೋ ಬಿಡುತ್ತಾರೋ, ಮಾಜಿ ಸಂಗಾತಿಯ ಸಹವಾಸ ಮಾತ್ರ ಸಾಕಪ್ಪಾ ಸಾಕು ಎನ್ನುವವರೇ ಅಧಿಕ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಮೈಕ್ರೋಸಾಫ್ಟ್ (Microsoft) ಸಂಸ್ಥಾಪಕ ಬಿಲ್‍ ಗೇಟ್ಸ್ (Bill Gates) ಮಾತ್ರ ಈ ವಿಷಯದಲ್ಲಿ ಎಲ್ಲರಿಗಿಂತ ಭಿನ್ನ. ಮಾಜಿ ಪತ್ನಿಯ ಗುಣಗಾನ ಮಾಡುವ ಅವರು, ಆಕೆಯನ್ನು ಮತ್ತೆ ಮದುವೆಯಾಗಲು ಕೂಡ ಸಿದ್ಧವಂತೆ..! ಹೌದು , ತಮ್ಮ ಮಾಜಿ ಪತ್ನಿಯ ಜೊತೆಗಿನ ವೈವಾಹಿಕ ಬದುಕು “ಅದ್ಭುತ”ವಾಗಿತ್ತು ಎಂದು ಬಿಲ್‍ ಗೇಟ್ಸ್ ಹೇಳಿದ್ದಾರೆ. ಸುಮಾರು 30 ವರ್ಷಗಳ ಸುದೀರ್ಘ ವೈವಾಹಿಕ ಜೀವನವನ್ನು ನಡೆಸಿದ್ದ, ಬಿಲ್‍ ಗೇಟ್ಸ್ ದಂಪತಿ, 2021 ರ ಮೇ ತಿಂಗಳಲ್ಲಿ ತಮ್ಮ ವಿಚ್ಚೇದನವನ್ನು ಘೋಷಿಸಿದ್ದರು. ಅದು 2021 ನೇ ಆಗಸ್ಟ್‌ಗೆ ಅಂತಿಮಗೊಂಡಿತ್ತು. ಪತಿ ಪತ್ನಿಯಾಗಿ ಮುಂದುವರೆಯದಿದ್ದರೂ, ತಾವಿಬ್ಬರು ತಮ್ಮ ಬಿಲ್ ಅಂಡ್ ಮಿಲಿಂಡಾ ಗೇಟ್ಸ್ ಫೌಂಡೇಶನ್ ಅನ್ನು ಜೊತೆಯಾಗಿ ಮುನ್ನಡೆಸುವೆವು ಎಂದು ಅವರು ಹೇಳಿಕೆ ನೀಡಿದ್ದರು. ಅವರಿಗೆ ಜೆನ್ನರ್, ರೋರಿ ಮತ್ತು ಫೋಬೆ ಎಂಬ ಮೂವರು ಮಕ್ಕಳಿದ್ದಾರೆ.

    ಪತ್ನಿ, ಮಕ್ಕಳು ದೂರ 

    ಮಾಧ್ಯಮವೊಂದರ ಜೊತೆ ಮಾತನಾಡುತ್ತಾ, ಕಳೆದ ಎರಡು ವರ್ಷಗಳು ತಮ್ಮ ಪಾಲಿಗೆ “ಅತ್ಯಂತ ನಾಟಕೀಯ”ವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಕೋವಿಡ್ -19 ಮತ್ತು ವಿಚ್ಚೇದನದ ಜೊತೆಗೆ, ಮಕ್ಕಳು ತಮ್ಮನ್ನು ತೊರೆದದ್ದು “ಅತ್ಯಂತ ವಿಲಕ್ಷಣವಾದ ಭಾಗವಾಗಿತ್ತು” ಎಂದಿದ್ದಾರೆ ಅವರು. ಪ್ರಸ್ತುತ ತಮ್ಮ ಮಾಜಿ ಪತ್ನಿಯೊಂದಿಗೆ ಇರುವ ಕೆಲಸದ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ತಮ್ಮ ಮದುವೆ ಅಂತ್ಯಗೊಂಡಿದ್ದರ ಬಗ್ಗೆ ಹೇಗನಿಸುತ್ತದೆ ಎಂಬುವುದನ್ನು ಕೂಡ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: Rahul Gandhi ನೈಟ್​ ಪಾರ್ಟಿ ವಿಡಿಯೋ ಪೋಸ್ಟ್​ ಮಾಡಿದ ಬಿಜೆಪಿ; ತಪ್ಪೇನಿದೆ ಎಂದ ಕಾಂಗ್ರೆಸ್​​

    ನಮ್ಮ ಮದುವೆ ಅದ್ಭುತವಾಗಿತ್ತು 

    ಮಕ್ಕಳು ಬೆಳೆದು ದೊಡ್ಡವರಾಗಿ, ಮನೆಯನ್ನು ತೊರೆದ ಬಳಿಕ, ಪ್ರತಿ ಮದುವೆಯು ಕೂಡ “ ಪರಿವರ್ತನೆ ಮೂಲಕ ಸಾಗುತ್ತದೆ” ಎಂದು ಬಿಲ್‍ ಗೇಟ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಪಾಲಿಗೆ ಆ ಪರಿವರ್ತನೆ “ವಿಚ್ಚೇದನ”ವಾಗಿತ್ತು ಎಂದಿದ್ದಾರೆ. ಆದರೆ, ತನ್ನ ವೈವಾಹಿಕ ಜಿವನ ಅಂತ್ಯವಾಗಿದ್ದರೂ ಕೂಡ, ತಾನು “ಅದ್ಭುತವಾದ ವೈವಾಹಿಕ” ಬದುಕನ್ನು ಅನುಭವಿಸಿದ್ದೇನೆ ಎಂಬುವುದು ಅವರ ಭಾವನೆಯಾಗಿದೆ. “ನಾನು ಅದನ್ನು ಬದಲಾಯಿಸುತ್ತಿರಲಿಲ್ಲ. ನಿಮಗೆ ಗೊತ್ತು, ನಾನು ಮದುವೆಯಾಗಲು ಬೇರೆಯವರನ್ನು ಆಯ್ಕೆ ಮಾಡುತ್ತಿರಲಿಲ್ಲ” ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಹೇಳಿದ್ದಾರೆ.

    ಹಾಗಾದರೆ, ನೀವು ಮೆಲಿಂಡಾ ಫ್ರೆಂಚ್ ಗೇಟ್ಸ್ ಅನ್ನು ಮತ್ತೆ ಮದುವೆಯಾಗಲು ಸಿದ್ಧವಿದ್ದೀರಾ ಎಂದು ಅವರನ್ನು ಪ್ರಶ್ನಿಸಿದಾಗ, “ ಹೌದು. ನಾನು ಮೆಲಿಂಡಾಳನ್ನು ಮತ್ತೆ ಮದುವೆಯಾಗುವುದರ ಬಗ್ಗೆ ಮಾತನಾಡುತ್ತಿದ್ದೇನೆ. ಭವಿಷ್ಯದ ದೃಷ್ಟಿಯಿಂದ ನನಗೆ ಯಾವುದೇ ಯೋಜನೆಗಳಿಲ್ಲ. ಆದರೆ, ನಾನು ಮದುವೆಯನ್ನು ಅಧಿಕವಾಗಿ ಶಿಫಾರಸ್ಸು ಮಾಡುತ್ತೇನೆ” ಎಂದು ಅವರು ಉತ್ತರಿಸಿದ್ದಾರೆ.

    ಮಾಜಿ ಪತ್ನಿ ಜೊತೆ ಕೆಲಸ ಮಾಡೋದೇ ಅದೃಷ್ಟ 

    ಅದಲ್ಲದೆ, ತಾನು ನಿಧಾನಕ್ಕೆ ತನ್ನ ವಿಚ್ಚೇದನದ ಕಡೆ ಬರುತ್ತಿದ್ದೇನೆಯೇ ಎಂಬುವುದು ತನಗೆ ಗೊತ್ತಿಲ್ಲ ಎಂದಿರುವ ಬಿಲ್‍ ಗೇಟ್ಸ್, ಅದೇನೇ ಇದ್ದರೂ, ತನ್ನ ಮಾಜಿ ಪತ್ನಿಯೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ತನ್ನ ‘ಅದೃಷ್ಟ’ ಎಂದು ಹೇಳಿಕೊಂಡಿದ್ದಾರೆ. “ ನಮ್ಮ ಫೌಂಡೇಶನ್‍ನಲ್ಲಿ ವಾರ್ಷಿಕ ಉದ್ಯೋಗಿ ಸಭೆ ಇರುತ್ತದೆ ಮತ್ತು ಅದನ್ನು ಜೂನ್‍ನಲ್ಲಿ ಅವಳು ಹಾಗೂ ನಾನು ಒಟ್ಟಿಗೆ ಆಯೋಜಿಸುತ್ತೇವೆ” ಎಂದು ತಮ್ಮ ಪತ್ನಿಯ ಜೊತೆಗಿನ ವೃತ್ತಿ ಸಂಬಂಧದ ಬಗ್ಗೆ ವಿವರಿಸಿದ್ದಾರೆ.

    ಇದನ್ನೂ ಓದಿ: Europe Visit: ಪ್ರಧಾನಿ ಮೋದಿಗೆ ಬರ್ಲಿನ್ ಬಾಲೆಯಿಂದ ಸಿಕ್ತು ಸ್ಪೆಷಲ್ ಗಿಫ್ಟ್

    ಮಾಜಿ ಹೆಂಡತಿಯ ಬಗ್ಗೆ ಮಾತು 

    ತಾನು ಮತ್ತು ಮಾಜಿ ಪತ್ನಿ ಇಂದಿಗೂ ಸ್ನೇಹಿತರು ಎಂಬುವನ್ನು ಬಿಲ್‍ ಗೇಟ್ಸ್ ನಂಬುತ್ತಾರಂತೆ. ಮೆಲಿಂಡಾ ಜೊತೆ “ಅತ್ಯಂತ ಮುಖ್ಯ, ಸಂಕೀರ್ಣ, ಹತ್ತಿರದ ಸಂಬಂಧವನ್ನು” ಹೊಂದಿರುವುದರಿಂದಲೇ ತಾವಿಬ್ಬರು ಜೊತೆಯಾಗಿ ಕೆಲಸ ಮಾಡುವುದನ್ನು ಆಯ್ಕೆ ಮಾಡಿಕೊಂಡೆವು ಎಂದು ಬಿಲ್‍ ಗೇಟ್ಸ್ ಹೇಳಿದ್ದಾರೆ. “ನಾವಿಬ್ಬರು ಜೊತೆಯಾಗಿ ಕೆಲಸ ಮಾಡುತ್ತಿರುವುದರ ಬಗ್ಗೆ ನಾನು ತುಂಬಾ ಸಂತುಷ್ಟನಾಗಿದ್ದೇನೆ. ನಿಮಗೆ ಗೊತ್ತಾ, ನಾವು ಫೌಂಡೇಶನ್ ಅನ್ನು ಜೊತೆಯಾಗಿ ನಿರ್ಮಿಸಿದ್ದೇವೆ” ಎಂದು ಬಿಲ್‍ ಗೇಟ್ಸ್ ಹೇಳಿದ್ದಾರೆ.

    ತಮ್ಮ ವೈವಾಹಿಕ ಜೀವನ ಹೇಗೆ ಅಂತ್ಯಗೊಂಡದ್ದಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾತನಾಡುತ್ತಾ, “ಮದುವೆಗಳು ಎಷ್ಟು ಸಂಕೀರ್ಣವಾಗಿರುತ್ತವೆ ಎಂದರೆ ಅವುಗಳನ್ನು ಪರಿಶೀಲಿಸುವುದು ಯೋಗ್ಯವಲ್ಲ” ಎಂದು ಸರಳವಾಗಿ ಉತ್ತರಿಸಿದ್ದಾರೆ. ವಿವಾಹ ವಿಚ್ಚೇದನದ ಪರಿಣಾಮದ ಬಗ್ಗೆ ಮಾತನಾಡುತ್ತಾ, ತಾವಿಬ್ಬರೂ ಅವರಿಂದ ಚೇತರಿಸಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.
    Published by:Kavya V
    First published: