Bill Gates Divorce: 148 ಬಿಲಿಯನ್ ಡಾಲರ್ ಸಂಪತ್ತು ಹಂಚಿಕೊಳ್ಳಲಿದ್ದಾರೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್​ !

Bill and Melinda Gates Divorce: ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಖಾಸಗಿ ಐಶಾರಾಮಿ ಬಂಗಲೆ, ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳ ಸ್ಟಾಕ್, ಖಾಸಗಿ ಜೆಟ್‌ಗಳು ಮತ್ತು ಹೋಟೆಲ್ ಬ್ರ್ಯಾಂಡ್‌ಗಳನ್ನು ಒಳಗೊಂಡಿರುವ 148 ಬಿಲಿಯನ್ ಡಾಲರ್‌ ಸಂಪತ್ತನ್ನು ಹಂಚಿಕೊಳ್ಳಲಿದ್ದಾರೆ.

ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್

ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್

  • Share this:
Bill and Melinda Gates: ಬಿಲ್‌ ಗೇಟ್ಸ್‌ ವಿಶ್ವದ ಟಾಪ್‌ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಈ ಹಿನ್ನೆಲೆ ಸಹಜವಾಗೇ ಬಿಲ್‌ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ನಡುವಿನ ವಿಚ್ಛೇದನದ ಸುದ್ದಿ ಬಹುತೇಕ ಜನರ ಕುತೂಹಲಕ್ಕೆ ಕಾರಣವಾಗಿದೆ. ದಂಪತಿ ಮೇ ತಿಂಗಳಲ್ಲಿ ವಿಚ್ಛೇದನವನ್ನು ಘೋಷಿಸಿದ್ದು, ತಮ್ಮ 27 ವರ್ಷಗಳ ದಾಂಪತ್ಯದ ಜೀವನವನ್ನು ಕೊನೆಗೊಳಿಸಿದರು. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಖಾಸಗಿ ಮ್ಯಾನ್ಶನ್‌, ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳ ಸ್ಟಾಕ್, ಖಾಸಗಿ ಜೆಟ್‌ಗಳು ಮತ್ತು ಹೋಟೆಲ್ ಬ್ರ್ಯಾಂಡ್‌ಗಳನ್ನು ಒಳಗೊಂಡಿರುವ 148 ಬಿಲಿಯನ್ ಡಾಲರ್‌ ಸಂಪತ್ತನ್ನು ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಬ್ಲೂಮ್‌ಬರ್ಗ್‌ಗೆ ಈ ಬಗ್ಗೆ ಮಾಹಿತಿ ನೀಡಿದ ಮೆಕಿನ್ಲೆ ಇರ್ವಿನ್‌ನ ಕುಟುಂಬದ ಕಾನೂನು ವಕೀಲ ಜಾನೆಟ್ ಜಾರ್ಜ್, "ಅವರದು ಬಹುಶಃ ಅತಿ ದೊಡ್ಡ ವಿಚ್ಛೇದನ'' ಎಂದು ತಿಳಿಸಿದ್ದಾರೆ.

ಆದರೆ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಂಪತ್ತನ್ನು ಹಂಚಿಕೊಳ್ಳುವುದಿಲ್ಲ. ಇದು ವಿಭಜನೆಯ ಭಾಗವಲ್ಲ ಎಂದು ತಿಳಿದುಬಂದಿದೆ. ಮೆಲಿಂಡಾ ಮತ್ತು ಬಿಲ್ ಗೇಟ್ಸ್ 2000 ರಲ್ಲಿ ಸಿಯಾಟಲ್ ಮೂಲದ ಈ ಫೌಂಡೇಶನ್‌ ಅನ್ನು ಆರಂಭಿಸಿದ್ದರು. ಮೆಲಿಂಡಾ ಸಂಸ್ಥೆಯ ಸಹ-ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಹಲವು ವರ್ಷಗಳಿಂದ ವಿಶ್ವದ ಅತ್ಯಂತ ಪ್ರಭಾವಶಾಲಿ ಖಾಸಗಿ ಫೌಂಡೇಶನ್‌ಗಳಲ್ಲಿ ಒಂದಾಗಿದೆ. ಸುಮಾರು 50 ಬಿಲಿಯನ್ ಡಾಲರ್‌ ಮೌಲ್ಯದವರೆಗೆ ಸಹಾಯವನ್ನು ಮಾಡಿದ್ದಾರೆ.


ಇದನ್ನೂ ಓದಿ: ಬಿಲ್ ಗೇಟ್ಸ್ ಮಗಳ ಐಶಾರಾಮಿ ಬದುಕು, ಹೇಗಿದೆ ಗೊತ್ತಾ ಈಕೆಯ ಸಿರಿಯ ಲೈಫ್​ಸ್ಟೈಲ್?

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿ ಮತ್ತು ಶಿಕ್ಷಣ ವಿಷಯಗಳ ಮೇಲೆ ಈ ಫೌಂಡೇಶನ್‌ ಕೇಂದ್ರೀಕರಿಸಿದೆ. ಸದ್ಯಕ್ಕೆ, ಬಿಲ್ ಮತ್ತು ಮೆಲಿಂಡಾ ಅವರು "ಆ ಕಾರ್ಯಾಚರಣೆಯಲ್ಲಿ ನಂಬಿಕೆಯನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ಕೆಲಸವನ್ನು ಫೌಂಡೇಶನ್‌ನಲ್ಲಿ ಮುಂದುವರಿಸುತ್ತೇವೆ" ಎಂದು ಹೇಳಿದ್ದಾರೆ.


ಬಿಎಂಜಿಐ (ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಇನ್ವೆಸ್ಟ್‌ಮೆಂಟ್ಸ್) ಎಂದೂ ಕರೆಯಲ್ಪಡುವ ಕ್ಯಾಸ್ಕೇಡ್ ಇನ್ವೆಸ್ಟ್‌ಮೆಂಟ್‌ನಿಂದ 3 ಬಿಲಿಯನ್‌ಗೂ ಅಧಿಕ ಡಾಲರ್‌ ವರ್ಗಾವಣೆಗಳನ್ನು ಮೆಲಿಂಡಾ ಗೇಟ್ಸ್‌ಗೆ ಮಾಡಲಾಗಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.




ಮೆಲಿಂಡಾ ಗೇಟ್ಸ್‌ 800 ಮಿಲಿಯನ್ ಡಾಲರ್‌ ಮೌಲ್ಯದ ಡೀರೆ ಮತ್ತು ಕಂಪನಿಯ 2.25 ಮಿಲಿಯನ್ ಷೇರುಗಳನ್ನು ಸಹ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೂ, ಈ ಕಂಪನಿಯಲ್ಲಿ ಶೇಕಡಾ 7 ರಷ್ಟು ಒಡೆತನವನ್ನು ಮಾತ್ರ ಹೊಂದಿದ್ದಾರೆ. ಮೆಕ್ಸಿಕನ್ ವಿತರಕರಾದ ಕೋಕಾ-ಕೋಲಾ ಫೆಮ್ಸಾ ಸಂಸ್ಥೆಯ ಎಲ್ಲಾ ಷೇರುಗಳನ್ನು ಸಹ ಮೆಲಿಂಡಾ ಪಡೆದಿದ್ದಾರೆ. ಈ ಷೇರುಗಳ ಮೌಲ್ಯ ಸುಮಾರು 130 ಮಿಲಿಯನ್ ಡಾಲರ್ ಎಂದು ಸಹ ವರದಿ ಹೇಳಿದೆ. ಇನ್ನೊಂದೆಡೆ, ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ಪ್ರೀನಪ್ಷಿಯಲ್‌ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂಬ ವರದಿಗಳು ಇದ್ದರೂ, ಈ ಬಗ್ಗೆ ವಿಚ್ಛೇದಿತ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಆ ರೀತಿ ಒಪ್ಪಂದ ಇದ್ದರೂ ಸಹ, ಪ್ರತ್ಯೇಕತೆಯ ಒಪ್ಪಂದವೇ ಅಂತಿಮ ಎನ್ನಲಾಗಿದೆ.



Published by:Soumya KN
First published: