Bill Gates: ಆಗರ್ಭ ಶ್ರೀಮಂತ ಬಿಲ್​​ಗೇಟ್ಸ್​​​​​ ಡಿವೋರ್ಸ್ ಬಗ್ಗೆ ಸತ್ಯ ಬಿಚ್ಚಿಟ್ಟ ಮಗಳು..!

ನಾವು ದಂಪತಿಯಾಗಿ  ಮುಂದುವರೆಯಲು, ಜೊತೆಯಾಗಿ ಇರಬಹುದು ಎಂದು ನಾವು ನಂಬಲು ಸಾಧ್ಯವಿಲ್ಲ ಎಂದು ಗೇಟ್ಸ್ ವಿಚ್ಛೇದನದ ನಿರ್ಧಾರವನ್ನು ಘೋಷಿಸಿದರು.

ಮಿಲಿಂಡಾ, ಬಿಲ್​​ ಗೇಟ್ಸ್​​

ಮಿಲಿಂಡಾ, ಬಿಲ್​​ ಗೇಟ್ಸ್​​

  • Share this:
    ಮೈಕ್ರೋಸಾಫ್ಟ್ ದಿಗ್ಗಜ ಹಾಗೂ ಪ್ರಪಂಚದ ಆಗರ್ಭ ಶ್ರೀಮಂತ ಉದ್ಯಮಿಯಾದ ಬಿಲ್ ಗೇಟ್ಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. 27 ವರ್ಷಗಳ ಕಾಲದ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮವಿಟ್ಟಿದ್ದಾರೆ. ಬಿಲ್ ಗೇಟ್ಸ್ ಮತ್ತು ಮಿಲಿಂಡಾ ಗೇಟ್ಸ್ ಪರಸ್ಪರ ಸಮ್ಮತಿಯೊಂದಿಗೆ ದೂರವಾಗಲು ನಿರ್ಧರಿಸಿದ್ದಾರೆ. ಸ್ವತಃ ಬಿಲ್‌ಗೇಟ್‌ ಅವರು ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ವಿಚ್ಛೇದನದ ವಿಷಯವನ್ನು ಬಹಿರಂಗಗೊಳಿಸಿದ್ದರು. ವಿಚ್ಛೇದನದ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಿದ ಕೂಡಲೇ ಅವರ ಮಗಳು ಪ್ರತಿಕ್ರಿಯೆ ನೀಡಿದ್ದಾರೆ. ಬಿಲ್ ಗೇಟ್ಸ್ ಅವರ 25 ವರ್ಷದ ಪುತ್ರಿ ಜೆನಿಫರ್​​ ಗೇಟ್ಸ್​​​ ತಮ್ಮ ಇಸ್ಟಾಗ್ರಾಂನಲ್ಲಿ ತಂದೆ-ತಾಯಿ ದೂರಾಗಿರುವ ಬಗ್ಗೆ ಬರೆದುಕೊಂಡಿದ್ದಾರೆ.

    ಇದು ನಮ್ಮ ಇಡೀ ಕುಟುಂಬಕ್ಕೆ ಸವಾಲಿನ ಸಮಯವಾಗಿದ್ದು, ಈ ಪರಿಸ್ಥಿತಿಯಲ್ಲಿ ನನ್ನ ಕುಟುಂಬ ಸದಸ್ಯರನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ನಾನು ಇನ್ನೂ ಕಲಿಯುತ್ತಿದ್ದೇನೆ ಎಂದಿದ್ದಾರೆ. ವಿಚ್ಛೇದನದ ಸುದ್ದಿಯು ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ, ಬಿಲಿಯನೇರ್ ದಂಪತಿಗಳು ತಮ್ಮ ಆಸ್ತಿಯನ್ನು 130 ಬಿಲಿಯನ್ ಯುಎಸ್ ಡಾಲರ್‌ಗಳಷ್ಟು ವಿಭಜಿಸುವ ಬಗ್ಗೆ ಊಹಾಪೋಹಗಳಿವೆ. ಮೂಲಗಳ ಪ್ರಕಾರ ಮೆಲಿಂಡಾರವರು ಪ್ರಸ್ತುತ ವಿಶ್ವದ ನಾಲ್ಕನೇ ಶ್ರೀಮಂತ ಮಹಿಳೆಯಾಗಿದ್ದು, ಬಿಲ್ ಗೇಟ್ಸ್ ಅವರೊಂದಿಗೆ ಪೂರ್ವಭಾವಿ ಒಪ್ಪಂದಕ್ಕೆ ಸಹಿ ಹಾಕಲಿಲ್ಲ ಎಂದು ಹೇಳಲಾಗಿದೆ.

    ನಾವು ದಂಪತಿಯಾಗಿ  ಮುಂದುವರೆಯಲು, ಜೊತೆಯಾಗಿ ಇರಬಹುದು ಎಂದು ನಾವು ನಂಬಲು ಸಾಧ್ಯವಿಲ್ಲ ಎಂದು ಗೇಟ್ಸ್ ವಿಚ್ಛೇದನದ ನಿರ್ಧಾರವನ್ನು ಘೋಷಿಸಿದರು. ದಂಪತಿಯ ಜಂಟಿ ಹೇಳಿಕೆಯ ಪ್ರಕಾರ, ಅವರ ಸಂಬಂಧದ ಬಗ್ಗೆ ಸಾಕಷ್ಟು ಸಮಾಲೋಚನೆ ಮಾಡಿದ ನಂತರ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ನಾವು ಮೂವರು ಮಕ್ಕಳನ್ನು ಬೆಳೆಸಿದ್ದೇವೆ. ನಾವು ಜಗತ್ತಿನ ಜನರು ಒಳಿತಿಗಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು, ಆ ಮೂಲಕ ಜಗತ್ತಿನ ಜನರನ್ನು ತಲುಪುತ್ತೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಮೆಲಿಂಡಾ ಮತ್ತು ಬಿಲ್ ಗೇಟ್ಸ್ ಇಬ್ಬರೂ ಸೇರಿ ವಿಶ್ವದ ಅತಿದೊಡ್ಡ ಖಾಸಗಿ ದತ್ತಿ ಪ್ರತಿಷ್ಠಾನವಾದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಿಲ್ ಗೇಟ್ಸ್ ಅವರು ಈ ಹಿಂದೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು ಮತ್ತು ಅವರ ಆಸ್ತಿ 100 ಬಿಲಿಯನ್‌ ಡಾಲರ್‌ಗಿಂತಲೂ ಹೆಚ್ಚು ಇದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಫೋರ್ಬ್ಸ್ ಪ್ರಕಾರ, 130.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮೆಲಿಂಡಾ 1987 ರಲ್ಲಿ ಮೈಕ್ರೋಸಾಫ್ಟ್ ನಲ್ಲಿ ಉತ್ಪನ್ನ ನಿರ್ವಾಹಕರಾಗಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಬಿಲ್ ಗೇಟ್ಸ್ ಅವರೊಂದಿಗೆ ಗೆಳೆತನ ಗಾಢವಾಯಿತು. ಬಳಿಕ ಪ್ರೇಮಿಗಳಾದ ಈ ಜೋಡಿ, 1994ರಲ್ಲಿ ಹವಾಯಿಯಲ್ಲಿ ವಿವಾಹವಾಗಿದ್ದರು.
    Published by:Kavya V
    First published: