ನವದೆಹಲಿ(ನ.30): 2002ರಲ್ಲಿ ಗುಜರಾತ್ನಲ್ಲಿ (Gujarat) ನಡೆದ ಗೋಧ್ರಾ (Godhra) ನಂತರದ ದಂಗೆಯ ಸಂತ್ರಸ್ತೆ ಬಿಲ್ಕಿಸ್ ಬಾನೊ (Bilkis Bano) ಪ್ರಕರಣದ ದೋಷಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿರುವುದನ್ನು ಸುಪ್ರೀಂ ಕೋರ್ಟ್ನಲ್ಲಿ (Supreme Court) ಪ್ರಶ್ನಿಸಲಾಗಿದೆ. 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಎಲ್ಲಾ ಅಪರಾಧಿಗಳನ್ನು ಮರಳಿ ಜೈಲಿಗೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಬಿಲ್ಕಿಸ್ ಮರುಪರಿಶೀಲನಾ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಸದ್ಯ, ಈ ಪ್ರಕರಣದ ವಿಚಾರಣೆ ಯಾವಾಗ ನಡೆಯಲಿದೆ ಎಂಬ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ.
ತನಗೆ ಸಂಬಂಧಿಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 11 ಅಪರಾಧಿಗಳನ್ನು ಮತ್ತು ಆಕೆಯ ಕುಟುಂಬದ ಏಳು ಮಂದಿಯನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿರುವುದು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಬಿಲ್ಕಿಸ್ ಬಾನೊ ಈ ಹಿಂದೆ ಹೇಳಿದ್ದರು. ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರವು ತನ್ನ ಕ್ಷಮಾದಾನ ನೀತಿಯಡಿಯಲ್ಲಿ ದೋಷಿಗಳಿಗೆ ಕ್ಷಮಾದಾನ ನೀಡಿದ ನಂತರ, ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಏಳು ಕುಟುಂಬದ ಸದಸ್ಯರ ಹತ್ಯೆಯಲ್ಲಿ ಅಪರಾಧಿಗಳಾಗಿರುವ ಎಲ್ಲಾ 11 ಜನರನ್ನು ಆಗಸ್ಟ್ 15 ರಂದು ಗೋಧ್ರಾ ಉಪ-ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಗುಜರಾತ್ ಸರ್ಕಾರದ ಈ ನಡೆಯನ್ನು ಟೀಕಿಸಿದ ಬಿಲ್ಕಿಸ್, 'ಇಂತಹ ದೊಡ್ಡ ಮತ್ತು ಅನ್ಯಾಯದ ನಿರ್ಧಾರ' ತೆಗೆದುಕೊಳ್ಳುವ ಮೊದಲು ಯಾರೂ tನ್ನ ಸುರಕ್ಷತೆಯ ಬಗ್ಗೆ ಕೇಳಲಿಲ್ಲ, ಯೋಗಕ್ಷೇಮವನ್ನೂ ವಿಚಾರಿಸಲಿಲ್ಲ ಎಂದಿದ್ದರು. ಹೀಗಿದ್ದರೂ ಬಿಲದ್ಕಿಸ್ ‘ಭಯವಿಲ್ಲದೇ ಶಾಂತಿಯುತವಾಗಿ ಬದುಕುವ’ ಹಕ್ಕನ್ನು ನೀಡುವಂತೆ ಗುಜರಾತ್ ಸರಕಾರವನ್ನು ಕೋರಿದ್ದರು.
ಈ ಬಗ್ಗೆ ಮಾತನಾಡಿದ ಬಿಲ್ಕಿಸ್ 'ಮಹಿಳೆಗೆ ಸಿಗಬೇಕಾದ ನ್ಯಾಯ ಇದ್ದಕ್ಕಿದ್ದಂತೆ ಹೇಗೆ ಕೊನೆಗೊಳ್ಳುತ್ತದೆ?' ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ 'ನಾನು ನನ್ನ ದೇಶದ ಸುಪ್ರೀಂ ಕೋರ್ಟ್ ಅನ್ನು ನಂಬಿದ್ದೇನೆ. ನಾನು ಪ್ರಜಾಪ್ರಭುತ್ವವನ್ನು ನಂಬಿದ್ದೇನೆ. ನನ್ನ ಭಯಾನಕ ಭೂತಕಾಲದೊಂದಿಗೆ ಬದುಕಲು ನಾನು ನಿಧಾನವಾಗಿ ಕಲಿಯುತ್ತಿದ್ದೆ. ಅಪರಾಧಿಗಳ ಖುಲಾಸೆಯು ನನ್ನ ಶಾಂತಿಯನ್ನು ಕದಡಿದೆ ಮತ್ತು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ನನ್ನ ನೋವು ಮತ್ತು ನನ್ನ ನಂಬಿಕೆ ಕ್ಷೀಣಿಸುತ್ತಿರುವುದು ನನ್ನ ಸಮಸ್ಯೆ ಮಾತ್ರವಲ್ಲ, ಆದರೆ ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಹೋರಾಡುವ ಎಲ್ಲಾ ಮಹಿಳೆಯರ ಸಮಸ್ಯೆಯಾಗಿದೆ ಎಂದಿದ್ದಾರೆ.
ಸಾಮೂಹಿಕ ಅತ್ಯಾಚಾರದ ನಂತರ ಸಾಯಲು ಬಿಟ್ಟರು
ಬಿಲ್ಕಿಸ್ ಬಾನೋ ಪ್ರಕರಣವು 3 ಮಾರ್ಚ್ 2002 ರಂದು ನಡೆದಿದೆ. ಗೋಧ್ರಾ ನಂತರದ ಗಲಭೆಗಳ ಸಂದರ್ಭದಲ್ಲಿ, ದಾಹೋಡ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನ ರಂಧಿಕ್ಪುರ ಗ್ರಾಮದ ಬಿಲ್ಕಿಸ್ ಬಾನೋ ಅವರ ಮನೆಗೆ ಗುಂಪೊಂದು ನುಗ್ಗಿತು. ಕುಟುಂಬದವರ ಮೇಲೆ ಹಲ್ಲೆ ನಡೆದಿತ್ತು. ಆ ಸಮಯದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾದರು. ಈ ವೇಳೆ ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣವು ಗುಜರಾತ್ ಗಲಭೆಯ ಅತ್ಯಂತ ಕೆಟ್ಟ ಪ್ರಕರಣವಾಗಿದೆ. ಆ ಸಮಯದಲ್ಲಿ ಬಿಲ್ಕಿಸ್ 21 ವರ್ಷ ವಯಸ್ಸಿನವರಾಗಿದ್ದರು ಮತ್ತು ಗರ್ಭಿಣಿಯಾಗಿದ್ದರು. ಗೋಧ್ರಾ ಗುಜರಾತ್ ಗಲಭೆಯ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಸಾಯಲು ಬಿಡಲಾಹಗಿತ್ತು. ಇತರ ಆರು ಸದಸ್ಯರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಪ್ರಕರಣದ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: 2002 ಗೋಧ್ರಾ ದಂಗೆ ಪ್ರಕರಣ: ಮೋದಿ ನೇತೃತ್ವದ ಗುಜರಾತ್ ಸರ್ಕಾರಕ್ಕೆ ಕ್ಲೀನ್ಚಿಟ್
ದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ, ಬೇಡಿ ಪಡೆದಿದ್ದರು
ಸಾಮೂಹಿಕ ಅತ್ಯಾಚಾರದ ನಂತರ ತಾನು ಸುಮಾರು ಮೂರು ಗಂಟೆಗಳ ಕಾಲ ಪ್ರಜ್ಞಾಹೀನಳಾಗಿದ್ದಳು ಎಂದು ಬಿಲ್ಕಿಸ್ ಹೇಳಿದ್ದರು. ಎದ್ದೇಳಲು ಸಾಧ್ಯವಾಗದಷ್ಟು ನೋವು ಮೈಯಲ್ಲಿ ಇತ್ತು. ಪ್ರಜ್ಞೆ ಬಂದ ನಂತರ ಹೇಗೋ ನಿಭಾಯಿಸಿದೆ. ಇನ್ನು ಸ್ವಲ್ಪ ದಿನ ಇಲ್ಲಿಯೇ ಇದ್ದರೆ ತನ್ನನ್ನು ಸಾಯಿಸಿಬಿಡುತ್ತೇನೋ ಎಂಬ ಭಯವೂ ಮನದಲ್ಲಿ ಮೂಡಿತ್ತು. ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಮತ್ತು ಹತ್ತಿರದ ಬುಡಕಟ್ಟು ಮಹಿಳೆಯಿಂದ ಬಟ್ಟೆಗಳನ್ನು ಎರವಲು ಪಡೆದೆ. ಬಳಿಕ ಹೋಮ್ ಗಾರ್ಡ್ ನನ್ನನ್ನು, ಅವರು ಲಿಮ್ಖೇಡಾ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಪೊಲೀಸ್ ದೂರು ನೀಡಿದ್ದೆ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ