ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್​ ಬನೊಗೆ 50 ಲಕ್ಷ ಪರಿಹಾರ, ಸರ್ಕಾರಿ ಹುದ್ದೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಕೋರ್ಟ್​ ಆದೇಶ

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಗುಜರಾತ್ ಸರ್ಕಾರ ಈ ಪ್ರಕರಣದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಪೆನ್ಷನ್​ ತಡೆ  ಹಾಗೂ ಐದು ದರ್ಜೆ ಹಿಂಬಡ್ತಿ ನೀಡುವುದಾಗಿ ತಿಳಿಸಿತು.

HR Ramesh | news18
Updated:April 23, 2019, 3:24 PM IST
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್​ ಬನೊಗೆ 50 ಲಕ್ಷ ಪರಿಹಾರ, ಸರ್ಕಾರಿ ಹುದ್ದೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಕೋರ್ಟ್​ ಆದೇಶ
ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್​ ಬನೊ (ಸಂಗ್ರಹ ಚಿತ್ರ)
  • News18
  • Last Updated: April 23, 2019, 3:24 PM IST
  • Share this:
ನವದೆಹಲಿ: 2002ರ ಗುಜರಾತ್​ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಿಲ್ಕಿಸ್​ ಬನೊ ಅವರಿಗೆ 50 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್​ ಮಂಗಳವಾರ ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೇ, ಆಕೆಗೆ ಸರ್ಕಾರಿ ಉದ್ಯೋಗ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸುವಂತೆ ನಿರ್ದೇಶನ ನೀಡಿದೆ. 17 ವರ್ಷಗಳ ನಿರಂತರ ಹೋರಾಟದ ಬಳಿಕ ಬಿಲ್ಕಿಸ್ ಬಾನು ಅವರಿಗೆ ನ್ಯಾಯಾಲಯ ಈ ಪರಿಹಾರ ಕಲ್ಪಿಸಿದೆ.

ಅಹಮದಾಬಾದ್​ ಸಮೀಪವಿರುವ ರಂದೀಕ್​ಪುರ್​ ಹಳ್ಳಿಯಲ್ಲಿ ಬನೊ 21 ವರ್ಷದವರಿದ್ದಾಗ 2002ರ ಮಾರ್ಚ್​ 3ರಂದು ಗುಂಪೊಂದು ಅವರ ಕುಟುಂಬದ ಮೇಲೆ ದಾಳಿ ನಡೆಸಿ, ಕುಟುಂಬದ 14 ಮಂದಿಯನ್ನು ಹತ್ಯೆ ಮಾಡಿತ್ತು. ಬಿಲ್ಕಿಸ್​ ಬನೊ ಅವರ ಮೂರು ವರ್ಷದ ಮಗಳಾದ ಶಾಲಿಹಾನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ವೇಳೆ ಗರ್ಭಿಣಿಯಾಗಿದ್ದ ಬಿಲ್ಕಿಸ್​ ಅವರ ಮೇಲೆ ಸಾಮೂಹಿಕ ಅತ್ಯಾಚಾರವನ್ನೂ ಎಸಗಲಾಯಿತು. ಪ್ರಜ್ಞೆ ತಪ್ಪಿದ್ದ ಬಿಲ್ಕಿಸ್​ ಬನೊ ಸತ್ತಿದ್ದಾಳೆ ಎಂದು ಭಾವಿಸಿ ದಾಳಿಕೋರರು ಜಾಗ ಖಾಲಿ ಮಾಡಿದ್ದರು.

ಘಟನೆ ನಂತರ ಗುಜರಾತ್ ಸರ್ಕಾರ ಬಿಲ್ಕಿಸ್ ಬನೊ ಅವರಿಗೆ 5 ಲಕ್ಷ ಪರಿಹಾರ ನೀಡಿತ್ತು. ಆದರೆ, ಇದನ್ನು ನಿರಾಕರಿಸಿದ ಅವರು, ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿ ಹಾಗೂ ತನಿಖೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

2008ರಲ್ಲಿ 11 ಮಂದಿ ಆರೋಪಿಗಳಿಗೆ ಬಾಂಬೆ ಹೈಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಆರೋಪಿಗಳ ಪರವಾಗಿ ಕೆಲಸ ಮಾಡಿ, ಸಾಕ್ಷ್ಯಗಳನ್ನು ನಾಶ ಮಾಡಲು ಯತ್ನಿಸಿದ ಪೊಲೀಸರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ.

ಇದನ್ನು ಓದಿ: ತಪ್ಪಾಯಿತೆಂದರೂ ಬಿಡದ ನ್ಯಾಯಾಲಯ; ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟೀಸ್

ಬಿಲ್ಕಿಸ್ ಬನೊ ಅವರ ಪರ ವಾದ ಮಂಡಿಸಿ ಶೋಭಾ ಗುಪ್ತಾ, ಈಗಾಗಲೇ ನಾಲ್ವರು ಅಧಿಕಾರಿಗಳು ನಿವೃತ್ತಿಯಾಗಿದ್ದಾರೆ ಐದನೇ ಐಪಿಎಸ್​ ಅಧಿಕಾರಿ ಆರ್ ಎಸ್​ ಭಾಗೊರಾ ಕೂಡ ಅದೇ ನಿವೃತ್ತಿ ಹಂಚಿನಲ್ಲಿ ಇದ್ದಾರೆ. ಆದರೂ ಅವರ ಮೇಲೆ ಸರ್ಕಾರ ಯಾವುದೇ ಶಿಸ್ತುಕ್ರಮ ತೆಗೆದುಕೊಂಡಿಲ್ಲ ಎಂದು ವಾದಿಸಿದ್ದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಗುಜರಾತ್ ಸರ್ಕಾರ ಈ ಪ್ರಕರಣದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಪೆನ್ಷನ್​ ತಡೆ  ಹಾಗೂ ಐದು ದರ್ಜೆ ಹಿಂಬಡ್ತಿ ನೀಡುವುದಾಗಿ ತಿಳಿಸಿತು.
 ವಾದ ಆಲಿಸಿದ ಸುಪ್ರೀಂಕೋರ್ಟ್​, ಸರ್ಕಾರ ಈ ಬಗ್ಗೆ ಇಂದೇ ಕ್ರಮ ತೆಗೆದುಕೊಂಡು, ಅದನ್ನು ನ್ಯಾಯಾಲಯಕ್ಕೆ ತಿಳಿಸಬೇಕು. ನಾಲ್ವರು ಅಧಿಕಾರಿಗಳ ಪೆನ್ಷನ್​ ತಡೆಹಿಡಿಯಬೇಕು ಮತ್ತು ಸೇವೆಯಲ್ಲಿರುವ ಉಪ ಆಯುಕ್ತ ಆರ್.ಎಸ್.ಭಾಗೊರಾ ಅವರಿಗೆ ಹಿಂಬಡ್ತಿ ನೀಡಬೇಕು ಎಂದು ಕೋರ್ಟ್​ ನಿರ್ದೇಶಿಸಿತು.


First published:April 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading