• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Bilkis Bano Case: ಬಿಲ್ಕಿಸ್ ಬಾನೊ ರೇಪ್​ ಕೇಸ್: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ದೋಷಿಗಳನ್ನು ಬಿಡುಗಡೆಗೊಳಿಸಿದ ಸರ್ಕಾರ!

Bilkis Bano Case: ಬಿಲ್ಕಿಸ್ ಬಾನೊ ರೇಪ್​ ಕೇಸ್: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ದೋಷಿಗಳನ್ನು ಬಿಡುಗಡೆಗೊಳಿಸಿದ ಸರ್ಕಾರ!

ಬಿಲ್ಕಿಸ್ ಬಾನೊ ರೇಪ್​ ಕೇಸ್

ಬಿಲ್ಕಿಸ್ ಬಾನೊ ರೇಪ್​ ಕೇಸ್

2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ನಡೆದಿತ್ತು. ಹೀಗಿರುವಾಗ 3 ಮಾರ್ಚ್ 2002 ರಂದು, ದಾಹೋದ್ ಜಿಲ್ಲೆಯ ರಂಧಿಕ್‌ಪುರ ಗ್ರಾಮದಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾದರು ಮತ್ತು ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಯಿತು. ಅಪರಾಧ ನಡೆದಾಗ ಬಿಲ್ಕಿಸ್ ಬಾನೊ ಐದು ತಿಂಗಳ ಗರ್ಭಿಣಿಯಾಗಿದ್ದಳು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿತ್ತು.

ಮುಂದೆ ಓದಿ ...
  • Share this:

ಅಹಮದಾಬಾದ್(ಆ.16): ಗುಜರಾತ್‌ನಲ್ಲಿ (Gujarat) ನಡೆದ ಗೋಧ್ರಾ ಘಟನೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ (Bilkis Bano Rape Case) ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎಲ್ಲಾ 11 ಕೈದಿಗಳನ್ನು ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಲಾಗಿದೆ. ಸೋಮವಾರ ಈ ಅಪರಾಧಿಗಳು ಗೋಧ್ರಾ ಉಪ ಜೈಲಿನಿಂದ ಹೊರಬಂದರು. ಗುಜರಾತ್ ಸರ್ಕಾರ (Gujarat) ತನ್ನ ಕ್ಷಮಾದಾನ ನೀತಿಯಡಿ ಈ ದೋಷಿಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಿತ್ತು.


2002ರ ಗೋಧ್ರಾ ಘಟನೆ ಗುಜರಾತ್‌ನಲ್ಲಿ ನಡೆದಿದೆ ಎಂಬುವುದು ಉಲ್ಲೇಖನೀಯ. 3 ಮಾರ್ಚ್ 2002 ರಂದು, ದಾಹೋದ್ ಜಿಲ್ಲೆಯ ರಂಧಿಕ್‌ಪುರ ಗ್ರಾಮದಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾದರು ಮತ್ತು ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಯಿತು. ಅಪರಾಧ ನಡೆದಾಗ ಬಿಲ್ಕಿಸ್ ಬಾನೊ ಐದು ತಿಂಗಳ ಗರ್ಭಿಣಿಯಾಗಿದ್ದರು. ರಾಧೇಶ್ಯಾಮ್ ಶಾಹಿ, ಜಸ್ವಂತ್ ಚತುರ್ಭಾಯಿ ನಾಯ್, ಕೇಶುಭಾಯಿ ವಡಾನಿಯಾ, ಬಕಾಭಾಯಿ ವಡಾನಿಯಾ, ರಾಜೀವ್‌ಭಾಯ್ ಸೋನಿ, ರಮೇಶ್‌ಭಾಯ್ ಚೌಹಾಣ್, ಶೈಲೇಶ್‌ಭಾಯ್ ಭಟ್, ಬಿಪಿನ್ ಚಂದ್ರ ಜೋಶಿ, ಗೋವಿಂದಭಾಯ್ ನಾಯ್, ಮಿತೇಶ್ ಭಟ್ ಮತ್ತು ಪ್ರದೀಪ್ ಮೋಧಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಎಲ್ಲಾ ದೋಷಿಗಳನ್ನು 2004ರಲ್ಲಿ ಬಂಧಿಸಲಾಗಿತ್ತು.


ಇದನ್ನೂ ಓದಿ:  2002 ಗೋಧ್ರಾ ದಂಗೆ ಪ್ರಕರಣ: ಮೋದಿ ನೇತೃತ್ವದ ಗುಜರಾತ್​ ಸರ್ಕಾರಕ್ಕೆ ಕ್ಲೀನ್​ಚಿಟ್​


2004 ರಲ್ಲಿ ಪ್ರಕರಣ ಮುಂಬೈಗೆ ವರ್ಗಾವಣೆ


ಆಗ ಅಹಮದಾಬಾದ್‌ನಲ್ಲಿ ವಿಚಾರಣೆ ಆರಂಭವಾಗಿತ್ತು. ಹೀಗಿರುವಾಗ ಸಾಕ್ಷಿಗಳಿಗೆ ಹಾನಿಯಾಗಬಹುದು ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಸಂಗ್ರಹಿಸಿದ ಸಾಕ್ಷ್ಯವನ್ನು ತಿರುಚಬಹುದು ಎಂದು ಬಿಲ್ಕಿಸ್ ಬಾನೊ ಆತಂಕ ವ್ಯಕ್ತಪಡಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಸುಪ್ರೀಂ ಕೋರ್ಟ್ ಆಗಸ್ಟ್ 2004 ರಲ್ಲಿ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಿತ್ತು. ಜನವರಿ 21, 2008 ರಂದು, ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಪ್ರಕರಣದಲ್ಲಿ 11 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತು ಮತ್ತು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ನಂತರ ಬಾಂಬೆ ಹೈಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿಯಿತು ಅಲ್ಲದೇ ಶಿಕ್ಷೆಯನ್ನು ಮುಂದುವರೆಸಿತು.


ಈ ಅಪರಾಧಿಗಳು 18 ವರ್ಷಗಳಿಗಿಂತ ಹೆಚ್ಚು ಶಿಕ್ಷೆ ಅನುಭವಿಸಿದ್ದಾರೆ, ಹೀಗಾಗಿ ರಾಧೇಶ್ಯಾಮ್ ಶಾಹಿ ಅವರು ಗುಜರಾತ್ ಹೈಕೋರ್ಟ್‌ಗೆ ಸೆಕ್ಷನ್ 432 ಮತ್ತು 433 ರ ಅಡಿಯಲ್ಲಿ ಶಿಕ್ಷೆಯನ್ನು ಮನ್ನಾ ಮಾಡುವಂತೆ ಮನವಿ ಮಾಡಿದ್ದರು. ಆದರೆ ಅವರ ಕ್ಷಮೆಯಾಚನೆಯ ಬಗ್ಗೆ ನಿರ್ಧರಿಸಲು ಮಹಾರಾಷ್ಟ್ರ ಸರ್ಕಾರ ಸೂಕ್ತ, ಗುಜರಾತ್ ಅಲ್ಲ ಎಂದು ಹೇಳಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.


PIL Petition Started Debate on Parties Freebie Culture and The fresh stand of the central
ಸುಪ್ರೀಂಕೋರ್ಟ್


ನಂತರ ರಾಧೇಶ್ಯಾಮ್ ಶಾಹಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು ಮತ್ತು ಏಪ್ರಿಲ್ 1, 2022 ರವರೆಗೆ ದೋಷಿಗಳು ಯಾವುದೇ ವಿನಾಯಿತಿ ಇಲ್ಲದೆ 15 ವರ್ಷ ಮತ್ತು 4 ತಿಂಗಳು ಜೈಲಿನಲ್ಲಿ ಇದ್ದರು ಎಂದು ಹೇಳಿದರು. ಹೀಗಿರುವಾಗ ಮೇ 13 ರಂದು, ಸುಒ್ರೀಂ ಕೋರ್ಟ್​ ಗುಜರಾತ್‌ನಲ್ಲಿ ಅಪರಾಧ ಎಸಗಿರುವುದರಿಂದ, ರಾಧೇಶ್ಯಾಮ್ ಶಾಹಿ ಅವರ ಅರ್ಜಿಯನ್ನು ಪರಿಶೀಲಿಸಲು ಗುಜರಾತ್ ರಾಜ್ಯವೇ ಸೂಕ್ತ ಸರ್ಕಾರ ಎಂದು ಹೇಳಿತ್ತು.


ಬಿಡುಗಡೆಗೆ ಸುಪ್ರೀಂ ನಿರ್ದೇಶನ


ಜುಲೈ 9, 1992 ರ ಕ್ಷಮಾದಾನ ನೀತಿಯ ಪ್ರಕಾರ ಅವಧಿಪೂರ್ವ ಬಿಡುಗಡೆಗಾಗಿ ಅರ್ಜಿಯನ್ನು ಪರಿಗಣಿಸಲು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತು ಮತ್ತು ಎರಡು ತಿಂಗಳೊಳಗೆ ನಿರ್ಧಾರವನ್ನು ತೆಗೆದುಕೊಳ್ಳಬಹುದೆಂದು ಹೇಳಿತ್ತು.


ಇದನ್ನೂ ಓದಿ: ಗೋಧ್ರಾ ಹತ್ಯಾಕಾಂಡ; ವಿಶೇಷ ಎಸ್​ಐಟಿ ನ್ಯಾಯಾಲಯದಿಂದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಪಂಚಮಹಲ್ ಕಲೆಕ್ಟರ್ ಸುಜಲ್ ಮೇತ್ರಾ, ಅಪರಾಧಿಗಳ ಶಿಕ್ಷೆಯಲ್ಲಿ ಕ್ಷಮಾದಾನದ ವಿಷಯವನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ನಂತರ ಸರ್ಕಾರವು ಸಮಿತಿಯನ್ನು ರಚಿಸಿದೆ ಎಂದು ಹೇಳಿದರು. ಈ ಸಮಿತಿಯು ಜಿಲ್ಲಾಧಿಕಾರಿ ನೇತೃತ್ವದಲ್ಲಿದೆ.


ಘಟನೆಯ ಎಲ್ಲಾ 11 ಅಪರಾಧಿಗಳನ್ನು ಬಿಡುಗಡೆ ಮಾಡುವ ಪರವಾಗಿ ಸಮಿತಿಯು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಶಿಫಾರಸನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದ್ದು, ನಿನ್ನೆ ಅವರ ಬಿಡುಗಡೆಗೆ ಆದೇಶ ಬಂದಿದೆ.

top videos
    First published: