Bilkis Bano: ರೇಪ್​ ದೋಷಿಗಳ ಕ್ಷಮಾದಾನ ಕೂಡಲೇ ರದ್ದುಗೊಳಿಸಿ: ಬಿಲ್ಕಿಸ್​ ಪರ ಸುಪ್ರೀಂಗೆ ಸಾವಿರಾರು ಮಂದಿಯಿಂದ ಮನವಿ!

"ನ್ಯಾಯ ವ್ಯವಸ್ಥೆಯಲ್ಲಿ ಮಹಿಳೆಯರ ನಂಬಿಕೆಯನ್ನು ಪುನಃಸ್ಥಾಪಿಸಲು ನಾವು ಒತ್ತಾಯಿಸುತ್ತೇವೆ. ಈ 11 ಅಪರಾಧಿಗಳ ಶಿಕ್ಷೆಯನ್ನು ಮನ್ನಾ ಮಾಡುವ ನಿರ್ಧಾರವನ್ನು ಕೂಡಲೇ ಹಿಂಪಡೆದು, ಜೀವಾವಧಿ ಶಿಕ್ಷೆಯನ್ನು ಪೂರ್ಣಗೊಳಿಸಲು ಜೈಲಿಗೆ ಕಳುಹಿಸುವಂತೆ ಒತ್ತಾಯಿಸುವುದಾಗಿ ಈ ಅರ್ಜಿದಾರರು ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಬಿಲ್ಕಿಸ್ ಬಾನೊ ರೇಪ್​ ಕೇಸ್

ಬಿಲ್ಕಿಸ್ ಬಾನೊ ರೇಪ್​ ಕೇಸ್

  • Share this:
ನವದೆಹಲಿ(ಆ.19): ಸಾಮಾಜಿಕ, ಮಹಿಳಾ ಹಾಗೂ ಮಾನವ ಹಕ್ಕು ಹೋರಾಟಗಾರರು ಸೇರಿ ಸುಮಾರು ಆರು ಸಾವಿರಕ್ಕೂ ಅಧಿಕ ಮಂದಿ 2002 ರ ಬಿಲ್ಕಿಸ್ ಬಾನೊ (Bilkis Bano) ಪ್ರಕರಣದಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ (Gujarat Govt) ನಿರ್ಧಾರವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್​ಗೆ ಒತ್ತಾಯಿಸಿದ್ದಾರೆ. ಈ ಕುರಿತಾಗಿ ನೀಡಿರುವ ಜಂಟಿ ಹೇಳಿಕೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ 11 ಅಪರಾಧಿಗಳ ಶಿಕ್ಷೆ ಮನ್ನಾ ಮಾಡಿರುವುದು ನ್ಯಾಯಾಂಗ (Judiciary) ವ್ಯವಸ್ಥೆ ಮೇಲೆ ನಂಬಿಕೆ ಇರಿಸಿರುವ ಪ್ರತಿಯೊಬ್ಬ ಅತ್ಯಾಚಾರ ಸಂತ್ರಸ್ತರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಹೇಳಿಕೆ ನೀಡಿದವರಲ್ಲಿ ಸೈಯದಾ ಹಮೀದ್, ಜಫರುಲ್ ಇಸ್ಲಾಂ ಖಾನ್, ರೂಪ್ ರೇಖಾ, ದೇವಕಿ ಜೈನ್, ಉಮಾ ಚಕ್ರವರ್ತಿ, ಸುಭಾಷಿಣಿ ಅಲಿ, ಕವಿತಾ ಕೃಷ್ಣನ್, ಮೈಮೂನಾ ಮುಲ್ಲಾ, ಹಸೀನಾ ಖಾನ್, ರಚನಾ ಮುದ್ರಾಬೈನಾ, ಶಬ್ನಮ್ ಹಶ್ಮಿ ಮತ್ತು ಇತರರು ಇದ್ದಾರೆ. ನಾಗರಿಕ ಹಕ್ಕುಗಳ ಸಂಘಟನೆಗಳಲ್ಲಿ ಸಹೇಲಿ ಮಹಿಳಾ ಸಂಪನ್ಮೂಲ ಕೇಂದ್ರ, ಗಮನ ಮಹಿಳಾ ಗುಂಪು, ಬೆಬಕ್ ಕಲೆಕ್ಟಿವ್, ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘ, ಉತ್ತರಾಖಂಡ ಮಹಿಳಾ ಮಂಚ್ ಮತ್ತು ಇತರ ಸಂಸ್ಥೆಗಳು ಸೇರಿವೆ.

ಕೂಡಲೇ ಕ್ಷಮಾದಾನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಈ ಕೊಲೆ ಮತ್ತು ಅತ್ಯಾಚಾರದ ಅಪರಾಧಿಗಳನ್ನು ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸುವ ಮೊದಲು ಬಿಡುಗಡೆ ಮಾಡುವುದರಿಂದ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಎಲ್ಲಾ ಪುರುಷರ ಮನಸ್ಸಿನಲ್ಲಿ (ಶಿಕ್ಷೆಗೆ ಒಳಗಾಗುವ) ಭಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. "ನ್ಯಾಯ ವ್ಯವಸ್ಥೆಯಲ್ಲಿ ಮಹಿಳೆಯರ ನಂಬಿಕೆಯನ್ನು ಪುನಃಸ್ಥಾಪಿಸಲು ನಾವು ಒತ್ತಾಯಿಸುತ್ತೇವೆ. ಈ 11 ಅಪರಾಧಿಗಳ ಶಿಕ್ಷೆಯನ್ನು ಮನ್ನಾ ಮಾಡುವ ನಿರ್ಧಾರವನ್ನು ಕೂಡಲೇ ಹಿಂಪಡೆಯಿರಿ ಹಾಗೂ ಅವರ ಜೀವಾವಧಿ ಶಿಕ್ಷೆಯನ್ನು ಪೂರ್ಣಗೊಳಿಸಲು ಜೈಲಿಗೆ ಕಳುಹಿಸಲು ಒತ್ತಾಯಿಸುತ್ತೇವೆ ಎಂದಿದ್ದಾರೆ. ಇನ್ನು ಗುಜರಾತ್ ಸರ್ಕಾರವು ಕ್ಷಮಾದಾನ ನೀತಿಯ ಭಾಗವಾಗಿ 11 ಅಪರಾಧಿಗಳ ಬಿಡುಗಡೆಗೆ ಅನುಮತಿ ನೀಡಿದ್ದು, ಇದರ ಬೆನ್ನಲ್ಲೇ ಅಪರಾಧಿಗಳು ಆಗಸ್ಟ್ 15 ರಂದು ಗೋಧ್ರಾ ಉಪ ಜೈಲಿನಿಂದ ಹೊರಬಂದರು. ಈ ಅಪರಾಧಿಗಳು 15 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ.

ಇದನ್ನೂ ಓದಿ: Bilkis Bano Case: ಬಿಲ್ಕಿಸ್ ಬಾನೊ ರೇಪ್​ ಕೇಸ್: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ದೋಷಿಗಳನ್ನು ಬಿಡುಗಡೆಗೊಳಿಸಿದ ಸರ್ಕಾರ!

ಜನವರಿ 21, 2008 ರಂದು, ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನೊ ಅವರ ಕುಟುಂಬದ ಏಳು ಸದಸ್ಯರನ್ನು ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಈ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾದಾಗ, ಆಕೆಗೆ 21 ವರ್ಷ ವಯಸ್ಸಾಗಿತ್ತು ಮತ್ತು ಅವಳು ಐದು ತಿಂಗಳ ಗರ್ಭಿಣಿಯಾಗಿದ್ದಳು. ಹತ್ಯೆಯಾದವರಲ್ಲಿ ಅವರ ಮೂರು ವರ್ಷದ ಮಗಳೂ ಸೇರಿದ್ದಳು.

ನ್ಯಾಯದ ಮೇಲಿನ ನನ್ನ ನಂಬಿಕೆ ಕಳೆದುಹೋಯಿತು

ಇನ್ನು ಅಪರಾಧಿಗಳ ಬಿಡುಗಡೆ ಬಗ್ಗೆ ಮಾತನಾಡಿದ ಬಿಲ್ಕಿಸ್ ಸರ್ಕಾರದ ಈ ನಿರ್ಧಾರದಿಂದ ನಾಣು ಬಲವನ್ನೇ ಕಳೆದುಕೊಂಡಂತಾಗಿದ್ದೇನೆ. ನನ್ನ ಬಳಿ ಪದಗಳಿಲ್ಲ. ನನಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಮಹಿಳೆಯ ಪಾಲಿಗೆ ನ್ಯಾಯ ಈ ರೀತಿ ಹೇಗೆ ಕೊನೆಗೊಳ್ಳಲು ಸಾಧ್ಯ? ನಾನು ನನ್ನ ದೇಶದ ಸುಪ್ರೀಂ ಕೋರ್ಟ್ ಅನ್ನು ನಂಬಿದ್ದೇನೆ. ಹೀಗಾಗಿ ನನ್ನ ಮೇಲಾದ ಭಯಾನಕ ಕೃತ್ಯವನ್ನು ಮರೆತು ನಿಧಾನವಾಗಿ ಬದುಕಲು ಕಲಿಯುತ್ತಿದ್ದೆ. ಅಪರಾಧಿಗಳ ಬಿಡುಗಡೆಯು ನನ್ನ ಶಾಂತಿಗೆ ಭಂಗ ತಂದಿದೆ ಮತ್ತು ನಾನು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

Supreme Court On Free Fall of Freebies CJI NV Ramana said Please submit something before my retirement

ಸಾಮೂಹಿಕ ಅತ್ಯಾಚಾರದ ನಂತರ ಸಾಯಲು ಬಿಟ್ಟರು

ಬಿಲ್ಕಿಸ್ ಬಾನೋ ಪ್ರಕರಣವು 3 ಮಾರ್ಚ್ 2002 ರಂದು ನಡೆದಿದೆ. ಗೋಧ್ರಾ ನಂತರದ ಗಲಭೆಗಳ ಸಂದರ್ಭದಲ್ಲಿ, ದಾಹೋಡ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನ ರಂಧಿಕ್‌ಪುರ ಗ್ರಾಮದ ಬಿಲ್ಕಿಸ್ ಬಾನೋ ಅವರ ಮನೆಗೆ ಗುಂಪೊಂದು ನುಗ್ಗಿತು. ಕುಟುಂಬದವರ ಮೇಲೆ ಹಲ್ಲೆ ನಡೆದಿತ್ತು. ಆ ಸಮಯದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾದರು. ಈ ವೇಳೆ ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣವು ಗುಜರಾತ್ ಗಲಭೆಯ ಅತ್ಯಂತ ಕೆಟ್ಟ ಪ್ರಕರಣವಾಗಿದೆ. ಆ ಸಮಯದಲ್ಲಿ ಬಿಲ್ಕಿಸ್ 21 ವರ್ಷ ವಯಸ್ಸಿನವರಾಗಿದ್ದರು ಮತ್ತು ಗರ್ಭಿಣಿಯಾಗಿದ್ದರು. ಗೋಧ್ರಾ ಗುಜರಾತ್ ಗಲಭೆಯ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಸಾಯಲು ಬಿಡಲಾಹಗಿತ್ತು. ಇತರ ಆರು ಸದಸ್ಯರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಪ್ರಕರಣದ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ:  2002 ಗೋಧ್ರಾ ದಂಗೆ ಪ್ರಕರಣ: ಮೋದಿ ನೇತೃತ್ವದ ಗುಜರಾತ್​ ಸರ್ಕಾರಕ್ಕೆ ಕ್ಲೀನ್​ಚಿಟ್​

ದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ, ಬೇಡಿ ಪಡೆದಿದ್ದರು

ಸಾಮೂಹಿಕ ಅತ್ಯಾಚಾರದ ನಂತರ ತಾನು ಸುಮಾರು ಮೂರು ಗಂಟೆಗಳ ಕಾಲ ಪ್ರಜ್ಞಾಹೀನಳಾಗಿದ್ದಳು ಎಂದು ಬಿಲ್ಕಿಸ್ ಹೇಳಿದ್ದರು. ಎದ್ದೇಳಲು ಸಾಧ್ಯವಾಗದಷ್ಟು ನೋವು ಮೈಯಲ್ಲಿ ಇತ್ತು. ಪ್ರಜ್ಞೆ ಬಂದ ನಂತರ ಹೇಗೋ ನಿಭಾಯಿಸಿದೆ. ಇನ್ನು ಸ್ವಲ್ಪ ದಿನ ಇಲ್ಲಿಯೇ ಇದ್ದರೆ ತನ್ನನ್ನು ಸಾಯಿಸಿಬಿಡುತ್ತೇನೋ ಎಂಬ ಭಯವೂ ಮನದಲ್ಲಿ ಮೂಡಿತ್ತು. ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಮತ್ತು ಹತ್ತಿರದ ಬುಡಕಟ್ಟು ಮಹಿಳೆಯಿಂದ ಬಟ್ಟೆಗಳನ್ನು ಎರವಲು ಪಡೆದೆ. ಬಳಿಕ ಹೋಮ್ ಗಾರ್ಡ್ ನನ್ನನ್ನು, ಅವರು ಲಿಮ್ಖೇಡಾ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಪೊಲೀಸ್ ದೂರು ನೀಡಿದ್ದೆ ಎಂದು ಹೇಳಿದ್ದರು.
Published by:Precilla Olivia Dias
First published: