• Home
 • »
 • News
 • »
 • national-international
 • »
 • Hijab Controversy: ಬಿಕಿನಿಯೋ, ಹಿಜಾಬೋ..! ಅದು ಹೆಣ್ಮಕ್ಕಳ ಹಕ್ಕು ಎಂದ ಪ್ರಿಯಾಂಕಾ ವಾದ್ರಾ

Hijab Controversy: ಬಿಕಿನಿಯೋ, ಹಿಜಾಬೋ..! ಅದು ಹೆಣ್ಮಕ್ಕಳ ಹಕ್ಕು ಎಂದ ಪ್ರಿಯಾಂಕಾ ವಾದ್ರಾ

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

ಕಳೆದ ಕೆಲ ವಾರಗಳಿಂದ ಕರ್ನಾಟಕದ ಉಡುಪಿ, ಚಿಕ್ಕಮಗಳೂರು ಮತ್ತು ಮಂಡ್ಯ ಜಿಲ್ಲೆಗಳ ಹಲವಾರು ಪಟ್ಟಣಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಧರಿಸುವ ಹಕ್ಕಿನ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

 • Share this:

  ನವದೆಹಲಿ(ಫೆ.09): ಕರ್ನಾಟಕದಲ್ಲಿ ಹಿಜಾಬ್(Controversy) ಬೆಂಕಿ ಹತ್ತಿಕೊಂಡಿದ್ದು, ಇದು ದೇಶಾದ್ಯಂತ ಸಂಚಲನ ಮೂಡಿಸಿದೆ. ಮಂಗಳೂರು, ಚಿಕ್ಕಮಗಳೂರು, ಮಂಡ್ಯ(Mandya) ಭಾಗದಲ್ಲಿ ಹಿಜಾಬ್(Hijab) ಆಕ್ರೋಶ ಹೆಚ್ಚಾಗಿದ್ದು ಕರ್ನಾಟಕದಲ್ಲಿ ಈಗಾಗಲೇ ಮೂರು ದಿನಗಳ ಕಾಲ ಶಾಲಾ- ಕಾಲೇಜುಗಳಿಗೆ(School-Colleges)  ರಜೆ ಘೋಷಣೆಯಾಗಿದೆ. ಚಿಕ್ಕದಾಗಿ ಆರಂಭವಾದ ವಿಚಾರ ಈಗ ಬಹಳಷ್ಟು ವ್ಯಾಪಿಸಿದ್ದು ವಿದ್ಯಾರ್ಥಿಗಳು ಪುಂಡಾಟಿಕೆ ತೋರಿಸಿ ತರಗತಿಗಳನ್ನು ಬಹಿಷ್ಕರಿಸುತ್ತಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್(Hijab) ತೆಗೆಯುವುದಿಲ್ಲ ಎಂದರೆ, ಅತ್ತ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕ್ಯಾಂಪಸ್‌ ಪ್ರವೇಶಿಸಿದ್ದಾರೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ (Karnataka)ವಿದ್ಯಾ ಸಂಸ್ಥೆಗಳಲ್ಲಿ ಪರಿಸ್ಥಿತಿಯೇ ಬದಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ.


  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಕರ್ನಾಟಕದಲ್ಲಿ ಹಿಜಾಬ್ ಧರಿಸಿ ತರಗತಿ ಪ್ರವೇಶ ಮಾಡಿದ್ದರ ಕುರಿತು ಬೆಂಬಲದ ಮಾತುಗಳನ್ನಾಡಿದ್ದಾರೆ. ಯಾವ ಬಟ್ಟೆ(dress) ಧರಿಸಬೇಕೆಂಬುದು ವೈಯಕ್ತಿಯ ಹಕ್ಕು. ಈ ಹಕ್ಕನ್ನು ಸಂವಿಧಾನ ರಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.


  ಬಿಕಿನಿಯಾದ್ರೂ ಹಾಕಲಿ ಎಂದ ಪ್ರಿಯಾಂಕಾ


  ಅದು ಬಿಕಿನಿಯಾಗಿರಲಿ,(Bikini) ಘೂಂಘಾಟ್ ಆಗಿರಲಿ(ಉತ್ತರ ಭಾರತದಲ್ಲಿ ಹೆಣ್ಮಕ್ಕಳು ಮುಖ, ತಲೆ ಮುಚ್ಚಲು ಬಳಸಲು ದುಪಟ್ಟಾ), ಒಂದು ಜೋಡಿ ಜೀನ್ಸ್ ಆಗಿರಲಿ ಅಥವಾ ಹಿಜಾಬ್ ಆಗಿರಲಿ, ಹೆಣ್ಣು ಏನು ಧರಿಸಬೇಕೆಂದು ನಿರ್ಧರಿಸುವುದು ಅವಳ ಹಕ್ಕು. ಈ ಹಕ್ಕು ಭಾರತೀಯ ಸಂವಿಧಾನದ ಮೂಲಕ ಖಾತರಿಪಡಿಸಲಾಗಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.  #ladkihoonladsaktihoon ಎಂಬ ಹ್ಯಾಶ್‌ಟ್ಯಾಗ್‌ನ್ನೂ ಅವರು ಬಳಸಿದ್ದಾರೆ. ಕಾಂಗ್ರೆಸ್ ಸಂಸದ ಸಹೋದರಿಯ ಟ್ವೀಟ್‌ಗೆ ಥಂಬ್ಸ್ ಅಪ್ ಕೊಟ್ಟಿದ್ದಾರೆ.


  #ladkihoonladsaktihoon ಎನ್ನುವುದು ಏಳು ಹಂತದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನ ಟ್ಯಾಗ್ಲೈನ್. ಪಕ್ಷವು ಮಹಿಳಾ ಹಕ್ಕುಗಳ ಸಬಲೀಕರಣವನ್ನು ಚುನಾವಣೆಯ ಮುಂದಿರುವ ಪ್ರಮುಖ ವಿಷಯಗಳಲ್ಲಿ ಒಂದಾ ಪ್ರಚಾರ ಮಾಡಿದೆ. ಕಳೆದ ವಾರ ಅವರು ತರಗತಿಗಳಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.


  ಇದನ್ನೂ ಓದಿ:Hijab Controversy: ಮಹಿಳೆಯರು ಧರಿಸುವ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ; ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ


  ಕಳೆದ ಕೆಲ ವಾರಗಳಿಂದ ಕರ್ನಾಟಕದ ಉಡುಪಿ, ಚಿಕ್ಕಮಗಳೂರು ಮತ್ತು ಮಂಡ್ಯ ಜಿಲ್ಲೆಗಳ ಹಲವಾರು ಪಟ್ಟಣಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಧರಿಸುವ ಹಕ್ಕಿನ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.


  ರಾಜ್ಯದೆಲ್ಲೆಡೆ ವ್ಯಾಪಿಸಿದ ಹಿಜಾಬ್ ವಿವಾದ


  ಮಂಗಳವಾರ ಮಂಡ್ಯದಲ್ಲಿ ಯುವತಿಯೊಬ್ಬಳನ್ನು ಉದ್ರಿಕ್ತ ಪುರುಷರ ಗುಂಪು ಕೇಸರಿ ಸ್ಕಾರ್ಫ್ ಬೀಸುತ್ತಾ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ ವಿಡಿಯೋ ದೃಶ್ಯಗಳು ವೈರಲ್ ಆಗಿದೆ. ದಾವಣಗೆರೆ ಜಿಲ್ಲೆಯ ಎರಡು ಪಟ್ಟಣಗಳಲ್ಲಿ ಹಿಜಾಬ್ ಧರಿಸಿದ ಪ್ರತಿಭಟನಾಕಾರರು ಮತ್ತು ಕೇಸರಿ ಶಾಲು ಧರಿಸಿದವರು ಪರಸ್ಪರ ಕಲ್ಲು ತೂರಾಟ ನಡೆಸಿದ ನಂತರ ಸಭೆ ಸೇರುವುದನ್ನು ನಿಷೇಧಿಸಲಾಯಿತು.


  ಶಿವಮೊಗ್ಗ ಜಿಲ್ಲೆಯಲ್ಲಿ ಕೇಸರಿ ಸ್ಕಾರ್ಫ್ ಧರಿಸಿದ್ದ ಹುಡುಗರಲ್ಲಿ ಒಬ್ಬರು ಕೇಸರಿ ಬಾವುಟ ಹಾರಿಸಿ ಸಂಭ್ರಮಿಸಿದರು. ಕುಂದಾಪುರ ತಾಲೂಕಿನಲ್ಲಿ ಸೋಮವಾರ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಚಾಕು ಹಿಡಿದುಕೊಂಡಿದ್ದ ಇಬ್ಬರನ್ನು ಬಂಧಿಸಲಾಗಿದೆ. ಡಿಸೆಂಬರ್‌ನಲ್ಲಿ ಉಡುಪಿಯ ಕಾಲೇಜಿನಲ್ಲಿ ಆರು ವಿದ್ಯಾರ್ಥಿಗಳು ತರಗತಿಯಲ್ಲಿದ್ದಾಗ ಹಿಜಾಬ್ ಧರಿಸುವುದನ್ನು ತಡೆಯಲಾಯಿತು ಎಂದು ಆರೋಪಿಸಿ ವಿವಾದ ಭುಗಿಲೆದ್ದಿತು.


  ಇದನ್ನೂ ಓದಿ: Hijab Controversy: ಹೈಕೋರ್ಟ್​ನಲ್ಲಿ ಹಿಜಾಬ್ ಪ್ರಕರಣ ವಿಚಾರಣೆ, ಇಂದೇ ತೀರ್ಪು ಪ್ರಕಟ ಸಾಧ್ಯತೆ


  ಪ್ರತಿಭಟನೆಗಳಿಗೆ ಆತಂಕಕಾರಿ ಕೋಮುವಾದ ಬಣ್ಣ ಸಿಕ್ಕಿ ರಾಜಕೀಯ ಗದ್ದಲವನ್ನು ಸಹ ಸೃಷ್ಟಿ ಮಾಡಿದೆ. ಮಧ್ಯಪ್ರದೇಶ ಮತ್ತು ಪುದುಚೇರಿಯಲ್ಲಿ ಇದೇ ರೀತಿಯ ಘಟನೆಗಳು ವರದಿಯಾಗಿವೆ.

  Published by:Latha CG
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು