• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Yogi Adityanath: ತಪ್ಪು ಮಾಡಿದ್ದೇನೆ, ನನ್ನನ್ನು ಕ್ಷಮಿಸಿ ಯೋಗಿಜೀ! ಬೋರ್ಡ್ ಹಿಡಿದುಕೊಂಡು ಪೊಲೀಸರಿಗೆ ಶರಣಾದ ಕ್ರಿಮಿನಲ್!

Yogi Adityanath: ತಪ್ಪು ಮಾಡಿದ್ದೇನೆ, ನನ್ನನ್ನು ಕ್ಷಮಿಸಿ ಯೋಗಿಜೀ! ಬೋರ್ಡ್ ಹಿಡಿದುಕೊಂಡು ಪೊಲೀಸರಿಗೆ ಶರಣಾದ ಕ್ರಿಮಿನಲ್!

ಎನ್​ಕೌಂಟರ್​ಗೆ ಭಯಪಟ್ಟು ಶರಣಾದ ಆರೋಪಿ

ಎನ್​ಕೌಂಟರ್​ಗೆ ಭಯಪಟ್ಟು ಶರಣಾದ ಆರೋಪಿ

ತನ್ನ ಅಪರಾಧ ಪ್ರಕರಣಗಳನ್ನು ಒಪ್ಪಿಕೊಂಡಿರುವ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕೊಲೆ ಯತ್ನ (IPC ಸೆಕ್ಷನ್ 307) ಮತ್ತು ಲೂಟಿ (IPC ಸೆಕ್ಷನ್ 390) ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆತ ಬೇಕಾಗಿದ್ದ ಅರೋಪಿಯಾಗಿದ್ದ " ಎಂದು ಪೊಲೀಸರು ತಿಳಿಸಿದ್ದಾರೆ.

  • News18 Kannada
  • 4-MIN READ
  • Last Updated :
  • Uttar Pradesh, India
  • Share this:

ಲಕ್ನೋ: ಉತ್ತರಪ್ರದೇಶದಲ್ಲಿ (Uttar Pradesh) ಹೆಚ್ಚುತ್ತಿರುವ ಪೊಲೀಸ್ ಎನ್‌ಕೌಂಟರ್‌ನಿಂದ (Police Encounter) ಹೆದರಿರುವ ಬೈಕ್​ ಕಳ್ಳತನ ಮಾಡುವ ತಂಡದ ಸದಸ್ಯನೊಬ್ಬ ಮುಜಾಫರ್‌ನಗರ (Muzaffarnagar ) ಜಿಲ್ಲೆಯ ಮನ್ಸೂರ್‌ಪುರ ಪೊಲೀಸ್ ಠಾಣೆಯಲ್ಲಿ (Mansoorpur police) ಶರಣಾಗಿದ್ದಾನೆ. ಈ ವೇಳೆ ಆತ ತನ್ನ ಕೈಯಲ್ಲಿ 'ನನ್ನನ್ನು ಕ್ಷಮಿಸಿ ಯೋಗಿ ಜೀ, ನಾನು ತಪ್ಪು ಮಾಡಿದ್ದೇನೆ' ಎಂಬ ಫಲಕವನ್ನು ಹಿಡಿದು ಶರಣಾಗಿದ್ದಾನೆ. ಶರಣಾದ ಕಳ್ಳನನ್ನು ಅಂಕುರ್ ಅಲಿಯಾಸ್​ ರಾಜ ಎಂದು ಗುರುತಿಸಲಾಗಿದೆ.


ಮಾಧ್ಯಮದವರೊಂದಿಗೆ ಮಾತನಾಡಿದ ಮನ್ಸೂರ್‌ಪುರ ಎಸ್‌ಎಚ್‌ಒ, ಆರೋಪಿ ಎನ್‌ಕೌಂಟರ್‌ಗೆ ಹೆದರಿ ಗ್ರಾಮದ ಮುಖ್ಯಸ್ಥ ಮತ್ತು ತನ್ನ ಕುಟುಂಬದ ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾನೆ. ಆತನಿಗೆ ತನ್ನ ತಪ್ಪಿನ ಅರಿವಾಗಿದ್ದು, ಕ್ಷಮೆ ಕೋರಿದ್ದಾನೆ. ಅಲ್ಲದೆ ಇನ್ನು ಮುಂದೆ ಯಾವುದೇ ಅಪರಾಧವನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.


ಶೂಟೌಟ್ ನಡೆದ ಮಾರನೇ ದಿನ ಆರೋಪಿ ಶರಣು


ಗಮನಾರ್ಹವೆಂದರೆ, ಪೊಲೀಸರು ಮತ್ತು ಶರಣಾದ ಆರೋಪಿ ಗ್ಯಾಂಗ್ ನಡುವಿನ ಶೂಟೌಟ್​ ಆದ ಮಾರನೇ ದಿನ ಆರೋಪಿ ಶರಣಾಗಿದ್ದಾನೆ. ಕುಖ್ಯಾತ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ಈ ವೇಳೆ ಒಬ್ಬ ತಪ್ಪಿಸಿಕೊಂಡಿದ್ದ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಖತೌಲಿ) ರವಿಶಂಕರ್ ಮಿಶ್ರಾ ತಿಳಿಸಿದ್ದಾರೆ. ಈ ವೇಳೆ ಆರೋಪಿಗಳಿಂದ ಮೂರು ಬೈಕ್‌ಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: Prison Escape: ಬಟ್ಟೆ ಬಿಚ್ಚಿ ನಗ್ನವಾಗಿ ಜೈಲಿನಿಂದ ಪರಾರಿಯಾದ 200 ಖೈದಿಗಳು!

 ಎನ್​ಕೌಂಟರ್​ ಭಯಕ್ಕೆ ಶರಣು


ರಾಜ್ಯದಲ್ಲಿ ಆಗೊಮ್ಮೆ ಈಗೊಮ್ಮೆ ಶಂಕಿತ ಕ್ರಿಮಿನಲ್‌ಗಳನ್ನು ಎನ್‌ಕೌಂಟರ್‌ಗಳು ನಡೆದಿರುವ ಬಗ್ಗೆ ದಾಖಲೆ ಇರುವುದರಿಂದ ಎನ್‌ಕೌಂಟರ್‌ನಿಂದ ತನ್ನನ್ನು ರಕ್ಷಿಸಿಕೊಳ್ಳಲು ಅಂಕುರ್​ ಈ ನಿರ್ಧಾರ ಮಾಡಿದ್ದಾನೆ. ವರದಿಗಳ ಪ್ರಕಾರ, ಸಿಎಂ ಯೋಗಿ ಅಧಿಕಾರಕ್ಕೆ ಬಂದ ನಂತರ 9000 ಕ್ಕೂ ಹೆಚ್ಚು ಎನ್‌ಕೌಂಟರ್‌ಗಳು ನಡೆದಿವೆ. ಈವರೆಗೆ ನಡೆದ ಎನ್‌ಕೌಂಟರ್‌ಗಳಲ್ಲಿ 160 ಆರೋಪಿಗಳು ಹತರಾಗಿದ್ದಾರೆ.




ಬಂಧಿಸಿ ಜೈಲಿಗೆ ಕಳುಹಿಸಿದ ಪೊಲೀಸ್


ತನ್ನ ಅಪರಾಧ ಪ್ರಕರಣಗಳನ್ನು ಒಪ್ಪಿಕೊಂಡಿರುವ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕೊಲೆ ಯತ್ನ (IPC ಸೆಕ್ಷನ್ 307) ಮತ್ತು ಲೂಟಿ (IPC ಸೆಕ್ಷನ್ 390) ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆತ ಬೇಕಾಗಿದ್ದ ಅರೋಪಿಯಾಗಿದ್ದ " ಎಂದು ಎಸ್ಎಚ್ಒ ಹೇಳಿದ್ದಾರೆ.


ಪೊಲೀಸ್​-ಸಿಎಂಗೆ ಭಯಪಡುತ್ತಿರುವ ಕ್ರಿಮಿನಲ್ಸ್​


ಸಿಎಂ ಯೋಗಿ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಮಾರು 9000 ಎನ್‌ಕೌಂಟರ್‌ಗಳು ನಡೆದಿವೆ. ಇದರಿಂದ ಕ್ರಿಮಿನಲ್‌ಗಳು ಪೊಲೀಸ್​ ಮತ್ತು ಮುಖ್ಯಮಂತ್ರಿಗೆ ಹೆದರುತ್ತಿದ್ದಾರೆ. ನಿಸ್ಸಂದೇಹವಾಗಿ, ರಾಜ್ಯ ಸರ್ಕಾರದ ಕಾರ್ಯಗಳ ವಿರುದ್ಧ ಹಲವು ಆಕ್ಷೇಪಣೆಗಳಿವೆ. ಮಾನವ ಹಕ್ಕುಗಳ ಕಾರ್ಯಕರ್ತರು ಯೋಗಿ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಆದರೂ ಬಂದೂಕುಗಳ ಶಬ್ಧ ರಾಜ್ಯದಲ್ಲಿ ಮುಂದುವರಿಯುತ್ತಲೇ ಇದೆ.


ಬೇರೆ ರಾಜ್ಯಗಳಲ್ಲೂ ಇದೇ ಮಾದರಿ ಅನುಕರಣೆ


ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವುದಕ್ಕೆ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಇತರೆ ರಾಜ್ಯಗಳು ಕೂಡ ಅನುಸರಿಸಲು ಆಲೋಚನೆ ನಡೆಸುತ್ತಿವೆ. ಇದು ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನಲಾಗುತ್ತಿದೆ. ಎನ್‌ಕೌಂಟರ್‌ಗಳು ಕಾನೂನು ಮತ್ತು ಸುವ್ಯವಸ್ಥೆಯ ಗಡಿ ಮೀರಿದರೆ, ಇದು ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪನಂಬಿಕೆ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತಿದೆ.


ಉತ್ತರ ಪ್ರದೇಶದ ದೀರ್ಘಾವಧಿ ಸಿಎಂ


ಯೋಗಿ ಆದಿತ್ಯನಾಥ್ ಅವರು ಮಾರ್ಚ್ 25 ರಂದು ಉತ್ತರ ಪ್ರದೇಶದ ಸಿಎಂ ಆಗಿ ಆರು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಲಿದ್ದಾರೆ. ಈ ಮೂಲಕ ಉತ್ತರ ಪ್ರದೇಶದ ದೀರ್ಘಾವಧಿಯ ಮುಖ್ಯಮಂತ್ರಿಯಾಗಲಿದ್ದಾರೆ. ಯೋಗಿ ಅವರು ತಮ್ಮ ಎರಡನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸಿದ ತಕ್ಷಣ, ಅವರು ಸತತ ಆರು ವರ್ಷ ಮತ್ತು ಆರು ದಿನಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿ ಉಳಿದಿರುವ ದಾಖಲೆಯನ್ನು ಹೊಂದಲಿದ್ದಾರೆ. ಈ ಮೂಲಕ ಯೋಗಿ ರಾಜ್ಯದಲ್ಲಿ ಸುದೀರ್ಘಾವಧಿಗೆ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ.


ಈ ಹಿಂದೆ ಕಾಂಗ್ರೆಸ್‌ನ ಡಾ.ಸಂಪೂರ್ಣಾನಂದ ಅವರು 1954 ರಿಂದ 1960 ರವರೆಗೆ ಐದು ವರ್ಷ 345 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು