HOME » NEWS » National-international » BIHARS OPPOSITION ALLIANCE SEAT SHARING DEAL FINAL AS TEJASWI YADAV TO BE THE CM FACE SNVS

ಬಿಹಾರ ಚುನಾವಣೆ: ವಿಪಕ್ಷಗಳ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮ; ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ

ವಿಪಕ್ಷಗಳ ಮಹಾಮೈತ್ರಿಕೂಟದಲ್ಲಿ ಆರ್​ಜೆಡಿ ಸಿಂಹಪಾಲು ಪಡೆದಿದೆ. ಆರ್ಜೆಡಿ 144 ಕ್ಷೇತ್ರಗಳನ್ನ ಪಡೆದರೆ, ಕಾಂಗ್ರೆಸ್ 70 ಹಾಗೂ ಎಡಪಕ್ಷಗಳು 29 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಹಾಕಲಿವೆ. ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ ಆಗಿದ್ದಾರೆ.

Vijayasarthy SN | news18
Updated:October 3, 2020, 7:25 PM IST
ಬಿಹಾರ ಚುನಾವಣೆ: ವಿಪಕ್ಷಗಳ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮ; ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ
ತೇಜಸ್ವಿ ಯಾದವ್
  • News18
  • Last Updated: October 3, 2020, 7:25 PM IST
  • Share this:
ಪಾಟ್ನಾ(ಅ. 03): ಬಿಹಾರ ಚುನಾವಣೆಗೆ ವಿಪಕ್ಷಗಳ ಮಹಾಮೈತ್ರಿಕೂಟದ ಸೀಟು ಹಂಚಿಕೆ ಆಗಿದೆ. ಆರ್​ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೀಟು ಹಂಚಿಕೆಯಲ್ಲಿ ಒಮ್ಮತಕ್ಕೆ ಬಂದಿವೆ. ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ 144 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಜನತಾ ದಳ ಸ್ಪರ್ಧಿಸಲಿದೆ. ಇದರಲ್ಲಿ ವಿಐಪಿ ಮತ್ತು ಜೆಎಂಎಂ ಪಕ್ಷಗಳಿಗೂ ಒಂದಷ್ಟು ಸ್ಥಾನಗಳನ್ನ ಆರ್​ಜೆಡಿ ಬಿಟ್ಟುಕೊಡಲಿದೆ. ಕಾಂಗ್ರೆಸ್ ಪಕ್ಷ 70 ಕ್ಷೇತ್ರಗಳನ್ನ ಪಡೆದಿದೆ. ಉಳಿದ ಸ್ಥಾನಗಳನ್ನ ಕಮ್ಯೂನಿಸ್ಟ್ ಪಕ್ಷಗಳಿಗೆ ನೀಡಲಾಗಿದೆ. ಆರ್​ಜೆಡಿ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನ ಮಹಾಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಪ್ರಕಟಿಸಲಾಗಿದೆ. ವಾಲ್ಮೀಕಿ ನಗರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಈ ಮೈತ್ರಿಕೂಟದ ಪರವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಬರಲಾಗಿದೆ.

ಮಹಾಮೈತ್ರಿಕೂಟದ ಸೀಟು ಹಂಚಿಕೆ:

ಒಟ್ಟು ಸ್ಥಾನಗಳು: 243
ಆರ್​ಜೆಡಿ, ವಿಕಾಶೀಲ್ ಇನ್ಸಾನ್ ಪಾರ್ಟಿ (ವಿಐಪಿ), ಜಾರ್ಖಂಡ್ ಮುಕ್ತಿ ಮೋರ್ಚಾ: 144
ಕಾಂಗ್ರೆಸ್: 70
ಸಿಪಿಐ: 6
ಸಿಪಿಐಎಂ: 4ಸಿಪಿಐಎಂಎಲ್: 19

ಇದನ್ನೂ ಓದಿ: Atal Tunnel: ಪ್ರಧಾನಿ ಮೋದಿಯಿಂದ ವಿಶ್ವದ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟನೆ

ಅತ್ತ, ಎನ್​ಡಿಎ ಮೈತ್ರಿಕೂಟದಲ್ಲಿ ಬಿರುಕು ಸ್ಪಷ್ಟವಾಗಿದೆ. ಎನ್​ಡಿಎ ಅಂಗಪಕ್ಷವಾದ ಲೋಕ ಜನಶಕ್ತಿ ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಎಲ್​ಜೆಪಿ 143 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. “ಮೋದಿ ಜೊತೆ ಸಂಘರ್ಷ ಅಲ್ಲ, ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹೋರಾಟ” ಎಂಬ ಘೋಷಣೆಯೊಂದಿಗೆ ಎಲ್​ಜೆಪಿ ಚುನಾವಣಾ ಕಣಕ್ಕೆ ಧುಮುಕುವ ನಿರೀಕ್ಷೆ ಇದೆ. ಎನ್​ಡಿಎ ಅತಿ ಶೀಘ್ರದಲ್ಲೇ ತನ್ನ ಸೀಟು ಹಂಚಿಕೆಯನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಆದರೆ, ರಾಷ್ಟ್ರಮಟ್ಟದಲ್ಲಿ ಎನ್​ಡಿಎ ಜೊತೆ ಎಲ್​ಜೆಪಿ ಮಿತ್ರತ್ವ ಮುಂದುವರಿಯಲಿದೆ. ಬಿಹಾರದಲ್ಲಿ ಮಾತ್ರ ಎಲ್​ಜೆಪಿ ಈ ಮೈತ್ರಿಕೂಟದ ಭಾಗವಾಗದಿರಲು ನಿರ್ಧರಿಸಿದೆ. ಎಲ್​ಜೆಪಿಯ ಈ ನಡೆಯು ಬಿಜೆಪಿಯ ಕಾರ್ಯತಂತ್ರದ ಒಂದು ಭಾಗ ಎಂದೇ ಕೆಲ ರಾಜಕೀಯ ವಿಶ್ಲೇಷಕರು ಬಣ್ಣಿಸುತ್ತಿದ್ದಾರೆ.

ಇದನ್ನೂ ಓದಿ: ಹಾಥ್ರಸ್​ ಅತ್ಯಾಚಾರ ಪ್ರಕರಣ; ನ್ಯಾಯಾಂಗ ತನಿಖೆಗೆ ಮೃತ ಯುವತಿಯ ಕುಟುಂಬಸ್ಥರ ಒತ್ತಾಯ

ಬಿಹಾರ ವಿಧಾನಸಭಾ ಚುನಾವಣೆಯು ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7ರಂದು ಮೂರು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಕೋವಿಡ್ ಬಿಕ್ಕಟ್ಟು ಉದ್ಭವಿಸಿದ ನಂತರ ನಡೆಯುತ್ತಿರುವ ಜಗತ್ತಿನ ಮೊದಲ ಪ್ರಮುಖ ಚುನಾವಣೆ ಇದಾಗಿದೆ. ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮತದಾರರ ದಟ್ಟಣೆ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಮತಗಟ್ಟೆಗಳಲ್ಲಿ 7 ಲಕ್ಷ ಸ್ಯಾನಿಟೈಸರ್​ಗಳು, 46 ಲಕ್ಷ ಮಾಸ್ಕ್, 6 ಲಕ್ಷ ಪಿಪಿಇ ಕಿಟ್, 7.6 ಲಕ್ಷ ಫೇಸ್ ಶೀಲ್ಡ್, 23 ಲಕ್ಷ ಕೈವಸುಗಳ ವ್ಯವಸ್ಥೆ ಮಾಡಲಾಗಿದೆ. ಮತದಾನದ ವೇಳೆ ಸಾಮಾಜಿಕ ಅಂತರ ಇತ್ಯಾದಿ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಆಗುವ ರೀತಿಯಲ್ಲಿ ಎಚ್ಚರ ವಹಿಸಲಾಗುತ್ತದೆ.
Published by: Vijayasarthy SN
First published: October 3, 2020, 7:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories