Bihar: ಮಧ್ಯರಾತ್ರಿ ಯುವತಿ ಮನೆಗೆ ನುಗ್ಗಿ ಈ ಬೇಡಿಕೆ ಮುಂದಿಟ್ಟ! ಮನೆ ಮಂದಿ ಇದ್ದರೂ ಡೋಂಟ್ ಕೇರ್

ರಾತ್ರೋ ರಾತ್ರಿ ಯುವತಿಯ ಮನೆಗೆ ನುಗ್ಗಿದ ಯುವಕ ಮನೆ ಮಂದಿ ನೋಡುತ್ತಿರುವಾಗಲೇ ಯುವತಿಯೊಂದಿಗೆ ರೂಂ ಲಾಕ್ ಮಾಡಿದ್ದಾನೆ. ಯುವತಿಯ ತಂದೆ ಕಿಟಕಿಯಿಂದ ವಿಡಿಯೋ ಶೂಟ್ ಮಾಡಿದ್ದು ಈಗ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಾಟ್ನಾ(ಆ.01): ಬಿಹಾರದಲ್ಲಿ (Bihar) ಯುವಕನೊಬ್ಬ ಮಧ್ಯರಾತ್ರಿ ಯುವತಿ ಮನೆಗೆ ಹೋಗಿ ಆಕೆಯಲ್ಲಿ ತನ್ನ ಆಸೆ ಈಡೇರಿಸುವಂತೆ ಪೀಡಿಸಿದ ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿ ಬಾಗಿಲು ಹಾಕಿಕೊಂಡು ಆತ ಎಲ್ಲರನ್ನು ಎಬ್ಬಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಯುವತಿಯ ಕುಟುಂಬಸ್ಥರು  (Family) ಆತನನ್ನು ತಡೆಯಲು ಯತ್ನಿಸಿದರೆ, ಬೆದರಿಸಿ ಬ್ಲಾಕ್ ಮೇಲ್ (Black Mail) ಮಾಡಿ ಹಲ್ಲೆ ನಡೆಸಿದ್ದಾನೆ. ಮಧ್ಯರಾತ್ರಿ ಪುಂಡ ಪೋಕರಿ ಬಂದು ದಾಂಧಲೆ ಮಾಡುತ್ತಿದ್ದಾಗ ಯುವತಿಯ ಕುಟುಂಬಸ್ಥರು ವಿಡಿಯೋ (Video) ಮಾಡಿ ಪೊಲೀಸರಿಗೆ (Police) ದೂರು ನೀಡಿದ್ದಾರೆ.

ದೈಹಿಕ ಸಂಬಂಧಕ್ಕಾಗಿ ನಡುರಾತ್ರಿ ಎದ್ದುಬಂದ ಭೂಪ

ಬಿಹಾರದ (Bihar) ಸೀತಾಮರ್ಹಿ ಪ್ರದೇಶದ ಯುವತಿಯ ಕುಟುಂಬ ಸದಸ್ಯರಿಗೆ ಯುವಕನೊಬ್ಬ ಬೆದರಿಕೆ ಹಾಕಿರುವ ವಿಡಿಯೋ ವೈರಲ್ (Video Viral) ಆಗಿದೆ. ಸೀತಾಮರ್ಹಿ ಪ್ರದೇಶದಲ್ಲಿ ವಾಸವಾಗಿರುವ ಯುವತಿಯೊಬ್ಬಳು ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಯುವಕನೊಬ್ಬ ಮಧ್ಯರಾತ್ರಿ ಬಂದು ಬಾಗಿಲು ಬಡಿದಿದ್ದಾನೆ.



ಅದಕ್ಕೂ ಮುನ್ನ ಆಕೆಯ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ. ಎರಡು ದಿನಗಳ ಹಿಂದೆ ಯುವತಿಯ ಮನೆಗೆ ನುಗ್ಗಿ ತನ್ನ ಆಸೆ ಈಡೇರಿಸುವಂತೆ ದೈಹಿಕ ಸಂಪರ್ಕ ಬೆಳೆಸುವಂತೆ ಬೆದರಿಕೆ ಹಾಕಿದ್ದ.

ಮಧ್ಯರಾತ್ರಿ ಯುವತಿ ಮನೆಗೆ ಹೋಗಿ ಜಗಳ

ಮಧ್ಯರಾತ್ರಿ ಮನೆಗೆ ಬಂದು ಗಲಾಟೆ ಸೃಷ್ಟಿಸಿದ್ದಾನೆ. ಯುವತಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಲಕ್ಷ್ಮಿನಗರದ ವ್ಯಕ್ತಿ ಎಂದು ಸಂತ್ರಸ್ತೆ ಗುರುತಿಸಿದ್ದಾರೆ. ಅವರು ಬಾಗಿಲು ತೆರೆಯಲು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ಯುವಕ, ಮನೆಯಲ್ಲಿದ್ದ ಯುವತಿಯನ್ನು ಆಕೆಯ ಅಕ್ಕ ಹಾಗೂ ತಂಗಿಯೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಯುವತಿಯ ತಂದೆಗೂ ಬೆದರಿಕೆ

ಕಿಟಕಿಯ ಮೂಲಕ ತನ್ನ ಫೋನ್‌ನಲ್ಲಿ ಘಟನೆ ರೆಕಾರ್ಡ್ ಮಾಡುತ್ತಿದ್ದ ಹುಡುಗಿಯ ತಂದೆಗೂ ಬೆದರಿಕೆ ಹಾಕಿದನು. ಯುವತಿಯನ್ನು ತನ್ನೊಂದಿಗೆ ಕಳುಹಿಸಿ. ಇಲ್ಲದಿದ್ದರೆ ನಿಮ್ಮೆಲ್ಲರನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.



ಇದನ್ನೂ ಓದಿ: Van Gets Electrocuted: ವ್ಯಾನ್​ಗೆ ವಿದ್ಯುತ್ ತಗುಲಿ 10 ಜನ ಸಾವು, ಹಲವರಿಗೆ ಗಾಯ

ಯುವತಿಯನ್ನು ಹಿಡಿಯಲು ಪ್ರಯತ್ನ

ನೀವು ಪೊಲೀಸ್ ಮತ್ತು ಎಸ್ಪಿಗೆ ಹೇಳಿದರೂ ನನಗೆ ಭಯವಿಲ್ಲ ಎಂದು ಒಂದು ಗಂಟೆಗೂ ಹೆಚ್ಚು ಕಾಲ ಸೀನ್ ಕ್ರಿಯೇಟ್ ಮಾಡಿದ್ದಾನೆ. ಕೊನೆಗೆ ಮನೆಗೆ ನುಗ್ಗಿ ಯುವತಿಯನ್ನು ಹಿಡಿಯಲು ಯತ್ನಿಸಿದ್ದಾನೆ.

ದೆಹಲಿಯಲ್ಲಿ ಗ್ಯಾಂಗ್ ರೇಪ್

ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Delhi Gang Rape) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಆರೋಪಿಗಳು ರೈಲ್ವೆಯ (Indian Railway) ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ತಡರಾತ್ರಿ ಪ್ಲಾಟ್‌ಫಾರ್ಮ್‌ನಲ್ಲಿರುವ ರೈಲು ದೀಪದ ಗುಡಿಸಲಿನೊಳಗೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ದೆಹಲಿ ಪೊಲೀಸರು (Delhi Police) ಮಾಹಿತಿ ನೀಡಿದ್ದು ಇಬ್ಬರು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರವೆಸಗಿದರೆ, ಇತರರು ಹೊರಗೆ ಕಾವಲು ಕಾಯುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Delhi Gang Rape: ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್; ನಾಲ್ವರು ರೈಲ್ವೇ ಉದ್ಯೋಗಿಗಳ ಬಂಧನ

35 ವರ್ಷದ ಸತೀಶ್ ಕುಮಾರ್, 38 ವರ್ಷದ ವಿನೋದ್ ಕುಮಾರ್, 33 ವರ್ಷದ ಮಂಗಲ್ ಚಂದ್ ಮತ್ತು 37 ವರ್ಷದ ಜಗದೀಶ್ ಚಂದ್ ಆರೋಪಿಗಳು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Published by:Divya D
First published: