ದೇಶದಲ್ಲಿ ಕೇರಳ, ಬಿಹಾರ್​​, ಪಶ್ಚಿಮ ಬಂಗಾಳ ಮೊದಲು: ಯಾವ ವಿಚಾರಕ್ಕೆ ಗೊತ್ತಾ? ಇಲ್ಲಿದೆ ಮಾಹಿತಿ


Updated:September 11, 2018, 5:47 PM IST
ದೇಶದಲ್ಲಿ ಕೇರಳ, ಬಿಹಾರ್​​, ಪಶ್ಚಿಮ ಬಂಗಾಳ ಮೊದಲು: ಯಾವ ವಿಚಾರಕ್ಕೆ ಗೊತ್ತಾ? ಇಲ್ಲಿದೆ ಮಾಹಿತಿ

Updated: September 11, 2018, 5:47 PM IST
ನ್ಯೂಸ್​-18 ಕನ್ನಡ

ನವದೆಹಲಿ(ಸೆಪ್ಟೆಂಬರ್​​.11): ಭಾರತದಲ್ಲಿ ಸಾವಿರಾರು ಜನಪ್ರತಿನಿಧಿಗಳು ಕ್ರಿಮಿನಲ್​ ಪ್ರಕರಣಗಳನ್ನು ಎದುರುಸುತ್ತಿರುವುದು ಹೊಸತೇನಲ್ಲ. ದೇಶದಲ್ಲಿಯೇ ಜನಪ್ರತಿನಿಧಿಗಳು ಅತಿಹೆಚ್ಚು ಅಪರಾಧ ಪ್ರಕರಣಗಳನ್ನು ಎದುರುಸತ್ತಿರುವ ಮೊದಲ ಸಾಲಿನಲ್ಲಿ ಬಿಹಾರ್​, ಎರಡನೇಯದಾಗಿ ಪಶ್ಚಿಮ ಬಂಗಾಳ ಹಾಗೂ ಮೂರನೇ ಸ್ಥಾನದಲ್ಲಿ ಕೇರಳ ನಿಂತಿರುವುದು ಈ ಬಾರಿಯ ದುರಂತ.

ಮೂರು ರಾಜ್ಯಗಳ ಸಂಸದ ಹಾಗೂ ಶಾಸಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳು ಒಟ್ಟು ಸಂಖ್ಯೆ 1233. ಈ ಪೈಕಿ 136 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಉಳಿದ 1097 ಕೇಸುಗಳ ವಿಚಾರಣೆಯ ಬಾಕಿಯಿದೆ ಎಂದು ಸುಪ್ರೀಂಕೋರ್ಟ್ ಅಧಿಕೃತ ಮಾಹಿತಿ ಬಿಡುಗಡೆಗೊಳಿಸಿದೆ.

ಪ್ರಸ್ತುತ ಅತಿಹೆಚ್ಚು ಕ್ರಿಮಿನಲ್​ ಕೇಸುಗಳನ್ನು ಹೊಂದಿರುವ ಬಿಹಾರ್​​ 260 ಪ್ರಕರಣಗಳು ಎದುರಿಸುತ್ತಿದೆ. ಕಳೆದ ಆರು ತಿಂಗಳಿನಲ್ಲಿ ಈ ಪೈಕಿ ಕೋರ್ಟ್​ 11 ಕೇಸುಗಳನ್ನು ಮಾತ್ರ ಕೈಗೆತ್ತಿಕೊಂಡಿದ್ದು, ಉಳಿದ 249 ಪ್ರಕರಣಗಳನ್ನು ವಿಶೇಷ ನ್ಯಾಯಲಯಗಳಿಗೆ ಹಸ್ತಾಂತರಿಸಿದೆ ಎನ್ನುತ್ತಿವೆ ಮೂಲಗಳು.

ಮೂರನೇ ಸರತಿಯಲ್ಲಿ ನಿಲ್ಲುವ ಪಶ್ಚಿಮ ಬಂಗಾಳ ಒಟ್ಟು 215, ಎರಡನೇ ಸ್ಥಾನದಲ್ಲಿರುವ ಕೇರಳ 178 ಕೇಸುಗಳ ವಿಚಾರಣೆ ಬಾಕಿ ಉಳಿಸಿಕೊಂಡಿವೆ. ಅಲ್ಲದೇ ದೆಹಲಿ 157, ಕರ್ನಾಟಕ 142, ಆಂಧ್ರ ಮತ್ತು ತೆಲಂಗಾಣ 64, ಮಹಾರಾಷ್ಟ್ರ 50, ಮಧ್ಯಪ್ರದೇಶ 28 ಪ್ರಕರಣಗಳ ವಿಚಾರಣೆ ನಡೆಸಿಲ್ಲ ಎಂದು ಸುಪ್ರೀಂಕೋರ್ಟ್​ ತಿಳಿಸಿದೆ.

ಈ ಹಿಂದೆಯೂ ಭಾರತದಲ್ಲಿ ಒಟ್ಟು 1765 ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳು 3,816 ಆಗಿದ್ದವು. ಈ ವಿವರವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ನೀಡಿತ್ತು. ಈ ಪೈಕಿ 3045 ಪ್ರಕರಣಗಳ ವಿಚಾರಣೆ ಬಾಕಿ ಇದೆ. ಮಹಾರಾಷ್ಟ್ರ ಮತ್ತು ಗೋವಾ ಹೊರತುಪಡಿಸಿ 23 ಹೈಕೋರ್ಟ್ ಗಳಿಂದ ಈ ವಿವರವನ್ನು ಪಡೆಯಲಾಗಿದೆ ಎನ್ನಲಾಗಿತ್ತು.

ಇನ್ನೂ 248 ಸಂಸದರು ಮತ್ತು ಶಾಸಕರ ವಿರುದ್ಧ ಒಟ್ಟು 565 ಅಪರಾಧ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನ ಕೇರಳದ್ದು, ಇಲ್ಲಿ 114 ಜನಪ್ರತಿನಿಧಿಗಳು 539 ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ಮೂರನೇ ಸ್ಥಾನದಲ್ಲಿರೋ ತಮಿಳುನಾಡಿನಲ್ಲಿ 178 ಜನಪ್ರತಿನಿಧಿಗಳ ವಿರುದ್ಧ 402 ಪ್ರಕರಣಗಳು ದಾಖಲಾಗಿವೆ ಎಂದಿದ್ದವು ಮೂಲಗಳು.
Loading...

ವಿಶೇಷ ಅಂದ್ರೆ ಮಣಿಪುರ ಹಾಗೂ ಮಿಜೋರಾಂನಲ್ಲಿ ಯಾವುದೇ ಶಾಸಕ ಅಥವಾ ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ.  ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿವರಗಳನ್ನು ಕೇಳಿತ್ತು.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...