Vet Doctor: ಪ್ರಾಣಿಗೆ ಹುಷಾರಿಲ್ಲ ಎಂದು ಪಶುವೈದ್ಯನ ಕರೆದೊಯ್ದು ಮದುವೆ ಮಾಡಿಸಿದ ಜನ

ಪ್ರಾಣಿಗೆ ಹುಷಾರಿಲ್ಲ ಎಂದು ಪಶುವೈದ್ಯನ ಕರೆದೊಯ್ದ ಜನರ ನಂತರ ಅಲ್ಲಿ ಮದುವೆ ಮಾಡಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಪಾಪ ಡಾಕ್ಟರ್ ಪಾಡು, ಮತ್ತೇನಾಯ್ತು? ಇಲ್ಲಿದೆ ಘಟನೆಯ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ ಬಹಳಷ್ಟು ಸಲ ಹೀಗೂ ಮದುವೆಗಳು (Marriage) ಸ್ವರ್ಗದಲ್ಲಿ ನಿಶ್ಚಯವಾಗಿರುತ್ತಾ ಎಂದು ಸಂಶಯಪಡುವಂತಹ ಮದುವೆಗಳು ನಡೆಯುತ್ತವೆ. ಹೌದು. ಓಡಿ ಹೋಗಿ ಮದುವೆಯಾಗುವುದು ಸೇರಿ ಬೇರೆ ಬೇರೆ ರೀತಿಯಲ್ಲಿ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಹೀಗೂ ಮದುವೆ ಮಾಡ್ತಾರಾ ಎಂದು ಅಚ್ಚರಿಪಡುವಂತಹ ಘಟನೆಯೊಂದು ಬಿಹಾರದಲ್ಲಿ (Bihar) ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಾಣಿಯನ್ನು (Animal) ತಪಾಸಣೆ ಮಾಡಬೇಕಿದೆ ಬೇಗನೆ ಬನ್ನಿ ಎಂದು ಕರೆಸಿಕೊಂಡ ಪಶುವೈದ್ಯರನ್ನು (Vet Doctor) ಮೂವರು ಅಪಹರಿಸಿ (Kidnapped) ಬಲವಂತವಾಗಿ ಮದುವೆ (Forced Marriage) ಮಾಡಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ಮಂಗಳವಾರ ನಡೆದಿದೆ.

ಪಶುವೈದ್ಯರನ್ನು ಕರೆಸಿ ಕಿಡ್ನ್ಯಾಪ್

ಅಸ್ವಸ್ಥ ಪ್ರಾಣಿಯನ್ನು ಪರೀಕ್ಷಿಸಲು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಪಶುವೈದ್ಯರನ್ನು ಕರೆಸಲಾಯಿತು, ನಂತರ 3 ಜನರು ಅವನನ್ನು ಅಪಹರಿಸಿದರು. ಮನೆಯಲ್ಲಿ ಎಲ್ಲರೂ ಚಿಂತಿತರಾಗಿದ್ದರು. ನಂತರ ನಾವು ಪೊಲೀಸರ ಮೊರೆ ಹೋಗಿದ್ದೇವೆ ಎಂದು ಸಂತ್ರಸ್ತೆಯ ಸಂಬಂಧಿಯೊಬ್ಬರು ಎಎನ್‌ಐ ಉಲ್ಲೇಖಿಸಿದ್ದಾರೆ. ಘಟನೆಯ ನಂತರ ಪಶುವೈದ್ಯರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ದೂರು ನೀಡಿದ ವೈದ್ಯರ ತಂದೆ

ವೈದ್ಯರ ತಂದೆ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ನಾವು ಎಸ್‌ಎಚ್‌ಒ ಮತ್ತು ಇತರ ಅಧಿಕಾರಿಗಳನ್ನು ಕೇಳಿದ್ದೇವೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಬೇಗುಸರಾಯ್ ಎಸ್‌ಪಿ ಯೋಗೇಂದ್ರ ಕುಮಾರ್ ಹೇಳಿದರು.

ಪಕದ್ವಾ ವಿವಾಹ, ಹೀಗೂ ಇದ್ಯಾ?

ವರನ ಅಪಹರಣ ಅಥವಾ 'ಪಕದ್ವಾ ವಿವಾಹ' ಎಂಬುದು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಸಾಕಷ್ಟು ಸಾಮಾನ್ಯವಾದ ವಿದ್ಯಮಾನವಾಗಿದೆ. ಇದರಲ್ಲಿ ಬ್ರಹ್ಮಚಾರಿಗಳು ಬಂದೂಕು ಹಿಡಿದಾಗ ಬಲವಂತವಾಗಿ ಮದುವೆಯಾಗುತ್ತಾರೆ. ಸಂಭಾವ್ಯ ಬ್ಯಾಚುಲರ್‌ಗಳು, ಹೆಚ್ಚಾಗಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಹೊಂದಿರುವವರು. ಅಂಥವರನ್ನು ವಧುವಿನ ಕುಟುಂಬದಿಂದ ಅಪಹರಿಸಲಾಗುತ್ತದೆ.

ಇದನ್ನೂ ಓದಿ: Cockroaches: ಮನೆಯೊಳಗೆ 100 ಜಿರಳೆ ಇಟ್ಕೊಂಡ್ರೆ ಮನೆ ಮಾಲೀಕರಿಗೆ ಬಂಪರ್!

ಕೆಲವು ವರ್ಷಗಳ ಹಿಂದೆ, ಬಿಹಾರದಲ್ಲಿ ಇಂಜಿನಿಯರ್‌ಗೆ ಸಂಬಂಧಿಸಿದ ಇಂತಹುದೇ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು.

ಮ್ಯಾನೇಜರ್​ನನ್ನು ಕದ್ದೊಯ್ದು ಮದುವೆ

ನಂತರ ಬೊಕಾರೊ ಸ್ಟೀಲ್ ಪ್ಲಾಂಟ್‌ನಲ್ಲಿ ಜೂನಿಯರ್ ಮ್ಯಾನೇಜರ್ ಆಗಿದ್ದ 29 ವರ್ಷದ ವಿನೋದ್ ಕುಮಾರ್ ಎಂಬಾತನನ್ನು ಥಳಿಸಿ, ಪಾಟ್ನಾದ ಪಂಡರಕ್ ಪ್ರದೇಶದಲ್ಲಿ ಮಹಿಳೆಯನ್ನು ಬಲವಂತವಾಗಿ ವಿವಾಹವಾಗುವಂತೆ ಮಾಡಲಾಗಿತ್ತು. ಕುಮಾರ್ ವರನ ವೇಷ ಧರಿಸಿ ಆಚರಣೆಗಳನ್ನು ನಿಲ್ಲಿಸುವಂತೆ ಬೇಡಿಕೊಳ್ಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಇದನ್ನೂ ಓದಿ: Viral Photo: ಪದವಿ ಪ್ರದಾನ ಸಂಭ್ರಮದ ಹೃದಯ ಸ್ಪರ್ಶಿ ಫೋಟೋ ಹಂಚಿಕೊಂಡ ಯುವಕ

ಅಪ್ರಾಪ್ತೆಯನ್ನು ಅಪಹರಿಸಿದ ಮದುವೆಯಾಗಿದ್ದ ವ್ಯಕ್ತಿ

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು(Minor Girl) ಹೆದರಿಸಿ ಅಪಹರಿಸಿಕೊಂಡು (Kidnap) ಹೋಗಿ ಮದುವೆಯಾಗಿದ್ದ (Marriage) ಆರೋಪಿಗೆ 20 ವರ್ಷ ಕಠಿಣ ಸಜೆ ಹಾಗು ಮೂವತೈದು ಸಾವಿರ ರೂಪಾಯಿ ವಿಧಿಸಿ ಚಾಮರಾಜನಗರ (Chamarajnagar) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಚಾಮರಾಜನಗರ ತಾಲ್ಲೂಕು ಹೊನ್ನಳ್ಳಿ ಗ್ರಾಮದ 28 ವರ್ಷ ವಯಸ್ಸಿನ ಮಹೇಶ್ ಅಲಿಯಾಸ್ ಮಾಯ ಎಂಬಾತ ಶಿಕ್ಷೆಗೆ ಗುರಿಯಾಗಿದ್ದು ನೊಂದ ಬಾಲಕಿಗೆ ಕಾನೂನಿ ಸೇವೆಗಳ ಪ್ರಾಧಿಕಾರದಿಂದ ಒಂದು ತಿಂಗಳ ಒಳಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರಿಯಾ ನ್ಯಾಯಾಧೀಶೆ ಬಿ.ಎಸ್.ಭಾರತಿ ಆದೇಶ ನೀಡಿದ್ದಾರೆ.
Published by:Divya D
First published: