Viral News: ರೈಲುಗಳು ರದ್ದಾಗಲು ರಸಗುಲ್ಲಾ ಕಾರಣವಂತೆ! ಹೇಗೆ ಅಂತೀರಾ? ಇಲ್ಲಿದೆ ನೋಡಿ ಉತ್ತರ

ಪ್ರತಿಯೊಬ್ಬರ ಬಾಯಲ್ಲಿ ನೀರೂರಿಸುವಂತಹ ಅದ್ಭುತ ಸಿಹಿ ಖಾದ್ಯವಾದ ರಸಗುಲ್ಲಾ ಎಂದರೆ ಯಾರಿಗೆ ತಾನೆ ಗೊತ್ತಿರಲ್ಲ ಹೇಳಿ? ಅದು ಬಿಡಿ, ಈ ಸ್ವಾದಿಷ್ಟಕರ ವ್ಯಂಜನದ ರುಚಿ ಎಷ್ಟು ಅದ್ಭುತವಾಗಿರುತ್ತದೋ ಅಷ್ಟೇ ಶಕ್ತಿಯನ್ನೂ ಸಹ ಈ ರಸಗುಲ್ಲಾಗಳು ಹೊಂದಿವೆ ಎಂದರೆ ತಪ್ಪಾಗಲಾರದು. 40 ಗಂಟೆಗಳಷ್ಟು ರೈಲುತಡೆ ಹಾಗೂ ನೂರಾರು ರೈಲುಗಳಿಗೆ ಬದಲಿ ಮಾರ್ಗ ನೀಡುವಷ್ಟು ತಾಕತ್ತು ಈ ರಸಗುಲ್ಲಾಗಳಿಗೆ ಇದೆಯಾ ಎಂದರೆ ನೀವು ನಂಬಲೇಬೇಕು.

40 ಗಂಟೆಗಳ ಕಾಲ ಬೃಹತ್ ಪ್ರತಿಭಟನೆ

40 ಗಂಟೆಗಳ ಕಾಲ ಬೃಹತ್ ಪ್ರತಿಭಟನೆ

  • Share this:
ಕೆಲವೊಮ್ಮೆ ಎಂತಹ ಚಿಕ್ಕ ವಸ್ತುವೇ ಆಗಲಿ ಅದಕ್ಕಿರುವ ಶಕ್ತಿ ಬಗ್ಗೆ ನಿರ್ಲಕ್ಷೆ ಮಾಡಬಾರದು, ಅಂತೆಯೇ ಹಿರಿಯರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನಾಣ್ಣುಡಿ ಕೊಟ್ಟಿದ್ದಾರೆ. ಇನ್ನು, ಪ್ರತಿಯೊಬ್ಬರ ಬಾಯಲ್ಲಿ ನೀರೂರಿಸುವಂತಹ ಅದ್ಭುತ ಸಿಹಿ ಖಾದ್ಯವಾದ ರಸಗುಲ್ಲಾ (Rasagulla) ಎಂದರೆ ಯಾರಿಗೆ ತಾನೆ ಗೊತ್ತಿರಲ್ಲ ಹೇಳಿ? ಅದು ಬಿಡಿ, ಈ ಸ್ವಾದಿಷ್ಟಕರ (tasteful) ವ್ಯಂಜನದ ರುಚಿ ಎಷ್ಟು ಅದ್ಭುತವಾಗಿರುತ್ತದೋ ಅಷ್ಟೇ ಶಕ್ತಿಯನ್ನೂ ಸಹ ಈ ರಸಗುಲ್ಲಾಗಳು ಹೊಂದಿವೆ ಎಂದರೆ ತಪ್ಪಾಗಲಾರದು. 40 ಗಂಟೆಗಳಷ್ಟು ರೈಲುತಡೆ (Train) ಹಾಗೂ ನೂರಾರು ರೈಲುಗಳಿಗೆ ಬದಲಿ ಮಾರ್ಗ (Train Track) ನೀಡುವಷ್ಟು ತಾಕತ್ತು ಈ ರಸಗುಲ್ಲಾಗಳಿಗೆ ಇದೆಯಾ ಎಂದರೆ ನೀವು ನಂಬಲೇಬೇಕು.

40 ಗಂಟೆಗಳ ಕಾಲ ಬೃಹತ್ ಪ್ರತಿಭಟನೆ
ಬಿಹಾರ ರಾಜ್ಯ ಲಖಿಸರಾಯ್ ಎಂಬ ಪ್ರದೇಶದ ನೂರಾರು ಜನರು ಕಳೆದವಾರದಂದು ಸತತ 40 ಗಂಟೆಗಳ ಕಾಲ ಬೃಹತ್ ಪ್ರತಿಭಟನೆಯೊಂದನ್ನು ಮಾಡಿದರು. ಅವರೆಲ್ಲರ ಬೇಡಿಕೆ ಒಂದೇ ಆಗಿತ್ತು ಹಾಗೂ ಅದೇನೆಂದರೆ ಲಖಿಸರಾಯ್ ಪ್ರದೇಶದಲ್ಲಿ ಬರುವ ಬಾರಾಹಿಯಾ ಎಂಬ ರೈಲು ನಿಲ್ದಾಣದಲ್ಲಿ ಕನಿಷ್ಠ ಹತ್ತು ರೈಲುಗಳಾದರೂ ನಿಲ್ಲುವಂತಾಗಬೇಕು ಎಂಬುದಾಗಿತ್ತು.

ಇನ್ನು ತಮ್ಮ ಪ್ರತಿಭಟನೆ ನಡೆಸಲು ಜನರು ಹಳಿಗಳ ಮೇಲೆ ಟೆಂಟುಗಳನ್ನು ನಿರ್ಮಿಸಿದ್ದರು, ಪರಿಣಾಮ ಹಲವಾರು ರೈಲುಗಳು ಮುಂದೆ ಚಲಿಸಲಾಗದೆ ಅಲ್ಲೆ ನಿಲ್ಲಲ್ಪಟ್ಟವು. ಹೌರಾ-ದೆಹಲಿ ಮಾರ್ಗದಲ್ಲಿ ಬರುವ ಈ ಮಾರ್ಗದಲ್ಲಿ ಮುಂಚೆಯೇ ನಿಗದಿಯಾಗಿದ್ದ ಹಲವಾರು ರೈಲುಗಳನ್ನು ಪ್ರತಿಭಟನೆಯ ಕಾರಣ 24 ಗಂಟೆಗಳ ಕಾಲ ರದ್ದುಗೊಳಿಸಬೇಕಾಯಿತು ಹಾಗೂ ಕನಿಷ್ಠ ನೂರು ರೈಲುಗಳಿಗೆ ಮಾರ್ಗಗಳನ್ನು ಬದಲಾಯಿಸ ಬೇಕಾಯಿತು.

ಪ್ರತಿಭಟನೆಯ ಉದ್ದೇಶವೇನು?
ಈ ಬಗ್ಗೆ ಇಂಡಿಯಾ.ಕಾಮ್ ತನ್ನ ವರದಿಯಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಅವರ ಪ್ರಕಾರ, ಲಖಿಸರಾಯ್ ಪ್ರದೇಶದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗಿಳಿದು ಹಳಿಗಳ ಮೇಲೆ ಬಂದು ನಿಂತರು ಹಾಗೂ ಅವರ ಬೇಡಿಕೆ ಸ್ಥಳೀಯ ಜನರು ಪ್ರಯಾಣಿಸಲು ಅನುಕೂಲವಾಗುವಂತೆ ಬಾರಾಹಿಯಾ ನಿಲ್ದಾಣದಲ್ಲಿ ಕನಿಷ್ಠ ಹತ್ತು ಎಕ್ಸ್ ಪ್ರೆಸ್ ರೈಲುಗಳಿಗಾದರೂ ನಿಲುಗಡೆಯ ವ್ಯವಸ್ಥೆ ಮಾಡಬೇಕೆಂಬುದಾಗಿತ್ತು, ಸದ್ಯ ಬಾರಾಹಿಯಾ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿಲ್ಲ.

ಇದನ್ನೂ ಓದಿ: Fellowship Program: ಮಂಗಳಮುಖಿಯರ ಸಮಸ್ಯೆಗಳನ್ನು ಅರ್ಥೈಸಲು ವಿಶೇಷ ಯೋಜನೆ ಘೋಷಣೆ

ಪ್ರತಿಭಟನೆಗೂ ರಸಗುಲ್ಲಾಗಳಿಗೂ ಏನು ಸಂಬಂಧ?
ಅಷ್ಟಕ್ಕೂ ಈ ಬಾರಾಹಿಯಾ ನಿಲ್ದಾಣದಲ್ಲಿ ರೈಲು ನಿಲ್ಲಬೇಕೆಂಬ ಬೇಡಿಕೆಗೂ ಮೇಲೆ ಪೀಠಿಕೆಯಲ್ಲಿ ಹೇಳಿರುವಂತೆ ರಸಗುಲ್ಲಾಗಳಿಗೂ ಏನು ಸಂಬಂಧ ಎಂಬ ಗೊಂದಲ ನಿಮ್ಮ ಮನದಲ್ಲಿ ಈಗಾಗಲೇ ಮೂಡಿರಬೇಕು ಅಲ್ಲವೆ? ಹೌದು ಅದಕ್ಕೆ ಸಂಬಂಧವಿದೆ, ಅದೇನೆಂದು ತಿಳಿಯೋಣ ಬನ್ನಿ. ಬಾರಾಹಿಯಾ ಪಟ್ಟಣದಲ್ಲಿ ಒಂದು ವಿಶೇಷ ಬಗೆಯ ರಸಗುಲ್ಲಾಗಳನ್ನು ತಯಾರಿಸಲಾಗುತ್ತದೆ. ಈ ರಸಗುಲ್ಲಾಗಳು ಎಷ್ಟು ವಿಶೇಷವಾಗಿದೆ ಎಂದರೆ ಈ ಪಟ್ಟಣದ ಸುತ್ತಮುತ್ತಲಿನಿಂದ ಹಲವಾರು ಜನ ಈ ಖಾದ್ಯವನ್ನು ಸವಿಯಲೆಂದೇ ಬಾರಾಹಿಯಾಗೆ ಭೇಟಿ ನೀಡುತ್ತಿರುತ್ತಾರೆ. ಅದಕ್ಕೆಂದೇ ಈ ಪಟ್ಟಣದಲ್ಲಿ ರಸಗುಲ್ಲಾ ಮಾರಾಟ ಮಾಡುವ ನೂರಾರು ಅಂಗಡಿಗಳಿವೆ.

ಆದರೆ, ಕೋವಿಡ್ ಸಂಕ್ರಮಣದ ಪ್ರಭಾವದಿಂದಾಗಿ ರೈಲುಗಳಿಗೆ ಬಾರಾಹಿಯಾ ಪಟ್ಟಣದಲ್ಲಿ ನಿಲುಗಡೆಯನ್ನು ರದ್ದುಗೊಳಿಸಲಾಗಿತ್ತು. ಇದರಿಂದಾಗಿ ಮುಂಚೆಯೆಂತೆ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುತ್ತಿರಲಿಲ್ಲ, ಪರಿಣಾಮ ಇಲ್ಲಿದ್ದ ರಸಗುಲ್ಲಾ ಮಾರಾಟಗಾರರ ಹಾಗೂ ಅವರ ವ್ಯಾಪಾರದ ಮೇಲೆ ವಿಪರೀತ ಪರಿಣಾಮ ಉಂಟಾಯಿತು.

ರಸಗುಲ್ಲಾ ವ್ಯಾಪಾರವಿಲ್ಲದೆ ಅಪಾರ ನಷ್ಟ
ರೈಲುಗಳು ನಿಲ್ಲದ ಕಾರಣ ಇಲ್ಲಿನ ರಸಗುಲ್ಲಾ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ದೇಶದ ಇತರೆ ಭಾಗಗಳಿಗೆ ಸರಬರಾಜು ಮಾಡುವುದು ನಿಂತು ಹೋಗಿತ್ತು. ಇದರಿಂದ ಅಪಾರ ನಷ್ಟ ಉಂಟಾಗಿ ಈ ಪ್ರದೇಶದ ವ್ಯಾಪಾರಿ ವರ್ಗ ಸೇರಿದಂತೆ ಹಲವಾರು ಜನರು ಆಕ್ರೋಶಗೊಂಡಿದ್ದರು. ಇದನ್ನು ಪ್ರತಿಭಟಿಸಲೆಂದೇ ಹಾಗೂ ತಮಗೆ ಮತ್ತೆ ರಸಗುಲ್ಲಾ ವ್ಯಾಪಾರ ಸರಿಯಾಗುವಂತೆ ಬೇಡಿಕೆ ಇಟ್ಟು ಹಳಿಗಳ ಮೇಲೆ ಪ್ರತಿಭಟನೆ ನಡೆಸಲಾಗಿತ್ತೆಂದು ತಿಳಿದುಬಂದಿದೆ.

ಇದನ್ನೂ ಓದಿ:  Desperate For Water: ಜೀವಜಲಕ್ಕಾಗಿ ಜೀವವನ್ನೇ ಪಣಕ್ಕಿಡುವ ಮಹಿಳೆಯರು! ನೋಡಿದರೆ ಕರುಳು ಹಿಂಡುತ್ತೆ

ಹಾಗೇ ನೋಡಿದರೆ ಬಾರಾಹಿಯಾದಿಂದ ರೈಲು ಮಾರ್ಗದ ಮೂಲಕ ತೆರಳಿದರೆ ಪಾಟ್ನಾ ನಗರ ತಲುಪಲು ಕೇವಲ ಎರಡು ಗಂಟೆಗಳು ಸಾಕು ಹಾಗೂ ಪ್ರಯಾಣದ ವೆಚ್ಚ ಕೇವಲ 55 ರೂಪಾಯಿಗಳು. ಅದೇ, ವ್ಯಾಪಾರಿಗಳು ರಸ್ತೆ ಮಾರ್ಗವನ್ನು ಆಯ್ದುಕೊಂಡರೆ ಅದಕ್ಕೆ 150 ರೂ ವೆಚ್ಚ ತಗಲುತ್ತಿತ್ತು ಮತ್ತು ಪಾಟ್ನಾ ತಲುಪುವುದು ಸಾಕಷ್ಟು ವಿಳಂಬವೂ ಆಗುತ್ತಿತ್ತು.
Published by:Ashwini Prabhu
First published: