Bihar University: ಬಿಹಾರ ವಿಶ್ವವಿದ್ಯಾಲಯದ ಎಡವಟ್ಟು! 100ಕ್ಕೆ 151 ಅಂಕ ಪಡೆದ ವಿದ್ಯಾರ್ಥಿ

ಬಿಹಾರದ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯದ ಪದವಿ ತರಗತಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಒಂದು ವಿಷಯದ ಉತ್ತರ ಪತ್ರಿಕೆಯೊಂದರಲ್ಲಿ 100ಕ್ಕೆ 151 ಅಂಕಗಳನ್ನು ಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ದರ್ಭಾಂಗಾ ಜಿಲ್ಲೆಯಲ್ಲಿರುವಂತಹ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾಲಯದಲ್ಲಿ (ಎಲ್ಎನ್ಎಂಯು) ಈ ಘಟನೆ ನಡೆದಿದ್ದು ಮತ್ತು ಅಲ್ಲಿಯೇ ಇನ್ನೊಂದು ವಿಚಿತ್ರವಾದ ಘಟನೆಯಲ್ಲಿ ಎರಡು ಉತ್ತರ ಪತ್ರಿಕೆಗಳಲ್ಲಿ ಶೂನ್ಯ ಅಂಕ ಗಳಿಸಿದ ಇನ್ನೊಬ್ಬ ವಿದ್ಯಾರ್ಥಿಯನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವೊಮ್ಮೆ ಈ ಪರೀಕ್ಷೆಗಳನ್ನು (Exam) ಬರೆದು ಪರೀಕ್ಷಾ ಕೊಠಡಿಯಿಂದ ಹೊರಗಡೆ ಬಂದಾಗ ಕೆಲವು ಸ್ನೇಹಿತರು ‘ಈ ಬಾರಿ ಪ್ರಶ್ನೆ ಪತ್ರಿಕೆ ತುಂಬಾನೇ ಕಠಿಣವಾಗಿತ್ತು, ಪಾಸಾಗೋದು ಸಹ ಡೌಟ್’ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಹೀಗೆ ಹೇಳುವುದರಲ್ಲಿ ಯಾವುದೇ ವಿಚಿತ್ರವೇನಿಲ್ಲ ಬಿಡಿ. ಪ್ರಶ್ನೆ ಪತ್ರಿಕೆ ನೋಡಿದ ವಿದ್ಯಾರ್ಥಿಗಳಿಗೆ (Students) ಮತ್ತು ಉತ್ತರ ಪತ್ರಿಕೆಯಲ್ಲಿ (Answer Paper) ಬರೆದ ಉತ್ತರಗಳಿಂದ ಅವರಿಗೆ ಪರೀಕ್ಷಾ ಸಮಯದಲ್ಲಿಯೇ ಅವರಿಗೆ ಮುಂದೆ ಎಷ್ಟು ಅಂಕಗಳು ಬರಬಹುದು ಅಂತ ಒಂದು ಅಂದಾಜು ಸಿಕ್ಕಿರುತ್ತದೆ. ಆದರೆ ವಿಚಿತ್ರ ಎಂದರೆ ಫಲಿತಾಂಶ ಬಂದಾಗ ನೋಡಿದರೆ ಹೀಗೆ ‘ಪಾಸಾಗೋದು ಡೌಟ್’ ಅಂತ ಹೇಳಿದ್ದ ಸ್ನೇಹಿತರಲ್ಲಿ ಕೆಲವರಿಗೆ ಒಳ್ಳೆಯ ಅಂಕಗಳೇ (Marks) ಬಂದಿರುತ್ತವೆ.

‘ಅಯ್ಯೋ ದೇವರೇ ಏನಿದು, ಪಾಸಾಗೋದು ಡೌಟ್ ಅಂತ ಹೇಳಿದವರು ಒಳ್ಳೆಯ ಅಂಕಗಳನ್ನೇ ಪಡೆದಿದ್ದಾರಲ್ಲ ಅಂತ ಆಶ್ಚರ್ಯವಾಗುತ್ತದೆ. ಹೌದು.. ಕೆಲವೊಮ್ಮೆ ಈ ಉತ್ತರ ಪತ್ರಿಕೆಗಳನ್ನು ನೋಡಿ ಅಂಕಗಳನ್ನು ಹೇಗೆ ನೀಡುತ್ತಾರೆ ಅಂತ ಯಾರಿಂದಲೂ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಮಗೆ 90 ಅಂಕಗಳು ಬರಬಹುದು ಅಂತ ನಾವು ಊಹಿಸಿದ್ದರೆ, ಅಲ್ಲಿ ನಮಗೆ 70 ಅಂಕಗಳೇ ಬಂದಿರುತ್ತವೆ.

ಅಂಕಗಳನ್ನು ಪಟ್ಟಿಯಲ್ಲಿ ದಾಖಲಿಸುವಾಗ ಎಡವಟ್ಟು ನೋಡಿ ಎಂತದ್ದು ಅಂತ!
ಕೆಲವೊಮ್ಮೆ ಪಾಸಾಗೋದು ಡೌಟ್ ಅಂತ ಅಂದು ಕೊಂಡ್ರೆ ಅಲ್ಲಿ 40 ರಿಂದ 50 ಅಂಕಗಳು ಬಂದಿರುತ್ತವೆ. ಈ ರೀತಿಯ ಘಟನೆಗಳು ನಮ್ಮೆಲ್ಲರ ಶಾಲೆಯ ಮತ್ತು ಕಾಲೇಜು ಲೈಫ್ ನಲ್ಲಿ ಒಮ್ಮೆಯಾದರೂ ನಡೆದೇ ಇರುತ್ತದೆ. ಕೆಲವೊಮ್ಮೆ ಉತ್ತರ ಪತ್ರಿಕೆಯನ್ನು ತಿದ್ದುವವರು ಎಡವಟ್ಟು ಮಾಡಿದರೆ, ಇನ್ನೂ ಕೆಲವೊಮ್ಮೆ ಅಂಕಗಳನ್ನು ಪಟ್ಟಿಯಲ್ಲಿ ದಾಖಲಿಸುವಾಗ ಸಹ ಚಿಕ್ಕ ಪುಟ್ಟ ತಪ್ಪುಗಳಾಗುತ್ತವೆ ಎಂದು ಹೇಳಬಹುದು. ಇದೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಮನದಲ್ಲಿ ಕಾಡಬಹುದು. ಇಲ್ಲಿ ಒಂದು ಘಟನೆ ನಡೆದಿದೆ ನೋಡಿ. ಇದನ್ನು ನೋಡಿದರೆ ನೀವು ‘ಇದೆಂಥಾ ಎಡವಟ್ಟು ಮಾಡಿದ್ದಾರೆ ಈ ವಿಶ್ವವಿದ್ಯಾಲಯದವರು’ ಅಂತ ಹೇಳುವುದಂತೂ ಗ್ಯಾರೆಂಟಿ.

ಉತ್ತರ ಪತ್ರಿಕೆಯೊಂದರಲ್ಲಿ 100ಕ್ಕೆ 151 ಅಂಕ ಗಳಿಸಿದ ವಿದ್ಯಾರ್ಥಿ
ಬಿಹಾರದ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯದ ಪದವಿ ತರಗತಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಒಂದು ವಿಷಯದ ಉತ್ತರ ಪತ್ರಿಕೆಯೊಂದರಲ್ಲಿ 100ಕ್ಕೆ 151 ಅಂಕಗಳನ್ನು ಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ದರ್ಭಾಂಗಾ ಜಿಲ್ಲೆಯಲ್ಲಿರುವಂತಹ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾಲಯದಲ್ಲಿ (ಎಲ್ಎನ್ಎಂಯು) ಈ ಘಟನೆ ನಡೆದಿದ್ದು ಮತ್ತು ಅಲ್ಲಿಯೇ ಇನ್ನೊಂದು ವಿಚಿತ್ರವಾದ ಘಟನೆಯಲ್ಲಿ ಎರಡು ಉತ್ತರ ಪತ್ರಿಕೆಗಳಲ್ಲಿ ಶೂನ್ಯ ಅಂಕ ಗಳಿಸಿದ ಇನ್ನೊಬ್ಬ ವಿದ್ಯಾರ್ಥಿಯನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗಿದೆ.

ಇದನ್ನೂ ಓದಿ: Viral Video: ಕ್ಷಣ ಮಾತ್ರದಲ್ಲಿ ಸಾವಿನಿಂದ ತಪ್ಪಿಸಿಕೊಂಡ ಮಹಿಳೆ! ಎಲ್ಲವೂ ನಸೀಬು ಎಂದ ನೆಟ್ಟಿಗರು

"ಪರೀಕ್ಷೆಯ ಫಲಿತಾಂಶಗಳನ್ನು ನೋಡಿ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು. ಇದು ತಾತ್ಕಾಲಿಕ ಅಂಕ ಪಟ್ಟಿಯಾಗಿದ್ದರೂ, ಫಲಿತಾಂಶವನ್ನು ಬಿಡುಗಡೆ ಮಾಡುವ ಮೊದಲು ವಿಶ್ವವಿದ್ಯಾಲಯದ ಅಧಿಕಾರಿಗಳು ಅದನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿತ್ತು" ಎಂದು ವಿಶ್ವವಿದ್ಯಾಲಯದ ಭಾಗ-2 ಪರೀಕ್ಷೆಯಲ್ಲಿ ತನ್ನ ರಾಜ್ಯಶಾಸ್ತ್ರ ಪತ್ರಿಕೆ-4 ರಲ್ಲಿ 100 ಅಂಕಗಳಿಗೆ 151 ಅಂಕಗಳನ್ನು ಪಡೆದ ಬಿಎ ವಿದ್ಯಾರ್ಥಿಯೊಬ್ಬರು ಹೇಳಿದರು.

ಈ ಬಗ್ಗೆ ವಿಶ್ವವಿದ್ಯಾಲಯ ಏನು ಹೇಳಿದೆ
ಇಷ್ಟೇ ಅಲ್ಲದೆ ಅದೇ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಬಿಕಾಂ ಭಾಗ-2 ಪರೀಕ್ಷೆಯಲ್ಲಿ ಅಕೌಂಟಿಂಗ್ ಮತ್ತು ಫೈನಾನ್ಸ್ ಪೇಪರ್-4 ರಲ್ಲಿ ಶೂನ್ಯ ಗಳಿಸಿದ ಮತ್ತು ಮುಂದಿನ ತರಗತಿಗೆ ಬಡ್ತಿ ಪಡೆದ ಇನ್ನೊಬ್ಬ ವಿದ್ಯಾರ್ಥಿ, ಇದು ಟೈಪಿಂಗ್ ದೋಷ ಎಂದು ವಿಶ್ವವಿದ್ಯಾಲಯ ಒಪ್ಪಿಕೊಂಡಿದೆ ಎಂದು ಹೇಳಿದರು. "ಅವರು ನನಗೆ ಪರಿಷ್ಕೃತ ಅಂಕ ಪಟ್ಟಿಯನ್ನು ನೀಡಿದರು" ಎಂದು ಅವರು ಹೇಳಿದರು.

ಇದನ್ನೂ ಓದಿ:  Iconic Forts: ಹೋಟೆಲ್​​ಗಳ ಬದಲು ಐತಿಹಾಸಿಕ ಕೋಟೆಗಳಲ್ಲಿ ತಂಗಬೇಕು ಎನಿಸಿದೆಯಾ? ಅದು ಸದ್ಯದಲ್ಲಿ ನನಸಾಗಲಿದೆ!

ಎರಡೂ ಅಂಕಪಟ್ಟಿಗಳಲ್ಲಿ ಟೈಪಿಂಗ್ ದೋಷಗಳಿವೆ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್ ಅವರು ಸುದ್ದಿ ಸಂಸ್ಥೆಯಾದ ಪಿಟಿಐಗೆ ಈಗಾಗಲೇ ತಿಳಿಸಿದ್ದಾರೆ. "ಟೈಪೋಗ್ರಾಫಿಕಲ್ ದೋಷಗಳನ್ನು ಸರಿಪಡಿಸಿದ ನಂತರ, ಇಬ್ಬರು ವಿದ್ಯಾರ್ಥಿಗಳಿಗೆ ಹೊಸ ಅಂಕ ಪಟ್ಟಿಗಳನ್ನು ನೀಡಲಾಯಿತು. ಅವು ಕೇವಲ ಬೆರಳಚ್ಚು ದೋಷಗಳು, ಬೇರೆ ಏನೂ ಅಲ್ಲ" ಎಂದು ಅವರು ಹೇಳಿದರು.
Published by:Ashwini Prabhu
First published: