ಮಾರುಕಟ್ಟೆಗೆ ಬರಲು ಸಿದ್ದವಾಗಿದೆ "ಮೋದಿ ಹುಂಡಿ": ಇದು ಬಿಹಾರ ಶಿಲ್ಪಿಯ ಕೈಚಳಕ

ಮೋದಿ ಅವರ ಪ್ರತಿಮೆ

ಮೋದಿ ಅವರ ಪ್ರತಿಮೆ

ಮೋದಿ ಅವರು "ವಿಶ್ವದ ಅತ್ಯುತ್ತಮ ವ್ಯಕ್ತಿ", ಅಲ್ಲದೇ ಮೋದಿಯವರಂತೆ ಆಗಲು ಮಕ್ಕಳನ್ನು ಪ್ರೇರೇಪಿಸುವ ಉದ್ದೇಶದಿಂದ ಈ  ಶಿಲ್ಪಗಳನ್ನು ಮಾಡುತ್ತಿದ್ದೇನೆ ಎಂದು ಪ್ರಕಾಶ್ ಹೇಳಿದರು. ಪ್ರಧಾನ ಮಂತ್ರಿಯ ಬಗ್ಗೆ ಮಕ್ಕಳಿಗೆ ರೂಪಕವಾಗಿ ತಿಳಿಸಲು ಇದನ್ನು ಬಳಸಬಹುದು ಎಂದು ಪ್ರಕಾಶ್​ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಬಿಹಾರ್ ಮೂಲದ ಶಿಲ್ಪಿ ಪ್ರಧಾನಿ ನರೇಂದ್ರ ಮೋದಿಯವರ ಮಿನಿಯೇಚರ್​ ಪ್ರತಿಮೆಗಳನ್ನು ತಯಾರಿಸಿದ್ದು ಇವುಗಳನ್ನು ಹಣ ಕೂಡಿಡುವ ಹುಂಡಿಗಳನ್ನಾಗಿ ಪರಿವರ್ತಿಸಿದ್ದಾನೆ.


ಕಳೆದ ವರ್ಷ ಮಾರ್ಚ್ 22 ರಂದು ಮೋದಿಯವರು ಕೋವಿಡ್​ - 19 ರ ಕಾರಣದಿಂದ ‘ಜನತಾ ಕರ್ಫ್ಯೂ’ ಘೋಷಿಸಿದ್ದರು.  ಮುಜಾಫರ್​ಪುರದ ಜೈ ಪ್ರಕಾಶ್ ಅವರಿಗೆ ಒಂದು ಉಪಾಯ ತಲೆಗೆ ಹೊಳೆಯಿತು. ಪ್ರತಿ ಹುಂಡಿಯಲ್ಲೂ ಸುಮಾರು 1 ಲಕ್ಷ ರುಪಾಯಿಯಷ್ಟು ಹಣವನ್ನ ಉಳಿಸಬಹುದು. ಅದು ನಾಣ್ಯದ ರೂಪದಲ್ಲಾಗಲಿ, ನೋಟಿನ ರೂದಲ್ಲಾಗಲಿ ಇಷ್ಟು ಮೊತ್ತದ ಹಣವನ್ನು ಉಳಿಸಬಹುದು ಎಂದು ಹೇಳಿದ್ದಾರೆ.  ’’ಮೋದಿ ಅವರು ನಮ್ಮ ದೇಶವನ್ನು ಉಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’’ ಎಂದು ನಾನು ಭಾವಿಸಿದ್ದೇನೆ. ಆದ ಕಾರಣ ಅವರಿಗೆ ಈ ರೂಪದಲ್ಲಿ ನನ್ನ ಧನ್ಯವಾದಗಳನ್ನು ಸರ್ಮಪಿಸುತ್ತಿದ್ದೇನೆ’’ ಎಂದು ಪ್ರಕಾಶ್ ಪ್ರಧಾನ ಮಂತ್ರಿಯನ್ನು ಉಲ್ಲೇಖಿಸಿ ಮಾತುಗಳನ್ನು ಆಡಿದರು ಎಂದು ಎಎನ್‌ಐ ವರದಿ ಮಾಡಿದೆ. "ಮೊದಲು ನಾನು ನನ್ನ ಹಣವನ್ನು ಉಳಿಸುವ ಸಲುವಾಗಿ ಇದನ್ನು ಮಾಡಲು ನಿರ್ಧರಿಸಿದೆ" ಎಂದು ಹೇಳಿದರು. ಒಂದು ಹುಂಡಿ ಮಾಡಲು ಒಂದು ತಿಂಗಳು ಸಮಯ ಬೇಕು, ಈಗ ನನ್ನ ಬಳಿ ಕೆಲವೇ ಕೆಲವು ಮೋದಿ ಹುಂಡಿಗಳು ಮಾತ್ರ ಇದ್ದು, ಈಗ ಮತ್ತೆ ತಯಾರು ಮಾಡಲು ಪ್ರಾರಂಭಿಸಿದ್ದೇನೆ.  ತಯಾರಿಸಿದ ಕೂಡಲೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇನೆ ಎಂದು ಶಿಲ್ಪಿ ಎಎನ್​ಐಗೆ ಉತ್ತರಿಸಿದ್ದಾರೆ.


ಮೋದಿ ಅವರು "ವಿಶ್ವದ ಅತ್ಯುತ್ತಮ ವ್ಯಕ್ತಿ", ಅಲ್ಲದೇ ಮೋದಿಯವರಂತೆ ಆಗಲು ಮಕ್ಕಳನ್ನು ಪ್ರೇರೇಪಿಸುವ ಉದ್ದೇಶದಿಂದ ಈ  ಶಿಲ್ಪಗಳನ್ನು ಮಾಡುತ್ತಿದ್ದೇನೆ ಎಂದು ಪ್ರಕಾಶ್ ಹೇಳಿದರು. ಪ್ರಧಾನ ಮಂತ್ರಿಯ ಬಗ್ಗೆ ಮಕ್ಕಳಿಗೆ ರೂಪಕವಾಗಿ ತಿಳಿಸಲು ಇದನ್ನು ಬಳಸಬಹುದು ಎಂದು ಪ್ರಕಾಶ್​ ಹೇಳಿದ್ದಾರೆ.


ನನ್ನ ಈ ಕೆಲಸಕ್ಕೆ ಇದುವರೆಗೂ ಯಾರ ಬಳಿಯೂ ಆರ್ಥಿಕ ಸಹಾಯವನ್ನು ಪಡೆದಿಲ್ಲ ಎಂದು ಕಲಾವಿದ ಪ್ರಕಾಶ್​ ಅವರು ಹೇಳಿದ್ದು. ಅಲ್ಲದೇ ಇದುವರೆಗೂ ನಾನು ನನ್ನ ಕಲಾಕೃತಿಯಿಂದಾಗಿ ಇನ್ನೂ ಯಾವುದೇ ಆರ್ಥಿಕ ಲಾಭವನ್ನು ಪಡೆದಿಲ್ಲ, ಲಾಭ ಮಾಡುವ ಉದ್ದೇಶವೂ ನನಗಿಲ್ಲ, ಈ ಕೆಲಸವನ್ನು ಮುಂದುವರೆಸಲು ಸ್ವಲ್ಪ ಹಣಕಾಸಿನ ಅವಶ್ಯಕತೆ ಇದ್ದು,  ಸಾಲ ಮಾಡಿ ನನ್ನ ವ್ಯವಹಾರವನ್ನು ಮುಂದುವರೆಸುವುದಾಗಿ ಹೇಳಿದರು.


ಇಡೀ ದೇಶದ ಉದ್ದಗಲಕ್ಕೂ ನರೇಂದ್ರ ಮೋದಿಯವರ ಅಭಿಮಾನಿಗಳು ತುಂಬಿ, ತುಳುಕುತ್ತಿದ್ದು ಈ ರೀತಿಯ ಅನೇಕ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯೊಬ್ಬರು  ದೇವಸ್ಥಾನ ಕಟ್ಟಲು ಯೋಜನೆ ರೂಪಿಸಿದ್ದರು ಅಲ್ಲದೇ 100 ಅಡಿ ಎತ್ತರದ ಮೋದಿ ಪ್ರತಿಮೆ ಸ್ಥಾಪನೆಗೂ ಇವರು ಕೈಂಕರ್ಯ ತೊಟ್ಟಿದ್ದರು. ಜೆ.ಪಿ.ಸಿಂಗ್​ ಎನ್ನುವ ವ್ಯಕ್ತಿಯೇ ಈ ಸಾಹಸಕ್ಕೆ ಕೈ ಹಾಕಿದ ಮೋದಿ ಅಭಿಮಾನಿ. ಇವರು ನಿವೃತ್ತ ಎಂಜಿನಿಯರ್​ ಆಗಿದ್ದು, ಪಶ್ಚಿಮ ಉತ್ತರ ಪ್ರದೇಶದ ಮೀರತ್​ನವರಾಗಿದ್ದು ಇಲ್ಲಿನ ಶ್ರದ್ದಾನ ಎನ್ನುವ ಪಟ್ಟಣದಲ್ಲಿ ಈ 100 ಅಡಿ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಜೂನ್​ ತಿಂಗಳಲ್ಲಿ ಸರ್ಕಾರಿ ಕೆಲಸದಿಂದ ನಿವೃತ್ತಿಯಾದ ಅಧಿಕಾರಿಯೊ್ಬ್ಬರು ’ಮೋದಿ ಮಂದಿರ’ ಎನ್ನುವ ದೇವಸ್ಥಾನ ಕಟ್ಟಲು ಪ್ರಾರಂಭ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.  ಇದೊಂದೇ ಮಾರ್ಗದಲ್ಲಿ ಪಿಎಂ ಅವರನ್ನು ನಾನು ಗೌರವಿಸಲು ಸಾಧ್ಯ ಎಂದು ಹೇಳಿದ್ದಾರೆ.  ಸಿಂಗ್​ ಅವರು ಮುಂದಿನ ಅಕ್ಟೋಬರ್​ 23 ನೇ ತಾರೀಕಿನಂದು ಮೋದಿಯವರ 100 ಅಡಿ ಪ್ರತಿಮೆಗೆ ಭೂಮಿ ಪೂಜೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Karnataka Rains: ಕರಾವಳಿಯಲ್ಲಿ ಭಾರೀ ಮಳೆ; ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ


ಪ್ರಧಾನಿ ಮೋದಿಯವರ ಮೇಣದ ಪ್ರತಿಮೆಯನ್ನ ಲಂಡನ್​ನಲ್ಲಿ ಇರುವ ಮೇಡಮ್​ ಟುಸ್ಸಾಡ್ಸ್​ ಸಂಗ್ರಹಾಲಯದಲ್ಲಿ 2016ರಲ್ಲಿ ಸ್ಥಾಪಿಸಲಾಗಿತ್ತು. ಈ ಕುರಿತು ಮಾತನಾಡಿದ್ದ ಮೋದಿ ಅವರು, ’’ಇವರ ಈ ಕೈ ಚಳಕ ನೋಡಿ ನಾನು ನಿಬ್ಬೆರಗಾಗಿ ಹೋಗಿದ್ದೆನೆ. ಬ್ರಹ್ಮ ಮಾಡುವ ಕೆಲಸವನ್ನೇ ಕಲಾವಿದರು ಮಾಡುತ್ತಾರೆ.  ಈ ಪ್ರತಿಮೆ ಮೋದಿಯವರ ಬಹಳ ಪ್ರಸಿದ್ದವಾದ, ಭಂಗಿಯನ್ನು ಹೊಂದಿದ್ದು, ಕ್ರೀಮ್​ ಕಲರ್​ ಕುರ್ತಾ, ಅದರ ಮೇಲೆ ಜಾಕೆಟ್​ ಹಾಗು ನಮಸ್ತೆ ಮಾಡುತ್ತಿರುವ ಮೋದಿ.ಈ ರೀತಿಯಾಗಿ ಪ್ರತಿಮೆಯನ್ನು ಮಾಡಲಾಗಿದೆ. ದೆಹಲಿಗೆ ಬಂದಿದ್ದ ಕಲಾವಿದರು ಪ್ರತಿಯೊಂದು ಸೂಕ್ಮತೆಗಳನ್ನು ಗಮನಿಸಿ ಈ ಪ್ರತಿಮೆ ಮಾಡಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: