15 ವರ್ಷ ಆಡಳಿತದ ಬಳಿಕವೂ ನಿತೀಶ್ ಕುಮಾರ್ ಪರ ಜನರ ಒಲವು ಮುಂದುವರಿಯಲು ಏನು ಕಾರಣ?
Bihar Election Results - 2005ರಲ್ಲಿ ಆರ್ಜೆಡಿಯನ್ನ ಸೋಲಿಸಿ ನಿತೀಶ್ ಕುಮಾರ್ ಅಧಿಕಾರಕ್ಕೆ ಏರಿದಾಗ ಬಿಹಾರ ಆರ್ಥಿಕವಾಗಿ ಹಾಗೂ ಕಾನೂನಾತ್ಮಕವಾಗಿ ಶೋಚನೀಯ ಸ್ಥಿತಿಯಲ್ಲಿತ್ತು. 15 ವರ್ಷಗಳಲ್ಲಿ ನಿತೀಶ್ ಗಮನಾರ್ಹ ಬದಲಾವಣೆ ಮಾಡಿದ್ದಾರೆ. ಬಡತನ, ನಿರುದ್ಯೋಗ ವಿಚಾರದಲ್ಲಿ ವಿಫಲರಾದರೂ ಜನರು ನಿತೀಶ್ ಕೈಬಿಡದೇ ಇರಲು ಇದೇ ಕಾರಣವಿರಬಹುದು.
news18 Updated:November 10, 2020, 5:59 PM IST

ನಿತೀಶ್ ಕುಮಾರ್.
- News18
- Last Updated: November 10, 2020, 5:59 PM IST
ಪಾಟ್ನಾ(ನ. 10): ಹದಿನೈದು ವರ್ಷಗಳ ಆಡಳಿತದ ಬಳಿಕವೂ ನಿತೀಶ್ ಕುಮಾರ್ ನೇತೃತ್ವ ಸರ್ಕಾರ ಮತ್ತೆ ಅಧಿಕಾರಕ್ಕೆ ಏರುವ ಲಕ್ಷಣ ಕಾಣುತ್ತಿದೆ. ವಿಪಕ್ಷಗಳ ಒಗ್ಗಟ್ಟು ಹಾಗೂ ಸಹಜ ಆಡಳಿತ ವಿರೋಧಿ ಅಲೆಯನ್ನ ಎದುರಿಸಿಯೂ ಎನ್ಡಿಎ ಈ ಚುನಾವಣೆಯಲ್ಲಿ ಮಾಡುತ್ತಿರುವ ಸಾಧನೆ ಗಮನಾರ್ಹವಾದುದು. ನಿತೀಶ್ ಕುಮಾರ್ ಅವರದ್ದು ಅಂಥದ್ದೇನು ಮಂತ್ರ ಶಕ್ತಿ ಇದೆ ಎನಿಸದೇ ಇರದು. ಆದರೆ, ಬಿಹಾರದ ಸ್ವಾತಂತ್ರ್ಯೋತ್ತರದ ಇತಿಹಾಸ ಗಮನಿಸಿದರೆ ಇದು ಅನಿರೀಕ್ಷಿತ ಅಥವಾ ಅಚ್ಚರಿ ಎನಿಸುವುದಿಲ್ಲ. 15 ವರ್ಷಗಳ ಹಿಂದೆ ಬಿಹಾರ ರಾಜ್ಯಕ್ಕೆ ಬಹಳಷ್ಟು ಕುಖ್ಯಾತಿ ಇತ್ತು. ಆರ್ಥಿಕವಾಗಿ ಬಹಳ ಹಿಂದುಳಿದ ಜೊತೆಗೆ ರಾಜ್ಯದಲ್ಲಿನ ಕಾನೂನು ಪರಿಸ್ಥಿತಿ ತೀರಾ ಹದಗೆಟ್ಟುಹೋಗಿತ್ತು ಎಂಬುದು ಆ ಸಂದರ್ಭವನ್ನು ಪ್ರತ್ಯಕ್ಷವಾಗಿ ಕಂಡವರಿಗೆ ಬಂದಿರುವ ಅನುಭವ. ನಿತೀಶ್ ಕುಮಾರ್ 2005ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಹಾರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದನ್ನು ಹೆಚ್ಚಿನ ಮಂದಿ ತಳ್ಳಿಹಾಕುವುದಿಲ್ಲ. ಈ ಒಂದು ಸಂಗತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬಿಹಾರಿಗಳು ಹೊಂದಿರುವ ಒಲವು ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎಯನ್ನು ದಡ ಮುಟ್ಟಿಸುವಂತೆ ಕಾಣುತ್ತಿದೆ.
2005ರಲ್ಲಿ ಆರ್ಜೆಡಿಯ ರಾಬ್ರಿ ದೇವಿ ಸರ್ಕಾರ ಅಂತ್ಯಗೊಂಡಾಗ ಬಿಹಾರ ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳಷ್ಟು ಶೋಚನೀಯವಾಗಿತ್ತು. ರಾಷ್ಟ್ರೀಯವಾಗಿ ಆರ್ಥಿಕ ಬೆಳವಣಿಗೆ ಶೇ. 7ಕ್ಕಿಂತ ಹೆಚ್ಚಿದ್ದರೂ ಬಿಹಾರ ಮಾತ್ರ ಕುಂಟುತ್ತಾ ಸಾಗಿತ್ತು. 2005ರ ಚುನಾವಣೆಯ ವೇಳೆ ನಿತೀಶ್ ಕುಮಾರ್ ಹೇಳಿದ ಈ ಮಾತುಗಳನ್ನ ಇಲ್ಲಿ ಉಲ್ಲೇಖಿಸಬಹುದು: “ಬಿಹಾರಕ್ಕೆ ಹಿನ್ನಡೆಯಾಗಿರುವುದು ಕೆಟ್ಟ ಆಡಳಿತದಿಂದಲ್ಲ, ಆಡಳಿತವೇ ಇಲ್ಲದಿರುವುದು ಕಾರಣ”. ಇದನ್ನೂ ಓದಿ: Bihar Assembly Election 2020 Results Live: ಬಿಹಾರ ಚುನಾವಣೆ – ಆರಂಭಿಕ ಓಟದ ಬಳಿಕ ಹಿಂದುಳಿದ ಆರ್ಜೆಡಿ; ಬಹುಮತದತ್ತ ಎನ್ಡಿಎ
ನಿತೀಶ್ ಅಧಿಕಾರಕ್ಕೆ ಬಂದ ಬಳಿಕ ಬಿಹಾರದ ವಿತ್ತೀಯ ಕೊರತೆ ನೀಗಿ ಮುನ್ನಡೆ ಪಡೆಯಿತು. 2005ರಿಂದ 2015ರವರೆಗೆ ಬಿಹಾರದ ಆರ್ಥಿಕತೆ ಶೇ. 10ರ ದರದಲ್ಲಿ ಬೆಳವಣಿಗೆ ಸಾಧಿಸಿತು. ಇದು ಆ ಅವಧಿಯಲ್ಲಿ ದೇಶದ ಬೇರೆಲ್ಲಾ ರಾಜ್ಯಗಳಿಗಿಂತ ಬಿಹಾರ ಅತಿ ವೇಗದಲ್ಲಿ ದಾಂಗುಡಿ ಇಟ್ಟಿತ್ತು. 2018-19ರಲ್ಲಿ ಬಿಹಾರದ ಬೆಳವಣಿಗೆ ಬರೋಬ್ಬರಿ ಶೇ. 10.53 ದರವನ್ನು ದಾಖಲಿಸಿದೆ.
ಮತ್ತೊಂದು ಸಂಗತಿ ಎಂದರೆ, ನಿತೀಶ್ ಅವರು ಮೊದಲ ಬಾರಿಗೆ ಅಧಿಕಾರಕ್ಕೆ ಏರಿದಾಗ ಬಿಹಾರ ಜಂಗಲ್ ರಾಜ್ ಎಂದೇ ಕುಖ್ಯಾತಿ ಪಡೆದಿತ್ತು. ಇಲ್ಲಿ ಹಣಕ್ಕಾಗಿ ಕಿಡ್ನಾಪ್ ಮಾಡುವುದು ಒಂದು ಉದ್ಯಮವಾಗಿಯಾಗಿ ಪರಿವರ್ತಿತವಾಗಿತ್ತು. “ಇಲ್ಲಿನ ಕಾನೂನು ಪಾಲನೆ ವ್ಯವಸ್ಥೆ ಎಷ್ಟು ತುಕ್ಕು ಹಿಡಿದು ದುರ್ಬಲವಾಗಿದೆ ಎಂದರೆ ನಾನೇನಾದರೂ ಕಠಿಣ ಕ್ರಮಗಳನ್ನ ದಿಢೀರ್ ತೆಗೆದುಕೊಂಡಲ್ಲಿ ಎಲ್ಲವೂ ಕುಸಿದು ಬೀಳುವಂತಿದೆ. ಆದರೆ, ನನಗೆ ಬೇರೆ ದಾರಿ ಇಲ್ಲ. ಏನಾದರೂ ಕ್ರಮ ತೆಗೆದುಕೊಳ್ಳಲೇಬೇಕು. ಬಹಳ ಎಚ್ಚರಿಕೆಯಿಂದ ಅದನ್ನು ನಿಭಾಯಿಸುತ್ತೇನೆ” ಎಂದು 2005ರಲ್ಲಿ ಸಂದರ್ಶನವೊಂದರಲ್ಲಿ ನಿತೀಶ್ ಕುಮಾರ್ ಹೇಳಿದ್ದರು.
ನಿತೀಶ್ ಆಡಳಿದಲ್ಲಿ ಬಿಹಾರದ ಕಾನೂನು ಪರಿಸ್ಥಿತಿ ಸುಧಾರಿಸತೊಡಗಿತು. ಕೊಲೆ ಪ್ರಕರಣಗಳು ಬಹಳಷ್ಟು ಕಡಿಮೆ ಆದವು. ಅಲ್ಲಿನ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಲಾಯಿತು. ನ್ಯಾಯವ್ಯವಸ್ಥೆಯನ್ನೂ ಸುಧಾರಿಸಲಾಯಿತು.
ಇದನ್ನೂ ಓದಿ: ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ನಿರಾಕರಣೆ; ಸುಪ್ರೀಂಕೋರ್ಟ್ ಮೊರೆಹೋದ ಅರ್ನಬ್ ಗೋಸ್ವಾಮಿ ಇಲ್ಲಿನ ಮೂಲಸೌಕರ್ಯಗಳೂ ಕೂಡು ನಿತೀಶ್ ಆಡಳಿತದ ವೇಳೆ ಪುಷ್ಟಿ ಪಡೆದಿವೆ. ರಸ್ತೆ ನಿರ್ಮಾಣ, ವಿದ್ಯುತ್ ಪೂರೈಕೆ ಇತ್ಯಾದಿ ಕಾರ್ಯಗಳು ಗಮನಾರ್ಹ ರೀತಿಯಲ್ಲಿ ಹೆಚ್ಚಳಗೊಂಡವು. ಶಾಲಾ ವಿದ್ಯಾರ್ಥಿನಿಯರಿಗೆ ಬೈಸಿಕಲ್ ಕೊಳ್ಳಲು ಧನ ಸಹಾಯ ನೀಡುವ ಯೋಜನೆಯಿಂದ ಸ್ಕೂಲ್ ಡ್ರಾಪೌಟ್ ಸಂಖ್ಯೆ ಕಡಿಮೆ ಆಯಿತು. ಈ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳ ಸಂಖ್ಯೆ 33ಕ್ಕೆ ಏರಿವೆ. ಆದರೆ, ಇಷ್ಟೆಲ್ಲಾ ಸಾಧಿಸಿದರೂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಬಡತನ ಹಾಗೂ ನಿರುದ್ಯೋಗ ಸಮಸ್ಯೆಗಳಿಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಸಂಪೂರ್ಣವಾಗಿ ಯಶಸ್ಸು ಸಿಗಲಿಲ್ಲ ಎಂಬುದು ವಾಸ್ತವ. ರಾಜ್ಯಕ್ಕೆ ಬಂಡವಾಳ ಹರಿಸಲು ಅವರು ಪ್ರಯತ್ನಿಸಿದರಾದರೂ ಇಲ್ಲಿ ಒಂದು ಔದ್ಯಮಿಕ ಸೌಕರ್ಯ ಕಲ್ಪಿಸಲು ಅವರು ವಿಫಲರಾದರು. ಇದರಿಂದಾಗಿ ನಿರುದ್ಯೋಗ ಸಮಸ್ಯೆ ಬಿಹಾರವನ್ನು ಕಾಡುತ್ತಿದೆ.
ಇದೇ ಬಡತನ ಮತ್ತು ನಿರುದ್ಯೋಗ ಸಮಸ್ಯೆ ಇಟ್ಟುಕೊಂಡು ಆರ್ಜೆಡಿ, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ ಚುನಾವಣೆಯನ್ನು ಎದುರಿಸಿ ನಿತೀಶ್ ಅವರನ್ನು ಸೋಲಿಸಲು ಮುಂದಾಗಿವೆ. ಆದರೂ ಬಿಹಾರಿ ಜನರು ನಿತೀಶ್ ಕುಮಾರ್ ಅವರಿಗೆ ಇನ್ನೊಂದು ಅವಕಾಶ ನೀಡುವ ಮನಸು ಮಾಡಿರುವಂತಿದೆ.
ಮಾಹಿತಿ ನೆರವು: ರಾಜೀವ್ ಕುಮಾರ್, CNN-News18
2005ರಲ್ಲಿ ಆರ್ಜೆಡಿಯ ರಾಬ್ರಿ ದೇವಿ ಸರ್ಕಾರ ಅಂತ್ಯಗೊಂಡಾಗ ಬಿಹಾರ ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳಷ್ಟು ಶೋಚನೀಯವಾಗಿತ್ತು. ರಾಷ್ಟ್ರೀಯವಾಗಿ ಆರ್ಥಿಕ ಬೆಳವಣಿಗೆ ಶೇ. 7ಕ್ಕಿಂತ ಹೆಚ್ಚಿದ್ದರೂ ಬಿಹಾರ ಮಾತ್ರ ಕುಂಟುತ್ತಾ ಸಾಗಿತ್ತು. 2005ರ ಚುನಾವಣೆಯ ವೇಳೆ ನಿತೀಶ್ ಕುಮಾರ್ ಹೇಳಿದ ಈ ಮಾತುಗಳನ್ನ ಇಲ್ಲಿ ಉಲ್ಲೇಖಿಸಬಹುದು: “ಬಿಹಾರಕ್ಕೆ ಹಿನ್ನಡೆಯಾಗಿರುವುದು ಕೆಟ್ಟ ಆಡಳಿತದಿಂದಲ್ಲ, ಆಡಳಿತವೇ ಇಲ್ಲದಿರುವುದು ಕಾರಣ”.