Bihar Politics: ಎನ್​ಡಿಎ ಮೈತ್ರಿಕೂಟಕ್ಕೆ ಟಾಟಾ, ಆರ್​ಜೆಡಿ ಜೊತೆ ದೋಸ್ತಿ? ಬಿಹಾರ ಸಿಎಂ ನಿತೀಶ್ ಕುಮಾರ್ ನಡೆಯೇನು?

Bihar CM Nitish Kumar: ನಿತೀಶ್ ಕುಮಾರ್ ಕರೆದ ಸಭೆಗೂ ಮುನ್ನ ಜೆಡಿ(ಯು) ಶಾಸಕ ವಿನಯ್ ಚೌಧರಿ ಮಾತನಾಡಿ, ಬಿಜೆಪಿ ನಿತೀಶ್ ಕುಮಾರ್‌ಗೆ ಕಿರುಕುಳ ನೀಡಿದೆ ಎಂದು ಆರೋಪ ಮಾಡಿದ್ದಾರೆ.

ನಿತೀಶ್​ ಕುಮಾರ್​​

ನಿತೀಶ್​ ಕುಮಾರ್​​

  • Share this:
    ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತೆ ಬಿಜೆಪಿ ಜೊತೆ ಮುನಿಸಿಕೊಂಡಿದ್ದಾರೆ. ಜೆಡಿಯು ಎನ್​ಡಿಎ ಮೈತ್ರಿಕೂಟದಿಂದ(NDA Alliance) ಹೊರಬೀಳಲಿದೆಯೇ ಎಂಬ ಅನುಮಾನ ದಟ್ಟವಾಗಿದೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿನ ಬಿಕ್ಕಟ್ಟಿನ ಮಧ್ಯೆ, ಮುಖ್ಯಮಂತ್ರಿ ನಿತೀಶ್ ಕುಮಾರ್ (CM Nitish Kumar) ಮಂಗಳವಾರ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಜೆಡಿಯು ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳು ಭಾಗವಹಿಸಲಿದ್ದು ಜೆಡಿಯು ಪಕ್ಷದ (JDU) ಮುಂದಿನ ನಡೆಯ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ನಿತೀಶ್ ಕುಮಾರ್ ಕರೆದ ಸಭೆಗೂ ಮುನ್ನ ಜೆಡಿ(ಯು) ಶಾಸಕ ವಿನಯ್ ಚೌಧರಿ ಮಾತನಾಡಿ, ಬಿಜೆಪಿ ನಿತೀಶ್ ಕುಮಾರ್‌ಗೆ ಕಿರುಕುಳ ನೀಡಿದೆ ಎಂದು ಆರೋಪ ಮಾಡಿದ್ದಾರೆ.

    ಜೆಡಿಯು ಪಕ್ಷವನ್ನು ದುರ್ಬಲಗೊಳಿಸುವ ಸಂಚು ನಡೆದಿದೆ ಎಂದು ಸಹ ಅವರು ಆರೋಪ ಮಾಡಿದ್ದಾರೆ. ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸುವ ಅಗತ್ಯವಿದ್ದಲ್ಲಿ ತಮ್ಮ ಪಕ್ಷ ಅದಕ್ಕೂ ಸಿದ್ಧವಿದೆ ''ಜೆಡಿಯು ದುರ್ಬಲಗೊಳಿಸುವ ಷಡ್ಯಂತ್ರ ನಡೆದಿದ್ದು, ಅದು ಪಕ್ಷಕ್ಕೆ ಒಪ್ಪಿಗೆಯಾಗುವುದಿಲ್ಲ. ನಿತೀಶ್ ಕುಮಾರ್ ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವೆಲ್ಲರೂ ಅವರ ಜೊತೆಗಿದ್ದೇವೆ. ಆರ್‌ಜೆಡಿಯೊಂದಿಗೆ ಸರ್ಕಾರ ರಚಿಸುವ ಅಗತ್ಯವಿದ್ದಲ್ಲಿ ಈ ನಿರ್ಧಾರದಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಿತೀಶ್ ಕುಮಾರ್ ಸಿಎಂ ಆಗಿಯೇ ಇರುತ್ತಾರೆ ಎಂದು ಚೌಧರಿ ಹೇಳಿದ್ದಾರೆ.

    ಆರ್​ಜೆಡಿಯಿಂದಲೂ ಸಭೆ
    ಇತ್ತ ಜೆಡಿಯು ಸಭೆ ನಡೆಸುವ ನಿರ್ಧಾರ ಕೈಗೊಂಡಂತೆ ಆರ್​ಜೆಡಿ ಸಹ ತಮ್ಮ ಶಾಸಕರು ಸೇರಿದಂತೆ ಪದಾಧಿಕಾರಿಗಳ ಮಹತ್ವದ ಸಭೆ ಕರೆದಿದೆ.

    ಚಿರಾಗ್ ಪಾಸ್ವಾನ್ ವಾಗ್ದಾಳಿ
    ಈ ಎಲ್ಲ ಬೆಳವಣಿಗೆಗೆ ಬೆನ್ನಲ್ಲೇ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮಾಜಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸೋಮವಾರ ಜೆಡಿಯು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸುವುದರ ಬದಲು ನೇರವಾಗಿ ಬಿಜೆಪಿಯನ್ನು ಎದುರಿಸಲು ಧೈರ್ಯ ಮಾಡಿ ಎಂದು ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಸ್ವಾನ್, ಮುಖ್ಯಮಂತ್ರಿ ನಿತೀಶ್ ಕುಮಾರ್ ನನಗಿಂತ ತಮ್ಮದೇ ಆಪ್ತರಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಪಾಸ್ವಾನ್ ಟೀಕಿಸಿದ್ದಾರೆ.

    ಇದನ್ನೂ ಓದಿ: AzaadiSAT: ಬಾಹ್ಯಾಕಾಶದಲ್ಲಿಯೂ ಹಾರಲಿದೆ ರಾಷ್ಟ್ರಧ್ವಜ; ಇದು ಗ್ರಾಮೀಣ ವಿದ್ಯಾರ್ಥಿನಿಯರ ಸಾಧನೆ

    ಸಿಎಂ ನಿತೀಶ್ ಕುಮಾರ್ ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಅವರನ್ನು ಅವಮಾನಿಸಿದ್ದಾರೆ. ಈ ಹಿಂದೆ ಶರದ್ ಯಾದವ್ ಮತ್ತು ಜಾರ್ಜ್ ಫರ್ನಾಂಡಿಸ್ ಅವರನ್ನು ಸಹ ಅವಮಾನಿಸಿದ್ದಾರೆ ಎಂದು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮಾಜಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.

    ಇದನ್ನೂ ಓದಿ: Partha Chatterjee: ಕಂಬಳಿ ಮೇಲೆ ಮಲಗಿಕೊಂಡ ಪಾರ್ಥ ಚಟರ್ಜಿ! ಜೈಲಿನಲ್ಲಿ ಮೊದಲ ದಿನ ಹೇಗಿತ್ತು?

    ಗೃಹ ಸಚಿವ ಅಮಿತ್ ಶಾರಿಂದ ನಿತೀಶ್ ಕುಮಾರ್ ಫೋನ್ ಕಾಲ್?
    ಬಿಜೆಪಿಯೊಂದಿಗಿನ ತನ್ನ ಪಕ್ಷದ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಜೆಡಿಯು ಮೈತ್ರಿಯನ್ನು ಮರುಪರಿಶೀಲಿಸುತ್ತಿದೆ ಎಂಬ ಊಹಾಪೋಹಗಳ ಸಹ ವರದಿಯಾಗಿವೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಬಿಜೆಪಿ ಮೂಲಗಳು ಮಾತ್ರ ಗೃಹ ಸಚಿವ ಅಮಿತ್ ಶಾ ಅಂತಹ ಯಾವುದೇ ಫೋನ್ ಕರೆ ಮಾಡಿಲ್ಲ ಎಂದು ಈ ವರದಿಗಳನ್ನು ನಿರಾಕರಿಸಿವೆ.
    Published by:guruganesh bhat
    First published: