Bihar Politics: ಬಿಜೆಪಿ ಫ್ರೆಂಡ್​ಶಿಪ್​ಗೆ ಟಾಟಾ; ಮತ್ತೆ ಮಹಾಘಟಬಂಧನ ರಚನೆಗೆ ನಿತೀಶ್ ಕುಮಾರ್ ಒಲವು?

ಇಂದು ಸಂಜೆ ತೇಜಸ್ವಿ ಯಾದವ್ ಅವರೊಂದಿಗೆ ಸಿಎಂ ನಿತೀಶ್ ಕುಮಾರ್ ಬಿಹಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ (ಸಂಗ್ರಹ ಚಿತ್ರ)

ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ (ಸಂಗ್ರಹ ಚಿತ್ರ)

 • Share this:
  ಬಿಹಾರ ಸಿಎಂ ನಿತೀಶ್ ಕುಮಾರ್ ಬಿಜೆಪಿ ಜೊತೆಗಿನ ಫ್ರೆಂಡ್​ಶಿಪ್​ಗೆ ಮಂಗಳ ಹಾಡಲು ಅಂತಿಮ ನಿರ್ಧಾರ (Bihar Politics Upates) ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.  ಈಮೂಲಕ ನಿತೀಶ್ ಕುಮಾರ್ ಬಿಹಾರದಲ್ಲಿ ಬಿಜೆಪಿ ಜೊತೆಗಿನ (JDU BJP Alliance) ಮೈತ್ರಿಯನ್ನು 2ನೇ ಬಾರಿಗೆ ಕೊನೆಗೊಳಿಸಿದ್ದಾರೆ. ಅಲ್ಲದೇ ಇಂದು ಸಂಜೆ ತೇಜಸ್ವಿ ಯಾದವ್ (Tejaswi Yadav) ಅವರೊಂದಿಗೆ ಸಿಎಂ ನಿತೀಶ್ ಕುಮಾರ್ (Bihar CM Nitish Kumar) ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತ ಆರ್​ಜೆಡಿ ಪಕ್ಷದ ತೇಜಸ್ವಿ ಯಾದವ್ ಸಹ ಜೆಡಿಯು ಜೊತೆ ಎಲ್ಲ ರೀತೀಯ ಸಹಕಾರಕ್ಕೂ ಸಿದ್ಧ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ತೇಜಸ್ವಿ ಯಾದವ್ ತಮ್ಮ ಬೆಂಬಲದ ಕುರಿತು ಅಧಿಕೃತ ಪತ್ರವನ್ನು ಸಹ ಹಸ್ತಾಂತರಿಸಿದ್ದಾರೆ.

  ಇತ್ತ ಬಿಜೆಪಿಯ ಎಲ್ಲ 16 ಸಚಿವರು ಸಹ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಸಹ ಹೇಳಲಾಗಿದೆ. ಆದರೆ, "ನಾವೇಕೆ ರಾಜೀನಾಮೆ ಕೊಡಬೇಕು? ಸಿಎಂ ನಿತೀಶ್ ಕುಮಾರ್ ಅವರೇ  ಮುಂದಿನ ನಡೆ ಇರಲಿ" ಎಂದು ಸಹ ಬಿಜೆಪಿ ಸಚಿವರೋರ್ವರು ತಿಳಿಸಿದ್ದಾಗಿ ವರದಿಯಾಗಿದೆ.

  ಬಿಜೆಪಿ ಮೇಲೆ ಆರೋಪ ಮಾಡಿದ ಜೆಡಿಯು
  ಜೆಡಿಯು ಪಕ್ಷವನ್ನು ದುರ್ಬಲಗೊಳಿಸುವ ಸಂಚು ನಡೆದಿದೆ ಎಂದು ಸಹ ಅವರು ಆರೋಪ ಮಾಡಿದ್ದಾರೆ. ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸುವ ಅಗತ್ಯವಿದ್ದಲ್ಲಿ ತಮ್ಮ ಪಕ್ಷ ಅದಕ್ಕೂ ಸಿದ್ಧವಿದೆ ''ಜೆಡಿಯು ದುರ್ಬಲಗೊಳಿಸುವ ಷಡ್ಯಂತ್ರ ನಡೆದಿದ್ದು, ಅದು ಪಕ್ಷಕ್ಕೆ ಒಪ್ಪಿಗೆಯಾಗುವುದಿಲ್ಲ. ನಿತೀಶ್ ಕುಮಾರ್ ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವೆಲ್ಲರೂ ಅವರ ಜೊತೆಗಿದ್ದೇವೆ ಎಂದು ನಿತೀಶ್ ಕುಮಾರ್ ಕರೆದ ಸಭೆಗೂ ಮುನ್ನ ಜೆಡಿ(ಯು) ಶಾಸಕ ವಿನಯ್ ಚೌಧರಿ ಆರೋ ಮಾಡಿದ್ದಾರೆ.  ಅಲ್ಲದೇ ಬಿಜೆಪಿ ನಿತೀಶ್ ಕುಮಾರ್‌ಗೆ ಕಿರುಕುಳ ನೀಡಿದೆ ಎಂದು ಸಹ ಅವರು ಆರೋಪ ಮಾಡಿದ್ದಾರೆ.

  ಇದನ್ನೂ ಓದಿ: Donald Trump: ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್! ಅಮೆರಿಕಾ ಮಾಜಿ ಅಧ್ಯಕ್ಷರ ಮನೆ ಮೇಲೆ ಎಫ್‌ಬಿಐ ಅಧಿಕಾರಿಗಳ ದಾಳಿ

  ನಾವು ನಿತೀಶ್ ಕುಮಾರ್ ಜೊತೆಯೇ ಇರುತ್ತೇವೆ
  ಆರ್‌ಜೆಡಿಯೊಂದಿಗೆ ಸರ್ಕಾರ ರಚಿಸುವ ಅಗತ್ಯವಿದ್ದಲ್ಲಿ ಈ ನಿರ್ಧಾರದಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಿತೀಶ್ ಕುಮಾರ್ ಸಿಎಂ ಆಗಿಯೇ ಇರುತ್ತಾರೆ ಎಂದು ಚೌಧರಿ ಹೇಳಿದ್ದಾರೆ.

  ಆರ್​ಜೆಡಿಯಿಂದಲೂ ಸಭೆ
  ಇತ್ತ ಜೆಡಿಯು ಸಭೆ ನಡೆಸುವ ನಿರ್ಧಾರ ಕೈಗೊಂಡಂತೆ ಆರ್​ಜೆಡಿ ಸಹ ತಮ್ಮ ಶಾಸಕರು ಸೇರಿದಂತೆ ಪದಾಧಿಕಾರಿಗಳ ಮಹತ್ವದ ಸಭೆ ಕರೆದಿದೆ.

  ಇದನ್ನೂ ಓದಿ: Bihar Politics: ಎನ್​ಡಿಎ ಮೈತ್ರಿಕೂಟಕ್ಕೆ ಟಾಟಾ, ಆರ್​ಜೆಡಿ ಜೊತೆ ದೋಸ್ತಿ? ಬಿಹಾರ ಸಿಎಂ ನಿತೀಶ್ ಕುಮಾರ್ ನಡೆಯೇನು?

  ಚಿರಾಗ್ ಪಾಸ್ವಾನ್ ವಾಗ್ದಾಳಿ
  ಈ ಎಲ್ಲ ಬೆಳವಣಿಗೆಗೆ ಬೆನ್ನಲ್ಲೇ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮಾಜಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸೋಮವಾರ ಜೆಡಿಯು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸುವುದರ ಬದಲು ನೇರವಾಗಿ ಬಿಜೆಪಿಯನ್ನು ಎದುರಿಸಲು ಧೈರ್ಯ ಮಾಡಿ ಎಂದು ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಸ್ವಾನ್, ಮುಖ್ಯಮಂತ್ರಿ ನಿತೀಶ್ ಕುಮಾರ್ ನನಗಿಂತ ತಮ್ಮದೇ ಆಪ್ತರಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಪಾಸ್ವಾನ್ ಟೀಕಿಸಿದ್ದಾರೆ.

  ಒಟ್ಟಿನಲ್ಲಿ ಇಂದು ಸಂಜೆಯ ಒಳಗೆ ಬಿಹಾರದ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಹತ್ವದ ಅಪ್​ಡೇಟ್ ತಿಳಿಯಲಿದೆ.
  Published by:guruganesh bhat
  First published: