Bihar Politics: ಸರ್ಕಾರ ರಚನೆಗೂ ಮುನ್ನ ರಾಬ್ರಿ ದೇವಿ ನಿವಾಸದಲ್ಲಿ ನಡೆದಿತ್ತು ಈ ಹೈಡ್ರಾಮಾ!

ಜೆಡಿಯು ನಾಯಕ ನಿತೀಶ್ ಕುಮಾರ್ 8ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾದರು. ಸರ್ಕಾರ ರಚನೆಯಾದ ನಂತರ ತೇಜಸ್ವಿ ಅವರು ಸೋನಿಯಾ ಗಾಂಧಿ, ಸೀತಾರಾಂ ಯೆಚೂರಿ ಮತ್ತು ಡಿ ರಾಜಾ ಅವರನ್ನು ಭೇಟಿಯಾದರು.

ರಾಬ್ರಿ ದೇವಿ

ರಾಬ್ರಿ ದೇವಿ

  • Share this:
ಪಾಟ್ನಾ(ಆ.13): ಬಿಹಾರದಲ್ಲಿ (Bihar) ಮಹಾಮೈತ್ರಿಕೂಟ ಸರ್ಕಾರ ರಚನೆಯಾಗಿದೆ, ಆದರೆ ಈ ಸರ್ಕಾರ ರಚನೆಯ ಮೊದಲು, ಆರ್‌ಜೆಡಿ (RJD)ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ, ಆದ್ದರಿಂದ ಆಗಸ್ಟ್ 9 ರಂದು ಬೆಳಿಗ್ಗೆ ಮಹಾಘಟಬಂಧನ್‌ನ ಎಲ್ಲಾ ಶಾಸಕರನ್ನು ರಾಬ್ರಿ ನಿವಾಸಕ್ಕೆ (Rabri Devi Residence) ಕರೆಸಿದಾಗ, ಅಲ್ಲಿನ ಸಭೆಯ ಉದ್ದೇಶವೇನು ಎಂದು ತಿಳಿಸಿರಲಿಲ್ಲ. ಎಲ್ಲರಿಗೂ ಆಗಸ್ಟ್ 7 ರಂದು ಬರಲು ತಿಳಿಸಲಾಗಿತ್ತು.

ಆರ್‌ಜೆಡಿ ಶಾಸಕ ಇಸ್ರೇಲ್ ಮನ್ಸೂರಿ ಪ್ರಕಾರ, ಶಾಸಕರು ರಾಬ್ರಿ ನಿವಾಸಕ್ಕೆ ಬಂದಾಗ, ಎಲ್ಲರಿಗೂ ಮೊಬೈಲ್ ಫೋನ್ ಅನ್ನು ವಾಹನದಲ್ಲಿಯೇ ಬಿಡಲು ಸೂಚಿಸಲಾಯಿತು. ಇದರ ನಂತರ, ಅವರು ಒಳಗೆ ತಲುಪಿದಾಗ, ಮೊದಲು ಬೆಂಬಲ ಪತ್ರಕ್ಕೆ ಮೊದಲು ಸಹಿ ಹಾಕಿಸಲಾಯಿತು.

ಇದನ್ನೂ ಓದಿ:  Bihar Politics: 8ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್ ಕುಮಾರ್; ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ

ಮಾಹಿತಿಯ ಪ್ರಕಾರ, ಆಗಸ್ಟ್ 9 ರಂದು ಎಲ್ಲಾ ಶಾಸಕರು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ರಾಬ್ರಿ ನಿವಾಸದಲ್ಲಿದ್ದರು. ಈ ಸಭೆಯಲ್ಲಿ ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಮಹಾಮೈತ್ರಿಕೂಟದ ಶಾಸಕರು ಭಾಗಿಯಾಗಿದ್ದರು. ನಿತೀಶ್ ಕುಮಾರ್ ನಾಲ್ಕು ಗಂಟೆಗೆ ರಾಜ್ಯಪಾಲ ಫಗು ಚೌಹಾಣ್ ಅವರಿಗೆ ರಾಜೀನಾಮೆ ನೀಡಿದ ನಂತರ ರಾಬ್ರಿ ದೇವಿ ಅವರ ನಿವಾಸಕ್ಕೆ ಬಂದಾಗ, ತೇಜಸ್ವಿ ಅವರೊಂದಿಗೆ ಎಲ್ಲಾ ಶಾಸಕರು ಅಲ್ಲಿ ಹಾಜರಿದ್ದರು.

Nitish Kumar takes oath as Bihar cm for 8th time Tejashwi yadav as deputy CM
ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್


ಆದರೆ 2025ರಲ್ಲಿ ನಿತೀಶ್ ಸಿಎಂ ಆಗಲು ಸಾಧ್ಯವಿಲ್ಲ: ರಾಮ್ ಸೂರತ್ ರಾಯ್

ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆಗೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಾಮ್ ಸೂರತ್ ರಾಯ್ ತಿರುಗೇಟು ನೀಡಿದ್ದಾರೆ. 2024ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಆದರೆ 2025ರಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ. 8ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರೂ ಒಂಬತ್ತನೇ ಬಾರಿಗೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಲ್ಲ ಎಂದಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಹೆಸರಿಸದೆ - '14 ರಲ್ಲಿ ಬಂದವರು, ಅವರು 24 ರವರೆಗೆ ಮುಂದೆ ಇರಬಹುದೇ ಅಥವಾ ಇಲ್ಲವೇ...' ಎಂದಿದ್ದರು. ಅವರ ಹೇಳಿಕೆಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತಿದೆ.

ಇದನ್ನೂ ಓದಿ:  Bihar Politics: ನಿತೀಶ್ ಕುಮಾರ್ 2024ರಲ್ಲಿ ಪ್ರಧಾನಿ ಅಭ್ಯರ್ಥಿ ಆಗುವರೇ? ಪ್ರಶಾಂತ್ ಕಿಶೋರ್ ಹೀಗಂದ್ರು

ನನ್ನ ನಿರ್ಮೂಲನೆಗೆ ಬಿಜೆಪಿ ಷಡ್ಯಂತ್ರ ಮಾಡಿದೆ

ರಾಜೀನಾಮೆ ನೀಡಿದ ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್ ಕುಮಾರ್, ಬಿಜೆಪಿ ನಮ್ಮನ್ನು ನಿರ್ಮೂಲನೆ ಮಾಡಲು ಸಂಚು ಮಾಡಿದೆ ಎಂದು ಹೇಳಿದ್ದರು. ಬಿಜೆಪಿ ಯಾವಾಗಲೂ ಅವಮಾನ ಮಾಡಿದೆ. ಬಿಜೆಪಿಯಿಂದ ಬೇರ್ಪಡಬೇಕು ಎಂಬುದು ಎಲ್ಲರ ಆಶಯವಾಗಿತ್ತು ಎ.ದಿದ್ದರು. ಶಾಸಕರು ಮತ್ತು ಸಂಸದರ ಒಪ್ಪಿಗೆ ನಂತರ ಮೈತ್ರಿ ಮುರಿಯಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Bihar Politics Updates CM Nitish Kumar called crucial meeting for JDU with NDA alliance
ನಿತೀಶ್​ ಕುಮಾರ್​​


ಆಗಸ್ಟ್ 24ರಂದು ನಿತೀಶ್ ಬಹುಮತ ಸಾಬೀತುಪಡಿಸಲಿದ್ದಾರೆ

ಆಗಸ್ಟ್ 10 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಸಂಪುಟದ ಮೊದಲ ಸಭೆ ನಡೆಯಿತು. ಇದರಲ್ಲಿ ಆ.24ರಂದು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯಪಾಲರ ಒಪ್ಪಿಗೆ ದೊರೆತ ಬಳಿಕ ಆ.24ರಂದು ವಿಶೇಷ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ನಿತೀಶ್ ಕುಮಾರ್ ಅವರು ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಲಿದ್ದಾರೆ.
Published by:Precilla Olivia Dias
First published: