Bihar Politics: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜಿನಾಮೆ; ಬಿಹಾರದ ಮುಂದಿನ ಸಿಎಂ ಯಾರು?

ಎಂಟು ವರ್ಷಗಳಲ್ಲಿ ಮಿತ್ರ ಪಕ್ಷವಾದ ಬಿಜೆಪಿಯೊಂದಿಗೆ ನಿತೀಶ್ ಕುಮಾರ್ ಅವರು ಎರಡನೇ ಬಾರಿಗೆ ಬೇರ್ಪಟ್ಟಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್

ಬಿಹಾರ ಸಿಎಂ ನಿತೀಶ್ ಕುಮಾರ್

 • Share this:
  ಪಾಟ್ನಾ: ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮಂಗಳವಾರ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 160 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ನಿತೀಶ್ ಕುಮಾರ್ (Nitish Kumar) ಸಲ್ಲಿಸಿದ್ದಾರೆ. ಎಂಟು ವರ್ಷಗಳಲ್ಲಿ ಮಿತ್ರ ಪಕ್ಷವಾದ ಬಿಜೆಪಿಯೊಂದಿಗೆ (BJP) ಕುಮಾರ್ ಅವರು ಎರಡನೇ ಬಾರಿಗೆ ಬೇರ್ಪಟ್ಟಿದ್ದಾರೆ. ಜೆಡಿಯು ಪಕ್ಷದ ಎಲ್ಲಾ ಸಂಸದರು ಮತ್ತು ಶಾಸಕರು ಎನ್​ಡಿಎ ಮೈತ್ರಿಕೂಟ ತೊರೆಯಲು ಒಮ್ಮತದ ನಿರ್ಧಾರ ಕೈಗೊಂಡಿದೆ. ಜೆಡಿಯು ಶಾಸಕರ ಜೊತೆ ಸಭೆ ನಡೆಸಿಯೇ ಅವರು ಈ ನಿರ್ಧಾರ ಕೈಗೊಂಡಿದ್ದು, ಪಕ್ಷದ ಎಲ್ಲ ಶಾಸಕರು, ಪದಾಧಿಕಾರಿಗಳು ನಿತೀಶ್ ಕುಮಾರ್ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ. 

  ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಈಗಾಗಲೇ ನಿತೀಶ್ ಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಜೆ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಇಬ್ಬರೂ ಬಿಹಾರ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

  ನಿತೀಶ್ ಕುಮಾರ್ ಅವರೇ ಮತ್ತೆ ಸಿಎಂ ಆಗ್ತಾರಾ?
  ಆರ್​ಜೆಡಿ, ಜೆಡಿಯು ಮೈತ್ರಿಕೂಟಕ್ಕೆ ಕಾಂಗ್ರೆಸ್ ಸಹ ಸೇರಿಕೊಳ್ಳುವ ಸಾಧ್ಯತೆ ಇದೆ. ಈ ಪಕ್ಷಗಳ ಮೈತ್ರಿಕೂಟ ಮತ್ತೆ ಮಹಾ ಘಟಬಂಧನ ಆಗುವುದೇ ಎಂದು ಕಾದುನೋಡಬೇಕಿದೆ.  ಅಲ್ಲದೇ ಹೊಸ ಮೈತ್ರಿಕೂಟ ಸರ್ಕಾರ ರಚಿಸಿ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸುವ ಸಾಧ್ಯತೆಯಿದೆ.

  ಬಿಜೆಪಿ ಸಚಿವರು ಏನ್ಮಾಡ್ತಿದ್ದಾರೆ?
  ಇತ್ತ ಬಿಜೆಪಿಯ ಎಲ್ಲ 16 ಸಚಿವರು ಸಹ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಸಹ ಹೇಳಲಾಗಿದೆ. ಆದರೆ, "ನಾವೇಕೆ ರಾಜೀನಾಮೆ ಕೊಡಬೇಕು? ಸಿಎಂ ನಿತೀಶ್ ಕುಮಾರ್ ಅವರೇ ಮುಂದಿನ ನಡೆ ಇರಲಿ" ಎಂದು ಸಹ ಬಿಜೆಪಿ ಸಚಿವರೋರ್ವರು ತಿಳಿಸಿದ್ದಾಗಿ ವರದಿಯಾಗಿದೆ.

  ಇದನ್ನೂ ಓದಿ: Donald Trump: ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್! ಅಮೆರಿಕಾ ಮಾಜಿ ಅಧ್ಯಕ್ಷರ ಮನೆ ಮೇಲೆ ಎಫ್‌ಬಿಐ ಅಧಿಕಾರಿಗಳ ದಾಳಿ

  ಬಿಜೆಪಿ ಮೇಲೆ ಆರೋಪ ಮಾಡಿದ ಜೆಡಿಯು
  ಜೆಡಿಯು ಪಕ್ಷವನ್ನು ದುರ್ಬಲಗೊಳಿಸುವ ಸಂಚು ನಡೆದಿದೆ ಎಂದು ಸಹ ಅವರು ಆರೋಪ ಮಾಡಿದ್ದಾರೆ. ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸುವ ಅಗತ್ಯವಿದ್ದಲ್ಲಿ ತಮ್ಮ ಪಕ್ಷ ಅದಕ್ಕೂ ಸಿದ್ಧವಿದೆ ''ಜೆಡಿಯು ದುರ್ಬಲಗೊಳಿಸುವ ಷಡ್ಯಂತ್ರ ನಡೆದಿದ್ದು, ಅದು ಪಕ್ಷಕ್ಕೆ ಒಪ್ಪಿಗೆಯಾಗುವುದಿಲ್ಲ. ನಿತೀಶ್ ಕುಮಾರ್ ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವೆಲ್ಲರೂ ಅವರ ಜೊತೆಗಿದ್ದೇವೆ ಎಂದು ನಿತೀಶ್ ಕುಮಾರ್ ಕರೆದ ಸಭೆಗೂ ಮುನ್ನ ಜೆಡಿ(ಯು) ಶಾಸಕ ವಿನಯ್ ಚೌಧರಿ ಆರೋ ಮಾಡಿದ್ದಾರೆ. ಅಲ್ಲದೇ ಬಿಜೆಪಿ ನಿತೀಶ್ ಕುಮಾರ್‌ಗೆ ಕಿರುಕುಳ ನೀಡಿದೆ ಎಂದು ಸಹ ಅವರು ಆರೋಪ ಮಾಡಿದ್ದಾರೆ.

  ಇದನ್ನೂ ಓದಿ: Under Water Metro: ನೀರೊಳಗೂ ಓಡಲಿದೆ ಮೆಟ್ರೋ! ನೀವೂ ಪ್ರಯಾಣಿಸಿ, ಆನಂದಿಸಿ!

  ಬಿಹಾರದಿಂದ ಬಿಜೆಪಿಯ ಹಿರಿಯ ನಾಯಕರು ಪಾಟ್ನಾದತ್ತ ಮುಖ ಮಾಡುತ್ತಿದ್ದಾರೆ. ಅವರಲ್ಲಿ ಸುಶೀಲ್ ಕುಮಾರ್ ಮೋದಿ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಜೊತೆಗೂಡಿ ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
  Published by:guruganesh bhat
  First published: