Bihar Politics: ನಿತೀಶ್ ಕುಮಾರ್ 2024ರಲ್ಲಿ ಪ್ರಧಾನಿ ಅಭ್ಯರ್ಥಿ ಆಗುವರೇ? ಪ್ರಶಾಂತ್ ಕಿಶೋರ್ ಹೀಗಂದ್ರು

ಈ ಸರ್ಕಾರ ಉತ್ತಮವಾಗಿ ಕೆಲಸ ಮಾಡದಿದ್ದರೆ ಮಾತ್ರ ಅವರಿಗೇ ಈ ಸರ್ಕಾರ ಮುಳುವಾಗಲಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅಭಿಪ್ರಾಯ ಪಟ್ಟಿದ್ದಾರೆ.

ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್

ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್

  • Share this:
    ಬಿಹಾರ ರಾಜಕೀಯದಲ್ಲಿ ಸುಂಟರಗಾಳಿ ಬೀಸಿದೆ. ಎರಡನೇ ಬಾರಿಗೆ ಬಿಜೆಪಿ ಜೊತೆಗಿನ ಗೆಳೆತನಕ್ಕೆ ಗುಡ್ ಬೈ ಹೇಳಿದ್ದಾರೆ ನಿತೀಶ್ ಕುಮಾರ್. ಇದೀಗ ಆರ್​​ಜೆಡಿ ಜೊತೆಗೆ ಸರ್ಕಾರ ರಚಿಸಲು (JDU RJD Alliance) ಮುಂದಾಗಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿಯಿಂದ ಹೊರಬಂದು ಆರ್​ಜೆಡಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar)  ಮುಂದಾಗಿರುವುದು 2024ರಲ್ಲಿ ಮಹಾಘಟಬಂಧನ ಅಥವಾ ಮಹಾ ಮೈತ್ರಿಕೂಟದ (Mahagathbandhan) ರಚನೆಯ ಕುರಿತು ಸಾಧ್ಯತೆ ತೆರೆದಿಟ್ಟಿದೆ. 2024ರಲ್ಲಿ ನಿತೀಶ್ ಕುಮಾರ್ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ (PM Candidate) ಹೊರಹೊಮ್ಮುವರೇ ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಈ ಕುರಿತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Prashant Kishor) ಕುತೂಹಲಕರ ಆಯಾಮವೊಂದನ್ನು ಹಂಚಿಕೊಂಡಿದ್ದಾರೆ. 

    ಈ ಕುರಿತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್  ಮಾತನಾಡಿ, ಮುಂದಿನ ಕೆಲವು ತಿಂಗಳುಗಳಲ್ಲಿ ಬಿಹಾರದಲ್ಲಿ ಮಹಾಮೈತ್ರಿಕೂಟ 2.0 ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು 2024 ರ ಸಾರ್ವತ್ರಿಕ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಅಸಾಧಾರಣ ಶಕ್ತಿಯಾಗಿ ಹೊರಹೊಮ್ಮಲಿದೆಯೇ ಮೈತ್ರಿ ಸರ್ಕಾರ?
    ಸದ್ಯ ರಚನೆಯಾಗಲಿರುವ ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟದ ಬಿಹಾರ ಸರ್ಕಾರ ಮುಂದಿನ  ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾದರೆ ಅದು ಅಸಾಧಾರಣ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್  ಅಭಿಪ್ರಾಯಪಟ್ಟಿದ್ದಾರೆ.

    ಚೆನ್ನಾಗಿ ಕೆಲಸ ಮಾಡದಿದ್ದರೆ ಏನಾಗಬಹುದು?
    ಆದರೆ ಈ ಸರ್ಕಾರ ಉತ್ತಮವಾಗಿ ಕೆಲಸ ಮಾಡದಿದ್ದರೆ ಮಾತ್ರ ಅವರಿಗೇ ಈ ಸರ್ಕಾರ ಮುಳುವಾಗಲಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅಭಿಪ್ರಾಯ ಪಟ್ಟಿದ್ದಾರೆ.

    ತೇಜಸ್ವಿ ಯಾದವ್ ಮಹತ್ವದ ಪಾತ್ರ
    ಬಿಹಾರದಲ್ಲಿ ಹೊಸ ಸರ್ಕಾರ ರಚನೆಯನ್ನು ನಡೆಸುವಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ದೊಡ್ಡ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ತೇಜಸ್ವಿ ಯಾದವ್ ಬಿಹಾರದ ಏಕೈಕ ದೊಡ್ಡ ಪಕ್ಷದ ನಾಯಕರಾಗಿದ್ದಾರೆ.  ಬಹುಶಃ ಅವರು ಈ ಹೊಸ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಹೊಸ ಸರ್ಕಾರದಲ್ಲಿ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಜನರು ನೋಡಬಹುದು" ಎಂದು ಅವರು ANI ಗೆ ತಿಳಿಸಿದ್ದಾರೆ.

    ಇದನ್ನೂ ಓದಿ: Viral Protest: ರಸ್ತೆಗುಂಡಿಯಲ್ಲೇ ಯೋಗ, ಸ್ನಾನ! ವೈರಲ್ ಆಯ್ತು ಪ್ರತಿಭಟನೆ

    ಆಗಸ್ಟ್ 15ರ ನಂತರ ಸಚಿವ ಸಂಪುಟ ವಿಸ್ತರಣೆ
    ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರು ಕ್ರಮವಾಗಿ ಬಿಹಾರ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.  ಆಗಸ್ಟ್ 15 ರ ನಂತರ ಸಂಪುಟ ವಿಸ್ತರಣೆಯಾಗಬಹುದು ಎಂದು ಅಂದಾಜಿಸಲಾಗಿದೆ.  RJD ಮತ್ತು JD(U) ಇದೇ ಸೂತ್ರವನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಬಿಜೆಪಿ ಜತೆ ನಿತೀಶ್‌ ಕುಮಾರ್‌ ರಚಿಸಿದ ಸರ್ಕಾರದಂತೆಯೇ  ಸಚಿವ ಸಂಪುಟ ಹಂಚಿಕೆ. ಹಣಕಾಸು, ರಸ್ತೆ ನಿರ್ಮಾಣ, ಪಟ್ಟಣ ಯೋಜನೆ, ಕೃಷಿ ಮತ್ತು ಭೂ ಕಂದಾಯ ಖಾತೆಗಳು ತಮಗೆ ಸೇರಬೇಕೆಂದು ಆರ್‌ಜೆಡಿ ಒತ್ತಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: Bihar Politics: ಬಿಜೆಪಿಯಿಂದ ನಿತೀಶ್ ದೂರಾ ದೂರ, ವೈರಲ್ ಆಯ್ತು ಲಾಲೂ ಯಾದವ್ 5 ವರ್ಷ ಹಳೇ ಟ್ವೀಟ್​!

    ಲಾಲೂ ಪ್ರಸಾದ್ ಯಾದವ್​ಗೆ ಫೋನ್ ಕಾಲ್
    ಈ ಎಲ್ಲ ಬೆಳವಣಿಗೆಗೆ ನಡುವೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ದೂರವಾಣಿ ಕರೆ ಮೂಲಕ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ರಾಜ್ಯದ ಎಲ್ಲಾ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಮಹಾಘಟಬಂಧನ್‌ನಲ್ಲಿ ಪಾಲ್ಗೊಳ್ಳುವ ಅವರ ನಿರ್ಧಾರವನ್ನು ಶ್ಲಾಘಿಸಿದ ಲಾಲು ಪ್ರಸಾದ್ ಯಾದವ್ ನಿತೀಶ್ ಕುಮಾರ್ ಅವರನ್ನು  ಅಭಿನಂದಿಸಿದ್ದಾರೆ ಎಂದು ಸಹ ವರದಿಯಾಗಿದೆ. 
    Published by:guruganesh bhat
    First published: