Bihar Politics: ಬಿಹಾರದಲ್ಲಿಂದು ಸಚಿವ ಸಂಪುಟ ವಿಸ್ತರಣೆ, ನಿತೀಶ್-ತೇಜಸ್ವಿ ಸರ್ಕಾರಕ್ಕೆ RJD ಪ್ರಾಬಲ್ಯ!

ಇಂದು ಅಂದರೆ ಮಂಗಳವಾರ ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ನೂತನ ಸರ್ಕಾರದ ಸಂಪುಟ ವಿಸ್ತರಣೆ ನಡೆಯಲಿದೆ. ಸಚಿವ ಸಂಪುಟದಲ್ಲಿ ತೇಜಸ್ವಿ ಯಾದವ್ ಅವರ ಪಕ್ಷದ ಆರ್‌ಜೆಡಿ ಪ್ರಾಬಲ್ಯವನ್ನು ಕಾಣಬಹುದು. ಕಾಂಗ್ರೆಸ್ ಮತ್ತು ಜಿತನ್ ರಾಮ್ ಮಾಂಝಿ ಅವರ ಪಕ್ಷಕ್ಕೂ ಸಂಪುಟದಲ್ಲಿ ಸ್ಥಾನ ಸಿಗಲಿದೆ.

ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್

ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್

  • Share this:
ಪಾಟ್ನಾ(ಆ.16): ಬಿಹಾರದಲ್ಲಿ (Bihar) ಹೊಸ ಸರ್ಕಾರ ರಚನೆಯಾದ ನಂತರ ಮಂಗಳವಾರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ನಿತೀಶ್-ತೇಜಸ್ವಿ (Nitish-Tejashwi) ಸರ್ಕಾರದ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬ ಸಂಭಾವ್ಯ ಪಟ್ಟಿ ಸೋಮವಾರ ಬಹಿರಂಗವಾಗಿದೆ. ಬಿಹಾರ ಸರ್ಕಾರದಲ್ಲಿ (Bihar Govt) ಒಟ್ಟು 31 ಸಚಿವರು ಇರಲಿದ್ದಾರೆ. ಈ ಪಟ್ಟಿಯ ಪ್ರಕಾರ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರ ಸಹೋದರ ತೇಜ್ ಪ್ರತಾಪ್ ಯಾದವ್ (Tej Pratap Yadav) ಕೂಡ ಸಂಪುಟದಲ್ಲಿರಲಿದ್ದಾರೆ.

ಸಂಪುಟದಲ್ಲಿ ಸಿಗೋ ಪಾಲಿನ ಬಗ್ಗೆ ಹೇಳುವುದಾದರೆ ಆರ್‌ಜೆಡಿ 'ಅಣ್ಣ'ನ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಆ ಪಕ್ಷದ 15 ಸಚಿವರು ಸಂಪುಟದಲ್ಲಿ ಇರಬಹುದು. ಇದೇ ವೇಳೆ ಸಿಎಂ ನಿತೀಶ್ ಕುಮಾರ್ ಅವರ ಪಕ್ಷ ಜೆಡಿಯುನಿಂದ 10 ಶಾಸಕರನ್ನು ಸಚಿವರನ್ನಾಗಿ ಮಾಡಬಹುದು.

As Nitish Kumar Breaks Up With BJP Lalu yadav Old Tweet Goes Viral
ಲಾಲೂ ಯಾದವ್, ನಿತೀಶ್ ಕುಮಾರ್


ಬಿಹಾರದಲ್ಲಿ ಮಹಾಮೈತ್ರಿಕೂಟದ ಹೊಸ ಸರ್ಕಾರದಲ್ಲಿ ಒಟ್ಟು ಏಳು ಪಕ್ಷಗಳು ಭಾಗಿಯಾಗಿವೆ. ಜೆಡಿಯು ಹೊರತುಪಡಿಸಿ, ಆರ್‌ಜೆಡಿ, ಕಾಂಗ್ರೆಸ್ ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ) ಅನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು. ಸ್ವತಂತ್ರ ಶಾಸಕರಿಗೂ ಸಚಿವ ಸ್ಥಾನ ಸಿಗಬಹುದು.

ಇದನ್ನೂ ಓದಿ:  Bihar Politics: 8ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್ ಕುಮಾರ್; ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ

ನಿತೀಶ್ ಸರ್ಕಾರದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಬಹುದು

* ಜೆಡಿಯು

1. ಬಿಜೇಂದ್ರ ಯಾದವ್
2. ವಿಜಯ್ ಚೌಧರಿ
3. ಶ್ರವಣ್ ಕುಮಾರ್
4. ಅಶೋಕ್ ಚೌಧರಿ
5.ಮದನ್ ಸಾಹ್ನಿ
6. ದಾಮೋದರ್ ರೂಟ್
7. ಸಂಜಯ್ ಝಾ
8. ಜಮಾ ಖಾನ್
9. ಸುಮಿತ್ ಕುಮಾರ್ ಸಿಂಗ್
10. ಲೇಸಿ ಸಿಂಗ್

* ಆರ್​ಜೆಡಿ

1. ತೇಜ್ ಪ್ರತಾಪ್ ಯಾದವ್
2. ಸುರೇಂದ್ರ ಯಾದವ್
3. ಚಂದ್ರಶೇಖರ್
4. ಶಶಿಭೂಷಣ್ ಸಿಂಗ್
5. ಕಾರ್ತಿಕ್ ಸಿಂಗ್
6. ಕುಮಾರ್ ಸರಬ್ಜಿತ್
7. ಭೂದೇವ್ ಚೌಧರಿ
8. ಅಖ್ತರುಲ್ ಇಸ್ಲಾಂ ಶಾಹೀನ್
9. ಶಾನವಾಜ್
10. ಸಮೀರ್ ಮಹಾಸೇತ್
11. ಅನಿತಾ ದೇವಿ
12. ಅಲೋಕ್ ಮೆಹ್ತಾ
13. ರಾಹುಲ್ ತಿವಾರಿ
14. ಸುಧಾಕರ್ ಸಿಂಗ್
15. ಅನಿಲ್ ಸಾಹ್ನಿ

* ಕಾಂಗ್ರೆಸ್

1. ಶಕೀಲ್ ಅಹಮದ್
2. ರಾಜೇಶ್ ಕುಮಾರ್

ಕಾಂಗ್ರೆಸ್ ಕೋಟಾದಿಂದ ಅಫಾಕ್ ಆಲಂ ಮತ್ತು ಮುರಾರಿ ಗೌತಮ್ ಅವರನ್ನು ಸಚಿವರನ್ನಾಗಿ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

* HAM

1. ಸಂತೋಷ್ ಮಾಂಝಿ

ಇಂದು ಬಿಹಾರದಲ್ಲಿ ಬೆಳಗ್ಗೆ 11.30ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬುವುದು ಉಲ್ಲೇಖನೀಯ. ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಈಗಾಗಲೇ ಸಿಎಂ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿತೀಶ್ ಕುಮಾರ್ ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾದರು ಮತ್ತು ತೇಜಸ್ವಿ ಯಾದವ್ ಎರಡನೇ ಬಾರಿಗೆ ರಾಜ್ಯದ ಉಪ ಮುಖ್ಯಮಂತ್ರಿಯಾದರು. ಆಗಸ್ಟ್ 24ರಂದು ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದೆ.

ಇದನ್ನೂ ಓದಿ:  Bihar Politics: ನಿತೀಶ್ ಕುಮಾರ್ 2024ರಲ್ಲಿ ಪ್ರಧಾನಿ ಅಭ್ಯರ್ಥಿ ಆಗುವರೇ? ಪ್ರಶಾಂತ್ ಕಿಶೋರ್ ಹೀಗಂದ್ರು

ಸಣ್ಣ, ದೊಡ್ಡ ಸೇರಿ ಒಟ್ಟು ಏಳು ಪಕ್ಷಗಳು ಮಹಾಮೈತ್ರಿಕೂಟದಲ್ಲಿ ಭಾಗಿಯಾಗಿವೆ. ಅದೇ ಸಮಯದಲ್ಲಿ ನಿತೀಶ್ ಕುಮಾರ್ ಅವರು ಕಳೆದ ವಾರವಷ್ಟೇ ರಾಜ್ಯಪಾಲರಿಗೆ ಏಳು ಪಕ್ಷಗಳ 164 ಶಾಸಕರ ಬೆಂಬಲದೊಂದಿಗೆ ಪತ್ರವನ್ನು ಸಲ್ಲಿಸಿದರು.

ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದು ತೇಜಸ್ವಿ ಯಾದವ್ ಅವರೊಂದಿಗೆ ಸರ್ಕಾರ ರಚಿಸಿದರು. ಈ ನಿರ್ಧಾರ ಕೈಗೊಂಡಿರುವ ನಿತೀಶ್ ಕುಮಾರ್, ರಾಜ್ಯದಲ್ಲಿ ಜೆಡಿಯುವನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನಿಸಿದೆ ಎಂದು ಆರೋಪಿಸಿದ್ದರು.
Published by:Precilla Olivia Dias
First published: