Speedy Conviction: ಒಂದೇ ದಿನದಲ್ಲಿ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪೋಕ್ಸೋ ನ್ಯಾಯಾಲಯ..!

Fasted Conviction in POCSO Case: ಪೋಕ್ಸೋ ನ್ಯಾಯಾಲಯವು (POCSO Court) 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಕೇವಲ ಒಂದು ದಿನದ ವಿಚಾರಣೆಯಲ್ಲಿಯೇ ಜೀವಾವಧಿ ಶಿಕ್ಷೆ ವಿಧಿಸಿದೆ

ಅತ್ಯಾಚಾರಿಗೆ ಒಂದೇ ದಿನದಲ್ಲಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಅತ್ಯಾಚಾರಿಗೆ ಒಂದೇ ದಿನದಲ್ಲಿ ಶಿಕ್ಷೆ ವಿಧಿಸಿದ ನ್ಯಾಯಾಲಯ

 • Share this:
  ಸಾಮಾನ್ಯವಾಗಿ ನಮ್ಮಲ್ಲಿ ಯಾವುದೇ ಅತ್ಯಾಚಾರದ ಪ್ರಕರಣಗಳು (Rape Cases) ಅಥವಾ ಕೊಲೆ ಪ್ರಕರಣಗಳು (Murder cases) ನ್ಯಾಯಾಲಯದಲ್ಲಿ ತೀರ್ಪಿಗಾಗಿ ಹೋದ ಮೇಲೆ ಸಾಕ್ಷಿ ಪುರಾವೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ತೀರ್ಪನ್ನು ನೀಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲಿಯೂ ಅಪರಾಧಿ ಸ್ಥಾನದಲ್ಲಿರುವ ವ್ಯಕ್ತಿಯು ಅಪರಾಧ ಎಸೆಗಿರುವ ಬಗ್ಗೆ ಸಾಕ್ಷಿ ಪುರಾವೆಗಳು ಕಡಿಮೆ ಇದ್ದಲ್ಲಿ ಇಂತಹ ಪ್ರಕರಣಗಳಲ್ಲಿ ತೀರ್ಪನ್ನು ನೀಡಲು ನ್ಯಾಯಾಲಯವು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ.

  ಆದರೆ ಇಲ್ಲಿ ನಡೆದದ್ದೇ ಬೇರೆ ಎಂದು ನಾವು ಹೇಳಬಹುದು. ಬಿಹಾರದ ಅರಾರಿಯಾ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು (POCSO Court) 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಕೇವಲ ಒಂದು ದಿನದ ವಿಚಾರಣೆಯಲ್ಲಿಯೇ ಜೀವಾವಧಿ ಶಿಕ್ಷೆ ವಿಧಿಸಿದೆ (Life Imprisonment for POCSO Accused). ಈ ತೀರ್ಪನ್ನು ದೇಶದಲ್ಲಿಯೇ ಯಾವುದೇ ಪೋಕ್ಸೋ ನ್ಯಾಯಾಲಯಗಳಿಗೆ ಹೋಲಿಸಿದರೆ, ಇದು ಅತ್ಯಂತ ವೇಗವಾಗಿ ನೀಡಿದ ತೀರ್ಪು ಎಂದು ಪರಿಗಣಿಸಲಾಗಿದೆ.

  ಇಲ್ಲಿನ ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಶಶಿಕಾಂತ್ ರಾಯ್‌ (POCSO Special Court Judge Shashikant Roy) ಅಪರಾಧಿಗೆ 50,000 ರೂಪಾಯಿಗಳ ದಂಡವಿಧಿಸಿದರು ಮತ್ತು ಸಂತ್ರಸ್ಥೆಯ ಪುನರ್ವಸತಿಗಾಗಿ 7 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸುವಂತೆ ನಿರ್ದೇಶನ ಮಾಡಿದ್ದಾರೆ. ಈ ಆದೇಶವನ್ನು ಅಕ್ಟೋಬರ್ 4 ರಂದು ಹೊರಡಿಸಲಾಗಿದ್ದರೂ, ಪ್ರಕರಣಕ್ಕೆ ಸಂಬಂಧಿಸಿದ ಆದೇಶದ ಮೂಲ ಪ್ರತಿಯನ್ನು ನವೆಂಬರ್ 26ರಂದು ಲಭ್ಯವಾಯಿತು ಎಂದು ಹೇಳಲಾಗುತ್ತಿದೆ.

  ಈ ವರ್ಷದ ಜುಲೈ 22ರಂದು 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಘಟನೆ ನಡೆದ ಮರುದಿನವೇ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಮೇಲ್ವಿಚಾರಣೆಯನ್ನು ಅರಾರಿಯಾ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ರೀಟಾ ಕುಮಾರಿ ವಹಿಸಿದ್ದರು.

  ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಪೋಕ್ಸೋ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮ್ ಲಾಲ್ ಯಾದವ್ (POCSO Public Prosecutor Shyam Lal Yadav) "ಅರಾರಿಯಾದಲ್ಲಿನ ಪ್ರಕರಣವು ದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಅತ್ಯಂತ ವೇಗದ ವಿಚಾರಣೆಯಾಗಿದೆ. ಇದು ಮಧ್ಯಪ್ರದೇಶದ (Madhya Pradesh) ದಟಿಯಾ ಜಿಲ್ಲೆಯ ನ್ಯಾಯಾಲಯದ ದಾಖಲೆಯನ್ನು ಹಿಂದಿಕ್ಕಿದೆ, ಅದು ಆಗಸ್ಟ್ 2018ರಲ್ಲಿ 3 ದಿನಗಳಲ್ಲಿ ಅತ್ಯಾಚಾರ ವಿಚಾರಣೆಯನ್ನು ಪೂರ್ಣಗೊಳಿಸಿತ್ತು" ಎಂದು ಹೇಳಿದರು.

  ನ್ಯಾಯಾಲಯವು ಸಾಕ್ಷಿಗಳು, ವಾದಗಳು ಮತ್ತು ಪ್ರತಿ ವಾದಗಳನ್ನು ತ್ವರಿತವಾಗಿ ದಾಖಲಿಸುವ ಮೂಲಕ ವಿಚಾರಣೆಯನ್ನು ತ್ವರಿತವಾಗಿ ನಡೆಸಿ, ಅಪರಾಧಿಗೆ ಕೇವಲ ಒಂದು ದಿನದಲ್ಲಿಯೇ ತೀರ್ಪು ನೀಡಿದೆ.

  ಈ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿರುವ ಬಿಹಾರ ಸರ್ಕಾರದ ಗೃಹ ಇಲಾಖೆಯ ಪ್ರಾಸಿಕ್ಯೂಷನ್ ನಿರ್ದೇಶನಾಲಯವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, "ದೇಶದಲ್ಲಿ ಒಂದೇ ದಿನದ ವಿಚಾರಣೆಯಲ್ಲಿ ಶಿಕ್ಷೆ ನೀಡಲಾದ ಮೊದಲ ಪ್ರಕರಣ ಇದಾಗಿದೆ" ಎಂದು ಹೇಳಿದೆ.

  ಇದನ್ನೂ ಓದಿ: ಕೆಲಸದ ಅವಧಿ ನಂತರ ಉದ್ಯೋಗಿಗಳಿಗೆ ಮೆಸೇಜ್ ಕಳಿಸೋದು ಸರಿ ಅಲ್ಲ; ಹೀಗೊಂದು ಹೊಸ ಕಾನೂನು

  "ಇದಕ್ಕೂ ಮೊದಲು, ಮಧ್ಯಪ್ರದೇಶದ ದಟಿಯಾ ಜಿಲ್ಲೆಯಲ್ಲಿ, ನ್ಯಾಯಾಲಯವು 8 ಆಗಸ್ಟ್ 2018ರಂದು 3 ದಿನಗಳ ವಿಚಾರಣೆಯ ನಂತರ ತೀರ್ಪು ನೀಡಿತ್ತು. ಅಪರಾಧಿಗೆ ಕೊನೆಯ ಉಸಿರಿರುವವರೆಗೂ ಜೀವಾವಧಿ ಶಿಕ್ಷೆ ನೀಡುವ ಮೂಲಕ ಬಿಹಾರ ಈಗ ಒಂದೇ ದಿನದಲ್ಲಿ ವಿಚಾರಣೆ ನಡೆಸುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದೆ' ಎಂದು ಅದು ಹೇಳಿದೆ.

  ಇದನ್ನೂ ಓದಿ: Homework ಮಾಡಿಲ್ಲ ಅಂತ ಮಗನನ್ನು ತಲೆಕೆಳಗಾಗಿ ನೇತು ಹಾಕಿದ ಪಾಪಿ ತಂದೆ!

  ಅಪ್ರಾಪ್ರ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ತ್ವರಿತ ನ್ಯಾಯ ಸಿಕ್ಕರೆ, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಿಗೆ ಕಡಿವಾಣ ಹಾಕಬಹುದು ಎಂಬದು ಕೆಲವು ತಜ್ಞರ ಅಭಿಪ್ರಾಯ. ಈ ರೀತಿಯ ಘಟನೆಗಳು ನಡೆದಾಗ, ತುರ್ತು ವಿಚಾರಣೆಯಾಗಿ ತೀರ್ಪು ಹೊರಬಂದರೆ ಸಂತ್ರಸ್ಥೆಗೂ ಮಾನಸಿಕ ಕಿರುಕುಳ ಕಡಿಮೆಯಾಗಲಿದೆ ಮತ್ತು ನ್ಯಾಯದ ಮೇಲಿನ ನಂಬಿಕೆ ಹಿಗ್ಗಲಿದೆ.
  Published by:Sharath Sharma Kalagaru
  First published: