ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳ(Accused)ನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಕೊಲೆ ಪ್ರಯತ್ನ ನಡೆಸಿದವರ ಸುಳಿವೆ ಸಿಗುವುದಿಲ್ಲ. ಯಾವುದೇ ಸುಳಿವು ಬಿಡದೇ ಕೊಲೆಗಾರರು(Killers) ಕೊಂದು ಎಸ್ಕೇಪ್ (Escape) ಆಗುತ್ತಾರೆ. ಪಾಟ್ನಾದಲ್ಲಿ ಅಕ್ಟೋಬರ್ 12 ರಂದು ಮಾಡೆಲ್ ಮೋನ ರೈ(Model Mona rai) ಮೇಲೆ ಫೈರಿಂಗ್ ನಡೆದಿತ್ತು. ಮಾಡೆಲಿಂಗ್(Modeling) ಕ್ಷೇತ್ರ ಹಾಗೂ ಟಿಕ್ಟಾಕ್(Tiktok)ನಲ್ಲಿ ಮೋನ ರೈ ಸಖತ್ ಫೇಮಸ್ ಆಗಿದ್ದರು. ಮಿಸೆಸ್ ಪಾಟ್ನಾ(Mrs Patna) ಹಾಗೂ ಬಿಹಾರ(Mrs Bihara) ಗರಿಮೆಯನ್ನು ಪಡೆದವರು. ಇದ್ದಕ್ಕಿದ್ದ ಹಾಗೇ ಅಕ್ಟೋಬರ್ 12ರ ರಾತ್ರಿ 9:25ಕ್ಕೆ ಅವರ ನಿವಾಸದ ಮುಂದೆಯೇ ದುಷ್ಕರ್ಮಿಗಳು ಆಕೆ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಮಗಳ(Daughter) ಜೊತೆ ಮನೆ ಸಮೀಪದಲ್ಲಿದ್ದ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮೋನ ರೈ ಅವರನ್ನುಆಸ್ಪತ್ರೆಗೆಗ ದಾಖಲಿಸಲಾಗಿತ್ತು.ಘಟನೆ ನಡೆದು 5 ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಳು. ಆರೋಪಿಗಳ ಸುಳಿವು ಕೊಡದೇ ಮೋನ ರೈ ಮೃತಪಟ್ಟಿದ್ದರು.
ಕೊಲೆಗಾರರ ಸುಳಿವು ಸಿಗದೇ ಖಾಕಿಗೆ ಟೆನ್ಶನ್
ಮೋನ ಸಾಯುವ ಮುನ್ನ ಅನೇಕ ಬಾರಿ ಪ್ರಜ್ಞೆ ಬಂದಿತ್ತು. ಆದರೆ ಆರೋಪಿಗಳ ಬಗ್ಗೆ ಮಾಹಿತಿ ನೀಡುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಪೊಲೀಸರಿಗೆ ಎಲ್ಲರ ಮೇಲೆ ಅನುಮಾನ ಮೂಡಿತ್ತು. ಗಂಡನನ್ನು ಮೊದಲಿಗೆ ವಿಚಾರಣೆ ನಡೆಸಿದರು. ಮೊದಲಿಗೆ ಮೋನ ರೈಗೆ ಯಾರೊಂದಿಗೂ ದ್ವೇಷವಿರಲಿಲ್ಲ. ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸಿದರು. ಪ್ರಾಥಮಿಕ ಹಂತದಲ್ಲಿ ಪೊಲೀಸರಿಗೆ ಒಂದು ವಿಷಯ ಸ್ಪಷ್ಟವಾಗಿ ತಿಳಿದಿತ್ತು. ಇದು ಆಕೆಗೆ ಪರಿಚಯ ಇರುವವರೆ ಪ್ಲ್ಯಾನ್ ಮಾಡಿ ಅಟ್ಯಾಕ್ ಮಾಡಿಸಿದ್ದಾರೆ ಎಂಬ ವಿಷಯ ತಿಳಿದಿತ್ತು. ಆದರ ತನಿಖೆ ಮಧ್ಯೆ ಮೋನ ರೈ ಮೃತಪಟ್ಟಿದ್ದರಿಂದ ಪೊಲೀಸರಿಗೆ ಟೆನ್ಶನ್ ಹೆಚ್ಚಾಗಿತ್ತು.
ಮೌನ ಫೋನ್ ನೀಡಿತ್ತು ಸುಳಿವು
ಮೋನ ರೈ ಫೋನ್ ಅನ್ನು ಪೊಲೀಸರು ಪರಿಶೀಲಿಸಿದ್ದರು. ಈಕೆ ಗಂಡನಿಗಿಂತ ಮತ್ತೊಬ್ಬನ ಜೊತೆ ಹೆಚ್ಚಾಗಿ ಮಾತನಾಡಿರುವುದು ಕಂಡುಬಂದಿತ್ತು. ಆ ಸಂಖ್ಯೆ ಯಾರಿಗೆ ಸೇರಿದ್ದು ಎಂದು ಪೊಲೀಸರು ಬಲೆ ಬೀಸಿದ್ದರು. ಬಿಲ್ಡರ್ ರಾಜು ಎಂಬಾತನಿಗೆ ಆ ನಂಬರ್ ಸೇರಿತ್ತು. ಮೋನ ರೈ, ಹಾಗೂ ರಾಜು ಇಬ್ಬರಿಗೂ 10 ವರ್ಷದಿಂದ ಪರಿಚಯವಿತ್ತು. ಅದು ಯಾವ ಮಟ್ಟಿಗೆ ಅಂದರೆ ರಾಜು ಇತ್ತೀಚೆಗೆ ಮೋನ ರೈಗೆ ಐಷಾರಾಮಿ ಫ್ಲ್ಯಾಟ್ವೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದ. ಇವರಿಬ್ಬರ ಸಂಬಂಧದ ಬಗ್ಗೆ ಇಬ್ಬರು ಕುಟುಂಬಸ್ಥರಿಗೆ ಗೊತ್ತಿತ್ತು. ರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಒಬ್ಬ ಶೂಟರ್ ಎಂದು ತಿಳಿದುಬಂದಿತ್ತು. ಆದರೆ ಆತ ಕೊಲೆ ಮಾಡಿರಲಿಲ್ಲ ಇದು ಪೊಲೀಸರಿಗೆ ಮತ್ತಷ್ಟು ಟೆನ್ಶನ್ ಹೆಚ್ಚಿಸುವಂತೆ ಮಾಡಿತ್ತು.
ಇದನ್ನು ಓದಿ : 22 ವರ್ಷಕ್ಕೇ IPS, ಸೌದಿ ಅರೇಬಿಯಾದಲ್ಲಿ ಅವಿತಿದ್ದ ರೇಪಿಸ್ಟ್ ಎಳೆತಂದಿದ್ದ ಸಿಂಹಿಣಿ!
ಮತ್ತೊಬ್ಬ ಶೂಟರ್ನನ್ನು ಬಂಧಿಸಿದ ಪೊಲೀಸರು
ಮೋನ ರೈ ಅವರ ಜೊತೆ ಸಂಬಂಧ ಹೊಂದಿದ್ದ ರಾಜು ಕೊಂದಿದ್ದಾನೆ ಎಂದು ಪೊಲೀಸರು ಅಂದುಕೊಂಡಿದ್ದರು. ಆದರೆ ಆತ ಕೊಲೆ ಮಾಡಿಲ್ಲ ಎಂದು ತಿಳಿದುಬಂದಿತ್ತು. ಅತ್ತ ಮೌನ ರೈ ಪತಿ ಕೂಡ ಕೊಲೆ ಮಾಡಿರಲಿಲ್ಲ. ಅಸಲಿ ಕೊಲೆಗಾರ ಯಾರೂ ಎಂಬುಂದು ಪತ್ತೆ ಹಚ್ಚಲು ಕಷ್ಟವಾಗಿತ್ತು. ಇದರ ಮಧ್ಯೆ ಮತ್ತೊಬ್ಬ ಶೂಟರ್ ಭೀಮ್ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸಿಸಿಟಿವಿ, ಮೊಬೈಲ್ ಟವರ್ ಆಧಾರದ ಮೇಲೆ ಆತನನ್ನು ಬಂಧಿಸಿ ಕರೆತಂದಿದ್ದರು. ಮೊದಲಿಗೆ ಏನು ಬಾಯಿ ಬಿಡದ ಭೀಮ್ ಯಾದವ್, ಪೊಲೀಸರು ತಮ್ಮ ಸ್ಟೈಲ್ನಲ್ಲಿ ಕೇಳುತ್ತಿದ್ದಂತೆ ಎಲ್ಲವನ್ನೂ ಬಾಯಿಬಿಟ್ಟಿದ್ದ.
ಇದನ್ನು ಓದಿ :ಮದ್ವೆ ಫೋಟೋಶೂಟ್ ಮಾಡೋ ಜೋಶ್ನಲ್ಲಿ ಮಸಣ ಸೇರೋದ್ರಲ್ಲಿದ್ದ ಯುವ ಜೋಡಿ, ಜಸ್ಟ್ ಮಿಸ್!
ಬಿಲ್ಡರ್ ರಾಜು ಪತ್ನಿಯೇ ಮಾಸ್ಟರ್ ಮೈಂಡ್!
ಹೌದು, ಮೋನ ರೈ ಜೊತೆ ಸಂಬಂಧ ಹೊಂದಿದ್ದ ಬಿಲ್ಡರ್ ರಾಜು ಪತ್ನಿ ಈ ಕೊಲೆಯ ಅಸಲಿ ಮಾಸ್ಟರ್ ಮೈಂಡ್. ತನ್ನ ಗಂಡ ಬೇರೆ ಮಹಿಳೆ ಜೊತೆ ಇರುವುದನ್ನ ಈಕೆಗೆ ಸಹಿಸಲು ಸಾಧ್ಯವಾಗಲಿಲ್ಲ. 10 ವರ್ಷದಿಂದ ಸುಮ್ಮನಿದ್ದ ರಾಜು ಪತ್ನಿ, ಯಾವಾಗ ತನ್ನ ಪತಿ, ಮೋನ ರೈಗೆ ಐಷಾರಾಮಿ ಫ್ಲ್ಯಾಟ್ ನೀಡಿದ್ದನ್ನು ತಿಳಿದು ಈಕೆಗೆ ಶಾಕ್ ಆಗಿತ್ತು. ಅಂದಿನಿಂದ ಮೋನ ರೈ ಮೇಲೆ ದ್ವೇಷ ಹೆಚ್ಚಾಗಿತ್ತು. ಕೊಲೆ ಮಾಡುವ ಸಂಚು ರೂಪಿಸಿದ್ದಳು. ಪರಿಚಯವಿದ್ದ ಭೀಮ್ ಯಾದವನಿಗೆ ಮೋನ ರೈ ಕೊಲೆ ಮಾಡಲು ಸುಪಾರಿ ನೀಡಿದ್ದಳು . 5 ಲಕ್ಷ ಹಣ ಕೊಡುವುದಾಗಿ ಹೇಳಿದ್ದಳು. 70 ಸಾವಿರ ಮುಂಗಡವಾಗಿ ಅವರಿಗೆ ನೀಡಿದ್ದಳು . ಕೊಲೆ ನಡೆದ ಬಳಿಕ ಯಾರಿಗೂ ತಿಳಿಯದಂತೆ ಎಸ್ಕೇಪ್ ಆಗಿದ್ದಾಳೆ. ಕೊನೆಗೂ ಈ ಕೊಲೆಯ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಘಟನೆ ನಡೆದು 30 ದಿನಗಳ ಬಳಿಕ ಕೊಲೆಯ ಮಾಸ್ಟರ್ ಮೈಂಡ್ ಯಾರೆಂದು ಗೊತ್ತಾಗಿದೆ. ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ