Bihar Liquor Ban: ಮದ್ಯ ನಿಷೇಧಿತ ರಾಜ್ಯದಲ್ಲಿ ಎಣ್ಣೆ ಕುಡಿದು ಸಿಕ್ಕಿ ಬಿದ್ದರೂ ಜೈಲಿಗೆ ಹಾಕಲ್ಲ! ಏನು ಮಾಡ್ತಾರಂತೆ?

ಮದ್ಯ ನಿಷೇಧವಾಗಿದ್ದರೂ ನವೆಂಬರ್ 2021 ರಿಂದ ಇಲ್ಲಿಯವರೆಗೆ ಕಳ್ಳಬಟ್ಟಿಗೆ ಸಂಬಂಧಪಟ್ಟಂತಹ ದುರಂತಗಳಲ್ಲಿ ರಾಜ್ಯದಲ್ಲಿ 50ಕ್ಕೂ ಹೆಚ್ಚು ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

  • Share this:
ಸಾಮಾನ್ಯವಾಗಿ ಯಾರಾದರೂ ಒಬ್ಬ ವ್ಯಕ್ತಿ ಮದ್ಯ ಕುಡಿಯುತ್ತಾ ಸಾರ್ವಜನಿಕ ಸ್ಥಳದಲ್ಲಿ ಏನಾದರೂ ಇಲ್ಲ ಸಲ್ಲದ ಘಟನೆಗಳಿಗೆ ಕಾರಣವಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಅವರನ್ನು ಜೈಲಿಗೆ ಹಾಕುವುದನ್ನು ಅಥವಾ ಕೇಸ್‌ ದಾಖಲಿಸುವುದನ್ನು ನಾವೆಲ್ಲರೂ ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ. ಆದರೆ ಇನ್ಮುಂದೆ ಈ ರಾಜ್ಯದಲ್ಲಿ ಮದ್ಯ ಕುಡಿದು ಸಿಕ್ಕಿಬಿದ್ದ ಜನರನ್ನು ಜೈಲಿಗೆ (Jail) ಹಾಕುವುದಿಲ್ಲವಂತೆ ಎಂದು ಇಲ್ಲಿನ ಸರ್ಕಾರ ಹೇಳಿದೆ ನೋಡಿ. ನಿಮಗೆ ಯಾವುದು ಆ ರಾಜ್ಯ ಎಂದು ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರಬೇಕಲ್ಲವೇ..? ಹೌದು.. ಮದ್ಯ ನಿಷೇಧಿತ ರಾಜ್ಯ (Alcohol Banned State) ಬಿಹಾರದಲ್ಲಿ ನಿತೀಶ್ ಕುಮಾರ್ (Bihar CM Nitish Kumar) ನೇತೃತ್ವದ ಸರ್ಕಾರವು ಹೀಗೆ ಮದ್ಯ ಕುಡಿದು ಪೊಲೀಸರ ಕೈಗೆ ಸಿಕ್ಕಿಬಿದ್ದ ಜನರನ್ನು ಜೈಲಿಗೆ ಹಾಕುವುದಿಲ್ಲ ಎಂದು ಘೋಷಿಸಿದೆ.

ಇದೇನಪ್ಪಾ ಇದು ಇಂತಹ ಆದೇಶ ಹೊರಡಿಸಿದ್ದಾರೆ ಎಂದು ನೀವು ಬೆರಗಾಗಬಹುದು. ಆದರೆ ಇದರ ಹಿಂದೆ ರಾಜ್ಯ ಸರ್ಕಾರವು ಒಂದು ಬಲವಾದ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಹಾರ ರಾಜ್ಯ ಸರ್ಕಾರ ಹೊರಡಿಸಿದ ಇತ್ತೀಚಿನ ಆದೇಶದ ಪ್ರಕಾರ, ಪೊಲೀಸರು ಮದ್ಯ ಕುಡಿಯುವವರನ್ನು ಹಿಡಿದು ಜೈಲಿಗೆ ಹಾಕುವುದಿಲ್ಲ. ಬದಲಾಗಿ ಅಂತಹವರ ಬಾಯಿಯಿಂದ ರಾಜ್ಯದಲ್ಲಿ ಹೆಚ್ಚಾದ ಈ ಮದ್ಯ ಮಾಫಿಯಾದ ಬಗ್ಗೆ ಮಾಹಿತಿಯನ್ನು ಕಕ್ಕುವಂತೆ ಮಾಡುವ ಯೋಜನೆಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಕುಡುಕರು ಜೈಲಿಗೆ ಹೋಗದಂತೆ ಹೇಗೆ ಮಾಡ್ತಾರೆ?

ನಂತರ ಈ ಕುಡುಕರು ಕಕ್ಕಿದ ಮಾಹಿತಿ ಮೇರೆಗೆ ಪೊಲೀಸರು ಆ ಸ್ಥಳಕ್ಕೆ ಹೋಗಿ ಕಾನೂನು ಬಾಹಿರವಾಗಿ ಈ ಕಳ್ಳಬಟ್ಟಿ, ಮದ್ಯ ಮಾರಾಟದಲ್ಲಿ ತೊಡಗಿದ ಮಾಫಿಯಾದ ಮೇಲೆ ದಾಳಿ ಮಾಡಿ ಏನಾದರೂ ಬಲವಾದ ಸಾಕ್ಷಿಗಳು ಇವರಿಗೆ ದೊರೆತರೆ, ಆ ಕುಡುಕರನ್ನು ಜೈಲು ಶಿಕ್ಷೆಯಿಂದ ತಪ್ಪಿಸಲಾಗುತ್ತದೆ.

ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಆದೇಶವನ್ನು ಕಾರ್ಯಗತಗೊಳಿಸಲು ಪೊಲೀಸ್ ಮತ್ತು ಅಬಕಾರಿ ಇಲಾಖೆ ಎರಡಕ್ಕೂ ಈ ಅಧಿಕಾರವನ್ನು ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
“ರಾಜ್ಯದಲ್ಲಿ ಹೆಚ್ಚುತ್ತಿರುವ ಮದ್ಯ ಕಳ್ಳ ಸಾಗಾಣಿಕೆದಾರರು ಮತ್ತು ಪೆಡ್ಲರ್‌ಗಳ ಜಾಲದ ಮೇಲೆ ಕುಣಿಕೆಯನ್ನು ಬಿಗಿಗೊಳಿಸುವ ಉದ್ದೇಶದಿಂದ ಈ ರೀತಿಯ ಆದೇಶವನ್ನು ಹೊರಡಿಸಲಾಗಿದೆ” ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಕೃಷ್ಣ ಕುಮಾರ್ ಸುದ್ದಿ ಮಾಧ್ಯಮದ ವರದಿಗಾರರಿಗೆ ತಿಳಿಸಿದರು.

"ಈಗ, ಒಬ್ಬ ವ್ಯಕ್ತಿಯು ಕುಡಿದು ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ, ಅವನಿಗೆ ಆ ಮದ್ಯ ಲಭ್ಯವಾಗುವಂತೆ ಮಾಡಿದ ಸ್ಥಳ ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಕೇಳಲಾಗುತ್ತದೆ. ಅವರು ನೀಡಿದಂತಹ ಸುಳಿವು ಆಧರಿಸಿ ದಾಳಿ ನಡೆಸಲಾಗುವುದು ಮತ್ತು ಮಾಹಿತಿ ಸರಿಯಾಗಿ ಕಂಡು ಬಂದರೆ ಮಾಹಿತಿದಾರನನ್ನು ಜೈಲಿಗೆ ಹಾಕುವುದಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ: Telangana Politics: KCR​ ಗೆಲುವಿಗೆ ರಣತಂತ್ರ ಹೆಣೆಯಲು ಮುಂದಾದ ಚುನಾವಣಾ ಚಾಣಾಕ್ಷ Prashant Kishor?

ಹೆಚ್ಚುತ್ತಿರುವ ಕುಡಿತದ ಬಗ್ಗೆ ರಾಜ್ಯದ ಮಹಿಳೆಯರಿಂದ ದೂರು ಪಡೆದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯರಿಗೆ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಒಂದು ವರ್ಷದ ನಂತರ ಎಂದರೆ ಏಪ್ರಿಲ್ 2016 ರಲ್ಲಿ ನಿತೀಶ್ ಕುಮಾರ್ ಸರ್ಕಾರವು ಬಿಹಾರ್ ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

ಹೆಚ್ಚುತ್ತಿದೆ ಕಳ್ಳಬಟ್ಟಿ ದುರಂತ
ಮದ್ಯ ನಿಷೇಧವಾಗಿದ್ದರೂ ನವೆಂಬರ್ 2021 ರಿಂದ ಇಲ್ಲಿಯವರೆಗೆ ಕಳ್ಳಬಟ್ಟಿಗೆ ಸಂಬಂಧಪಟ್ಟಂತಹ ದುರಂತಗಳಲ್ಲಿ ರಾಜ್ಯದಲ್ಲಿ 50ಕ್ಕೂ ಹೆಚ್ಚು ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮದ್ಯದ ಕಳ್ಳ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸೇರಿ ಅನೇಕ ಸಭೆಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Earn 5 Lakh: ಕಾರ್ಟೂನ್ ನೋಡ್ತಾ ಡೋನಟ್ಸ್ ತಿನ್ನೋ ಕೆಲಸಕ್ಕೆ 5 ಲಕ್ಷ ಸಂಬಳ! ನೀವೂ ಅಪ್ಲೈ ಮಾಡ್ತೀರಾ?

ಅಲ್ಲದೆ ಸಾರಾಯಿ ಮೇಲಿನ ನಿಷೇಧವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಇವರು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು, ಸ್ಯಾಟಲೈಟ್‌ ಫೋನ್‌ಗಳು, ಮೋಟಾರು ದೋಣಿಗಳು ಮತ್ತು ತರಬೇತಿ ನೀಡಿದ ನಾಯಿಗಳಂತಹ ಅನೇಕ ರೀತಿಯ ಸಂಪನ್ಮೂಲಗಳೊಂದಿಗೆ ಈ ಉಲ್ಲಂಘನೆಯನ್ನು ಇನ್ನಷ್ಟು ಬಿಗಿಗೊಳಿಸಲು ಪೊಲೀಸ್ ಸಿಬ್ಬಂದಿಯನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Published by:guruganesh bhat
First published: