Bihar MLA Snatched Gold Ring| ಒಳಉಡುಪಿನಲ್ಲಿ ಓಡಾಡಿದ್ದನ್ನು ಆಕ್ಷೇಪಿಸಿದ ಸಹ ಪ್ರಯಾಣಿಕನ ಚಿನ್ನದ ಸರ ಕಸಿದ ಬಿಹಾರದ ಶಾಸಕ: ಕೇಸ್ ದಾಖಲು

ಪ್ರಹ್ಲಾದ್ ಪಾಸ್ವಾನ್ ಎಂಬವರು ಶಾಸಕನ ವಿರುದ್ದ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಶಾಸಕ ರೈಲಿನ ಕೋಚ್‌ನಲ್ಲಿ ಒಳ ಉಡುಪಿನಲ್ಲಿ ತಿರುಗಾಡುತ್ತಿದ್ದರು. ಈ ವೇಳೆ ಅವರು ಮದ್ಯಪಾನ ಮಾಡಿದ್ದರು. ಪ್ರಶ್ನಿಸಿದ್ದಕ್ಕೆ ನನ್ನ ಚಿನ್ನದ ಸರ ಉಂಗುರವನ್ನು ಕಸಿದುಕೊಂಡರು ಎಂದು ಆರೋಪಿಸಿದ್ದಾರೆ.

ಶಾಸಕ ಗೋಪಾಲ್ ಮಂಡಲ್.

ಶಾಸಕ ಗೋಪಾಲ್ ಮಂಡಲ್.

 • Share this:
  ಪಾಟ್ನಾ (ಸೆಪ್ಟೆಂಬರ್​ 04); ಬಿಹಾರದ ಆಡಳಿತ ಪಕ್ಷವಾದ ಜೆಡಿಯು ಪಕ್ಷದ ಶಾಸಕ ಗೋಪಾಲ್ ಮಂಡಲ್ ಶುಕ್ರವಾರ ಚಲಿಸುತ್ತಿರುವ ರೈಲಿನಲ್ಲಿ ಅರೆಬೆತ್ತಲೆಯಾಗಿ ಓಡಾಡಿ ಸುದ್ದಿಯಾಗಿದ್ದರು. ಶಾಸಕನ ಈ ಕೃತ್ಯ ತೀವ್ರ ಚರ್ಚೆಗೂ ಗ್ರಾಸವಾಗಿತ್ತು. ಆದರೆ, ಅನಿವಾರ್ಯವಾಗಿ ತಾನು ಅರೆಬೆತ್ತಲೆಯಾಗಿ ರೈಲಿನಲ್ಲಿ ಓಡಾಡಿದೆ ಎಂದು ಶಾಸಕ ಮಂಡಲ್ ನಿನ್ನೆ ಸಮಜಾಯಿಷಿ ನೀಡಿದ್ದರು. ಆದರೆ, ಜೆಡಿಯು ಶಾಸಕ ಗೋಪಾಲ್‌ ಮಂಡಲ್‌ ವಿರುದ್ದ, ಅವರ ಸಹ ಪ್ರಯಾಣಿಕ ಇಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. "ಕೇವಲ ಒಳಉಡುಪಿನಲ್ಲಿ ನಡೆದಾಡಿರು ವುದನ್ನು ಆಕ್ಷೇಪಿಸಿದ್ದ ಶಾಸಕ ಮಂಡಲ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದು ಮಾತ್ರವಲ್ಲದೆ, ನನ್ನ ಚಿನ್ನದ ಸರ ಮತ್ತು ಉಂಗುರವನ್ನು ಕಸಿದುಕೊಂಡಿದ್ದಾರೆ" ಎಂದು ದೂರಿನಲ್ಲಿ ಆರೋಪಿಸಲಾಗಿದೆ.

  ಗುರುವಾರದಂದು ಬಿಹಾರ ಆಡಳಿತ ಪಕ್ಷವಾಗಿರುವ ಜೆಡಿಯುನ ಶಾಸಕರಾದ ನರೇಂದ್ರ ಕುಮಾರ್ ನೀರಜ್ ಅಲಿಯಾಸ್ ಗೋಪಾಲ್ ಮಂಡಲ್ ಅವರು ರೈಲಿನಲ್ಲಿ ಕೇವಲ ಒಳಉಡುಪಿನಲ್ಲಿ ಓಡಾಡಿರುವ ಘಟನೆ ಸುದ್ದಿಯಾಗಿತ್ತು. ಘಟನೆಯು ಕ್ಯಾಮಾರಾದಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗುವಂತೆ ನಡೆದುಕೊಂಡ ಬಗ್ಗೆ ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

  ಸಹ-ಪ್ರಯಾಣಿಕ ಪ್ರಹ್ಲಾದ್ ಪಾಸ್ವಾನ್ ಎಂಬವರು ಶಾಸಕನ ವಿರುದ್ದ ದೆಹಲಿಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅವರು, "ಎಂಎಲ್‌ಎ ಅವರು ರೈಲಿನ ಕೋಚ್‌ನಲ್ಲಿ ಒಳ ಉಡುಪಿನಲ್ಲಿ ತಿರುಗಾಡುತ್ತಿದ್ದರು. ಈ ಸಮಯದಲ್ಲಿ ಅವರು ಮದ್ಯಪಾನ ಮಾಡಿದ್ದರು. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾಗ, ಶಾಸಕರು ನನ್ನ ಚಿನ್ನದ ಸರ ಮತ್ತು ಉಂಗುರವನ್ನು ಕಸಿದುಕೊಂಡು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಹೀಗಾಗಿ ಶಾಸಕರ ವಿರುದ್ಧ ಕ್ರಮ ಜರುಗಿಸಿ, ನನಗೆ ನ್ಯಾಯ ದೊರಕಿಸಿ. ನನ್ನ ವಸ್ತುಗಳನ್ನು ಹಿಂದಿರುಗಿ ಕೊಡಿಸಿ" ಎಂದು ದೂರುದಾರ ಪ್ರಯಾಣಿಕ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ಶಾಸಕರಾಗಿರುವ ಗೋಪಾಲ್‌ ಮಂಡಲ್ ಅವರು ಪಾಟ್ನಾದಿಂದ ದೆಹಲಿಗೆ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್‌ನ ಎ -1 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಪಾಟ್ನಾದಿಂದ ಹೊರಟ ತಕ್ಷಣ, ಅವರು ತನ್ನ ಒಳ ಉಡುಪುಗಳಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದ್ದು, ಇದರ ವಿರುದ್ದ ಸಹ ಪ್ರಯಾಣಿಕರು ಪ್ರತಿಭಟಿಸಿದ ನಂತರವೂ, ಅವರು ಅದೇ ಉಡುಪಿನಲ್ಲಿ ಶೌಚಾಲಯದ ಕಡೆಗೆ ನಡೆಯುತ್ತಿದ್ದರು ಎಂದು ವರದಿಯಾಗಿದೆ.

  ಇದನ್ನೂ ಓದಿ: MLA travels in undergarments: ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಓಡಾಡಿದ ಶಾಸಕ; ಚೀರಿದ ಪ್ರಯಾಣಿಕರು!

  ಆದರೆ ಶಾಸಕ ತನ್ನ ನಡೆಯನ್ನು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ. ರೈಲು ಹತ್ತಿದ ಕೆಲವೇ ನಿಮಿಷಗಳಲ್ಲಿ ತಾನು ಅನಾರೋಗ್ಯಕ್ಕೆ ಒಳಗಾದ ಕಾರಣ ತನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿದ್ದಾರೆ.

  "ನಾನು ರೈಲು ಹತ್ತಿದ ತಕ್ಷಣ, ಬೇದಿ ಪ್ರಾರಂಭವಾಗಿತ್ತು. ಹಾಗಾಗಿ ನಾನು ನನ್ನ ಕುರ್ತಾ ಪೈಜಾಮಾವನ್ನು ತೆಗೆದು ಟವಲ್ ಅನ್ನು ನನ್ನ ಭುಜದ ಮೇಲೆ ಹಾಕಿಕೊಂಡೆ. ಅದನ್ನು ನನ್ನ ಸೊಂಟಕ್ಕೆ ಸುತ್ತಲು ನನಗೆ ಸಮಯವಿರಲಿಲ್ಲ. ಹಾಗಾಗಿ ನಾನು ಒಳ ಉಡುಪುಗಳನ್ನು ಮಾತ್ರ ಧರಿಸಿ ಓಡಾಡಿದ್ದೆ" ಎಂದು ಮಂಡಲ್ ಹೇಳಿದ್ದಾರೆ.

  ಇದನ್ನೂ ಓದಿ: Supreme Court| ದೇಶದ 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: