Wrong Transaction: ಯಾರದ್ದೋ ಖಾತೆಗೆ ಹೋಗಬೇಕಾದ ಐದೂವರೆ ಲಕ್ಷ ಹಣ ತಪ್ಪಿ ಬಂತು; ಕೇಳಿದ್ರೆ ಮೋದಿ ಕೊಟ್ಟ ಹಣ ಎಂದು ಕೊಡಲು ನಕಾರ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲರ ಬ್ಯಾಂಕ್​ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿದ್ದರು. ಅಂತೆಯೇ ಅವರು ಕೊಟ್ಟ ಮಾತಿನಂತೆ ಮೊದಲ ಕಂತಿನಲ್ಲಿ 5 ಲಕ್ಷ ಹಣ ಹಾಕಿದ್ದಾರೆ. ನಾನು ಎಲ್ಲಾ ಹಣವನ್ನು ಖರ್ಚು ಮಾಡಿದ್ದೇನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಿಹಾರ(ಸೆ.15): ಈಗಿನ ಕಾಲದಲ್ಲಿ ಏನಾದ್ರೂ ಬಿಟ್ಟಿಯಾಗಿ ಸಿಕ್ಕಿದ್ರೆ ಇನ್ನಷ್ಟು ಬಾಚ್ಕೊತಿವಿ ಅನ್ನೋ ಜನರೇ ಹೆಚ್ಚು. ಮೊಬೈಲ್​ ನಂಬರ್ ತಪ್ಪಾಗಿ ಕರೆನ್ಸಿ ಬೇರೆಯವರ ಮೊಬೈಲ್​ಗೆ ಹೋಗೋದು, ಬ್ಯಾಂಕ್ ಅಕೌಂಟ್ ನಂಬರ್ ತಪ್ಪಾಗಿ ಹಣ ಇನ್ನೊಬ್ಬರ ಖಾತೆಗೆ ಹೋಗೋದು, ಇವೆಲ್ಲಾ ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಹೀಗೆ ತಪ್ಪಿ ಹೋದ ಹಣ ವಾಪಸ್​ ಬಂದದ್ದು ಮಾತ್ರ ತುಂಬಾ ಅಪರೂಪ. ಅಂತೆಯೇ ಬಿಹಾರ(Bihar)ದ ಖಗಾರಿಯಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಬ್ಯಾಂಕ್​ ಖಾತೆಗೆ(Bank account) ತಪ್ಪಿ 5.5 ಲಕ್ಷ ಹಣ ಬಂದಿದೆ. ಅದು ಯಾರದ್ದೋ ಖಾತೆಗೆ ಹೋಗಬೇಕಾದ ಹಣ ಬ್ಯಾಂಕಿಂಗ್​ ಸಮಸ್ಯೆಯಿಂದಾಗಿ ತಪ್ಪಿ ಈ ವ್ಯಕ್ತಿಯ ಖಾತೆಗೆ ಬಂದಿದೆ. ಹಣ ಬಂದಿದ್ದೇ ಬಂತು, ಆ ವ್ಯಕ್ತಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ ಐದೂವರೆ ಲಕ್ಷ ಹಣ, ಬಿಟ್ಟಿಯಾಗಿ ಬಂದ್ರೆ ಯಾರಿಗೆ ತಾನೇ ಖುಷಿಯಾಗಲ್ಲ. ಅದೇ ರೀತಿ ಈತನೂ ಖುಷಿಯಾಗಿದ್ದಾನೆ. ಬ್ಯಾಂಕ್​​ನವರು ಆ ಹಣ ನಿಮ್ಮದಲ್ಲ, ತಪ್ಪಿ ನಿಮ್ಮ ಖಾತೆಗೆ ಬಂದಿದೆ. ವಾಪಸ್ ಕೊಡಿ ಎಂದು ಕೇಳಿದ್ದಾರೆ. ಆದರೆ ಆತ ಸುತಾರಾಂ ಕೊಡಲು ಒಪ್ಪಿಲ್ಲ. ಇದು ನನಗೆ ಪ್ರಧಾನಿ ಮೋದಿ(Prime Minister Narendra Modi) ಕೊಟ್ಟಿರುವ ಹಣ, ನಾನು ಕೊಡಲ್ಲ ಎಂದು ಹೇಳಿದ್ದಾನೆ. ಸದ್ಯ ಈ ಸುದ್ದಿ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ.

  ಮಾನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಭಕ್ತಿಯಾರ್ಪುರ್​ ಗ್ರಾಮದ ರಂಜಿತ್ ದಾಸ್​ ಖಾತೆಗೆ ಗ್ರಾಮೀಣ ಬ್ಯಾಂಕ್​ನಿಂದ ಐದೂವರೆ ಲಕ್ಷ ಹಣ ಬಂದಿದೆ. ಅದುವೇ ಬ್ಯಾಂಕಿಂಗ್ ಸಮಸ್ಯೆಯಿಂದ ಈ ತಪ್ಪು ಆಗಿದೆ. ಬೇರೆ ಯಾರದ್ದೋ ಖಾತೆಗೆ ಹೋಗಬೇಕಾದ ಹಣ ರಂಜಿತ್ ದಾಸ್ ಖಾತೆಗೆ ಬಂದಿದೆ. ಹೀಗೆ ಬಂದ ಹಣವನ್ನು ದಾಸ್​ ಕೊಡಲು ಒಪ್ಪುತ್ತಿಲ್ಲ. ಕೇಳಿದರೆ, ಇದು ನನಗೆ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿರುವ ಹಣ. ಅವರು ಎಲ್ಲರ ಖಾತೆಗೂ 15 ಲಕ್ಷ ಹಣ ಹಾಕುತ್ತೇನೆ ಎಂದು ಭರವಸೆ ನೀಡಿದ್ದರು. ಅಂತೆಯೇ ಮೊದಲನೇ ಕಂತಿನಲ್ಲಿ ನನಗೆ ಈ ಐದೂವರೆ ಲಕ್ಷ ಹಣ ಬಂದಿದೆ. ಹೀಗಾಗಿ ನಾನು ಈ ಹಣವನ್ನು ವಾಪಸ್​ ಕೊಡಲ್ಲ ಎಂದಿದ್ದಾನೆ. ಜೊತೆಗೆ ತನ್ನ ಬ್ಯಾಂಕ್​ ಖಾತೆಯಲ್ಲಿ ಈಗ ಆ ಹಣವೂ ಇಲ್ಲ. ಎಲ್ಲವನ್ನೂ ಆಗಲೇ ಖರ್ಚು ಮಾಡಿರುವುದಾಗಿ ಹೇಳಿದ್ದಾನೆ.

  ಇದನ್ನೂ ಓದಿ:Chitradurga: ರಸ್ತೆ ಮಧ್ಯೆದಲ್ಲೇ ವಿದ್ಯುತ್ ಕಂಬಗಳು, ಈ ರೋಡ್​ ಮಾಡಿದವನ ಬುದ್ಧಿಗೆ ಎಂಥಾ ಪ್ರಶಸ್ತಿ ಕೊಟ್ರೂ ಸಾಲದು!

  ‘‘ಈ ವರ್ಷ ಮಾರ್ಚ್​ ತಿಂಗಳಿನಲ್ಲಿ ನನ್ನ ಬ್ಯಾಂಕ್​ ಖಾತೆಗೆ ಹಣ ಬಂದಾಗ ನಾನು ತುಂಬಾ ಖುಷಿಪಟ್ಟಿದ್ದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲರ ಬ್ಯಾಂಕ್​ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿದ್ದರು. ಅಂತೆಯೇ ಅವರು ಕೊಟ್ಟ ಮಾತಿನಂತೆ ಮೊದಲ ಕಂತಿನಲ್ಲಿ 5 ಲಕ್ಷ ಹಣ ಹಾಕಿದ್ದಾರೆ. ನಾನು ಎಲ್ಲಾ ಹಣವನ್ನು ಖರ್ಚು ಮಾಡಿದ್ದೇನೆ. ಈಗ ನನ್ನ ಬ್ಯಾಂಕ್ ಖಾತೆಯಲ್ಲಿ ಯಾವುದೇ ಹಣವಿಲ್ಲ‘‘ ಎಂದು ದಾಸ್​ ಪೊಲೀಸರ ಬಳಿ ಹೇಳಿದ್ದಾನೆ.

  ಇದನ್ನೂ ಓದಿ:Sexual Harassment: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

  ಹೀಗೆ ತಪ್ಪಿ ಬಂದ ಹಣವನ್ನು ಖರ್ಚು ಮಾಡಿದ ದಾಸ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮೀಣ ಬ್ಯಾಂಕ್​ನ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಮಾನ್ಸಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸದ್ಯ ಆತ ಖರ್ಚು ಮಾಡಿರುವ ಅಷ್ಟೂ ಹಣವನ್ನು ಪೊಲೀಸರು ಹೇಗೆ ರಿಕವರಿ ಮಾಡುತ್ತಾರೆ ಎನ್ನುವುದೇ ಕುತೂಹಲಕಾರಿ ಸಂಗತಿ.
  Published by:Latha CG
  First published: