ಬಿಹಾರ: ತನ್ನ ಗಂಡ ಮತ್ತೊಬ್ಬಳ ಹಿಂದೆ ಓಡಿ ಹೋಗಿದ್ದಕ್ಕೆ ರಿವೇಂಜ್ (Revange) ತೀರಿಸಲು ಓಡಿ ಹೋದವಳ ಪತಿಯನ್ನೇ (Wedding) ಮದುವೆಯಾದ ಅಪರೂಪದ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಖಗರಿಯಾ ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತನ್ನ ಗಂಡನ ಪರ ಮಹಿಳೆಯೊಂದಿಗೆ ಓಡಿ ಹೋಗಿದ್ದಕ್ಕೆ ಆಕೆಯ ಪತಿಯನ್ನೇ ಮದುವೆ ಆಗುವ ಮೂಲಕ ಇಬ್ಬರಿಗೂ ಪರಸ್ಪರ ಪಾಠ ಕಲಿಸಲು ನೂತನ ದಂಪತಿ ನಿರ್ಧರಿಸಿದ್ದಾರೆ.
ಅಂದ ಹಾಗೆ, ಬಿಹಾರ ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ 2009ರಲ್ಲಿ ರೂಬಿ ದೇವಿ ಎಂಬವರನ್ನು ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ಮಕ್ಕಳು ಜನಿಸಿದ್ದರು. ಆದರೆ ಕೆಲ ಸಮಯದಿಂದ ನೀರಜ್ ಪತ್ನಿ ರೂಬಿ ದೇವಿ ಮುಖೇಶ್ ಎಂಬಾತನ ಜೊತೆ ಹೆಚ್ಚು ಸಲುಗೆಯಿಂದ ಇದ್ದಳು ಅಲ್ಲದೇ, ಆತನ ಜೊತೆ ಸಂಬಂಧವನ್ನೂ ಬೆಳೆಸಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಾದ ಪತಿ ಆಕೆಗೆ ತುಂಬಾ ಸಲ ಬುದ್ಧಿ ಹೇಳಿದ್ದ. ಆದರೂ ಆಕೆ ತನ್ನ ವರ್ತನೆಯನ್ನು ಸರಿ ಮಾಡಿಕೊಂಡಿರಲಿಲ್ಲ.
ಇದನ್ನೂ ಓದಿ: How to Eat: ಕಂಡವರ ಮದುವೆ ಅಂತ ಕಂಡಿದ್ದೆಲ್ಲ ತಿನ್ನಬೇಡ್ರೀ! ಹೇಗೆ ತಿನ್ನಬೇಕು, ಎಷ್ಟು ತಿನ್ನಬೇಕು ಅಂತ ಇಲ್ಲಿದೆ ಓದ್ರಿ
ಮದುವೆಗೆ ಮುನ್ನವೇ ಸಂಪರ್ಕದಲ್ಲಿದ್ದರು
ಮುಕೇಶ್ ಇದೇ ಜಿಲ್ಲೆಯ ಪಾಸ್ರಾಹಾ ಗ್ರಾಮದ ನಿವಾಸಿಯಾಗಿದ್ದು, ಮದುವೆಗೂ ಮುನ್ನ ರೂಬಿ ಅದೇ ಗ್ರಾಮದಲ್ಲಿ ನೆಲೆಸಿದ್ದಳು. ಆತನ ಜೊತೆ ಅನೇಕ ವರ್ಷಗಳ ಕಾಲ ಸಂಬಂಧ ಹೊಂದಿದ್ದ ಆಕೆ ನಂತರ ಮನೆಯವರ ಒತ್ತಾಯದ ಮೇರೆಗೆ ಬೇರೆ ಮದುವೆ ಆಗಿದ್ದಳು. ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ ಪತ್ನಿ ಮುಖೇಶ್ ಜೊತೆ ಓಡಿ ಹೋಗಿರುವ ವಿಷಯ ತಿಳಿದು ತಕ್ಷಣವೇ, ನೀರಜ್ ಮುಖೇಶ್ ವಿರುದ್ಧ ಪಸ್ರಾಹಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದಾನೆ.
ದೇವಾಲಯದಲ್ಲಿ ಮದುವೆ
ಇನ್ನೊಂದೆಡೆ ಈ ಸಮಸ್ಯೆಗೆ ಪರಿಹಾರ ಹುಡುಕಲು ಗ್ರಾಮದಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಕೂಡಾ ನಡೆಸಲಾಗಿತ್ತು. ಆದರೆ ಮುಖೇಶ್ ವಾಪಸ್ ಬರಲು ಒಪ್ಪದ ಕಾರಣ, ಮುಖೇಶ್ ಪತ್ನಿ ಮತ್ತು ನೀರಜ್ ಇಬ್ಬರಿಗೂ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ನೀರಜ್ ಮತ್ತು ಮುಖೇಶ್ ಪತ್ನಿ ವಿವಾಹವಾಗಲು ನಿರ್ಧಾರ ಮಾಡಿ ಫೆಬ್ರವರಿ 18ರಂದು ಸ್ಥಳೀಯ ದೇವಾಲಯವೊಂದರಲ್ಲಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: Reena Roy: 7 ವರ್ಷ ಲವ್, ಮದುವೆಯಾಗೋ ಹೊತ್ತಿಗೆ ಕೈಕೊಟ್ಟ ಸ್ಟಾರ್ ನಟ! ರೀನಾ ರಾಯ್ ರಿಯಲ್ ಲವ್ಸ್ಟೋರಿ ಸಕ್ಸಸ್ ಆಗಲಿಲ್ಲ
ನಾದಿನಿಯನ್ನೇ ಮದುವೆಯಾದ ಮಹಿಳೆ!
ಇತ್ತೀಚೆಗೆ ಬಿಹಾರದಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ನಡೆದಿತ್ತು. 10 ವರ್ಷಗಳ ಕಾಲ ತನ್ನ ಗಂಡನ ಜೊತೆ ಸಂಸಾರ ನಡೆಸಿನ ಅದರ ಪ್ರತಿರೂಪವಾಗಿ ಎರಡು ಮಕ್ಕಳನ್ನು ಪಡೆದ ಬಳಿಕ ಗಂಡನ ತಂಗಿಯ ಜೊತೆಗೆ ಮಹಿಳೆ ವಿವಾಹವಾದ ಅಪರೂಪದ ಪ್ರಕರಣ ನಡೆದಿತ್ತು. 32 ವರ್ಷದ ಶುಕ್ಲಾ ದೇವಿ ಬಿಹಾರದ ಸಮಷ್ಟಿಪುರ ಜಿಲ್ಲೆಯ ನಿವಾಸಿಯಾಗಿರುವ ಪ್ರಮೋದ್ ದಾಸ್‌ನನ್ನು ಮದುವೆಯಾಗಿದ್ದರು. ಬಳಿಕ ದಂಪತಿಯ ಮಧ್ಯೆ ಬಿರುಕು ಮೂಡಿದ ಪರಿಣಾಮ ಪರಸ್ಪರ ಬೇರೆಯಾಗಿದ್ದಾರೆ. ನಂತರ ಗಂಡನ ತಂಗಿಯಾಗಿರುವ 18 ವರ್ಷದ ಸೋನು ದೇವಿಯನ್ನು ಮದುವೆಯಾಗಿದ್ದಾಗಿ ಶುಕ್ಲಾ ದೇವಿ ಹೇಳಿಕೊಂಡಿದ್ದಾರೆ.
10 ವರ್ಷಗಳ ಹಿಂದೆ ಮದುವೆಯಾಗಿರುವ ಪ್ರಮೋದ್ ದಾಸ್ ಮತ್ತು ಶುಕ್ಲಾ ದೇವಿ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದು, ತನ್ನ ಗಂಡನಿಂದ ಬೇರ್ಪಟ್ಟ ನಂತರ ಕಳೆದ ಆರು ತಿಂಗಳ ಹಿಂದೆ ಸ್ವಂತ ನಾದಿನಿಯನ್ನೇ ಶುಕ್ಲಾ ದೇವಿ ವಿವಾಹವಾಗಿ ಪರಸ್ಪರ ಒಟ್ಟಿಗೆ ಬದಕಲು ಆರಂಭಿಸಿದ್ದಾರೆ. ಜೊತೆಗೆ ಎಲ್ಲಾ ರೀತಿಯ ಶಾಸ್ತ್ರ, ಸಂಪ್ರದಾಯಗಳಿಗೆ ಸೆಡ್ಡು ಹೊಡೆದು ನಮ್ಮ ಬದುಕು ನಮ್ಮ ಇಷ್ಟ ಎಂಬಂತೆ ಬದುಕುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ