Viral News: 12 ವರ್ಷ ಮಗನ ತಿಥಿ ಮಾಡಿದ್ದಳು ತಾಯಿ! ಈಗ ಅದೇ ಯುವಕ ಮನೆಗೆ ಬರುತ್ತಿದ್ದಾನೆ!

ಮನೆಯವರು ಹುಡುಕಾಟ ನಡೆಸಿದರೂ ಆತನ ಪತ್ತೆಯಾಗಿರಲಿಲ್ಲ. ಹೀಗಾಗಿ ಅಂತ್ಯಸಂಸ್ಕಾರ ಮಾಡಿದ್ದಲ್ಲದೇ, 12 ವರ್ಷ ತಿಥಿ ಕಾರ್ಯವನ್ನೂ ಮಾಡಿದ್ದರು. ಇತನ ತಾಯಿ ವೃತ್ತಿ ದೇವಿ ಪ್ರತಿ ವರ್ಷ ತಪ್ಪದೇ ಮಗನ ತಿಥಿ ಕಾರ್ಯ ನಡೆಸಿ, ಸಂಬಂಧಿಕರಿಗೆ ಊಟ ಹಾಕುತ್ತಿದ್ದರು. ಇದೀಗ ಆತ ಮನೆಗೆ ಬರುತ್ತಿರುವ ವಿಚಾರ ಗೊತ್ತಾಗಿದೆ!

ಪಾಕಿಸ್ತಾನದಲ್ಲಿ ಬಂಧಿತನಾಗಿದ್ದ ಛಾವಿ ಕುಮಾರ್

ಪಾಕಿಸ್ತಾನದಲ್ಲಿ ಬಂಧಿತನಾಗಿದ್ದ ಛಾವಿ ಕುಮಾರ್

  • Share this:
ಬಿಹಾರ: ಆತ 12 ವರ್ಷಗಳ (12 Years) ಹಿಂದೆ ಮನೆಯಿಂದ (House) ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ (Missing). ಈ ವೇಳೆ ಮನೆಯವರು, ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರೆಲ್ಲ ಎಲ್ಲಾ ಕಡೆ ಹುಡುಕಿದ್ದರು. ಪೊಲೀಸರಿಗೆ (Police) ಕಂಪ್ಲೇಟ್ (Complaint) ಕೊಟ್ಟರೂ ಲಾಭವಾಗಿರಲಿಲ್ಲ. ಮನೆಯಿಂದ ಏಕಾಏಕಿ ನಾಪತ್ತೆಯಾದವ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಮನೆಯವರೆಲ್ಲ ಆತ ಸತ್ತೇ (Dead) ಹೋಗಿದ್ದಾನೆ ಅಂತ ನಿರ್ಧಾರ ಮಾಡಿದ್ರು. ಎಷ್ಟು ದಿನ ಆದರೂ ಮನೆಗೆ ಬರದೇ ಇರೋದ್ರಿಂದ ಶಾಸ್ತ್ರದ ಪ್ರಕಾರ ಆತನ ಅಂತ್ಯಸಂಸ್ಕಾರ (Funeral) ನಡೆಸಿದ್ದರು. ಬರೋಬ್ಬರಿ 12 ವರ್ಷ ತಪ್ಪದೇ ತಿಥಿ ಕಾರ್ಯ ನಡೆಸಿಕೊಂಡು ಬಂದಿದ್ದರು. ಆದರೆ 12 ವರ್ಷದ ನಂತರ ಅದೇ ವ್ಯಕ್ತಿ ಏಕಾಏಕಿ ಮನೆಗೇ ಬಂದು ಬಿಟ್ಟಿದ್ದಾನೆ.

ಬಿಹಾರದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ

ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಬಿಹಾರದ ಬಕ್ಸರ್ ಜಿಲ್ಲೆಯ ಮುಫಿಸ್ಸಿಲ್​ ಪೊಲೀಸ್ ಠಾಣಾ ವ್ಯಾಪ್ತಿಯ ಖಿಲಾಫತ್​​ಪುರ ಛಾವಿ ಕುಮಾರ್​ ಎಂಬಾತ ಏಕಾಏಕಿ ನಾಪತ್ತೆಯಾಗಿದ್ದ. ಮನೆಯವರು ಹುಡುಕಾಟ ನಡೆಸಿದರೂ ಆತನ ಪತ್ತೆಯಾಗಿರಲಿಲ್ಲ. ಹೀಗಾಗಿ ಅಂತ್ಯಸಂಸ್ಕಾರ ಮಾಡಿದ್ದಲ್ಲದೇ, 12 ವರ್ಷ ತಿಥಿ ಕಾರ್ಯವನ್ನೂ ಮಾಡಿದ್ದರು. ಇತನ ತಾಯಿ ವೃತ್ತಿ ದೇವಿ ಪ್ರತಿ ವರ್ಷ ತಪ್ಪದೇ ಮಗನ ತಿಥಿ ಕಾರ್ಯ ನಡೆಸಿ, ಸಂಬಂಧಿಕರಿಗೆ ಊಟ ಹಾಕುತ್ತಿದ್ದರು.

12 ವರ್ಷಗಳ ಬಳಿಕ ಮನೆಗೆ ಬರುತ್ತಿದ್ದಾನೆ ಅದೇ ವ್ಯಕ್ತಿ

ಅಸಲಿಗೆ ಛಾವಿ ಕುಮಾರ್ ಸತ್ತಿರಲಿಲ್ಲ. ಹೀಗಾಗಿ ಆತ ಇದೀಗ ತನ್ನ ಮನೆಗೆ ಬರುತ್ತಿದ್ದಾನೆ. ಬರೋಬ್ಬರಿ 12 ವರ್ಷಗಳ ಬಳಿಕ ಆತ ವಾಪಸ್ಸಾಗುತ್ತಿದ್ದಾನೆ. ಆತನನ್ನು ಕರೆತರಲು ಬಿಹಾರ ಪೊಲೀಸರು ಪಂಜಾಬ್‌ನ ಗುರುದಾಸ್‌ಪುರಕ್ಕೆ ಹೋಗುತ್ತಿದ್ದಾರೆ.

ಇದನ್ನೂ ಓದಿ: Crime News: ಪತಿ, ಪತ್ನಿ ಮತ್ತು ಕಾಮುಕ ಬಾಸ್! "ನಿನ್ ಹೆಂಡ್ತಿ ಕಳಿಸು" ಎಂದಿದ್ದಕ್ಕೆ ಈತ ಮಾಡಿದ್ದೇನು?

ದಾರಿ ತಪ್ಪಿ ಪಾಕಿಸ್ತಾನಕ್ಕೆ ಹೋಗಿದ್ದ ಯುವಕ

ಬಿಹಾರದ ಮುಫಿಸ್ಸಿಲ್​ ಪೊಲೀಸ್ ಠಾಣಾ ವ್ಯಾಪ್ತಿಯ ಖಿಲಾಫತ್​​ಪುರ ಗ್ರಾಮದ ಛಾವಿ ಮುಸಾಹರ್​ 12 ವರ್ಷಗಳ ಹಿಂದೆ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ರು. ಈ ವೇಳೆ ಸಂಬಂಧಿಕರು ಸಾಕಷ್ಟು ಹುಡುಕಾಡಿದ್ರೂ ಆತ ಪತ್ತೆಯಾಗಿರಲಿಲ್ಲ. ಹೀಗಾಗಿ ಆತ ಸಾವನ್ನಪ್ಪಿದ್ದಾನೆಂದು ಪರಿಗಣಿಸಿ, ಅಂತಿಮ ವಿಧಿವಿಧಾನ ನಡೆಸಿದ್ದರು. ಆದರೆ, ಕಳೆದ ವರ್ಷ ಡಿಸೆಂಬರ್​​ನಲ್ಲಿ ಯುವಕನೋರ್ವ ದಾರಿ ತಪ್ಪಿ ಪಾಕಿಸ್ತಾನ ತಲುಪಿರುವ ಬಗ್ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿತ್ತು.

ಪಾಕಿಸ್ತಾನ ಜೈಲಿನಲ್ಲೇ ಇದ್ದ ಛಾವಿ ಕುಮಾರ್

ದಾರಿ ತಪ್ಪಿ ಗಡಿ ದಾಟಿ ಬಂದಿದ್ದ ಛಾವಿ ಕುಮಾರ್‌ನನ್ನು ಪಾಕಿಸ್ತಾನ ಸೇನೆ ಬಂಧಿಸಿತ್ತು. ಆತನನ್ನು ಪಾಕಿಸ್ತಾನದ ಕರಾಚಿ ಜೈಲಿನಲ್ಲಿ ಇರಿಸಲಾಗಿತ್ತು. ಇದಾದ ಬಳಿಕ ಆತನನ್ನು ಭಾರತಕ್ಕೆ ಕರೆತರುವ ಕೆಲಸ ಶುರುವಾಗಿತ್ತು. ತನ್ನ ಮಗ ಜೀವಂತವಾಗಿದ್ದಾನೆಂಬ ಮಾಹಿತಿ ತಿಳಿಯುತ್ತಿದ್ದಂತೆ ತಾಯಿಯ ವೃತ್ತಿ ದೇವಿ ಸಂತಸ ವ್ಯಕ್ತಪಡಿಸಿದ್ದಾರೆ.

ಮಗ ಜೀವಂತ ಇರುವುದನ್ನು ತಿಳಿದು ತಾಯಿ ಸಂತಸ

ಇನ್ನು ಈ ಬಗ್ಗೆ ಮಾತನಾಡಿರುವ ಛಾವಿ ಕುಮಾರ್‌ನ ತಾಯಿ ವೃತ್ತಿ ದೇವಿ, ನನ್ನ ಮಗ ಸಿಗದ ಕಾರಣ ಆತ ಸಾವನ್ನಪ್ಪಿದ್ದಾನೆಂದು ತಿಳಿದಿದ್ದೆವು. ಆತ ಬದುಕಿರುವ ಬಗ್ಗೆ ಭರವಸೆ ಕೈಬಿಟ್ಟಿದೆ. ಜೊತೆಗೆ ಅಂತ್ಯಸಂಸ್ಕಾರ ಸಹ ಮಾಡಿದ್ದೇವು. ಆದರೆ, ಆತ ದಾರಿ ತಪ್ಪಿ ಪಾಕಿಸ್ತಾನಕ್ಕೆ ಹೋಗಿರುವ ವಿಷಯ ಗೊತ್ತಾಗಿದ್ದು, ಇದೀಗ ಹಿಂತಿರುಗುತ್ತಿದ್ದಾನೆ ಎಂದಿದ್ದಾರೆ. ಇದು ತಿಳಿದು ಸಂತಸವಾಗುತ್ತಿದೆ.

ಇದನ್ನೂ ಓದಿ: Shocking News: ಹೆಂಡತಿ-ಮಗುವನ್ನು ಕೊಂದು, ವಾಟ್ಸಾಪ್‌ನಲ್ಲಿ ಫೋಟೋ ಶೇರ್ ಮಾಡಿದ ಪಾಪಿ! ವಿಕೃತ ಕೃತ್ಯಕ್ಕೆ ಕಾರಣವೇನು ಗೊತ್ತಾ?

ಛಾವಿ ಕುಮಾರ್‌ನನ್ನು ಕರೆತರಲು ತೆರಳಿದ ಪೊಲೀಸರು

ಅಟ್ಟಾರಿ ಗಡಿ ಮೂಲಕ ವಾಪಸ್​: ಪಾಕ್​ ಜೈಲಿನಲ್ಲಿದ್ದ ಛಾವಿ ಕುಮಾರ್‌ನನ್ನು ಪಾಕ್​ ಈಗಾಗಲೇ ಭಾರತದ ಬಿಎಸ್​ಎಫ್​ಗೆ ಹಸ್ತಾಂತರ ಮಾಡಿದೆ. ಹೀಗಾಗಿ ಬಿಹಾರ ಪೊಲೀಸರು ಆತನನ್ನ ಕರೆತರಲು ಗುರುದಾಸ್​ಪುರಕ್ಕೆ ತೆರಳಿದ್ದಾರೆ.
Published by:Annappa Achari
First published: