• Home
  • »
  • News
  • »
  • national-international
  • »
  • Bihar: 'ಫ್ರೀ ಕಾಂಡೋಂ' ವಿಚಾರ, ತಪ್ಪಾಯ್ತು ಕ್ಷಮಿಸಿ ಎಂದ IAS ಅಧಿಕಾರಿ, ನೋಟಿಸ್​ ಕಳುಹಿಸಿದ NCW

Bihar: 'ಫ್ರೀ ಕಾಂಡೋಂ' ವಿಚಾರ, ತಪ್ಪಾಯ್ತು ಕ್ಷಮಿಸಿ ಎಂದ IAS ಅಧಿಕಾರಿ, ನೋಟಿಸ್​ ಕಳುಹಿಸಿದ NCW

ಬಿಹಾರ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್

ಬಿಹಾರ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್

ಬಿಹಾರದ ಮಹಿಳಾ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಮತ್ತು ವಿದ್ಯಾರ್ಥಿನಿ ನಡುವಿನ ಪ್ರಶ್ನೋತ್ತರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ 20-30 ರೂಪಾಯಿ ಮೌಲ್ಯದ ಸ್ಯಾನಿಟರಿ ಪ್ಯಾಡ್‌ಗಳನ್ನು ಸರ್ಕಾರ ನಮಗೆ ನೀಡಲು ಸಾಧ್ಯವಿಲ್ಲವೇ? ಎಂದು ವಿದ್ಯಾರ್ಥಿನಿ ಕೇಳಿದ್ದರು. ಈ ಪ್ರಶ್ನೆಗೆ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಆಕ್ಷೇಪಾರ್ಹ ಉತ್ತರ ನೀಡಿದ್ದರು.

ಮುಂದೆ ಓದಿ ...
  • Share this:

ಪಾಟ್ನಾ(ಸೆ.30): ಬಿಹಾರದ ಐಎಎಸ್ ಹರ್ಜೋತ್ ಕೌರ್ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್, ಉಚಿತ ಕಾಂಡೋಮ್ (Condom) ಮತ್ತು ಪಾಕಿಸ್ತಾನದಂತಹ (Pakistan) ವಿಚಾರವಾಗಿ ಹೇಳಿಕೆ ನೀಡುವ ಮೂಲಕ ಬೆಳಕಿಗೆ ಬಂದಿದ್ದರು. ಆದರೆ ಅವರ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಅಸಮಾಧಾನದ ವಾತಾವರಣ ಮನೆ ಮಾಡಿತ್ತು. ಮಹಿಳಾ ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಬಳಕೆದಾರರು ಒತ್ತಾಯಿಸಿದ್ದರು. ಹೀಗಿರುವಾಗ ಈ ವಿಚಾರವಾಗಿ ಸಿಎಂ ನಿತೀಶ್ ಕುಮಾರ್ (Bihar Chief Minister Nitish Kumar) ಕ್ರಮ ಕೈಗೊಳ್ಳುವ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದರು. ಇದ್ರ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಹರ್ಜೋತ್ ಕೌರ್ ಸಿಎಂ ಅವರ ಕಟ್ಟುನಿಟ್ಟಿನ ಧೋರಣೆಯನ್ನು ಕಂಡು ಕ್ಷಮೆಯಾಚಿಸಿದ್ದರು. ಹೀಗಿದ್ದರೂ ಈ ವಿಚಾರ ತಣ್ಣಗಾಗಿಲ್ಲ.


ಕ್ಷಮೆ ಯಾಚಿಸಿದ್ದ ಐಎಎಸ್​ ಅಧಿಕಾರಿ


ವಾಸ್ತವವಾಗಿ, ಹರ್ಜೋತ್ ಕೌರ್ ಈ ಇಡೀ ಘಟನೆಗೆ ಕ್ಷಮೆಯಾಚಿಸಿದ್ದಾರೆ. ಆದರೀಗ ರಾಷ್ಟ್ರೀಯ ಮಹಿಳಾ ಆಯೋಗವು ಈ ವಿಚಾರವಾಗಿ ನೋಟಿಸ್ ಕಳುಹಿಸಿದ್ದು, ಈ ವಿಚಾರವಾಗಿ ಮುಂದಿನ ಏಳು ದಿನಗಳಲ್ಲಿ ಅವರಿಂದ ವಿವರಣೆಯನ್ನು ಕೇಳಿದೆ. ಸಮಾಧಾನಕರ ಉತ್ತರ ಸಿಗದಿದ್ದರೆ ಅವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳೂ ಇವೆ. ಬಿಹಾರ ಮಹಿಳಾ ವಿಕಾಸ್ ನಿಗಮ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಶಾಲೆಯ ವಿದ್ಯಾರ್ಥಿನಿಯ ಪ್ರಶ್ನೆಗೆ ವಿವಾದಾತ್ಮಕ ಉತ್ತರವನ್ನು ನೀಡಿದ್ದರು ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ: Love Dhoka: ಆ ಹುಡುಗಿ ಪಾಲಿಗೆ ಪ್ರಿಯಕರನೇ ವಿಲನ್! ಅತ್ಯಾಚಾರದಿಂದ ನೊಂದು ವಿಷ ಕುಡಿದ ಸಂತ್ರಸ್ತೆ


ವಿದ್ಯಾರ್ಥಿನಿ ಬಳಿ ಆಕ್ಷೇಪಾರ್ಹ ಮಾತು


20-30 ರೂಪಾಯಿ ಮೌಲ್ಯದ ಸ್ಯಾನಿಟರಿ ಪ್ಯಾಡ್‌ಗಳನ್ನು ಸರ್ಕಾರ ನಮಗೆ ನೀಡಲು ಸಾಧ್ಯವಿಲ್ಲವೇ ಎಂದು ವಿದ್ಯಾರ್ಥಿನಿ ಕೇಳಿದ್ದು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ಈ ಪ್ರಶ್ನೆಗೆ ಉತ್ತರಿಸಿದ ಐಎಎಸ್ ಅಧಿಕಾರಿ ಹರ್ಜೋತ್ ಕೌರ್, ನಿಮ್ಮ ಬೇಡಿಕೆಗಳಿಗೆ ಕೊನೆಯಿಲ್ಲ. ನಾಳೆ ನೀವು ಸರ್ಕಾರದ ಬಳಿ ಜೀನ್ಸ್ ಮತ್ತು ಒಳ್ಳೆಯ ಶೂಗಳನ್ನು ನೀಡಿ ಎನ್ನುತ್ತೀರಿ. ನಾಳೆ ನೀವು ಜೀನ್ಸ್-ಪ್ಯಾಂಟ್ ಕೇಳುತ್ತೀರಿ, ಮರುದಿನ ಸುಂದರವಾದ ಬೂಟುಗಳು ಕೊಡಿ ಎನ್ನುತ್ತೀರಿ. ಅಂತಿಮವಾಗಿ ಕುಟುಂಬ ಯೋಜನೆಗೆ ಬಂದಾಗ, ನಿಮಗೆ ಕಾಂಡೋಮ್ ಅನ್ನು ಉಚಿತವಾಗಿ ನೀಡಬೇಕಾಗುತ್ತದೆ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.


ಪಾಕಿಸ್ತಾನಕ್ಕೆ ಹೋಗಿ ಎಂದಿದ್ದ ಅಧಿಕಾರಿ


ಹರ್ಜೋತ್ ಕೌರ್ ಅವರು, ಸರ್ಕಾರದಿಂದ ತೆಗೆದುಕೊಳ್ಳಬೇಕಾದ ಅಗತ್ಯವೇನು? ನಿಮ್ಮನ್ನು ಶ್ರೀಮಂತಗೊಳಿಸಿ, ಎಷ್ಟರ ಮಟ್ಟಿಗೆಂದರೆ ಸರ್ಕಾರದಿಂದ ಏನನ್ನೂ ತೆಗೆದುಕೊಳ್ಳುವ ಅಗತ್ಯವಿರದಷ್ಟು ಎತ್ತರಕ್ಕೇರಿ ಎಂದಿದ್ದರು. ಐಎಎಸ್ ಅಧಿಕಾರಿಯ ಉತ್ತರಕ್ಕೆ, ಜನರ ಮತದಿಂದ ಸರ್ಕಾರ ರಚನೆಯಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದರೆ, ಇದು ಮೂರ್ಖತನದ ಪರಮಾವಧಿ, ಮತ ಹಾಕಬೇಡಿ ಪಾಕಿಸ್ತಾನಕ್ಕೆ ಹೋಗಿ ಎಂದು ಮಹಿಳಾ ಅಧಿಕಾರಿ ಹೇಳಿ ಕಿಡಿ ಕಾರಿದ್ದರು.


ನಿತೀಶ್ ಕುಮಾರ್ ಈ ವಿಷಯ ತಿಳಿಸಿದ್ದಾರೆ


ಹರ್ಜೋತ್ ಕೌರ್ ಮತ್ತು ಈ ವಿದ್ಯಾರ್ಥಿನಿ ನಡುವಿನ ಈ ಸಂಭಾಷಣೆಯ ವೀಡಿಯೊ ವೈರಲ್ ಆಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಈ ವಿಷಯದ ವಿಚಾರವಾಗಿ ಇಂದು ಬೆಳಿಗ್ಗೆ ಐಎಎಸ್ ಹರ್ಜೋತ್ ಕೌರ್ ಈ ರೀತಿ ಹೇಳಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು, ಇದು ಮಹಿಳೆಯರಿಗೆ ಬಹಳ ಕೆಟ್ಟ ಅನುಭವ ನೀಡಿದೆ. ನಾನು ವಿಷಯದ ಸಂಪೂರ್ಣ ವಿವರಗಳನ್ನು ತೆಗೆದುಕೊಂಡಿದ್ದೇನೆ. ನಾವು ಎಲ್ಲವನ್ನೂ ನೋಡುತ್ತಿದ್ದೇವೆ. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.


ಈ ಬಗ್ಗೆ ಹರ್ಜೋತ್ ಕೌರ್ ಸ್ಪಷ್ಟನೆ


ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯೆ ಬಳಿಕ ಹರ್ಜೋತ್ ಕೌರ್ ಹೇಳಿಕೆಯೂ ಮುನ್ನೆಲೆಗೆ ಬಂದಿತ್ತು. ಇಲ್ಲಿ ಅವರು ವಿದ್ಯಾರ್ಥಿಯನ್ನು ಭಾವನಾತ್ಮಕವಾಗಿ ಅಥವಾ ಮಾನಸಿಕವಾಗಿ ಅವಮಾನಿಸುವ ಅಥವಾ ಕಿರುಕುಳ ನೀಡುವ ಉದ್ದೇಶವನ್ನು ಹೊಂದಿಲ್ಲ ಎಂದು ಎರಡು ಪುಟಗಳ ವಿವರಣೆಯಲ್ಲಿ ತಿಳಿಸಿದ್ದರು. ಯಾರಿಗಾದರೂ ನೋವಾಗಿದ್ದರೆ, ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ವಿವರಣೆಯಲ್ಲಿ ಬರೆದಿದ್ದರು.


ಇದನ್ನೂ ಓದಿ: Bihar: ನಾನು ಭಾರತೀಯಳು, ನಾನೇಕೆ ಪಾಕ್​ಗೆ ಹೋಗಲಿ?: IAS ಅಧಿಕಾರಿಯ ಸೊಕ್ಕಿಗೆ ಬಾಲಕಿಯ ದಿಟ್ಟ ಉತ್ತರ!


ನೋಟಿಸ್ ಕಳುಹಿಸಿದ ರಾಷ್ಟ್ರೀಯ ಮಹಿಳಾ ಆಯೋಗ


ಕಾಂಡೋಮ್ ಹೇಳಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ಐಎಎಸ್ ಹರ್ಜೋತ್ ಕೌರ್ ಅವರಿಗೆ ನೋಟಿಸ್ ನೀಡಿದೆ ಎಂಬುವುದು ಉಲ್ಲೇಖನೀಯ. ಏಳು ದಿನಗಳೊಳಗೆ ಸಮಾಧಾನಕರ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆದರೆ, ಹರ್ಜೋತ್ ಕೌರ್ ಈ ವಿಷಯದಲ್ಲಿ ಕ್ಷಮೆಯಾಚಿಸಿದ ನಂತರ, ಈ ವಿಷಯವು ಮುಂದೆ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Published by:Precilla Olivia Dias
First published: