ಸಾರ್ವಜನಿಕ ಮಾರುಕಟ್ಟೆಯಲ್ಲಿ ಮಹಿಳೆಯೋರ್ವಳ ಸ್ತನ, ಕೈ, ಕಾಲು ಮತ್ತು ಕಿವಿಗಳನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹತ್ಯೆಗೈಯಲಾಗಿದೆ. ಆರೋಪಿಯನ್ನು ಮೊಹಮ್ಮದ್ ಶಕೀಲ್ ಎಂದು ಗುರುತಿಸಲಾಗಿದ್ದು, ಮಡಿಕೆಯೊಳಗೆ ಹರಿತವಾದ ಆಯುಧವನ್ನು ಅಡಗಿಸಿಟ್ಟುಕೊಂಡು ಸಾರ್ವಜನಿಕ ಮಾರುಕಟ್ಟೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಿಳೆಯನ್ನು ವಿಕೃತವಾಗಿ ವಿರೂಪಗೊಳಿಸಿದ ನಂತರ ಆರೋಪಿ ಶಕೀಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ಬಿಹಾರದ (Bihar Crime news) ಭಾಗಲ್ಪುರ ಜಿಲ್ಲೆಯ ಪಿರಪೈಂಟಿ ಮಾರುಕಟ್ಟೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಹಾಡಹಗಲೇ ಮಹಿಳೆಯ ಮೇಲೆ ನಡೆದ ಈ ಭೀಕರ ದಾಳಿಯಿಂದ (Deadly Murder) ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಮಹಿಳೆ ಖಾಯಂ ಮಾರುಕಟ್ಟೆಗೆ ಭೇಟಿ ನೀಡುತ್ತಿದ್ದಳು ಎಂದು ಗುರುತಿಸಿದ ಸಾರ್ವಜನಿಕರು ಆಕೆಯ ಗಂಡನಿಗೆ ಮಾಹಿತಿ ನೀಡಿದ್ದಾರೆ.
ಈ ಭೀಕರ ಘಟನೆಯ ನಂತರ ಗಾಯಗೊಂಡ ಮಹಿಳೆಯನ್ನು ಮಾಯಗಂಜ್ನ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ.
ಆಗಾಗ ಮಾರುಕಟ್ಟೆಗೆ ಆಗಮಿಸುತ್ತಿದ್ದ ಮಹಿಳೆ
ದಾಳಿಯ ನಂತರ ಮಾರುಕಟ್ಟೆಯಲ್ಲಿ ನೆರೆದಿದ್ದ ಜನರು ಆಕೆಯನ್ನು ಮಾರುಕಟ್ಟೆಗೆ ನಿಯಮಿತವಾಗಿ ಭೇಟಿ ನೀಡುವವರು ಎಂದು ಗುರುತಿಸಿದ್ದಾರೆ. ಘಟನೆಯ ಬಗ್ಗೆ ಅವರ ಪತಿ ಅಶೋಕ್ ಯಾದವ್ಗೆ ತಿಳಿಸಿದ್ದಾರೆ ಅಶೋಕ್ ಯಾದವ್ ಮತ್ತು ಅವರ ಪತ್ನಿ ಛೋಟಿ ಹತ್ತಿರದ ಡಿಲೋರಿ ಎಂಬ ಸ್ಥಳದ ನಿವಾಸಿಗಳು ಎಂದು ತಿಳಿದುಬಂದಿದೆ.
ಸಾಯುವ ಮುನ್ನ ಹತ್ಯೆಗೈದ ವ್ಯಕ್ತಿಯ ಮಾಹಿತಿ ತಿಳಿಸಿದ ಮಹಿಳೆ
ಭೀಕರ ದಾಳಿಯ ಮಾಹಿತಿ ತಿಳಿದ ಪೊಲೀಸರು ತಕ್ಷಣ ದಾಳಿ ನಡೆದ ಸ್ಥಳಕ್ಕೆ ತಲುಪಿದ್ದಾರೆ. ಇದೇ ವೇಳೆ ಮಹಿಳೆ ಗಾಯಗೊಂಡ ಸ್ಥಿತಿಯಲ್ಲಿಯೇ ಪೊಲೀಸರಿಗೆ ದಾಳಿಕೋರನ ಹೆಸರನ್ನು ತಿಳಿಸಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಮುಖ್ಯ ಆರೋಪಿ ಶಕೀಲ್ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: Ludo Game Bet: ಲುಡೋ ಆಡಲು ತನ್ನನ್ನೇ ಪಣಕ್ಕಿಟ್ಟು ಸೋತ ಮಹಿಳೆ ಈಗ ಮಾಲೀಕನ ದಾಸಿ! ಹೆಂಡ್ತಿಗಾಗಿ ಗಂಡನ ಕಣ್ಣೀರು
ಮಹಿಳೆಯ ಎದೆಗೆ ಆರೋಪಿ ಹಲವು ಬಾರಿ ಇರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಾಳೆ ಎಂದು ಭಾಗಲ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಾಬು ರಾಮ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಡ್ರಮ್ನಲ್ಲಿತ್ತು ಮಹಿಳೆಯ ದೇಹ! ವರ್ಷದ ಹಿಂದೇ ನಡೆದಿತ್ತಾ ಬರ್ಬರ ಕೊಲೆ?
ಶ್ರದ್ಧಾ ವಾಕರ್ ಹತ್ಯಾಕಾಂಡದ ನಂತರ ಸೇಮ್ ಟು ಸೇಮ್ ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದ ಮನೆಯೊಂದರಲ್ಲಿ ಡ್ರಮ್ ಒಂದರಲ್ಲಿ ಮಹಿಳೆಯೊಬ್ಬಳ ದೇಹದ ಭಾಗಗಳು ಪತ್ತೆಯಾಗಿವೆ. ಅದಕ್ಕೂ ಮಿಗಿಲಾಗಿ ಒಂದು ವರ್ಷಕ್ಕೂ ಮುನ್ನವೇ ಮಹಿಳೆಯ ಕೊಲೆಯಾಗಿರುವ ಕುರಿತು ಪೊಲೀಸರು ಶಂಖೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿ ಬಾಡಿಗೆ ಕೊಟ್ಟಿಲ್ಲ ಎಂದು ಮನೆ ಮಾಲೀಕ ಬಾಗಿಲನ್ನು ಒಡೆದಿದ್ದಾರೆ. ಆಗ ಮಹಿಳೆಯ ಮೃತದೇಹದ ಬಿಡಿಭಾಗಗಳು ಪತ್ತೆಯಾಗಿವೆ. ಇಂದು ಆಂಧ್ರ ಪ್ರದೇಶ ವಿಶಾಖಪಟ್ಟಣದ ಮಧುರವಾಡದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಸಾಮಾನುಗಳನ್ನು ತೆರವುಗೊಳಿಸಲು ಮನೆಯ ಮಾಲೀಕರು ಬಾಗಿಲು ಒಡೆದು ಮನೆಯೊಳಗೆ ಹೊಕ್ಕಾಗ ಈ ಶಾಕಿಂಗ್ ಘಟನೆ ಬಹಿರಂಗಗೊಂಡಿದೆ.
ಇದನ್ನೂ ಓದಿ: Wuhan: ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯ ಶಾಕಿಂಗ್ ಹೇಳಿಕೆ, ಡ್ರ್ಯಾಗನ್ ಬಣ್ಣ ಬಯಲು
ಜೂನ್ 2021 ರಲ್ಲಿ ಮನೆಯಲ್ಲಿ ಬಾಡಿಗೆಗಿದ್ದ ವ್ಯಕ್ತಿ ತನ್ನ ಹೆಂಡತಿ ಗರ್ಭಿಣಿ ಎಂದು ಹೇಳಿ ಏಕಾಏಕಿ ಮನೆ ಖಾಲಿ ಮಾಡಿದ್ದ ಎಂದು ಮನೆ ಮಾಲೀಕರು ತಿಳಿಸಿದ್ದಾರೆ. ಅಲ್ಲದೇ ಮನೆ ಬಾಡಿಗೆಯನ್ನೂ ಕೊಟ್ಟಿರಲಿಲ್ಲವಂತೆ. ಅಲ್ಲದೇ ಹಿಂಬಾಗಿಲಿನಿಂದ ಆಗಾಗ ಮನೆಗೆ ಬಂದು ಹೋಗುತ್ತಿದ್ದನಂತೆ.
ಒಂದು ವರ್ಷದ ನಂತರ ಮನೆಗೆ ನುಗ್ಗಿದ ಮಾಲೀಕರು
ಆದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾದ ಬಳಿಕ ಮನೆ ಮಾಲೀಕರು ಇಂದು ಬಲವಂತವಾಗಿ ಮನೆಗೆ ನುಗ್ಗಿದ್ದಾರೆ. ಬಾಡಿಗೆದಾರನ ಸಾಮಾನುಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಆಗ ಮಹಿಳೆಯ ಮೃತದೇಹದ ಭಾಗಗಳು ಡ್ರಮ್ನಲ್ಲಿ ಪತ್ತೆಯಾಗಿದ್ದು ಮನೆ ಮಾಲೀಕ ಶಾಕ್ ಆಗಿದ್ದಾರೆ. ಮಹಿಳೆಯ ಡ್ರಮ್ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ