Bihar: ಬಹುಮತ ಸಾಬೀತುಪಡಿಸಲಿದೆ ಮಹಾಘಟಬಂಧನ್ ಸರ್ಕಾರ, ಶಾಸಕರಿಗೆ ವಿಪ್ ಜಾರಿ ಮಾಡಿದ ತೇಜಸ್ವಿ ಯಾದವ್!

Bihar Assembly Special Session: ಬಿಹಾರಕ್ಕೆ ಇಂದು ಅತ್ಯಂತ ಮಹತ್ವದ ದಿನ. ವಿಧಾನ ಸಭೆಯ ಎರಡು ದಿನಗಳ ವಿಶೇಷ ಅಧಿವೇಶನ ಬುಧವಾರದಿಂದ ಆರಂಭವಾಗುತ್ತಿದೆ. ಈ ವೇಳೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಸರ್ಕಾರ ವಿಶ್ವಾಸಮತ ಯಾಚಿಸಲಿದೆ. ಇದೇ ವೇಳೆ ವಿಧಾನಸಭಾಧ್ಯಕ್ಷ ವಿಜಯ್ ಸಿನ್ಹಾ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆ ಇದೆ.

ನಿತೀಶ್ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ

ನಿತೀಶ್ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ

  • Share this:
ಪಾಟ್ನಾ(ಆ.24): ಬಿಹಾರದ (Bihar) ಪಾಲಿಗೆ ರಾಜಕೀಯವಾಗಿ ಇಂದು ಬಹಳ ಪ್ರಕ್ಷುಬ್ಧ ದಿನ ಎಂದು ನಿರೀಕ್ಷಿಸಲಾಗಿದೆ. ಆಗಸ್ಟ್ 24 ರಿಂದ ಎರಡು ದಿನಗಳ ಕಾಲ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭವಾಗಲಿದೆ. ಈ ವೇಳೆ ಮುಖ್ಯಮಂತ್ರಿ ನಿತೀಶ್ ಕುಮಾರ್ (Chief Minister Nitish Kumar) ನೇತೃತ್ವದ ಮಹಾಮೈತ್ರಿ ಸರ್ಕಾರವು ಸದನದಲ್ಲಿ ವಿಶ್ವಾಸಮತ ಯಾಚನೆಯನ್ನು ಮಂಡಿಸಲಿದೆ. ಮತ್ತೊಂದೆಡೆ ವಿಧಾನ ಸಭಾಧ್ಯಕ್ಷರ ವಿಚಾರವಾಗಿ ನಿರಂತರ ಹಗ್ಗ ಜಗ್ಗಾಟ ನಡೆಯುತ್ತಿದೆ. ಹೀಗಿರುವಾಗ ಸ್ಪೀಕರ್ ವಿಜಯ್ ಸಿನ್ಹಾ (Vijay Sinha) ಅವರು ತಮ್ಮ ಸ್ಥಾನವನ್ನು ಬಿಡುತ್ತಾರಾ, ಇಲ್ಲವಾ ಎಂಬ ಕುತೂಹಲವೂ ಮೂಡಿದೆ. ಒಂದು ವೇಳೆ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯದಿದ್ದರೆ ಆಡಳಿತ ಪಕ್ಷವು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಇವೆಲ್ಲದರ ನಡುವೆ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ (RJD) ಶಾಸಕಾಂಗ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ರಾಷ್ಟ್ರೀಯ ಜನತಾ ದಳದ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಸದನದ ಕಲಾಪ ಆರಂಭದಿಂದ ಮುಗಿಯುವವರೆಗೂ ಹಾಜರಿರುವಂತೆ ಎಲ್ಲಾ ಶಾಸಕರಿಗೆ ಸೂಚಿಸಲಾಗಿದೆ.

ಬಿಹಾರ ವಿಧಾನಸಭೆಯ ಒಟ್ಟು ಬಲ 243 ಶಾಸಕರಿದ್ದು, ಪ್ರಸ್ತುತ 241 ಸದಸ್ಯರಿದ್ದಾರೆ. ವಿಧಾನಸಭೆಯಲ್ಲಿ 2 ಸ್ಥಾನಗಳು ಖಾಲಿ ಇವೆ. ಏತನ್ಮಧ್ಯೆ, ಅಸಾದುದ್ದೀನ್ ಓವೈಸಿ ಪಕ್ಷದ ಏಕೈಕ ಶಾಸಕ ಎಐಎಂಐಎಂ ವಿಶ್ವಾಸ ಮತದ ಸಮಯದಲ್ಲಿ ಮಹಾಮೈತ್ರಿಕೂಟ ಸರ್ಕಾರದ ಪರವಾಗಿ ಮತ ಚಲಾಯಿಸುವ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಸದನದಲ್ಲಿ ಮಹಾಮೈತ್ರಿಕೂಟದ ಪರವಾಗಿ ಒಟ್ಟು 165 ಶಾಸಕರು ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಮಹಾಮೈತ್ರಿಕೂಟದಲ್ಲಿ ಎಲ್ಲ ಪಕ್ಷಗಳ ಶಾಸಕರು ಹಾಗೂ ಸ್ವತಂತ್ರ ಶಾಸಕರು ಸೇರಿದಂತೆ 164 ಶಾಸಕರು ಇದ್ದರು. ಸ್ವತಂತ್ರ ಅಭ್ಯರ್ಥಿ ಸುಮಿತ್ ಕುಮಾರ್ ಸಿಂಗ್ ಸರ್ಕಾರವನ್ನು ಬೆಂಬಲಿಸುವುದಾಗಿ ಘೋಷಿಸಿದ್ದರು. ಬಿಹಾರ ವಿಧಾನಸಭೆಯಲ್ಲಿ ಪ್ರಸ್ತುತ ಶಾಸಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರಳ ಬಹುಮತಕ್ಕೆ 121 ಶಾಸಕರ ಅಗತ್ಯವಿದೆ ಎಂಬುವುದು ಉಲ್ಲೇಖನೀಯ.

Bihar CM Nitish Kumar 23 ministers declared criminal cases against them
ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್


ಇದನ್ನೂ ಓದಿ: Bihar Cabinet Expansion: ಪ್ರಮುಖ ಖಾತೆ ವಹಿಸಿಕೊಂಡ ನಿತೀಶ್-ತೇಜಸ್ವಿ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಲಿಸ್ಟ್

ಎಷ್ಟು ಶಾಸಕರು?

ಲಾಲು ಪ್ರಸಾದ್ ಯಾದವ್ ಅವರ ಪಕ್ಷ ಆರ್‌ಜೆಡಿ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದೆ. ಆರ್‌ಜೆಡಿ 79 ಶಾಸಕರನ್ನು ಹೊಂದಿದ್ದರೆ, ಮಿತ್ರಪಕ್ಷ ಜೆಡಿಯು 45 ಶಾಸಕರನ್ನು ಹೊಂದಿದೆ. ಇದಲ್ಲದೇ ಕಾಂಗ್ರೆಸ್ 19, ಎಡಪಕ್ಷಗಳು 16, ಜಿತನ್ ರಾಮ್ ಮಾಂಝಿ ಪಕ್ಷದ ಎಚ್‌ಎಎಂ 4 ಮತ್ತು ಎಐಎಂಐಎಂ 1 ಶಾಸಕರನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಸರ್ಕಾರವು ಮ್ಯಾಜಿಕ್ ನಂಬರ್ ತಲುಪಲು ಹೆಚ್ಚು ಕಷ್ಟಪಡಬೇಕಾಗಿಲ್ಲ.

ಇದನ್ನೂ ಓದಿ:  Bihar Politics: 8ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್ ಕುಮಾರ್; ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ

ಆರ್‌ಜೆಡಿ ಶಾಸಕರಿಗೆ ವಿಪ್

ಆರ್‌ಜೆಡಿ ಶಾಸಕಾಂಗ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ವಿಧಾನ ಸಭೆಯ ವಿಶೇಷ ಅಧಿವೇಶನದ ವೇಳೆ ಆರಂಭದಿಂದ ಕೊನೆಯವರೆಗೂ ಎಲ್ಲಾ ಶಾಸಕರು ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಶಾಸಕಾಂಗ ವ್ಯವಹಾರ ಮತ್ತು ಇತರ ರಾಜ್ಯ ವ್ಯವಹಾರಗಳ ಸಂದರ್ಭದಲ್ಲಿ ಮತ ವಿಭಜನೆಯ ಸಂದರ್ಭದಲ್ಲಿ ಬಿಹಾರ ವಿಧಾನಸಭೆಯ ಸ್ಪೀಕರ್ ಸ್ಥಾನದಿಂದ ವಜಾಗೊಳಿಸುವುದು, ಪ್ರಸ್ತುತ ಮಹಾಮೈತ್ರಿಕೂಟ ಸರ್ಕಾರದ ವಿಶ್ವಾಸಮತ ಯಾಚನೆಗೆ ಸಂಬಂಧಿಸಿದ ನಿರ್ಣಯಗಳನ್ನು ಮಾಡುವಂತೆ ತೇಜಸ್ವಿ ಯಾದವ್ ಶಾಸಕರಿಗೆ ಸೂಚನೆ ನೀಡಿದರು. ಸರ್ಕಾರದ ಪರವಾಗಿ ಮತ ಚಲಾಯಿಸುವಂತೆಯೂ ಈ ವೇಳೆ ಸೂಚಿಸಿದ್ದಾರೆ.

ಬಿಹಾರ ಸರ್ಕಾರದ 23 ಸಚಿವರ ಮೇಲೆ ಕ್ರಿಮಿನಲ್ ಕೇಸ್! ಆಸ್ತಿಯೂ ಕಡಿಮೆಯಿಲ್ಲ

ಬಿಹಾರದಲ್ಲಿ ಹೊಸದಾಗಿ ರಚನೆಯಾದ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಬರೋಬ್ಬರಿ 72 ಪ್ರತಿಶತ ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಂದರೆ ನಿತೀಶ್ ಕುಮಾರ್ ಸಚಿವ ಸಂಪುಟದ ಒಟ್ಟು 23 ಸಚಿವರ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೇ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಚಿವರ ಸಂಖ್ಯೆಯೂ ಕಡಿಮೆಯಿಲ್ಲ. ಬರೋಬ್ಬರಿ 53 ಪ್ರತಿಶತದಷ್ಟು ಸಚಿವರು ಅಥವಾ 17 ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ನಿತೀಶ್ ಕುಮಾರ್, ತೇಜಸ್ವಿ ಯಾದವ್ ನೇತೃತ್ವದ ಸರ್ಕಾರದ ಒಟ್ಟು 33 ಸಚಿವರ ಪೈಕಿ 32 ಸಚಿವರ ಅಪಿಡವಿಟ್​ಗಳನ್ನು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರಿಶೀಲನೆ ನಡೆಸಿದೆ.
Published by:Precilla Olivia Dias
First published: