Bihar: ಗಂಡನಿಗಾಗಿ ಇಬ್ಬರು ಹೆಂಡತಿಯರ ಕಾದಾಟ, ಜಗಳ ಬಿಡಿಸಲು ಬಂದ ಪೊಲೀಸರಿಗೇ ಬಿತ್ತು ಚಪ್ಪಲಿ ಏಟು!

ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾದ ಆರೋಪದಡಿ ಅಸ್ಗರ್ ಮಲ್ಲಿಕ್ ಎಂಬಾತನನ್ನು ಬಂಧಿಸಲು ಪಶ್ಚಿಮ ಬಂಗಾಳ ಪೊಲೀಸರು ಜಮುಯಿ ತಲುಪಿದ್ದರು. ಮೊದಲ ಪತ್ನಿ ನೀಡಿದ ದೂರಿನನ್ವಯ ಬಂಗಾಳ ಪೊಲೀಸರು ಸ್ಥಳೀಯ ನಗರ ಪೊಲೀಸ್ ಠಾಣಾ ಸಿಬ್ಬಂದಿ ಜೊತೆ ಆರೋಪಿಯನ್ನು ಬಂಧಿಸಲು ಆತನ ಮನೆಗೆ ತಲುಪಿದ್ದರು. ಆದರೆ ಇಲ್ಲಿ ಬಂದ ಪೊಲೀಸ್ ತಂಡ ಭಾರೀ ವಿರೋಧ ಎದುರಿಸಿತು, ಇದರಿಂದಾಗಿ ಅವರು ಬಂದ ದಾರಿಯಲ್ಲೇ ಹಿಂತಿರುಗಬೇಕಾಯಿತು. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜಗಳ ಬಿಡಿಸಲು ಬಂದ ಪೊಲೀಸರಿಗೇ ಬಿತ್ತು ಚಪ್ಪಲಿ ಏಟು!

ಜಗಳ ಬಿಡಿಸಲು ಬಂದ ಪೊಲೀಸರಿಗೇ ಬಿತ್ತು ಚಪ್ಪಲಿ ಏಟು!

  • Share this:
ಟ್ನಾ(ಆ.23): ಬಿಹಾರದ (Bihar) ಜಮುಯಿಯಲ್ಲಿ ಇಬ್ಬರು ಹೆಂಡತಿಯರ ಸಹವಾಸದಿಂದ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡನೇ ಮದುವೆಯಾದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲು ಹೋದ ಪೊಲೀಸ್ ತಂಡದ ಮೇಲೆ ಮಹಿಳೆಯರು ಹಲ್ಲೆ ನಡೆಸಿ ಚಪ್ಪಲಿ ಎಸೆದು, ಥಳಿಸಿದ್ದಾರೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಸೌರಿ ಪ್ರದೇಶದಲ್ಲಿ ಘಟನೆ ನಡೆದಿದೆ. ಮೊದಲ ಪತ್ನಿ (First Wife) ಜೀವಂತವಿರುವಾಗಲೇ ಎರಡನೇ ಮದುವೆಯಾಗಿರುವ ಆರೋಪಿ ಅಸ್ಗರ್ ಮಲ್ಲಿಕ್‌ನನ್ನು ಬಂಧಿಸಲು ಪಶ್ಚಿಮ ಬಂಗಾಳ (West Bengal) ಪೊಲೀಸರು ಜಮುಯಿ ತಲುಪಿದ್ದರು. ಆರೋಪಿಯನ್ನು ಬಂಧಿಸಲು ಸ್ಥಳೀಯ ನಗರ ಪೊಲೀಸ್ ಠಾಣಾ ಸಿಬ್ಬಂದಿ ಜೊತೆ ಬಂಗಾಳ ಪೊಲೀಸರು ಆರೋಪಿಯ ಮನೆಗೆ ತಲುಪಿದಾಗ, ಪೊಲೀಸ್ ತಂಡ ಭಾರೀ ವಿರೋಧವನ್ನು ಎದುರಿಸಿತು. ಇದರಿಂದಾಗಿ ಆರೋಪಿಯನ್ನು ಬಂಧಿಸದೆ ಅವರು ಹಿಂತಿರುಗಬೇಕಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಬ್ಬರು ಹೆಂಡತಿಯರ ವಿವಾದದಲ್ಲಿ ಅಸ್ಗರ್ ಮಲ್ಲಿಕ್ ಅವರನ್ನು ಬಂಧಿಸಲು ಪೊಲೀಸರು ಹೋಗಿದ್ದರು, ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಪೊಲೀಸರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ, ಆರೋಪಿ ಪತ್ನಿ ನಸ್ರೀನ್ ಪ್ರವೀಣ್ ಠಾಣೆಗೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Crime News: ಸರಸದಾಟಕ್ಕೆ ಅಡ್ಡಿಯಾದ ಗಂಡನನ್ನ ಕೊಂದು ಶವದ ಪಕ್ಕದಲ್ಲಿಯೇ ಮಲಗಿದ ದಿಲ್ಲಿ ರಾಣಿ

ದೊರೆತ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದ ಅಸನ್ಸೋಲ್ ನಿವಾಸಿ ನೇಹಾ ಪ್ರವೀಣ್ ಅವರ ದೂರಿನ ಮೇರೆಗೆ, ಬಂಗಾಳ ಪೊಲೀಸರು ಅಸ್ಗರ್ ಮಲ್ಲಿಕ್ ಅವರನ್ನು ಬಂಧಿಸಲು ಭಾನುವಾರ ಜಮುಯಿ ತಲುಪಿದ್ದರು. ಬಂಗಾಳ ಪೊಲೀಸರೊಂದಿಗೆ ನಗರ ಪೊಲೀಸ್ ಠಾಣೆಯ ತಂಡವು ಮಹಿಸೌರಿ ಪ್ರದೇಶದ ಆರೋಪಿಯ ಮನೆಗೆ ತಲುಪಿದಾಗ, ಕುಟುಂಬದ ಮಹಿಳೆಯರು ಅವರ ವಿರುದ್ಧ ಪ್ರತಿಭಟಿಸಿ, ಹಲ್ಲೆ ನಡೆಸಿದರು.

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯರು ಪೊಲೀಸ್ ತಂಡದ ಜೊತೆ ಕಾದಾಡುತ್ತಿರುವ ದೃಶ್ಯ ಕಾಣಬಹುದು. ಈ ವೇಳೆ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಗೆ ಚಪ್ಪಲಿ ಎಸೆದಿದ್ದಾರೆ. ಸಾಕಷ್ಟು ಗಲಾಟೆ ನಡೆದ ಬಳಿಕ, ಪೊಲೀಸ್ ತಂಡ ಬರಿಗೈಯಲ್ಲಿ ಹಿಂತಿರುಗಿದೆ. ಆದರೆ ಈ ಸಂದರ್ಭದಲ್ಲಿ, ಅಸ್ಗರ್ ಮಲ್ಲಿಕ್ ಅವರ ಪತ್ನಿ ನಗರ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿದ್ದು, ತಮ್ಮ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಸ್ಗರ್ ಮಲ್ಲಿಕ್ ಅಸನ್ಸೋಲ್ ಮೂಲದ ಮಹಿಳೆಯನ್ನು ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಪತ್ನಿ ಇದ್ದರೂ ಎರಡನೇ ಮದುವೆಯಾದ ಕಾರಣ ಇಬ್ಬರು ಹೆಂಡತಿಯರ ನಡುವೆ ವೈಮನಸ್ಸು ಉಂಟಾಗಿತ್ತು.

ಇದನ್ನೂ ಓದಿ: Bengaluru Crime News: ಮಂಗಳಮುಖಿಯರ ಜೊತೆ ಓಡಾಟ; ಸ್ನೇಹಿತರಿಂದಲೇ ಯುವಕನ ಮೇಲೆ ಹಲ್ಲೆ

ಈ ಸಂಬಂಧ ನಗರ ಪೊಲೀಸ್ ಠಾಣೆ ಅಧ್ಯಕ್ಷ ರಾಜೀವ್ ಕುಮಾರ್ ತಿವಾರಿ ಮಾತನಾಡಿ, ಎರಡನೇ ಮದುವೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಪಶ್ಚಿಮ ಬಂಗಾಳ ಪೊಲೀಸರು ಇಲ್ಲಿಗೆ ಆಗಮಿಸಿದ್ದರು. ಆದರೆ ಪೊಲೀಸರು ಯಾರನ್ನೂ ಬಂಧಿಸಲು ಸಾಧ್ಯವಾಗಲಿಲ್ಲ. ಹೀಗಿದ್ದರೂ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿ ಹಾಗೂ ಚಪ್ಪಲಿ ಹಿಡಿದು ಓಡಿಸಿರುವ ಬಗ್ಗೆ ತಂಡ ಮಾಹಿತಿ ನೀಡಿಲ್ಲ. ಇದೇ ವೇಳೆ ಮಹಿಳೆಯೊಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಕಟ್ಕೊಂಡ ಪತ್ನಿ ಜೊತೆಯಲ್ಲಿದ್ರೂ ನಾದಿನಿಯ ಮೇಲೆ ಕಣ್ಣಾಕಿದವ ಮಾಡಿದ್ದೇನು?

ಬೆಂಗಳೂರಿನ ಕೊಡಿಗೆಹಳ್ಳಿಯ ದೇವರಾಜ್ ಎಂಬಾತನಿಗೆ ಮದುವೆ ಆಗಿತ್ತು. ಕಟ್ಟಿಕೊಂಡ ಪತ್ನಿ ಜೊತೆ ಚೆನ್ನಾಗಿ ಸಂಸಾರ ಮಾಡಿದ್ರೆ ಮನೆಯಲ್ಲಿ ಆರಾಮಾಗಿ ಇರಬಹುದಿತ್ತು. ಆದ್ರೆ ಹೆಂಡ್ತಿ ಇರಲಿ, ಆಕೆಯ ತಂಗಿಯು ಬೇಕೆಂದು ಹೇಳಿ ಸೆರೆಮನೆ ಸೇರಿದ್ದಾನೆ. ಹೌದು, ಬಂಧಿತ ದೇವರಾಜ್, ನಾದಿನಿಯನ್ನು ಪ್ರೀತಿಸುತ್ತಿದ್ದನು. ಹಾಗಾಗಿ ಆಕೆಯ ಮುಂದೆ ಮದುವೆ ಪ್ರಸ್ತಾಪ ಸಹ ಇರಿಸಿದ್ದನು. ಆದ್ರೆ ನಾದಿನಿ ಬಾವನ ಮದುವೆ ಪ್ರಸ್ತಾಪವನ್ನ ತಿರಸ್ಕರಿಸಿದ್ದಳು. ಯಾವಾಗ ನಾದಿನಿ ಮದುವೆಯಾಗಲು ಒಪ್ಪದಿದ್ದಾಗ, ಆಕೆಯನ್ನು ಕಿಡ್ನಾಪ್ ಮಾಡಲು ದೇವರಾಜ್ ಪ್ಲಾನ್ ಮಾಡಿದ್ದನು. ಇದಕ್ಕೆ ಗೆಳೆಯರಾದ ನಿತಿನ್ ಮತ್ತು ಕುಮಾರ್ ಎಂಬವರ ಸಹಾಯ ಪಡೆದುಕೊಂಡಿದ್ದನು. ನಾದಿನಿಯನ್ನು ಅಪಹರಿಸಿ ಬಲವಂತವಾಗಿ ಮದುವೆಯಾಗಲು ನೀಚ ಬಾವ ದೇವರಾಜ್ ಸಂಚು ರೂಪಿಸಿದ್ದನು. ಪೊಲೀಸರ ಕ್ಷಿಪ್ರ ಕಾರ್ಯಚರಣೆ ನೀಚನ ಪ್ಲಾನ್ ವಿಫಲ ಮಾಡಿದ್ದಾರೆ.
Published by:Precilla Olivia Dias
First published: