Bihar: ಮಗಳು ಕಾಣ್ತಿಲ್ಲ ಎಂದು ದೂರು ನೀಡಿದ ತಂದೆ: ಮದುವೆ ಆಗಿದ್ದೇನೆ ತೊಂದರೆ ಕೊಡಬೇಡಪ್ಪ ಎಂದ ಮಗಳು

ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆಕೆಯ ತಂದೆ ಗೊರೌಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ವಿಡಿಯೋದಲ್ಲಿ ಯುವತಿಯು ಯುವಕನೊಬ್ಬನ ಜತೆಗೆ ಕಾಣಿಸಿಕೊಂಡಿದ್ದು, ತನ್ನ ಇಚ್ಛೆಯಂತೆ ಮದುವೆಯಾಗಿದ್ದು, ಖುಷಿಯಾಗಿರುವುದಾಗಿ ತಿಳಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮದುವೆ (Marriage) ವಿಚಾರದಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ಮನಸ್ತಾಪ, ಅಸಮ್ಮತಿ, ಸಾಮಾಜಿಕ ಅಡೆತಡೆಗಳು ಸಾಮಾನ್ಯವಾಗಿ ಬಿಟ್ಟಿವೆ. ಒಲ್ಲದ ಮನಸ್ಸಿನಿಂದ ಮಕ್ಕಳ ಪ್ರೀತಿಗೆ ಅಸ್ತು ಹೇಳುವ ಪೋಷಕರು (Parents), ತಂದೆ ತಾಯಿ ಒಪ್ಪದಿದ್ದಾಗ ತಾವೇ ಹೋಗಿ ಮದುವೆ ಮಾಡಿಕೊಳ್ಳುವುದು. ಪ್ರೀತಿಗೆ ಕಟ್ಟು ಬಿದ್ದ ಯುವಕ ಯುವತಿ ನಡುವೆ ಇಂಥ ಪ್ರಕರಣಗಳು ಸಹಜವಾಗಿ ಬಿಟ್ಟಿವೆ. ಇಂಥದ್ದೇ ಒಂದು ವಿಚಿತ್ರ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಅಪ್ಪ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೆ, ಅತ್ತ ಮಗಳು ಮದುವೆಯಾಗಿ ಆ ವಿಚಾರವನ್ನು ಅಪ್ಪನಿಗೆ ಸೋಶಿಯಲ್ ಮೀಡಿಯಾದ (Social Media) ಮುಖಾಂತರ ತಿಳಿಸಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಚಾರ ಬಹಿರಂಗ

ನನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ತಂದೆ ಪೊಲೀಸರಿಗೆ ದೂರು ನೀಡಿದ್ದ. ಆತನ ದೂರಿನ ಅನ್ವಯ ಪೊಲೀಸರು ಕಿಡ್ನ್ಯಾಪ್ ಕೇಸ್ ಎಫ್ಐಆರ್ ದಾಖಲಿಸಿದ್ದರು. ಅತ್ತ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸಿದ್ದರೆ, ಇತ್ತ ಯುವತಿ ತನಗೆ ಮದುವೆಯಾಯ್ತು ಎಂದು ತನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾಳೆ. ಮಗಳ ವಿಡಿಯೋ ನೋಡಿದ ಆಕೆಯ ಕುಟುಂಬದವರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

'ನಮಗೆ ತೊಂದರೆ ಕೊಡಬೇಡಿ ಅಪ್ಪ' ಎಂದು ಮನವಿ

ಬಿಹಾರದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಅಷ್ಟೇ ಅಲ್ಲ, 'ನಮಗೆ ತೊಂದರೆ ಕೊಡಬೇಡಿ ಅಪ್ಪ' ಎಂದು ಮನವಿಯನ್ನೂ ಮಾಡಿದ್ದಾಳೆ. ನಿಜವಾಗಿಯೂ ಮದುವೆಯಾಗಿದ್ದೇನೆ ಮತ್ತು ನಾವಿಬ್ಬರು ಖುಷಿಯಾಗಿರುತ್ತೇವೆ ಎಂದು ತಿಳಿಸಲು ತನ್ನ ಪತಿಯನ್ನು ಸಹ ವಿಡಿಯೋದಲ್ಲಿ ತೋರಿಸಿದ್ದಾಳೆ.

ಯುವತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ತಂದೆ ನೀಡಿರುವ ಅಪಹರಣದ ದೂರನ್ನು ಯುವತಿ ತಳ್ಳಿ ಹಾಕಿದ್ದು, ತನಗೆ ಸಹಾಯ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ

ಇದನ್ನು ಓದಿ : Dosa ಪ್ರಿಯರಿಗೆ ಬಂಪರ್​ ಚಾನ್ಸ್​; ದೋಸೆ ಜೊತೆ 71 ಸಾವಿರ ರೂ ಬಹುಮಾನ ಕೂಡ; ಇಲ್ಲಿದೆ ನೋಡಿ ಮಾಹಿತಿ

ದೂರು ದಾಖಲಿಸಿದ್ದ ತಂದೆ

ವೈರಲ್ ವಿಡಿಯೋ ಆಧಾರದ ಮೇಲೆ ಯುವತಿ ಮಲಿಕ್‌ಪುರ ಮೂಲದವಳು ಎಂದು ತಿಳಿದು ಬಂದಿದೆ.  ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆಕೆಯ ತಂದೆ ಗೊರೌಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ವಿಡಿಯೋದಲ್ಲಿ ಯುವತಿಯು ಯುವಕನೊಬ್ಬನ ಜತೆಗೆ ಕಾಣಿಸಿಕೊಂಡಿದ್ದು, ತನ್ನ ಇಚ್ಛೆಯಂತೆ ಮದುವೆಯಾಗಿದ್ದು, ಖುಷಿಯಾಗಿರುವುದಾಗಿ ತಿಳಿಸಿದ್ದಾಳೆ. ತಮ್ಮಿಬ್ಬರಿಗೆ ಯಾವುದೇ ತೊಂದರೆ ಕೊಡದಂತೆ ಆಕೆ ಕುಟುಂಬದವರಿಗೆ ಮನವಿ ಮಾಡಿದ್ದಾಳೆ.

ನನ್ನ ತಂದೆ ತನಗೆ ಕಿರುಕುಳ ನೀಡುತ್ತಿರುವುದಾಗಿ ವಿಡಿಯೋದಲ್ಲಿ ಆರೋಪಿಸಿದ್ದಾಳೆ. ಯುವತಿಯ ತಂದೆ ನೀಡಿರುವ ಅಪಹರಣ ದೂರು ಮತ್ತು ಯುವತಿಯ ವಿಡಿಯೋ ಆಧಾರದಲ್ಲಿ ಪೊಲೀಸರು ಎರಡು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ. ಹೀಗಾಗಿ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಪೊಲೀಸರು ಯಾವ ರೀತಿ ಕಾನೂನು ಕ್ರಮ ಜರುಗಿಸುತ್ತಾರೆ ಕಾದು ನೋಡಬೇಕಿದೆ.

ಇದನ್ನು ಓದಿ: School Uniform ಬಗ್ಗೆ ಈ ಅಧ್ಯಯನದ ಫಲಿತಾಂಶ ಅಚ್ಚರಿ ಮೂಡಿಸುತ್ತದೆ; ಕಾರಣ ನೋಡಿ!

ರಾಜ್ಯದಲ್ಲೂ ಇದೇ ರೀತಿ ಪ್ರಕರಣ

ಪ್ರೀತಿ, ಪ್ರೇಮದ ವಿಚಾರದಲ್ಲಿ ನೋವು, ದೂರ ಆಗೋದು ಸಾಮಾನ್ಯ. ಕರ್ನಾಟಕದಲ್ಲೂ ಇಂಥದ್ದೇ ಒಂದು ಪ್ರೇಮ ಪ್ರಕರಣ ದಾಖಲಾಗಿತತು. ಹಾಸನ ಜಿಲ್ಲೆಯ ದೇವರ ಮುದ್ದನಹಳ್ಳಿ ಗ್ರಾಮದಲ್ಲಿ ಚಿಕ್ಕಣ್ಣ ಮತ್ತು ಜಯಮ್ಮ ಎಂಬುವವರು 35 ವರ್ಷದಿಂದ ಪ್ರೀತಿಸುತ್ತಿದ್ದು ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಅವರು ಒಂದೇ ಹಳ್ಳಿಯಲ್ಲಿ ಬೆಳೆದರು, ಎರಡೂ ಕುಟುಂಬಗಳು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿದ್ದರು, ಜಯಮ್ಮ ಅವರ ಪೋಷಕರು ತಮ್ಮ ಮಗಳನ್ನು ಚಿಕ್ಕಣ್ಣನಿಗೆ ಮದುವೆ ಮಾಡಬಾರದು ಎಂದು ಹಠ ಹಿಡಿದಿದ್ದರು. ಹೀಗೆ ವರ್ಷ ಕಳೆದ ಮಗಳನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿಸಿದರು.

ಜಯಮ್ಮ ತನ್ನ ಪತಿಯೊಂದಿಗೆ ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಆದರೆ ಚಿಕ್ಕಣ್ಣ ದೂರದ ಮೈಸೂರು ಸಮೀಪದ ಮೇಟಗಳ್ಳಿ ಹಳ್ಳಿಗೆ ಹೋಗಿ ಕೂಲಿ ಕೆಲಸ ಮುಂದುವರೆಸಿದರು. ಹೀಗೆ ಒಂದು ಸುಂದರ ಪ್ರೇಮ ಕಥೆ ದುರಂತದಲ್ಲಿ ಅಂತ್ಯವಾಗಿದೆ.
Published by:Seema R
First published: