news18-kannada Updated:November 7, 2020, 7:44 PM IST
ಚಿರಾಗ್ ಪಾಸ್ವಾನ್, ನಿತೀಶ್ ಕುಮಾರ್, ತೇಜಸ್ವಿ ಯಾದವ್.
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಇಂದು ಮುಕ್ತಾಯಗೊಂಡಿದೆ. ಮತದಾನ ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಹಾಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಎದುರು ತೇಜಸ್ವಿ ಯಾದವ್ ನೇತೃತ್ವದ ಮಹಾಘಟ್ ಬಂಧನ್ ಅಲ್ಪಪ್ರಮಾಣದಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಹೇಳಿವೆ.
ಟೈಮ್ಸ್ ನೌ ಸಿ ಓಟರ್
- ಮಹಾಘಟ್ ಬಂಧನ್- 120
- ಎನ್ಡಿಎ - 116
- ಎಲ್ಜೆಪಿ- 1
- ಇತರೆ- 6
ರಿಪಬ್ಲಿಕ್ ಜನ್ ಕಿ ಬಾತ್
- ಮಹಾಘಟ್ ಬಂಧನ್ 118-138
- ಎನ್ಡಿಎ- 91-117
- ಎಲ್ಜೆಪಿ- 05-08
- ಇತರೆ - 03-06
ಎಬಿಪಿ ಸಿ ಓಟರ್
- ಮಹಾಘಟ್ಬಂಧನ್- 108-131
- ಎನ್ಡಿಎ 104- 128
- ಇತರೆ 04-08
ಟಿವಿ 9 ಭರತವರ್ಷ
- ಮಹಾಘಟ್ ಬಂಧನ್- 115- 125
- ಎನ್ಡಿಎ 110- 120
- ಎಲ್ಜೆಪಿ 03-05
- ಇತರೆ 10-15
ಮೊದಲ ಹಂತದ ಮತದಾನ ಅಕ್ಟೋಬರ್ 28 ರಂದು ನಡೆದಿದ್ದರೆ, ಎರಡನೇ ಹಂತದ ಮತದಾನ ನವೆಂಬರ್ 03 ರಂದು ನಡೆದಿತ್ತು. ಇಂದು ಮೂರನೇ ಹಂತದ ಮತದಾನ ನಡೆಯುವ ಮೂಲಕ ಅಂತಿಮ ಘಟ್ಟ ತಲುಪಿತು. ನವೆಂಬರ್ 10 ರಂದು ಫಲಿತಾಂಶ ಹೊರ ಬೀಳಲಿದೆ. ಅಂದು ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
Published by:
HR Ramesh
First published:
November 7, 2020, 7:44 PM IST