ನವದೆಹಲಿ(ನ. 10): ಸದ್ಯಕ್ಕೆ ಒಂದು ಕೋಟಿ ಮತಗಳ ಎಣಿಕೆ ಮಾತ್ರ ಆಗಬೇಕಿದೆ. ಇನ್ನೂ ಎರಡೂ ಕೋಟಿಗೂ ಹೆಚ್ಚು ಮತಗಳ ಎಣಿಕೆ ಆಗಬೇಕಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ತೀವ್ರ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬರಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ, ಈವರೆಗೂ ಒಂದು ಕೋಟಿ ಮತ ಎಣಿಕೆಯಾಗಿದೆ. ಇನ್ನೂ ಎರಡೂ ಕೋಟಿಗೂ ಹೆಚ್ಚು ಮತಗಳ ಎಣಿಕೆ ಆಗಬೇಕಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಮತ ಎಣಿಕೆ ಮಾಡಲಾಗುತ್ತಿರುವುದರಿಂದ ತಡವಾಗುತ್ತಿದೆ. ಮತ ಎಣಿಕೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೊರೋನಾ ಹಿನ್ನಲೆಯಲ್ಲಿ ಕಳೆದ ಬಾರಿಗಿಂತ ಶೇಕಡಾ 63 ಬೂತ್ ಗಳನ್ನು ನಿರ್ಮಿಸಲಾಗಿತ್ತು. ಅವುಗಳ ಪೈಕಿ ಸದ್ಯ 1.06 ಲಕ್ಷ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಮಾತ್ರ ಮುಕ್ತಾಯವಾಗಿದೆ. ಸಾಮಾನ್ಯವಾಗಿ ಒಂದು ಮತ ಎಣಿಕೆ ಕೇಂದ್ರದಲ್ಲಿ 14 ಟೇಬಲ್ ಹಾಕಲಾಗುತ್ತಿತ್ತು. ಈ ಬಾರಿ ಕೊರೋನಾ ಹಿನ್ನಲೆಯಲ್ಲಿ 7 ಟೇಬಲ್ ಗಳನ್ನು ಮಾತ್ರ ಹಾಕಲಾಗಿದೆ ಎಂಬ ವಿವರಣೆ ನೀಡಲಾಯಿತು.
ಸಂಚಾರಿ ನಿಯಮಗಳ ಉಲ್ಲಂಘನೆ; ವಾಹನ ಸವಾರರಿಗೆ ಪೊಲೀಸರಿಂದ ಪಾಠ
ಬೆಳಿಗ್ಗೆ 8 ಗಂಟೆಯೊಳಗೆ ಅಂಚೆ ಮತಗಳನ್ನು ಎಣಿಕೆ ಮಾಡಲಾಗಿದೆ. ಎಷ್ಟು ಅಂಚೆ ಮತಗಳು ಚಲಾವಣೆಯಾಗಿದೆ ಸ್ಪಷ್ಟ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಈ ಸಲ ಅಂತಿಮ ಫಲಿತಾಂಶ ಹೊರಬರುವುದು ಇನ್ನೂ ತಡವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ