ಉಚಿತ ಕೋವಿಡ್​ ಲಸಿಕೆ ಭರವಸೆ; ಟ್ರೋಲ್​ಗೆ ಒಳಗಾಗುತ್ತಿರುವ ಬಿಹಾರದ ಬಿಜೆಪಿ ಚುನಾವಣಾ ಪ್ರಣಾಳಿಕೆ!

ನೀವು ನನಗೆ ಮತಗಳನ್ನು ನೀಡಿ, ನಾನು ನಿಮಗೆ ಲಸಿಕೆ ನೀಡುತ್ತೇನೆ. ಇದು ಭಯಾನಕ ಸಿನಿಕತನ! ಚುನಾವಣಾ ಆಯೋಗವು ಆಕೆಯ ಮೇಲೆ ಮತ್ತು ನಾಚಿಕೆಯಿಲ್ಲದ ಅವರ ಸರ್ಕಾರದ ಮೇಲೆ ಕ್ರಮ ಕೈಗೊಳ್ಳುತ್ತದೇಯೇ? ಎಂದು ಸಂಸದ ಶಶಿ ತರೂರ್​ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ನಾಯಕರಿಂದ ಬಿಹಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ.

ಬಿಜೆಪಿ ನಾಯಕರಿಂದ ಬಿಹಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ.

 • Share this:
  ಬಿಹಾರ: ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿಜೆಪಿಗೆ ಇದೀಗ ಬಿಹಾರದಲ್ಲೂ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದೆ. ಕಳೆದ 15 ವರ್ಷಗಳಿಂದ ನಿತೀಶ್​ ಕುಮಾರ್​ ನೇತೃತ್ವದಲ್ಲಿ ಎನ್​ಡಿಎ ಮೈತ್ರಿಕೂಟ ಬಿಹಾರದಲ್ಲಿ ಅಧಿಕಾರ ಅನುಭವಿಸುತ್ತಿದೆ. ಆದರೆ, ಈ ಭಾರಿಯೂ ಎನ್​ಡಿಎ ಮೈತ್ರಿಕೂಟ ಬಿಹಾರದಲ್ಲಿ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಾಗಿಲ್ಲ. ಹೀಗಾಗಿ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಜನರಿಗೆ ಹೊಸ ಹೊಸ ಭರವಸೆ ನೀಡಲು ಮುಂದಾಗಿದೆ. ಇಂತಹ ಒಂದು ಭರವಸೆಗಳ ಪೈಕಿ ಉಚಿತ ಕೊರೋನಾ ಲಸಿಕೆಯೂ ಒಂದು. ಬಿಹಾರ ಚುನಾವಣೆ ಹಿನ್ನೆಲೆ ಎನ್​ಡಿಎ ನಿನ್ನೆ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈ ಪ್ರಣಾಳಿಕೆಯಲ್ಲಿ "ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ" ನೀಡುವ ಭರವಸೆಯನ್ನು ನೀಡಲಾಗಿದೆ. ಆದರೆ, ಈ ಭರವಸೆ ಇದೀಗ ಭಾರಿ ಟೀಕೆಗೆ ಗುರಿಯಾಗಿದೆ. ಆಡಳಿತ ಪಕ್ಷವು ತನ್ನ ರಾಜಕೀಯ ಕಾರ್ಯಕ್ಕೆ ಲಸಿಕೆಯನ್ನು ಬಳಸುವ ಪ್ರಯತ್ನದಲ್ಲಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಅನೇಕರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲು ಮುಂದಾಗಿದ್ದಾರೆ. 

  ಬಿಜೆಪಿ ಪಕ್ಷದ ನಾಯಕರು ಬಿಡುಗಡೆ ಮಾಡಿರುವ ಈ ಪ್ರಣಾಳಿಕೆಯಲ್ಲಿ ಬಿಹಾರದ ಯುವಕರಿಗೆ 19 ಲಕ್ಷ ಉದ್ಯೋಗಗಳು ಸೇರಿದಂತೆ ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ ನೀಡಲಾಗುವುದು ಎಂಬ ಭರವಸೆ ನೀಡಲಾಗಿದೆ. ಜೊತೆಗೆ ಮುಂದಿನ ಐದು ವರ್ಷಗಳ ಕಾಲ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷ ಒತ್ತಿ ಹೇಳಿದೆ.

  "ಕೊರೋನಾ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗೆ ಲಭ್ಯವಾದ ತಕ್ಷಣ, ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಲಸಿಕೆ ಸಿಗುತ್ತದೆ. ಇದು ನಮ್ಮ ಮತದಾನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ಮೊದಲ ಭರವಸೆ” ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು ಹೇಳಿದ್ದರು.

  ಆದರೆ, ಪ್ರಣಾಳಿಕೆ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳು, ಸಾರ್ವಜನಿಕರು ಇದನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗದ ಲಸಿಕೆಯನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.  ಪತ್ರಿಕಾಗೋಷ್ಠಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಆಮ್ ಆದ್ಮಿ ಪಾರ್ಟಿ, "ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳ ಕತೆ ಏನು? ಬಿಜೆಪಿಗೆ ಮತ ಹಾಕದ ಭಾರತೀಯರಿಗೆ ಉಚಿತ ಕೋವಿಡ್ ಲಸಿಕೆ ಸಿಗುವುದಿಲ್ಲವೇ?" ಎಂದು ಕೇಳಿದೆ.  ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. "ಭಾರತ ಸರ್ಕಾರ ಇದೀಗ ಕೊರೋನಾವನ್ನು ತಂತ್ರವನ್ನಾಗಿಸಿಕೊಂಡಿದೆ. ಲಸಿಕೆ ಪಡೆಯಲು ರಾಜ್ಯವಾರು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿ, ಜೊತೆಗೆ ನಿಮ್ಮ ಸುಳ್ಳು ಭರವಸೆಗಳನ್ನು ಕೂಡ" ಎಂದು ಕಿಡಿಕಾರಿದ್ದಾರೆ.  ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಟ್ವೀಟ್ ಮಾಡಿ, "ನೀವು ನನಗೆ ಮತಗಳನ್ನು ನೀಡಿ, ನಾನು ನಿಮಗೆ ಲಸಿಕೆ ನೀಡುತ್ತೇನೆ. ಇದು ಭಯಾನಕ ಸಿನಿಕತನ! ಚುನಾವಣಾ ಆಯೋಗವು ಆಕೆಯ ಮೇಲೆ ಮತ್ತು ನಾಚಿಕೆಯಿಲ್ಲದ ಅವರ ಸರ್ಕಾರದ ಮೇಲೆ ಕ್ರಮ ಕೈಗೊಳ್ಳುತ್ತದೇಯೇ?" ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
  ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಚಿತ್ರಗಳು ವೈರಲ್ ಆಗುತ್ತಿವೆ. ಸತೀಶ್ ಆಚಾರ್‍ಯ ಅವರ ’ಲಸಿಕೆ ರಾಜಕೀಯ’ ವ್ಯಂಗ್ಯಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ.

  ಈ ನಡುವೆ ಬಿಜೆಪಿಯೇತರ ರಾಜ್ಯಗಳಲ್ಲಿ ಕೊರೋನಾ ಲಸಿಕೆ ಸಿಗುವುದಿಲ್ಲವೆ ಎಂದು ಹಲವು ಮಂದಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ "ಬಿಹಾರದ ಜನರೇ, ಬಿಜೆಪಿಗೆ ವೋಟ್ ಹಾಕಿದ್ರೆ, 1.25 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಕೊಟ್ಟ ಹಾಗೆ ಫ್ರೀ ಕೋವಿಡ್ ಲಸಿಕೆಯನ್ನೂ ಕೊಡ್ತಾರೆ" ಎಂಬ ಫೋಸ್ಟ್‌ಗಳು ವ್ಯಾಪಕ ಸಂಖ್ಯೆಯಲ್ಲಿ ಶೇರ್ ಆಗುತ್ತಿದೆ.

  https://www.facebook.com/sharathcj/posts/10219064943516918

  ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಯ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಐಟಿ ವಿಭಾಗದ ಅಮಿತ್ ಮಾಳವಿಯಾ, "ಬಿಜೆಪಿಯ ಪ್ರಣಾಳಿಕೆ ಉಚಿತ ಕೋವಿಡ್ ಲಸಿಕೆಯ ಭರವಸೆ ನೀಡುತ್ತದೆ. ಎಲ್ಲಾ ಕಾರ್ಯಕ್ರಮಗಳಂತೆ ಕೇಂದ್ರವು ರಾಜ್ಯಗಳಿಗೆ ಅತ್ಯಲ್ಪ ದರದಲ್ಲಿ ಲಸಿಕೆಗಳನ್ನು ನೀಡುತ್ತದೆ. ಆರೋಗ್ಯವು ರಾಜ್ಯ ವಿಷಯವಾಗಿರುವುದರಿಂದ ಲಸಿಕೆ ಉಚಿತವಾಗಿ ನೀಡಬೇಕೆ ಅಥವಾ ಬೇಡವೇ? ಎಂದು ರಾಜ್ಯಕ್ಕೆ ಸರ್ಕಾರಗಳು ಅದನ್ನು ನಿರ್ಧರಿಸಬೇಕು. ಬಿಜೆಪಿ ಬಿಹಾರದಲ್ಲಿ ಅದನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ" ಎಂದಿದ್ದಾರೆ.
  Published by:MAshok Kumar
  First published: