Lalan Kumar: 33 ತಿಂಗಳುಗಳ 24 ಲಕ್ಷ ರೂ. ಸಂಬಳವನ್ನು ಹಿಂತಿರುಗಿಸಿದ ಉಪನ್ಯಾಸಕ! ಇದಪ್ಪಾ ಪ್ರಾಮಾಣಿಕತೆ ಅಂದ್ರೆ

ಇವರು ತಮ್ಮ 33 ತಿಂಗಳ ಸಂಬಳವಾದ ಸುಮಾರು 24 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸಿದ್ದಾರೆ. ಸೆಪ್ಟೆಂಬರ್ 2019 ರಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ಗಳಿಸಿರುವ ಒಟ್ಟು ಹಣವನ್ನು  ವಾಪಸ್​​ ಕೊಟ್ಟಿದ್ದಾರೆ. ಈ ನಿರ್ಧಾರಕ್ಕೆ ಕಾರಣ ಅವರ ಆತ್ಮಸಾಕ್ಷಿಯಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಜಾಫರ್‌ಪುರ: ಪ್ರಾಮಾಣಿಕತೆ (Honesty) ಎಂಬುವುದು ಇಂದಿನ ದಿನಗಳಲ್ಲಿ ಅಪರೂಪದ ಗುಣ ಎಂದರೆ ತಪ್ಪಾಗಲಾರದು. ಅದರಲ್ಲೂ ಹಣಕಾಸಿನ ವಿಷಯದಲ್ಲಿ ಬಹುತೇಕರು ಸ್ವಾರ್ಥಿಗಳಿದ್ದಾರೆ (Selfishness). ಆದರೆ ಇದಕ್ಕೆ ಅಪವಾದ ಎಂಬಂತೆ ಬಿಹಾರದ ಲೆಕ್ಚರರ್​​​​​​​​​​​​​​​​​​​​​​​ (College Professor) ತಮ್ಮ ನಿರ್ಧಾರದ ಮೂಲಕ ಪ್ರಾಮಾಣಿಕ ವ್ಯಕ್ತಿ ಎಂಬ ವಿಶೇಷತೆಗೆ ಪಾತ್ರರಾಗಿದ್ದಾರೆ. ಅವರೇ ಬಿಹಾರದ ನಿತೀಶ್ವರ ಕಾಲೇಜಿನ (Nitisheswar College) ಸಹಾಯಕ ಪ್ರಾಧ್ಯಾಪಕ 33 ವರ್ಷದ ಲಾಲನ್ ಕುಮಾರ್(Lalan Kumar). ಇವರು ತಮ್ಮ 33 ತಿಂಗಳ ಸಂಬಳವಾದ ಸುಮಾರು 24 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸಿದ್ದಾರೆ. ಸೆಪ್ಟೆಂಬರ್ 2019 ರಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ಗಳಿಸಿರುವ ಒಟ್ಟು ಹಣವನ್ನು  ವಾಪಸ್​​ ಕೊಟ್ಟಿದ್ದಾರೆ. ಈ ನಿರ್ಧಾರಕ್ಕೆ ಕಾರಣ ಅವರ ಆತ್ಮಸಾಕ್ಷಿಯಂತೆ. ಪ್ರಾಧ್ಯಾಪಕರಾಗಿದ್ದ 33 ತಿಂಗಳಲ್ಲಿ ಒಬ್ಬೇ ಒಬ್ಬ ವಿದ್ಯಾರ್ಥಿಯೂ ಒಂದು ತರಗತಿಗೂ ಬಾರದ ಕಾರಣ ವೇತನವನ್ನು ಸ್ವೀಕರಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಅದಕ್ಕಾಗಿಯೇ ಸಂಬಳವನ್ನು ವಾಪಸ್​ ನೀಡುತ್ತಿರುವುದಾಗಿ ಲಾಲನ್​ ಕುಮಾರ್​ ಹೇಳಿದ್ದಾರೆ. ಅವರ ಈ ಪ್ರಮಾಣಿಕ ನಿರ್ಧಾರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ನನ್ನ ಆತ್ಮಸಾಕ್ಷಿಯು ಒಪ್ಪು ತ್ತಿಲ್ಲ

33 ವರ್ಷದ ಲಾಲನ್ ಕುಮಾರ್ ಅವರು ಮಂಗಳವಾರ ಬಿಆರ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದ (ಬ್ರಾಬು) ರಿಜಿಸ್ಟ್ರಾರ್ ಅವರಿಗೆ 23,82,228 ರೂ.ಗಳ ಚೆಕ್ ನೀಡಿದರು. ಕಾಲೇಜು ರಾಜ್ಯ ವಿಶ್ವವಿದ್ಯಾಲಯದ ಅಧೀನದಲ್ಲಿದೆ. "ಬೋಧನೆ ಮಾಡದೆ ಸಂಬಳ ತೆಗೆದುಕೊಳ್ಳಲು ನನ್ನ ಆತ್ಮಸಾಕ್ಷಿಯು ಒಪ್ಪುತ್ತಿಲ್ಲ" ಎಂದು ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು. “ಆನ್‌ಲೈನ್ ತರಗತಿಗಳ ಸಮಯದಲ್ಲಿ (ಸಾಂಕ್ರಾಮಿಕ ಸಮಯದಲ್ಲಿ), ಹಿಂದಿ ತರಗತಿಗಳಿಗೆ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಿದ್ದರು. ಐದು ವರ್ಷಗಳ ಕಾಲ ಬೋಧನೆ ಮಾಡದೆ ಸಂಬಳ ತೆಗೆದುಕೊಂಡರೆ, ಅದು ನನಗೆ ಶೈಕ್ಷಣಿಕ ಸಾವು ಎನ್ನುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಇದನ್ನೂ ಓದಿ: Unique Marriage: ಮನೆ ಕೆಲಸದವಳಾಗಿ ಬಂದವಳನ್ನು ಮನೆ ಮಗಳಂತೆ ಮದುವೆ ಮಾಡಿಕೊಟ್ಟ ಕುಟುಂಬ

ವರ್ಗಾವಣೆ ಪಡೆಯಲು ಒತ್ತಡದ ತಂತ್ರವೇ?

ತಮ್ಮ ಸಂಬಳವನ್ನು ಹಿಂತಿರುಗಿಸಿದ ಲಾಲನ್​ ಕುಮಾರ್ ಅವರ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಮನೋಜ್ ಅವರನ್ನು ಪ್ರಶ್ನಿಸಿದಾಗ, ಇದು ಕೇವಲ [ವಿದ್ಯಾರ್ಥಿಗಳ] ಗೈರುಹಾಜರಿಯಲ್ಲ,  ಸ್ನಾತಕೋತ್ತರ ವಿಭಾಗಕ್ಕೆ ವರ್ಗಾವಣೆ ಪಡೆಯಲು ಒತ್ತಡದ ತಂತ್ರವಾಗಿದೆ" ಎಂದು ಅವರು ಹೇಳಿದರು. BRABU ರಿಜಿಸ್ಟ್ರಾರ್ ಆರ್ ಕೆ ಠಾಕೂರ್ ಈ ಕ್ರಮವನ್ನು ಶ್ಲಾಘಿಸಿದರು. 1970 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ನಿತೀಶ್ವರ್ ಪ್ರಸಾದ್ ಸಿಂಗ್ ಸ್ಥಾಪಿಸಿದ ನಿತೀಶ್ವರ ಕಾಲೇಜು 1976 ರಿಂದ BRABU ಗೆ ಸಂಯೋಜಿತವಾಗಿದೆ. ಇದು ಕಲೆ ಮತ್ತು ವಿಜ್ಞಾನದಲ್ಲಿ ಪದವಿಪೂರ್ವ ಕೋರ್ಸ್‌ಗಳನ್ನು ನಡೆಸುತ್ತದೆ.

ಲಾಲನ್ ಕುಮಾರ್


ಲಾಲನ್ ಕುಮಾರ್​ಗೆ ಮೆಚ್ಚುಗೆಯ ಮಹಾಪೂರ

ಲಾಲನ್ ಕುಮಾರ್ ಅವರು ಮಾಡಿದ್ದು ಅಸಾಮಾನ್ಯ ಮತ್ತು ನಮ್ಮ ಶ್ಲಾಘನೆಗೆ ಅರ್ಹವಾಗಿದೆ. ನಾವು ಈ ವಿಷಯವನ್ನು ಉಪಕುಲಪತಿಗಳೊಂದಿಗೆ ಚರ್ಚಿಸುತ್ತಿದ್ದೇವೆ. ಗೈರುಹಾಜರಿಯ ಬಗ್ಗೆ ವಿವರಿಸಲು ನಿತೀಶ್ವರ್ ಕಾಲೇಜಿನ ಪ್ರಾಂಶುಪಾಲರನ್ನು ಶೀಘ್ರದಲ್ಲೇ ಕೇಳುತ್ತೇವೆ ಎಂದು BRABU ರಿಜಿಸ್ಟ್ರಾರ್ ಠಾಕೂರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ಹಿಂದಿಯಲ್ಲಿ ಸ್ನಾತಕೋತ್ತರ ಮತ್ತು ದೆಹಲಿ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಮತ್ತು ಎಂಫಿಲ್ ಪೂರ್ಣಗೊಳಿಸಿದ ಲಲನ್ ಕುಮಾರ್ ಅವರು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ಪಿಜಿ ವಿಭಾಗಕ್ಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ.

ಲಲನ್​ ಕುಮಾರ್ ಅವರಿಗೆ ಇದು ಮೊದಲ ಉದ್ಯೋಗವಾಗಿದೆ. ಕಾಲೇಜಿನಲ್ಲಿ ಈವರೆಗೆ ಯಾರಿಗೂ ಏನನ್ನು ಕಲಿಸಿಲ್ಲ. ಹೀಗಾಗಿ ನಾನು ನನ್ನ ಮನಸ್ಸಿನ ಮಾತನ್ನು ಕೇಳಿದೆ. ಎರಡು ವರ್ಷ,  ಒಂಬತ್ತು ತಿಂಗಳ ನನ್ನ ಸಂಬಳವನ್ನು ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು. ನಿತೀಶ್ವರ ಕಾಲೇಜಿನಲ್ಲಿ ಸುಮಾರು 3,000 ವಿದ್ಯಾರ್ಥಿಗಳಿದ್ದು, ಅವರಲ್ಲಿ ಸರಿಸುಮಾರು 1,100 ಪದವಿಪೂರ್ವ ವಿದ್ಯಾರ್ಥಿಗಳು ಹಿಂದಿಯನ್ನು ಕಲಿಯಬೇಕಾಗಿದೆ. ಈ ವಿಷಯಕ್ಕೆ ಅತಿಥಿ ಶಿಕ್ಷಕರನ್ನು ಬಿಟ್ಟರೆ, ಕುಮಾರ್ ಮಾತ್ರ ಕಾಲೇಜಿನಲ್ಲಿ ನಿಯಮಿತ ಹಿಂದಿ ಶಿಕ್ಷಕರಾಗಿದ್ದಾರೆ.

ಕೊರೊನಾಗೂ ಮುಂಚೆಯೇ ವಿದ್ಯಾರ್ಥಿಗಳು ಏಕೆ ಗೈರುಹಾಜರಾಗಿದ್ದರು ಎಂಬ ಪ್ರಶ್ನೆಗೆ, ಕಾಲೇಜು ಪ್ರಾಂಶುಪಾಲ ಮನೋಜ್ ಕುಮಾರ್ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಪದೇ ಪದೇ ಪರೀಕ್ಷೆಗಳು ನಡೆಯುತ್ತಿರುವುದರಿಂದ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ ಎಂದರು.
Published by:Kavya V
First published: