HOME » NEWS » National-international » BIHAR CM NITISH KUMAR TALK WITH CENTRAL HOME MINISTER AMITH SHAH AS NDA KEEPS LEAD IN BIHAR SESR

Bihar Assembly Election 2020 Results: ಜೆಡಿಯುಗಿಂತ ಬಿಜೆಪಿ ಮುನ್ನಡೆ; ಅಮಿತ್​ ಶಾಗೆ ನಿತೀಶ್​ ಕರೆ

ಗೆಲುವಿನ ಸ್ಥಾನ ಕುಗ್ಗಿದರೂ ಕೂಡ ಬಿಜೆಪಿ ಮೈತ್ರಿಯೊಂದಿಗೆ ಸರ್ಕಾರ ರಚಿಸಲಿರುವ ನಿತೀಶ್​ ಕುಮಾರ್​ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಖಚಿತ.

news18-kannada
Updated:November 10, 2020, 9:44 PM IST
Bihar Assembly Election 2020 Results: ಜೆಡಿಯುಗಿಂತ ಬಿಜೆಪಿ ಮುನ್ನಡೆ; ಅಮಿತ್​ ಶಾಗೆ ನಿತೀಶ್​ ಕರೆ
ನಿತೀಶ್​ ಕುಮಾರ್​.
  • Share this:
ಪಾಟ್ನಾ (ನ.10): ಬಿಹಾರದಲ್ಲಿ ಎನ್​ಡಿಎ ಮೈತ್ರಿಕೂಟ ಬಹುಮತದತ್ತ ತೆರಳಿ ವಿಜಯಪತಾಕೆ ಹಾರಿಸಲು ಮುಂದಾಗುತ್ತಿದ್ದಂತೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಕರೆ ಮಾಡಿ ಫಲಿತಾಂಶದ ಕುರಿತು ಚರ್ಚಿಸಿದ್ದಾರೆ ಎಂಬ ವಿಷಯ ಮೂಲಗಳಿಂದ ತಿಳಿದು ಬಂದಿದೆ.  ರಾಜ್ಯದಲ್ಲಿ ಎನ್​ಡಿಎ ಮೈತ್ರಿಕೂಟದ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ನಿತೀಶ್​ ಕುಮಾರ್​ ಮೂರನೇ ಸ್ಥಾನದಲ್ಲಿದ್ದಾರೆ. ಅಚ್ಚರಿ ಎಂದರೆ ಅವರರು ರಾಷ್ಟ್ರೀಯ ಜನತಾದಳದ ತೇಜಸ್ವಿ ಯಾದವ್​ ಅವರ ಪಕ್ಷದ ನಂತರದ ಸ್ಥಾನದಲ್ಲಿರುವುದು. ಗೆಲುವಿನ ಸ್ಥಾನ ಕುಗ್ಗಿದರೂ ಕೂಡ ಬಿಜೆಪಿ ಮೈತ್ರಿಯೊಂದಿಗೆ ಸರ್ಕಾರ ರಚಿಸಲಿರುವ ನಿತೀಶ್​ ಕುಮಾರ್​ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಖಚಿತವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಜೆಡಿಯು ಹೆಚ್ಚು ಸ್ಥಾನಗಳಿಸದ ಹಿನ್ನೆಲೆ ಮೈತ್ರಿಕೂಟದಲ್ಲಿನ ತಮ್ಮ ಸ್ಥಾನಮಾನದ ಬಗ್ಗೆ ಅವರಲ್ಲಿ ಕಳವಳ ಉಂಟಾಗಿದ್ದು, ಈ ಕುರಿತು ಕೇಂದ್ರ ಗೃಹ ಸಚಿವರೊಂದಿಗೆ ಅವರು ಚರ್ಚಿಸಿರುವ ಸಾಧ್ಯತೆ ಎನ್ನಲಾಗಿದ್ದು, ಸ್ಪಷ್ಟತೆ ಸಿಕ್ಕಿಲ್ಲ.


ಎನ್​ಡಿಎ ಮೈತ್ರಿಕೂಟದ ಮೂಲಕ ಚುನಾವಣೆ ಎದುರಿಸಿದ್ದ ಬಿಜೆಪಿ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್​ ಕುಮಾರ್​ ಎಂದು ಈಗಾಗಲೇ ಘೋಷಿಸಿತು. ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಂದು ಬಿಂಬಿಸಿರಲಿಲ್ಲ. ಈ ಹಿನ್ನಲೆ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತಿಲ್ಲ. ಆದರೆ, ಪಕ್ಷದಲ್ಲಿನ ಅವರ ವರ್ಚಸ್ಸು ಕಳೆಗುಂದಬಹುದಾಗಿದೆ.


ನಿತೀಶ್​ ಮುಖ್ಯಮಂತ್ರಿಯಾದರೂ ತಮ್ಮ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರಿರಲಿದ್ದಾರೆ, ಇದರಿಂದ ಅವರು ಸ್ಥಾನವೊಂದಿದ್ದರೂ ಅಧಿಕಾರದಲ್ಲಿ ಬಿಗಿ ಹಿಡಿತ ಹೊಂದಿರುವುದಿಲ್ಲ ಎಂಬ ಮಾತು ಕೇಳಿಬಂದಿದೆ. ಇದರ ಜೊತೆಗೆ ಬಿಜೆಪಿ ನಿತೀಶ್​ ಅವರನ್ನು ಮುಖ್ಯಮಂತ್ರಿ ಮಾಡಿದರೂ ಸಂಪೂರ್ಣ ಅವಧಿವರೆಗೆ ಮುಂದುವರೆಯುವುದು ಅನುಮಾನ ಎನ್ನಲಾಗಿದೆ.
Published by: Seema R
First published: November 10, 2020, 6:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading