ಮದ್ಯ ಸೇವಿಸುವವರು ಮಹಾಪಾಪಿಗಳು, ಅವರು ಭಾರತೀಯರಲ್ಲ ಎಂದ Bihar CM Nitish Kumar

ಮಹಾತ್ಮ ಗಾಂಧಿಜೀ ಅವರು ಕೂಡ ಮದ್ಯ ಸೇವನೆಯನ್ನು ವಿರೋಧಿಸಿದ್ದರು. ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಮಹಾಪಾಪಿಗಳು. ಇವರನ್ನು ನಾನು ಭಾರತೀಯರು ಎಂದು ಪರಿಗಣಿಸುವುದಿಲ್ಲ.

ನಿತೀಶ್​ ಕುಮಾರ್​​

ನಿತೀಶ್​ ಕುಮಾರ್​​

 • Share this:
  ಮದ್ಯ ಸೇವಿಸುವ ಜನರು ಮಹಾಪಾಪಿಗಳು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ (Bihar CM Nitish Kumar)​ ತಿಳಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ವಿಷಕಾರಿ ಮದ್ಯ ಸೇವಿಸಿ (Liquor Consumption) ಸಾಯುವವರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾತ್ಮ ಗಾಂಧಿಜೀ ಅವರು ಕೂಡ ಮದ್ಯ ಸೇವನೆಯನ್ನು ವಿರೋಧಿಸಿದ್ದರು. ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಮಹಾಪಾಪಿಗಳು. ಇವರನ್ನು ನಾನು ಭಾರತೀಯರು ಎಂದು ಪರಿಗಣಿಸುವುದಿಲ್ಲ ಎಂದಿದ್ದಾರೆ.

  ಮದ್ಯ ಸೇವನೆ ಹಾನಿಕಾರಕ ಎಂದು ತಿಳಿದಿದ್ದರೂ ಜನರು ಮದ್ಯಪಾನ ಮಾಡುತ್ತಾರೆ. ಅದು ವಿಷಕಾರಿ ಎಂದು ತಿಳಿದು ಕೂಡ ಸೇವನೆ ಮಾಡುವ ಹಿನ್ನಲೆ ಅದು ಅವರ ತಪ್ಪು. ಹೀಗಾಗಿ, ಅದರ ಪರಿಣಾಮಗಳಿಗೆ ಅವರೇ ಹೊಣೆ ಹೊರತು ರಾಜ್ಯ ಸರ್ಕಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ರಾಜ್ಯದಲ್ಲಿ ಮುಂದುವರೆದ ಕಳ್ಳಭಟ್ಟಿ ದುರಂತ
  ರಾಜ್ಯದಲ್ಲಿ ಮದ್ಯ ನಿಷೇಧ, ಮೊದಲ ಬಾರಿಗೆ ಅಪರಾಧಿಗಳಿಗೆ ಕಡಿಮೆ ಮಾಡಲು ಪ್ರಯತ್ನಿಸುವ ತಿದ್ದುಪಡಿ ಮಸೂದೆಯನ್ನು ಬಿಹಾರ ವಿಧಾನಸಭೆಯಲ್ಲಿ ಮಂಡಿಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಮದ್ಯ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಫಲವಾಗಿರುವ ಕಾರಣ ಬಿಹಾರದಲ್ಲಿ ಕಳ್ಳಭಟ್ಟಿ ಕುಡಿದು ಸಾವನ್ನಪ್ಪುತ್ತಿರುವಂತ ದುರಂತಗಳು ಮುಂದುವರಿದಿವೆ ಎಂದರು.

  ಬಿಹಾರ ನಿಷೇಧ ಮತ್ತು ಅಬಕಾರಿ (ತಿದ್ದುಪಡಿ) ಮಸೂದೆ, 2022, ರಾಜ್ಯಪಾಲರ ಅನುಮೋದನೆಯನ್ನು ಪಡೆದ ನಂತರ, ಮೊದಲ ಬಾರಿಗೆ ಅಪರಾಧಿಗಳು ದಂಡ ಮೊತ್ತವನ್ನು ಠೇವಣಿ ಮಾಡಿದ ನಂತರ ಮ್ಯಾಜಿಸ್ಟ್ರೇಟ್‌ನಿಂದ ಜಾಮೀನು ಪಡೆಯುತ್ತಾರೆ. ಈ ವೇಳೆ ವ್ಯಕ್ತಿ ದಂಡ ಪಾವತಿಸಲು ವಿಫಲವಾದರೆ, ಅವನು ಅಥವಾ ಅವಳು ಒಂದು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

  ಇದನ್ನು ಓದಿ: ನಾಳೆಯಿಂದ ದುಬಾರಿ ದುನಿಯಾ: April 1ರಿಂದ ಬೆಲೆ ಏರಿಕೆ ಕಾಣಲಿದೆ ಈ ವಸ್ತುಗಳು

  ಟೀಕೆಗೆ ಗುರಿಯಾಗಿದ್ದ ನಿತೀಶ್​ ಸರ್ಕಾರ

  2021ರ ಕೊನೆಯ ಆರು ತಿಂಗಳಲ್ಲಿ 60ಕ್ಕೂ ಹೆಚ್ಚು ಮಂದಿ ಕಳ್ಳಭಟಟಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ವಿಚಾರವಾಗಿ ವಿರೋಧ ಪಕ್ಷ ಆರ್‌ಜೆಡಿ ಅಲ್ಲದೆ, ತನ್ನ ಮಿತ್ರ ಪಕ್ಷ ಬಿಜೆಪಿಯಿಂದಲೂ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾಗ್ದಾಳಿಗೆ ಒಳಗಾಗಿದ್ದರು.
  ಮದ್ಯ ನಿಷೇಧ ಕಾನೂನನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ. ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತು. ಮದ್ಯ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಇದೆ ಹೊರತು ಜಾರಿಯಾಗಿಲ್ಲ ಎಂದು ಪ್ರತಿಪಕ್ಷಗಳು ಸಮರ್ಥಿಸಿಕೊಂಡಿವೆ.

  ಇದನ್ನು ಓದಿ: ಐಎಎಸ್ ಅಧಿಕಾರಿ Tina Dabi ಆರತಕ್ಷತೆಗೆ ಬುಕ್ ಮಾಡಿರುವ ಐಷಾರಾಮಿ ಹೋಟೆಲ್ ಇದು

  ಮದ್ಯ ನಿಷೇಧ ಕಾನೂನು ಬಿಹಾರದಲ್ಲಿನ ನ್ಯಾಯಾಂಗದ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿದೆ. ಪಟ್ನಾ ಹೈಕೋರ್ಟ್‌ನ 14- 15 ನ್ಯಾಯಮೂರ್ತಿಗಳು ಬಿಹಾರ ನಿಷೇಧ ಮತ್ತು ಅಬಕಾರಿ ಕಾಯ್ದೆಯ ಅಡಿ ದಾಖಲಾದ ಪ್ರಕರಣಗಳ ಜಾಮೀನು ಅರ್ಜಿಗಳ ವಿಚಾರಣೆಯನ್ನು ಮಾತ್ರವೇ ನಡೆಸುತ್ತಿದ್ದಾರೆ ಎಂದು ಕಳೆದ ವರ್ಷ ಸುಪ್ರೀಂಕೋರ್ಟ್ ಹೇಳಿತ್ತು.

  ಬಿಹಾರದಲ್ಲಿ ಮದ್ಯ ನಿಷೇಧ

  ಬಿಹಾರದಲ್ಲಿ ಮದ್ಯ ನಿಷೇಧ ಮಾಡಿ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಮದ್ಯದಿಂದ ಆಗುತ್ತಿದ್ದ ಹಾನಿಯಿಂದಾಗಿ ನಿಷೇಧ ಮಾಡುವಂತೆ ಮಹಿಳೆಯರು ಸರ್ಕಾರದ ಮೇಲೆ ಒತ್ತಡ ಹೇಳಿಕೆ ಹಿನ್ನಲೆ 2016ರಲ್ಲಿ ಮಧ್ಯ ನಿಷೇಧ ಕಾನೂನು ಜಾರಿಗೆ ಬಂದಿತ್ತು. ಆರಂಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇದ್ದ ನಿಷೇಧ ಬಳಿಕ ನಗರ ಪ್ರದೇಶ ಸೇರಿ ರಾಜ್ಯದ್ಯಂತ ಈ ಮದ್ಯ ನಿಷೇದ ಆದೇಶ ಹೊರಡಿಸಲಾಗಿದೆ.

  ಇನ್ನು ಈ ಮದ್ಯ ನಿಷೇಧದ ಬಳಿಕ ರಾಜ್ಯದಲ್ಲಿ ಅನೇಕ ಕಳ್ಳಭಟ್ಟಿ ದುರಂತಗಳು ನಡೆದಿದ್ದು, ಅನೇಕ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನಲೆ ಈ ಆದೇಶವನ್ನು ಸರ್ಕಾರ ಹಿಂಪಡೆಯಲಿದೆಯಾ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಈ ಕುರಿತು ಮಾತನಾಡಿದ್ದ ನಿತೀಶ್ ಕುಮಾರ್​, ಯಾವುದೇ ಕಾರಣಕ್ಕೂ ಮದ್ಯ ನಿಷೇಧ ಆದೇಶ ಹಿಂಪಡೆಯುವುದಿಲ್ಲ. ರಾಜ್ಯದಲ್ಲಿ ಮದ್ಯ ನಿಷೇಧ ಆದೇಶ ಜಾರಿಯಲ್ಲಿ ಇರಲಿದೆ ಎಂದಿದ್ದರು.
  Published by:Seema R
  First published: