Bihar Cabinet: ಬಿಹಾರ ಸರ್ಕಾರದ 23 ಸಚಿವರ ಮೇಲೆ ಕ್ರಿಮಿನಲ್ ಕೇಸ್! ಆಸ್ತಿಯೂ ಕಡಿಮೆಯಿಲ್ಲ

Bihar CM Nitish Kumar: ಬಿಹಾರದಲ್ಲಿ ಪಕ್ಷದ 17 ಸಚಿವರಲ್ಲಿ ಗರಿಷ್ಠ 16 ಮಂದಿಯನ್ನು ಹೊಂದಿರುವ ಆರ್‌ಜೆಡಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 11ರಲ್ಲಿ ಒಂಬತ್ತು ಕೋಟ್ಯಾಧಿಪತಿ ಸಚಿವರೊಂದಿಗೆ ಜೆಡಿಯು ಎರಡನೇ ಸ್ಥಾನದಲ್ಲಿದೆ.

ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್

ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್

  • Share this:
    ಪಾಟ್ನಾ: ಬಿಹಾರದಲ್ಲಿ ಹೊಸದಾಗಿ ರಚನೆಯಾದ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ (Tejashwi Yadav) ನೇತೃತ್ವದ ಸರ್ಕಾರದ ಸಂಪುಟದಲ್ಲಿ ಬರೋಬ್ಬರಿ 72 ಪ್ರತಿಶತ ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಂದರೆ ನಿತೀಶ್ ಕುಮಾರ್ (Bihar CM Nitish Kumar) ಸಚಿವ ಸಂಪುಟದ ಒಟ್ಟು 23 ಸಚಿವರ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೇ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಚಿವರ ಸಂಖ್ಯೆಯೂ ಕಡಿಮೆಯಿಲ್ಲ. ಬರೋಬ್ಬರಿ 53 ಪ್ರತಿಶತದಷ್ಟು ಸಚಿವರು ಅಥವಾ 17 ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು (Criminal Cases) ದಾಖಲಾಗಿವೆ.

    ನಿತಿಶ್ ಕುಮಾರ್, ತೇಜಸ್ವಿ ಯಾದವ್ ನೇತೃತ್ವದ ಸರ್ಕಾರದ ಒಟ್ಟು 33 ಸಚಿವರ ಪೈಕಿ 32 ಸಚಿವರ ಅಪಿಡವಿಟ್​ಗಳನ್ನು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರಿಶೀಲನೆ ನಡೆಸಿದೆ.

    32 ಸಚಿವರ ಅಫಿಡವಿಟ್ ವಿಶ್ಲೇಷಣೆ
    ಬಿಹಾರ ರಾಜ್ಯ ವಿಧಾನಸಭೆ 2020ರ ಮುಖ್ಯಮಂತ್ರಿ ಸೇರಿದಂತೆ 33 ಸಚಿವರಲ್ಲಿ 32 ಮಂದಿ ಸ್ವಯಂ ಪ್ರಮಾಣ ವಚನ ಸ್ವೀಕರಿಸಿದ ಅಫಿಡವಿಟ್‌ಗಳನ್ನು ಎಡಿಆರ್ ವಿಶ್ಲೇಷಿಸಿದೆ. ಜೆಡಿ (ಯು) ಪಕ್ಷದ ಅಶೋಕ್ ಚೌಧರಿ ಎಂಬ ನಾಮನಿರ್ದೇಶಿತ ಸಚಿವರು ತಮ್ಮ ಅಫಿಡವಿಟ್ ಸಲ್ಲಿಸುವ ಅಗತ್ಯವಿಲ್ಲ, ಆದ್ದರಿಂದ ಅವರ ಅಪರಾಧ, ಹಣಕಾಸು ಮತ್ತು ಇತರ ವಿವರಗಳು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿಲ್ಲ.

    ಆರ್​ಜೆಡಿ ಮೊದಲ ಸ್ಥಾನದಲ್ಲಿ!
    ಈ ಪೈಕಿ ರಾಷ್ಟ್ರೀಯ ಜನತಾ ದಳ (RJD) ಕ್ರಿಮಿನಲ್ ಆರೋಪಗಳನ್ನು ಹೊಂದಿರುವ ಗರಿಷ್ಠ ಸಂಖ್ಯೆಯ ಮಂತ್ರಿಗಳನ್ನು ಹೊಂದಿದೆ. ಅಲ್ಲದೇ ಇಡೀ ದೇಶದಲ್ಲಿ ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಚಿವರಲ್ಲಿ ಮೊದಲ ಸ್ಥಾನದಲ್ಲಿದೆ.

    ಆರ್‌ಜೆಡಿ ಪಕ್ಷದ 17 ಸಚಿವರಲ್ಲಿ 15 ಮಂದಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಚಿವರಲ್ಲಿ 11 ಮಂದಿ ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

    ಜೆಡಿ(ಯು) ಸ್ಥಿತಿಯೇನು?
    ಇತ್ತ ಜೆಡಿ (ಯು) ಪಕ್ಷದಿಂದ ಆಯ್ಕೆಯಾದ ಸಚಿವರ ಪೈಕಿ 11 ಸಚಿವರ ಪೈಕಿ ನಾಲ್ವರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಅವರ ಪೈಕಿ ಒಟ್ಟು ಮೂವರು ಸಚಿವರು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.

    ಕಾಂಗ್ರೆಸ್​ ಸಚಿವರ ಮೇಲೂ ಇದೆ
    ನಿತೀಶ್ ಕುಮಾರ್-ತೇಜಸ್ವಿ ಯಾದವ್ ಜಂಟಿ ಬಿಹಾರ ಕ್ಯಾಬಿನೆಟ್‌ನಲ್ಲಿ ಕಾಂಗ್ರೆಸ್‌ ಇಬ್ಬರು ಸಚಿವರಿದ್ದಾರೆ. ಆದರೆ ಈ ಇಬ್ಬರು ಸಚಿವರು ಸಹ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇಬ್ಬರಲ್ಲಿ ಒಬ್ಬರು ಗಂಭೀರ ಕ್ರಿಮಿನಲ್ ಆರೋಪಗಳನ್ನು ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

    ಯಾವ ಸಚಿವರ ಆಸ್ತಿ ಎಷ್ಟೆಷ್ಟು?
    ಬಿಹಾರದಲ್ಲಿ ಪಕ್ಷದ 17 ಸಚಿವರಲ್ಲಿ ಗರಿಷ್ಠ 16 ಮಂದಿಯನ್ನು ಹೊಂದಿರುವ ಆರ್‌ಜೆಡಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 11ರಲ್ಲಿ ಒಂಬತ್ತು ಕೋಟ್ಯಾಧಿಪತಿ ಸಚಿವರೊಂದಿಗೆ ಜೆಡಿಯು ಎರಡನೇ ಸ್ಥಾನದಲ್ಲಿದೆ. ಮಧುಬನಿ ಕ್ಷೇತ್ರದ ಶಾಸಕ ಆರ್‌ಜೆಡಿಯ ಸಮೀರ್ ಕುಮಾರ್ ಮಹಾಸೇತ್ 24.45 ಕೋಟಿ ಆಸ್ತಿಯೊಂದಿಗೆ ಅತಿ ಹೆಚ್ಚು ಆಸ್ತಿ ಹೊಂದಿರುವ ಸಚಿವರಾಗಿದ್ದಾರೆ.

    ಇದನ್ನೂ ಓದಿ: Modi Story: ಮೋದಿ ತಂಗಿಗೆ ನೀಡಿದ್ದ ₹ 11 ಅರ್ಧಘಂಟೆಯಲ್ಲೇ 7,50,000 ಆಗಿತ್ತು!

    ಶೈಕ್ಷಣಿಕ ಹಿನ್ನೆಯೇನು?
    ಬಿಹಾರ ಸಚಿವ ಸಂಪುಟದ ಸಚಿವರ ಶೈಕ್ಷಣಿಕ ಹಿನ್ನೆಲೆಯನ್ನು ನೋಡುವುದಾದರೆ 8 ಅಥವಾ ಶೇಕಡಾ 25 ರಷ್ಟು ಸಚಿವರು ತಮ್ಮ ಶೈಕ್ಷಣಿಕ ಅರ್ಹತೆಯನ್ನು 8 ನೇ ಮತ್ತು 12 ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ. 24 ಅಥವಾ 75 ರಷ್ಟು ಸಚಿವರು ಪದವೀಧರರು ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆಂದು ಘೋಷಿಸಿಕೊಂಡಿದ್ದಾರೆ.
    Published by:guruganesh bhat
    First published: