ಪಾಟ್ನಾ(ಆ.09): ಬಿಹಾರದಲ್ಲಿ ಎನ್‌ಡಿಎ (NDA) ಮೈತ್ರಿಕೂಟದ ವಿಘಟನೆ ಮತ್ತು ಹೊಸ ಬೆಳವಣಿಗೆಗಳ ನಡುವೆ ಮಹಾಮೈತ್ರಿಕೂಟ ಸರ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಇದೇ ವೇಳೆ ಲಾಲು ಯಾದವ್ (Lalu Prasad yadav) ಪುತ್ರಿ ರೋಹಿಣಿ ಆಚಾರ್ಯ (Rohini Acharya) ಟ್ವೀಟ್ ಮಾಡಿ ತನ್ನ ತಂದೆಯನ್ನು ಕಿಂಗ್ ಮೇಕರ್ ಎಂದು ಬಣ್ಣಿಸಿದ್ದಾರೆ.
ರೋಹಿಣಿ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ, 'ಆಕಾಶಕ್ಕಿಂತಲೂ ಹೆತ್ತರ ಅವರ ನಂಬಿಕೆ, ಜನಸಾಮಾನ್ಯರೇ ದೇವರೆಂಬ ನಂಬಿಕೆ ಅವರದ್ದು' ಎಂದು ಬರೆದಿದ್ದಾರೆ. ಇದರೊಂದಿಗೆ ಲಾಲು ಪ್ರಸಾದ್ ಯಾದವ್ ಅವರ ಫೋಟೋ ಹಾಕಿದ್ದು, ಅದರ ಮೇಲೆ ಕಿಂಗ್ ಮೇಕರ್ ಎಂದು ಬರೆದಿದ್ದಾರೆ. ಮಧ್ಯಾಹ್ನ 2:41 ಕ್ಕೆ ಮಾಡಿದ ಈ ಟ್ವೀಟ್ ಸುದ್ದಿ ಭಾರೀ ಲೈಕ್ಸ್ ಪಡೆದಿದೆ, ಅದನ್ನು 160 ಜನರು ರಿಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Bihar Politics: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜಿನಾಮೆ; ಬಿಹಾರದ ಮುಂದಿನ ಸಿಎಂ ಯಾರು?
आसमान की बुलंदी से भी ऊंचा उनका ईमान है
जनता-जनार्दन का जो अभिमान हैं🙏 pic.twitter.com/STxIHZ2GWI
— Rohini Acharya (@RohiniAcharya2) August 9, 2022
ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಮುರಿದುಬಿದ್ದಿದೆ ಮತ್ತು ಹೊಸ ಲೆಕ್ಕಾಚಾರದಂತೆ ಅಡಿಯಲ್ಲಿ, ಜೆಡಿಯು, ಆರ್‌ಜೆಡಿ, ಕಾಂಗ್ರೆಸ್, ಎಡ ಮತ್ತು ಸ್ವತಂತ್ರರು ಒಟ್ಟಾಗಿ ಹೊಸ ಸರ್ಕಾರವನ್ನು ರಚಿಸಲಿದ್ದಾರೆ ಎಂಬುವುದು ಉಲ್ಲೇಖನೀಯ. ಈಗಾಗಲೇ ರಾಜ್ಯಪಾಲರನ್ನು ಭೇಟಿಯಾಗಿರುವ ಸಿಎಂ ನಿತೀಶ್ ಕುಮಾರ್ ರಾಜೀನಾಮೆ ಪತ್ರ ಸಲ್ಲಿಸಿದ್ದು, ಶಾಸಕರ ಸಮರ್ಥನೆ ಪತ್ರವನ್ನೂ ಸಲ್ಲಿಸಿದ್ದಾರೆ.
ಇದನ್ನೂ ಓದಿ: Bihar Politics: ಬಿಜೆಪಿ ಫ್ರೆಂಡ್ಶಿಪ್ಗೆ ಟಾಟಾ; ಮತ್ತೆ ಮಹಾಘಟಬಂಧನ ರಚನೆಗೆ ನಿತೀಶ್ ಕುಮಾರ್ ಒಲವು?
ಈ ರಾಜಕೀಯ ಬೆಳವಣಿಗೆಗಳನ್ನು ನೋಡಿ ಅದರಲ್ಲಿ ತಂದೆ ಲಾಲು ಯಾದವ್ ಅವರ ಸಕ್ರಿಯ ಪಾತ್ರವನ್ನು ನೋಡಿ ರೋಹಿಣಿ ಆಚಾರ್ಯ ಅವರನ್ನು ಕಿಂಗ್ ಮೇಕರ್ ಎಂದು ಕರೆದಿದ್ದಾರೆ. ಅದೇನೇ ಇರಲಿ, ಲಾಲು ಪ್ರಸಾದ್ ಯಾದವ್ ಅವರು ತಮ್ಮ ಕಾಲದಲ್ಲಿ ಬಿಹಾರ ರಾಜಕೀಯದಲ್ಲಿ ಹುಟ್ಟುಹಾಕಿದ್ದ ಹೊಸ ಟ್ರೆಂಡ್‌ಗೆ ಬಿಹಾರದಲ್ಲಿ ಕಿಂಗ್‌ಮೇಕರ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ರಾಜಕೀಯದಲ್ಲಿ ವಿರಳವಾಗಿ ಕಾಣಿಸಿಕೊಳ್ಳುವ ರೋಹಿಣಿ ಈ ಬಾರಿಯ ರಾಜಕೀಯ ಬದಲಾವಣೆಗೆ ಕಡಿವಾಣ ಹಾಕಲಿಲ್ಲ. ಬದಲಿಗೆ, ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸದ್ಯಕ್ಕೆ ಆರ್‌ಜೆಡಿಗೆ ಅಧಿಕಾರ ಇಲ್ಲದಿದ್ದರೂ, ಆರ್‌ಜೆಡಿ ಮುಖ್ಯಸ್ಥರೇ ಇನ್ನೂ ‘ಕಿಂಗ್‌ಮೇಕರ್’ ಆಗಿದ್ದಾರೆ ಎರಂದು ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ